ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಕಾರ್ಯಕರ್ತರ ಸಭೆ*

Posted by Vidyamaana on 2023-04-09 10:24:06 |

Share: | | | | |


ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಕಾರ್ಯಕರ್ತರ ಸಭೆ*

ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ಸಮಿತಿ ವತಿಯಿಂದ ಎಚ್.ಎಂ ಹಾಲ್ ನಲ್ಲಿ ಏ 09 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ‌.ಐ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಸ್ತಫಾ ಲತೀಫಿ ವಹಿಸಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅದ್ಯಕ್ಷರಾದ ಇಬ್ರಾಹಿಮ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಚುನಾವಣ ಉಸ್ತುವಾರಿಯಾದ ಸಿದ್ದೀಕ್ ಕೆ‌ಎ ಚುನಾವಣ ರಣತಂತ್ರಗಳ ಬಗ್ಗೆ ವಿವರಿಸಿದರು. ಝಕರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ರೆಂಜಿಲಾಡಿ ಆನೆ ದಾಳಿ ಪ್ರಕರಣ; ಸಚಿವರು,ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಶವ ತೆಗೆಯಲು ಬಿಡುವುದಿಲ್ಲ.

Posted by Vidyamaana on 2023-02-20 04:52:20 |

Share: | | | | |


ರೆಂಜಿಲಾಡಿ ಆನೆ ದಾಳಿ ಪ್ರಕರಣ; ಸಚಿವರು,ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಶವ ತೆಗೆಯಲು ಬಿಡುವುದಿಲ್ಲ.

ಅರಣ್ಯಾಧಿಕಾರಿ, ಪೊಲೀಸ್ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ-ತುಸು ಉದ್ವಿಘ್ನ ಸ್ಥಿತಿ ನಿರ್ಮಾಣ


ಕಡಬ: ರೆಂಜಿಲಾಡಿ ಗ್ರಾಮದ ಇಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಮತ್ತು ಆನೆ ಸಮಸ್ಯೆಯ ಬಗ್ಗೆ ವ್ಯಕ್ತಿಯೋರ್ವರು ಈ ಹಿಂದೆ ಮಾಡಿದ್ದ ವೀಡಿಯೋವನ್ನು ಕಡಬ ಪೊಲೀಸರು ಡಿಲೀಟ್ ಮಾಡಿರುವ ಹಿನ್ನಲೆಯಲ್ಲಿ ಮಾತಿನ ಚಕಮಕಿ ನಡೆದು ತುಸು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಬಾರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಭಾಗದಲ್ಲಿ ನಿರಂತರ ಆನೆ ಹಾವಳಿ ಆಗುತ್ತಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.ವೀಡಿಯೋ ಡಿಲಿಟ್ ಮಾಡಿದ ಪೋಲಿಸರು! ಕೆಲ ದಿನಗಳ ಹಿಂದೆ ಮರ್ದಾಳದ ಸಂತೋಷ್ ಎಂಬವರು ಆನೆ ಸಮಸ್ಯೆಯ ಬಗ್ಗೆ ವರದಿ ತಯಾರಿಸಿ ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಐತ್ತೂರು ಪಿಡಿಓ ಅವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಡಬ ಪೋಲಿಸರು ವೀಡಿಯೋ ಡಿಲೀಟ್ ಮಾಡಿದ್ದರು. ಈ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ವಿಚಾರವೂ ಪ್ರಸ್ತಾಪವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳದಲ್ಲಿ ಎಲ್ಲರೂ ಇಲಾಖಾ ಅಧಿಕಾರಿಗಳವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಡಿ.31

Posted by Vidyamaana on 2023-12-31 04:54:30 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ  ಡಿ.31

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಡಿ.31 ರಂದು


ಬೆಳಿಗ್ಗೆ 10 ಗಂಟೆಗೆ ಸುಳ್ಯ ಬಂಟರ ಭ ನದಲ್ಲಿ‌ ಬಂಟರ ಸಮಾವೇಶ


11.30 ಕ್ಕೆ ಅರಿಯಡ್ಕ ಹಾಗೂ ಮಾಡ್ನೂರು ಗ್ರಾಮದಲ್ಲಿ ರಸ್ತೆ ಕಾಂಕ್ರೀಟ್ ಶಿಲಾನ್ಯಾಸ


12.30 ಕ್ಕೆ ಬೆಟ್ಟಂಪಾಡಿ ಗ್ರಾಮದ ಕೀಲಂಪಾಡಿ ರಸ್ತೆ ಶಿಲಾನ್ಯಾಸ


1.00 ಗಂಟೆಗೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ ಲಕ್ಷ ಬಿಲ್ವಾರ್ಚನೆ



ಮಧ್ಯಾಹ್ನ 3 ಗಂಟೆಗೆ ಪೆರ್ನೆಯಲ್ಲಿ ಬಂಟರ ಕ್ರೀಡಾಕೂಟ


ಸಂಜೆ 5 ಗಂಟೆಗೆಶ್ರೀಮಾ ಹಿಲ್ಸ್ ಉದ್ಘಾಟನೆ ಬಪ್ಪಳಿಗೆ


ಸಂಜೆ 6 ಗಂಟೆಗೆ‌ಮುಕ್ವೆ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ


ಸಂಜೆ 7 ಕ್ಕೆ‌ ವಿಟ್ಲದಲ್ಲಿ ನಲಿಕೆಯವರ ಸಮಾಜಸೇವಾ ಸಂಘ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ 

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ:ಆರೋಪಿ ಪ್ರವೀಣ್‌ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Posted by Vidyamaana on 2023-12-01 15:58:50 |

Share: | | | | |


ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ:ಆರೋಪಿ ಪ್ರವೀಣ್‌ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಉಡುಪಿ ಸಬ್ ಜೈಲಿನಿಂದ ಆರೋಪಿ ಪ್ರವೀಣ್‌ ಚೌಗಲೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ.


ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ನನ್ನು ಉಡುಪಿಯ ಸಬ್ ಜೈಲಿಗೆ ರವಾನಿಸಲಾಗಿತ್ತು. ಆದರೆ ಈ ಜೈಲಿನಲ್ಲಿ ಈತನಿಗೆ ಭದ್ರತೆ ನೀಡುವುದು ಸವಾಲಾಗಿದೆ. ಸಹಕೈದಿಗಳೇ ಈತ ಮಾಡಿದ ಹೀನ ಕೆಲಸಕ್ಕೆ ಆತನಿಗೆ ಹಲ್ಲೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಸೀಮಿತ ವ್ಯವಸ್ಥೆಯಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆ ಸದ್ಯ ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಡಿಸೆಂಬರ್ 5ರ ತನಕ ಈತನಿಗೆ ನ್ಯಾಯಾಂಗ ಬಂಧನವಿದ್ದು, ವಿಡಿಯೋ ಕಾನ್ನರೆನ್ಸ್ ಮೂಲಕವೇ ವಿಚಾರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ Ad-Lab ನಲ್ಲಿ ಬೆಂಕಿ : ತಪ್ಪಿದ ಬಾರಿ ದುರಂತ ಲಕ್ಷಾಂತರ ರೂ ನಷ್ಟ

Posted by Vidyamaana on 2023-10-17 17:21:46 |

Share: | | | | |


ಶಾರ್ಟ್ ಸರ್ಕ್ಯೂಟ್ ನಿಂದ Ad-Lab ನಲ್ಲಿ ಬೆಂಕಿ : ತಪ್ಪಿದ ಬಾರಿ ದುರಂತ ಲಕ್ಷಾಂತರ ರೂ ನಷ್ಟ

ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಪೋಟೋ ಡೆವಲಪ್ ಸ್ಟುಡಿಯೋ ಆಡ್ ಲ್ಯಾಬ್ ಮಂಗಳವಾರ ಮಧ್ಯಾಹ್ನ ಬಂದ ಸಿಡಿಲಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ.ಸರಣಿ ಸಿಡಿಲು ಬಂದಿದ್ದು, ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿ ಕಂಪ್ಯೂಟರ್ ಸೇರಿ ಎಲ್ಲಾ ಉಪಕರಣಗಳು ಸುಟ್ಟು ಹೋಗಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ 

ಮಾಹಿತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಬೆಂಕಿ ಶಮನ ಮಾಡುವ ಕಾರ್ಯ ಮಾಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಸುಟ್ಟವಸ್ತುಗಳನ್ನು ಹಾಗೂ ಬೆಂಕಿಗೆ ತೀವ್ರ ಗೊಳ್ಳಲು ಸಹಕರಿಸುವ ವಸ್ತುಗಳನ್ನು ಹೊರ ಹಾಕುವ ಕಾರ್ಯ ಮಾಡಿದರಿಂದ ಬಾರಿ ದುರಂತ ತಪ್ಪಿದೆ.

ಸಂಪ್ಯ: ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ

Posted by Vidyamaana on 2023-04-28 13:57:41 |

Share: | | | | |


ಸಂಪ್ಯ: ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ

ಪುತ್ತೂರು; ಮಕ್ಕಳೇ ನಮ್ಮ ಸಂಪತ್ತು, ಮಕ್ಕಳಿಗಾಗಿ ನಾವು ಎಲ್ಲವನ್ನೂ ಸಹಿಸುತ್ತೇವೆ, ತ್ಯಾಗಗಳನ್ನು ಮಾಡುತ್ತೇವೆ ಆದರೆ ಅದೇ ಮಕ್ಕಳು ನಾಳೆ ದಾರಿ ತಪ್ಪಿದಾಗ ಅಥವಾ ಕಲಿತು ಉದ್ಯೋಗ ಇಲ್ಲವಾದಾಗ ನಾವೇ ಅದರ ನೋವನ್ನು ಅನುಭವಿಸಬೇಕಾಗುತ್ತದೆ , ಮಕ್ಕಳು ದಾರಿತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಷಕರದ್ದು , ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರೆಯುವಂತಾಗಲು ರಾಜ್ಯದಲ್ಲಿ , ದೇಶದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ನಮಗೆ ಧರ್ಮಗಳ ನಡುವಿನ ಜಗಳ, ದ್ವೇಷ ಬೇಡ. ನಮ್ಮ ಮಕ್ಕಳೂ ಅದಕ್ಕೆ ಬಲಿಯಾಗುವುದು ಬೇಡ. ಧರ್ಮ ಧರ್ಮಗಳ ನಡುವೆ ದ್ವೇಷದಿಂದ ಸಮಾಜಕ್ಕ ಗಳಿಸಿಕೊಳ್ಲುವಂತದ್ದು ಏನೂ ಇಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಒಂದಾಗಿ ಬಾಳಬೇಕು. ದೇಶದಲ್ಲಿ ಹಲವು ಧರ್ಮಳು, ಜಾತಿಯವರನ್ನೊಳಗೊಂಡ ಸುಂದರ ಹೂದೋಟ, ಈ ಹೂದೋಠ ಹಾಗೇಯೇ ಉಳಿಯಲಿ. ದೇಶದಲ್ಲಿ ಜಾತ್ಯಾತೀತ ಕಲ್ಪನೆ ಉಳಿದುಕೊಳ್ಳಬೇಕಾದರೆ ಹಿಂದೂ ಮುಸ್ಲಿಂ ಪರಸ್ಪರ ಒಟ್ಟಾಗಿರಬೇಕು. ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರ ಜೊತೆ ನಮ್ಮ ಮಕ್ಕಳು ಸೇರದಂತೆ ನಾವು ಜಾಗೃತರಾಗಬೇಕಿದೆ ಎಂದು ಹೇಳಿದರು.

ಪುತ್ತೂರು ನಗರವನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಶಾಸಕರು ಪ್ರಾರಂಭದಲ್ಲಿ ಹೇಳಿದ್ದರು ಆದರೆ ಅಭಿವೃದ್ದಿ ಮಾಡಿಲ್ಲ, ಕೇವಲ ಫ್ಲೆಕ್ಸ್ ಹಾಕಿದ್ದು ಮಾತ್ರ, ಬ್ರಹ್ಮ ನಗರದಲ್ಲಿ ೧೦೦ ಮನೆಗಳ ಫ್ಲ್ಯಾಟ್ ನಿರ್ಮಾಣ ಮಾಡುತ್ತೇವೆ ಎಂದವರಿಗೆ ಅಲ್ಲಿಗೆ ಸರಿಯಾದ ಮೂಲಭೂತ ಸೌಕರ್ಯವನ್ನು ಮಾಡಲು ಸಾಧ್ಯವಾಗಲಿಲ್ಲ. ಶಂಕುಸ್ಥಾಪನೆ ಮಾಡಿದ್ದು, ಫ್ಲೆಕ್ಸ್ ಹಾಕಿದ್ದು, ೪೦ ಪರ್ಸೆಂಟ್ ಕಮಿಷನ್ ತಗೊಂಡು ಜಾಲಿ ಮಾಡಿದ್ದು ಬಿಟ್ರೆ ಏನೇನೂ ಅಭಿವೃದ್ದಿ ಕೆಲಸ ಮಾಡಿಲ್ಲ. ಪುತ್ತೂರು ನಗರದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ ಎಂದು ದೂರಿದರು. ಕಾಂಗ್ರೆಸ್ ಬೆಂಬಲಿಸಿ ನಾವು ಅಭಿವೃದ್ದಿ ಮಡಿ ತೋರಿಸುತ್ತೇವೆ ಎಂದು ರೈಗಳು ಸಭೆಗೆ ತಿಳಿಸಿದರು. ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಇದೆ. ಖಂಡಿತವಾಗಿಯೂ ನಿಮ್ಮೆಲ್ಲರ ಸಹಕಾರದಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತೆ ಇತಿಹಾಸವನ್ನು ನಿರ್ಮಾಣ ಮಾಡಲಿದೆ ಎಂದು ಭವಿಷ್ಯ ನುಡಿದರು

ದೇಶಕಟ್ಟಿದ್ದು ಕಾಂಗ್ರೆಸ್ ಮಾರಿದ್ದು ಬಿಜೆಪಿ; ಮಹಮ್ಮದ್ ಬಡಗನ್ನೂರು

 ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಎಂದು ಕಾಂಗ್ರೆಸ್ಸನ್ನು ದೂರುವವನಿಗೂ ಗೊತ್ತಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಬಡವರಿಗೆ ಬದುಕಲು ಸಾಧ್ಯ ಎಂದು ಇಂದಿರಾಗಾಂಧಿಯನ್ನು, ನೆಹರೂ ಅವರನ್ನು ಹಿಯ್ಯಾಳಿಸುವವನಿಗೆ ಗೊತ್ತಿದೆ ಎಲ್ಲವೂ ಗೊತ್ತಿದ್ದು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುತ್ತಿರುವವರು ದೆಶದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.

ಹುಟ್ಟುವಾಗಲೇ ಚಿನ್ನದ ಚಮಚ ಬಾಯಿಗೆ ಇಟ್ಟುಕೊಂಡುಕೊಂಡು ಬಂದ ದೇಶದ ಜನರಿಗೋಸ್ಕರ ಅನೇಕ ವರ್ಷ ಜೈಲು ವಾಸ ಅನುಭವಿಸಿದರು. ಉಳುವವನಿಗೇ ಭೂಮಿಯನ್ನು ಕೊಟ್ಟ ಇಂದಿರಾಗಾಂಧಿಯನ್ನು ಗುಂಡಿಟ್ಟು ಕೊಂದರು, ಭಾರತವನ್ನು ವಿಶ್ವಗುರು ಮಾಡಲು ಹೊರ ರಾಜೀವ ಗಾಂಧಿ ದೇಶಕ್ಕಾಗಿ ರಕ್ತ ಸಾಕ್ಷಿಯಾದರು ಇವರೆಲ್ಲರ ತ್ಯಾಗದ ಫಲವಾಗಿ ಇಂದು ಭಾರತ ಕಂಗೊಳಿಸುತ್ತದೆ ವಿನಾ ಸಾರ್ವರ್ಕರ್ ಸಂತತಿಗಳಿಂದ ದೇಶ ಉದ್ದಾರ ಆಗಿಲ್ಲ. ಕಾಂಗ್ರೆಸ್ ಕಟ್ಟಿದ ಭವ್ಯ ಭಾರತವನ್ನು ಇಂದು ಅಧಿಕಾರದಲ್ಲಿರುವ ಬಿಜೆಪಿ ಒಂದೊಂದಾಗಿ ಮಾರಾಟ ಮಾಡುತ್ತಿದೆ. ದೇಶ ಉಳಿಯಬೇಕಾದರೆ ಬಿಜೆಪಿ ತೊಳಗಬೆಕು. ಬಿಜೆಪಿ ಮುಕ್ತ ಕರ್ನಾಟಕ, ಬಿಜೆಪಿ ಮುಕ್ತ ಭಾರತವಾಗುವಲ್ಲಿ ಪ್ರತೀಯೊಬ್ಬ ಪ್ರಜೆಯೂ ಚಿಂತಿಸಬೇಕಿದೆ. ಕಾಂಗ್ರೆಸ್ ಬೆಂಬಲಿಸುವ ಮೂಲಕ ನಾವು ಹಿರಿಯರ ತ್ಯಾಗಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಶಾಸಕರಾದವರಿಗೆ ನೈತಿಕತೆ ಬೇಕು

ಚುನಾವಣೆಗೆ ಎಲ್ಲರಿಗೂ ಸ್ಪರ್ದಿಸಬಹುದು ಆದರೆ ಆತನಿಗೆ ಕನಿಷ್ಟ ನೈತಿಕತೆಯಾದರೂ ಬೇಕಾಗುತ್ತದೆ. ನೈತಿಕತೆಯಲ್ಲಿ ಬಲಹೀನನಾದವನಿಗೆ ಜನರ ಸೇವೆಯನ್ನು ಹೇಗೆ ಮಾಡಲು ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ಇದೇ ಕಾರಣಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಜನಪ್ರತಿನಿಧಿಯಾದವರು ಚುನಾವಣೆ ಸಂದರ್ಬದಲ್ಲಿ ತಮ್ಮ ಬಂಡವಾಳ ಬಯಲು ಆಗದಂತೆ ನ್ಯಾಯಾಲಯದಿಂದ ಸ್ಟೇ ಆರ್ಡರ್ ತರುತ್ತಿರುವುದು ನೈತಿಕತೆ ಕುಸಿದಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಸೇರ್ಪಡೆ

ಇದೇ ಸಂಧರ್ಭದಲ್ಲಿ ಬಿಜೆಪಿ ಮುಖಂಡ, ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಜಬ್ಬಾರ್ ಸಂಪ್ಯ ತಮ್ಮ ಅಭಿಮಾನಿಗಳ ಜೊತೆಗೆ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಎಂ ಎಸ್ ಮಹಮ್ಮದ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ಪ್ರಸನ್ನ ಶೆಟ್ಟಿ ಸಿಝ್ಲರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.



Leave a Comment: