ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಬಿಗ್ BREAKING NEWS: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

Posted by Vidyamaana on 2024-03-09 21:11:55 |

Share: | | | | |


ಬಿಗ್ BREAKING NEWS: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದರು ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಅವರ ರಾಜೀನಾಮೆಯನ್ನು ಅಂಗೀಕರಿಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ರ ಸೆಕ್ಷನ್ 11 ರ ಷರತ್ತು (1) ಕ್ಕೆ ಅನುಸಾರವಾಗಿ, ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು 2024 ರ ಮಾರ್ಚ್ 09 ರಿಂದ ಜಾರಿಗೆ ಬರುವಂತೆ ಸ್ವೀಕರಿಸಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ" ಎಂದು ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಗೋಯೆಲ್ ಅವರು ನವೆಂಬರ್ 21, 2022 ರಂದು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.


1985ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅರುಣ್ ಗೋಯಲ್ ಈ ಹಿಂದೆ ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಇಂದು ಶಾಸಕರಿಂದ ಪಕ್ಷದ ಪ್ರಮುಖರ ಸಭೆ

Posted by Vidyamaana on 2023-05-16 02:57:58 |

Share: | | | | |


ಇಂದು ಶಾಸಕರಿಂದ ಪಕ್ಷದ ಪ್ರಮುಖರ ಸಭೆ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಮೇ 16ರಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ಪ್ರಮುಖರ ಸಭೆ ಕರೆದಿದ್ದಾರೆ.

ಕಾಂಗ್ರೆಸಿನ ಚುನಾವಣಾ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಗುಂಬೆ ಘಾಟ್‌ನಲ್ಲಿ ಟೋಯಿಂಗ್ ವಾಹನದ ಬ್ರೇಕ್ ಫೇಲ್ 30 ಅಡಿ ಕೆಳಗೆ ಬಿದ್ದ ವ್ಯಕ್ತಿ

Posted by Vidyamaana on 2023-07-16 16:04:02 |

Share: | | | | |


ಆಗುಂಬೆ ಘಾಟ್‌ನಲ್ಲಿ ಟೋಯಿಂಗ್ ವಾಹನದ ಬ್ರೇಕ್ ಫೇಲ್ 30 ಅಡಿ ಕೆಳಗೆ ಬಿದ್ದ ವ್ಯಕ್ತಿ

ಶಿವಮೊಗ್ಗ: ಆಗುಂಬೆ ಘಾಟ್‌ನಲ್ಲಿ  ಟೋಯಿಂಗ್ ವಾಹನದ ಬ್ರೇಕ್ ಫೇಲ್ ಆಗಿ ಅಪಘಾತ  ಸಂಭವಿಸಿದೆ. ಘಾಟಿಯಿಂದ ವ್ಯಕ್ತಿಯೊಬ್ಬರು ಸುಮಾರು 25-30 ಅಡಿ ಕೆಳಗೆ ಉರುಳಿ ಬಿದ್ದಿದ್ದಾರೆ. ಅವರ ಸೊಂಟ ಮತ್ತು ತಲೆಗೆ ಏಟಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಪಾಷಾ ಎಂಬ ವ್ಯಕ್ತಿ ಉರುಳಿ ಬಿದ್ದವರು. ಅಪಘಾತದ ಹಿನ್ನೆಲೆಯಲ್ಲಿ ಆಗುಂಬೆ ಘಾಟ್‌ನಲ್ಲಿ ಟ್ರಾಫಿಕ್ ಜಾಮ್  ಆಗಿದೆ. ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದ 207 ವಾಹನವನ್ನು ಹೇರ್ ಪಿನ್ ತಿರುವಿನಲ್ಲಿ ತಿರುಗಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ರಿವರ್ಸ್ ಬರಲು ಟೋಯಿಂಗ್ ವಾಹನ ಚಾಲಕ ಮುಂದಾಗಿದ್ದಾರೆ. ಆಗ ಟೋಯಿಂಗ್ ವಾಹನದ ಬ್ರೇಕ್ ಫೇಲ್ ಆಗಿ ಅವಘಡ ಸಂಭವಿಸಿದೆ.ಈ ವೇಳೆ ಟೋಯಿಂಗ್‌ ವಾಹನಕ್ಕೆ ರಿವರ್ಸ್‌ ತೆಗೆದುಕೊಳ್ಳುವಾಗ ಮೊಹಮ್ಮದ್‌ ಪಾಷ ಹಿಂದೆ ಇದ್ದರು. ಅದು ವಾಹನ ಚಾಲಕನಿಗೆ ಗೊತ್ತಿರಲಿಲ್ಲ. ಅಲ್ಲದೆ, ಈ ವೇಳೆ ಆದರೆ, ಇದ್ದಕ್ಕಿದ್ದಂತೆ ಬ್ರೇಕ್‌ ಫೇಲ್‌ ಆಗಿ ವಾಹನ ಹಿಂದಕ್ಕೆ ಬಂದಿದ್ದರಿಂದ ಟೋಯಿಂಗ್‌ ವಾಹನವು ಅಲ್ಲಿದ್ದ ಇವರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಮೊಹಮ್ಮದ್ ಸೀದಾ ಪ್ರಪಾತಕ್ಕೆ ಬಿದ್ದಿದ್ದಾರೆ.

ಘಾಟಿಯ ಕೆಳಗೆ ಸುಮಾರು 25-30 ಅಡಿ ಆಳಕ್ಕೆ ಮೊಹಮ್ಮದ್‌ ಬಿದ್ದಿದ್ದಾರೆ. ಅವರು ಕೆಳಗೆ ಬೀಳುವುದನ್ನು ಈ ವೇಳೆ ದಾರಿಯಲ್ಲಿ ಬರುತ್ತಿದ್ದ ಹಿಂದು ಜಾಗರಣಾ ವೇದಿಕೆ  ಕಾರ್ಯಕರ್ತರು ಗಮನಿಸಿದ್ದಾರೆ. ಕೂಡಲೇ ಅವರು ತಮ್ಮ ವಾಹನವನ್ನು ನಿಲ್ಲಿಸಿ ಆತನ ರಕ್ಷಣೆಗೆ ದಾವಿಸಿದ್ದಾರೆ. ಪಾಷ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಪ್ರಯಾಣಿಕರೊಬ್ಬರಿಂದ ಬೆಡ್‌ಶೀಟ್‌ ಪಡೆದಿದ್ದಾರೆ. ಬಳಿಕ ಹಗ್ಗದ ಸಹಾಯದಿಂದ ಮೇಲಕ್ಕೆ ಕಷ್ಟಪಟ್ಟು ಬಂದಿದ್ದಾರೆ. ಹಿಂಜಾವೇ ಕಾರ್ಯಕರ್ತ ನಿತ್ಯಾನಂದ ಮತ್ತಿತರರ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮೇ 12: ಮೈಸೂರಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ 11ನೇ ಶಾಖೆ ಉದ್ಘಾಟನೆ

Posted by Vidyamaana on 2024-05-11 22:08:40 |

Share: | | | | |


ಮೇ 12: ಮೈಸೂರಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ 11ನೇ ಶಾಖೆ ಉದ್ಘಾಟನೆ

ಮೈಸೂರು: ಸುಲ್ತಾನ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯು ತನ್ನ 11ನೇ ಶಾಖೆಯನ್ನು ನಗರದ ಮೀನಾ ಬಜಾರ್ ವೃತ್ತದ ಸಮೀಪ ಸಂತ ಫಿಲೋಮಿನಾ ಚರ್ಚ್ ರಸ್ತೆಯಲ್ಲಿ ತೆರೆಯುತ್ತಿದ್ದು, ಮೇ 12ರಂದು ಬಾಲಿವುಡ್ ನಟಿ ರವೀನಾ ಟಂಡನ್ ಅವರು ಮಳಿಗೆ ಉದ್ಘಾಟಿಸಲಿದ್ದಾರೆ.

ಶಾಸಕರಾದ ತನ್ನೀರ್ ಸೇರ್, ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಸಂತ ಫಿಲೋಮಿನಾ ಚರ್ಚ್‌ನ ಧರ್ಮದರ್ಶಿ ಸ್ಪ್ಯಾನಿ ಅಡಾ, ಮಿಸ್ ಇಂಡಿಯಾ ಯುನಿವರ್ಸ್ ಖ್ಯಾತಿಯ ಡಾ.ಹೇಮಾಮಾಲಿನಿ ಲಕ್ಷ್ಮಣ್, ವೆಲ್ವಿನ್ ಇಂಡಸ್ಟ್ರೀಸ್‌ನ ಗೌರ್ ನಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಮೇ 31ರವರೆಗೆ ಪ್ರತಿದಿನ

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

Posted by Vidyamaana on 2024-04-07 17:37:39 |

Share: | | | | |


ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ  ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

ಸೌದಿ ಅರೇಬಿಯಾ: ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಘಟನೆ ಕಳೆದ ರಾತ್ರಿ ಮದೀನಾ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ಮರಣ ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಫಸ್ಟ್ ಪಟ್ಟಿ ರಿಲೀಸ್ ಸುದ್ದಿ ಫೇಕ್ – ಈ ಫೆಕ್ ಪಟ್ಟಿಯಲ್ಲಿ ಯಾರಿಗೆಲ್ಲಾ ಸಿಕ್ಕಿತ್ತು ಟಿಕೆಟ್!?

Posted by Vidyamaana on 2023-04-04 10:03:55 |

Share: | | | | |


ಬಿಜೆಪಿ ಅಭ್ಯರ್ಥಿಗಳ ಫಸ್ಟ್ ಪಟ್ಟಿ ರಿಲೀಸ್ ಸುದ್ದಿ ಫೇಕ್ – ಈ ಫೆಕ್ ಪಟ್ಟಿಯಲ್ಲಿ ಯಾರಿಗೆಲ್ಲಾ ಸಿಕ್ಕಿತ್ತು ಟಿಕೆಟ್!?

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ಮಧ್ಯೆ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಎದೆಬಡಿತವೂ ನಾರ್ಮಲ್ ಗಿಂತ ಜಾಸ್ತಿನೇ ಇದೆ. ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಫರ್ಸ್ಟ್ ಲಿಸ್ಟ್ ಬಿಡುಗಡೆಗೊಳಿಸಿದ್ದು, ಜೆಡಿಎಸ್ ಸಹ ತನ್ನ ಅಭ್ಯರ್ಥಿಗಳನ್ನು ಬಹುತೇಕ ಫೈನಲ್ ಮಾಡಿದೆ. ಆದ್ರೆ ಕ್ಯಾಡಿಂಡೇಟ್ ಸೆಲೆಕ್ಷನ್ ವಿಚಾರದಲ್ಲಿ ಬಿಜೆಪಿ ಮಾತ್ರ ಅಳೆದು ತೂಗಿ ನೋಡುವುದ್ರಲ್ಲೇ ಇದೆ.


ಈ ನಡುವೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ಸಂಚಲನ ಉಂಟಾಯ್ತು. ಭಾರತೀಯ ಜನತಾ ಪಾರ್ಟಿ ವಿಧಾನ ಸಭಾ ಚುನಾವಣೆಗಾಗಿ 100 ಜನರ ಪಟ್ಟಿಯನ್ನು ರಿಲೀಸ್ ಮಾಡಿದ್ದು ವಿವಿಧ ದ.ಕ., ಉಡುಪಿ ಸೇರಿದಂತೆ ರಾಜ್ಯದ ಒಟ್ಟು 100 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯ ಹೆಸರಿರುವ ಪಟ್ಟಿಯ ಪಿಡಿಎಫ್ ಫೈಲೊಂದು ಹರಿದಾಡ್ತಿದೆ. 

ಈ ಪಟ್ಟಿಯಲ್ಲಿರುವಂತೆ ಪುತ್ತೂರಿಗೆ ಸಂಜೀವ ಮಠಂದೂರು, ಸುಳ್ಯ ಕ್ಷೇತ್ರಕ್ಕೆ ಅಂಗಾರ, ಬೆಳ್ತಂಗಡಿಗೆ ಹರೀಶ್ ಪೂಂಜಾ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವೇದವ್ಯಾಸ ಕಾಮತ್ ಹೆಸರುಗಳನ್ನೇ ಫೈನಲ್ ಮಾಡಲಾಗಿದೆ. ಆದ್ರೆ ಸದ್ಯ ಡಾ. ಭರತ್ ಶೆಟ್ಟಿ ಪ್ರತಿನಿಧಿಸ್ತಿರೋ ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ!

ಈ ಪಟ್ಟಿಯಲ್ಲಿರೋ ಇನ್ನೊಂದು ಮೇಜರ್ ಶಾಕ್ ಏನಪ್ಪಾ ಅಂದ್ರೆ ತೀವ್ರ ಕುತೂಹಲ ಕೆರಳಿಸಿದ್ದ ಕಾರ್ಕಳ ಕ್ಷೇತ್ರಕ್ಕೆ ಸಚಿವ ಸುನಿಲ್ ಕುಮಾರ್ ಬದಲಿಗೆ ಪ್ರಮೋದ್ ಮುತಾಲಿಕ್ ಅವರಿಗೆ ಪಕ್ಷ ಟಿಕೆಟ್ ನೀಡಿದ್ದು ಸುನಿಲ್ ಅವರನ್ನು ಉಡುಪಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಇನ್ನುಳಿದಂತೆ ಯಾರ್ಯಾರಿಗೆ ಪಕ್ಷ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ ಎಂಬುದನ್ನು ನೀವೇ ಚೆಕ್ ಮಾಡ್ಕೊಳ್ಳಿ..!

ವಿಶೇಷವಂದ್ರೆ ಬಿಜೆಪಿಯ ಕೇಂದ್ರ ಕಚೇರಿಯ ಹೆಸ್ರಿನಲ್ಲಿ ರಿಲೀಸ್ ಆಗಿರೋ ಈ ಪಟ್ಟಿಯಲ್ಲಿ ಪ್ರತೀ ಪೇಜಿನಲ್ಲಿ ಪಕ್ಷದ ಸೀಲ್ ಮತ್ತು ನ್ಯಾಷನಲ್ ಜನರಲ್ ಸೆಕ್ರೆಟರಿ ಅರುಣ್ ಸಿಂಗ್ ಅವರ ಸಹಿಯೂ ಇದೆ. ಆದರೆ ಈ ಪಟ್ಟಿ ಫೇಕ್ ಎನ್ನಲಾಗುತ್ತಿದ್ದು . ಏನೇ ಆದ್ರೂ ಬಿಜೆಪಿಯ ಒರಿಜಿನಲ್ ಪಟ್ಟಿ ರಿಲೀಸ್ ಆದ್ಮೇಲೆ ಈ ‘ಫೇಕ್’ ಪಟ್ಟಿಯೊಂದಿಗೆ ಕಂಪೇರ್ ಮಾಡ್ಕೊಳ್ಳಿ...!



Leave a Comment: