ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ ಆರೋಪ - ಒಂದುವರೆ ತಿಂಗಳ ಮಗು ಸಾವು

Posted by Vidyamaana on 2023-08-08 15:56:46 |

Share: | | | | |


ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ ಆರೋಪ - ಒಂದುವರೆ ತಿಂಗಳ ಮಗು ಸಾವು

ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಗಳ ನಿರ್ಲಕ್ಷ್ಯಕ್ಕೆ ಒಂದುವರೆ ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಸಾವನ್ನಪ್ಪಿದ ತಂದೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿಲು ಸಲಹೆ ನೀಡಿದ್ದಾರೆ.


ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಗಳ 1.5 ತಿಂಗಳು ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಮಗು.

 ನೆರಿಯ ಅಕ್ಕ ಲೀಲಾವತಿ ಮನೆಯಲ್ಲಿದ್ದಕೊಂಡು ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ. ಆಗಸ್ಟ್ 8 ರಂದು(ಇಂದು) ಕಫ ಅಗಿತ್ತು ಎಂದು ಮಧ್ಯಾಹ್ನ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡದ ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪ ಮಾಡುತ್ತಿದ್ದಾರೆ.

ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

Posted by Vidyamaana on 2024-04-10 06:35:52 |

Share: | | | | |


ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

ಕೈಯಲ್ಲೊಂದು ಮೊಬೈಲ್, ಸಂಚರಿಸಲೊಂದು ಬೈಕ್ ಸಿಕ್ಕರೆ ಹದಿಹರೆಯದ ಯುವಕರಿಗೆ ಮತ್ತೆ ಉಪದೇಶದ ಅಗತ್ಯವೂ, ಕೇಳಿಸಿಕೊಳ್ಳುವ ವ್ಯವಧಾನವೂ ತೀರಾ ಇಲ್ಲದಾಗಿದೆ.

ಹಬ್ಬದ ಸಂಭ್ರಮ ದ ಹೆಸರಿನಲ್ಲಿ ಮೈಮರೆತು ಓಡಾಡದಿರಿ.

ಕೈಯಲ್ಲಿರುವ ಬೈಕ್ ನ ನಿಯಂತ್ರಣ ನಿಮ್ಮಲ್ಲಿದ್ದರೂ ಮುಂದುಗಡೆಯಿಂದ ಬರುವ ವಾಹನದ ನಿಯಂತ್ರಣ ನಿಮ್ಮಲ್ಲಿರಲ್ಲ ಎಂಬ ಪ್ರಜ್ಞೆಯಾದರೂ ಇರಲಿ.ಸಣ್ಣ ಪ್ರಾಯದ ಯುವಕರು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಕಳೆದುಕೊಳ್ಳುವಾಗ ಯಾರಿಗೆ ತಾನೆ ಅದನ್ನು ಸಹಿಸಲು ಸಾಧ್ಯ.

ಆಸ್ಪತ್ರೆಯ ಶವಾಗಾರದ ಮುಂದೆ ಏನೂ ಪರಿಚಯವಿಲ್ಲದವರೇ ಜನಾಝವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವಾಗ, ಹೆತ್ತು ಸಾಕಿ ಸಲಹಿದ ಆ ಹೆತ್ತವರ ರೋಧನೆ ಅದೆಷ್ಟರ ಮಟ್ಟಿಗೆ ಇರಬಹುದು?

ತಾಯಿಗೆ ಸಲಾಂ ಹೇಳಿ ಮನೆಯಿಂದ ಹೊರಟ ಮಗ ಮರಳಿ ಬಂದದ್ದು ಬಿಳಿ ವಸ್ತ್ರವನ್ನು ಹೊದಿಸಿದ ರೂಪದಲ್ಲಿ ಮಯ್ಯತ್ತಾಗಿಯಾಗಿತ್ತು!

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಕಬರ್ ತೋಡಿದ್ದು ಸ್ವತಃ ಅಪ್ಪನೇ ಆಗಿತ್ತು!

ಇಂತಹ ಹೃದಯ ಕಲ್ಲಾಗಿಸುವ ಅದೆಷ್ಟು ಮರಣ ವಾರ್ತೆಗಳಾಗಿದೆ ಕಳೆದ ಆರೇಳು ವರ್ಷಗಳಿಂದ ನಾವು ಕಣ್ಣಾರೆ ಕಾಣುತ್ತಿರುವುದು?

ಮರಣದ ಸ್ಮರಣೆಗಿಂತ ಉತ್ತಮವಾದ ಉಪದೇಶ ಮತ್ತೊಂದಿಲ್ಲ.ಆದರೂ ಪ್ರತಿಯೊಂದು ಮರಣ ಸಂಭವಿಸಿದಾಗಲೂ ಒಂದೆರಡು ವಾರಗಳಲ್ಲಿ ನಾವದನ್ನು ಮರೆತುಬಿಡುತ್ತೇವೆ.

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಧನೇಶ್ ಶೆಟ್ಟಿ ಆಯ್ಕೆ

Posted by Vidyamaana on 2023-11-24 12:25:24 |

Share: | | | | |


ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ  ಧನೇಶ್ ಶೆಟ್ಟಿ  ಆಯ್ಕೆ

ಮಂಗಳೂರು: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಧನೇಶ್ ಶೆಟ್ಟಿ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಧನೇಶ್ ಶೆಟ್ಟಿ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರರಾಗಿದ್ದಾರೆ. ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಇವರು ವಿವಾಹಿತರಾಗಿದ್ದು ಪತ್ನಿಯೊಂದಿಗೆ ಇಂಡೋನೇಷಿಯದ ಆರೋಗ್ಯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇದೀಗ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

Posted by Vidyamaana on 2023-04-27 07:03:32 |

Share: | | | | |


ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

ಪುತ್ತೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ, ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ನಾಲ್ಕು ಗ್ಯಾರಂಟಿ ಯಓಜನೆಯು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಎಲ್ಲಾ ಮನೆಗಳಿಗೂ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡು ವಿತರಣೆ ಮಾಡುತ್ತಿದ್ದು ಬಿಜೆಪಿಗರ ಮನೆಗಳಿಗೂ ಕಾರ್ಡು ವಿತರಿಸಿ ಯಾವುದೇ ತಾರತಮ್ಯ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಅಕ್ಕ ಅಕ್ಕ ಎಂದು ಕರೀತಿದ್ದವನೇ ಟೀಚರಮ್ಮನನ್ನು ಕೊಂದು ಹೂತು ಹಾಕಿದ

Posted by Vidyamaana on 2024-01-26 03:36:13 |

Share: | | | | |


ಅಕ್ಕ ಅಕ್ಕ ಎಂದು ಕರೀತಿದ್ದವನೇ ಟೀಚರಮ್ಮನನ್ನು ಕೊಂದು ಹೂತು ಹಾಕಿದ

ಮಂಡ್ಯ: ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ, ರೀಲ್ಸ್‌ ಮೂಲಕ ಗಮನ ಸೆಳೆಯುತ್ತಿದ್ದ ಮಾಣಿಕ್ಯನ ಹಳ್ಳಿಯ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.


ಎಲ್ಲರ ಊಹೆಯಂತೆ ಕಳೆದ ಎರಡು ವರ್ಷಗಳಿಂದ ದೀಪಿಕಾ ಅವರಿಗೆ ಅತ್ಮೀಯನಾಗಿದ್ದು, ಆಕೆಯನ್ನು ʻಅಕ್ಕ ಅಕ್ಕʼ ಎಂದೇ ಕರೆಯುತ್ತಿದ್ದ ನಿತೇಶ್‌ ಎಂಬ ಯುವಕನೇ ಕೊಲೆಗಾರ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿದೆ.




ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶನಿವಾರ ಸಂಜೆಯ ಹೊತ್ತಿಗೆ ಟೀಚರ್ ದೀಪಿಕಾ ಅವರನ್ನು ಕೊಂದು ಕೊಂದು ಮಣ್ಣಲ್ಲಿ ಹೂತು ಹಾಕಿದ್ದ ಅದೇ ಗ್ರಾಮದ ನಿತೇಶ್ʼ ಅಂದಿನಿಂದಲೇ ನಾಪತ್ತೆಯಾಗಿದ್ದ. ಮೇಲುಕೋಟೆ ಪೊಲೀಸರು ನಿತೇಶ್‌ನನ್ನು ಹೊಸಪೇಟೆ ಬಳಿ ವಶಕ್ಕೆ ಪಡೆದು ಕರೆದುಕೊಂಡು ಬಂದಿದ್ದಾರೆ. ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಜತೆಗೆ ಕೊಲೆಗೆ ಕಾರಣವಾದ ಅಂಶಗಳನ್ನು ಬಿಚ್ಚಿಟ್ಟಿದ್ದಾನೆ.




ಎಲ್ಲರಿಗೂ ತಿಳಿದಿರುವಂತೆ ದೀಪಿಕಾ ಅವರು ವಿವಾಹಿತೆ. ಈಗ ಅವರಿಗೆ 28 ವರ್ಷ. ಒಂಬತ್ತು ವರ್ಷಗಳ ಹಿಂದೆ ಅವರಿಗೆ ಲೋಕೇಶ್‌ ಎಂಬವರೊಂದಿಗೆ ಮದುವೆಯಾಗಿತ್ತು. ಇವರಿಗೆ ಎಂಟು ವರ್ಷದ ಒಬ್ಬ ಮಗನಿದ್ದಾನೆ. ದೀಪಿಕಾ ಅವರಿಗೆ ವಿಡಿಯೋ ರೀಲ್ಸ್‌ ಮಾಡುವುದು ಭಾರಿ ಖುಷಿಯ ವಿಷಯ. ಅದಕ್ಕೆ ಪೂರಕವಾದ ಸೌಂದರ್ಯ ಮತ್ತು ಬುದ್ಧಿವಂತಿಕೆ, ವಿಷಯ ಜ್ಞಾನವೂ ಅವರಿಗೆ ಇತ್ತು.




ದೀಪಿಕಾ ಅವರು ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದರು. ಅವರು ಪ್ರತಿ ದಿನವೂ ಬಸ್ಸಿನಲ್ಲಿ ಅಲ್ಲಿಗೆ ಹೋಗಿಬರುತ್ತಿದ್ದರು. ಮಾಣಿಕ್ಯನ ಹಳ್ಳಿಯ ಮನೆಯಿಂದ ‌ಹೆದ್ದಾರಿವರೆಗೆ ದ್ವಿಚಕ್ರ ವಾಹನದಲ್ಲಿ ಬಂದು ಮುಂದೆ ಮೇಲುಕೋಟೆವರೆಗೆ ಬಸ್ಸಿನಲ್ಲಿ ಹೋಗುತ್ತಿದ್ದರು. ಕಳೆದ ಜನವರಿ 20ರಂದು ಶನಿವಾರ ಅವರು ಶಾಲೆಗೆ ಹೊರಟು ಮಾರ್ಗದ ಬಳಿ ಬಂದಾಗ ಬಸ್‌ ಹೋಗಿ ಆಗಿತ್ತು. ಹಾಗಾಗಿ ಅವರು ದ್ವಿಚಕ್ರ ವಾಹನದಲ್ಲೇ ಶಾಲೆಗೆ ಹೋಗಿದ್ದರು. ಮಧ್ಯಾಹ್ನ 12.30ಕ್ಕೆ ಶಾಲೆಯಿಂದ ಹೊರಟಿದ್ದ ಅವರು ಮನೆಗೆ ಬರಲೇ ಇಲ್ಲ.


ಮನೆಯವರು ಸಂಜೆಯಾದದರೂ ದೀಪಿಕಾ ಬಂದಿಲ್ಲ ಎಂದು ಹುಡುಕಲು ಶುರು ಮಾಡಿದಾಗ ಆಕೆಯ ಸ್ಕೂಟರ್‌ ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಜತೆಗೆ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಪತಿ ಲೋಕೇಶ್‌ ಅವರು ಪತ್ನಿ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಇದರ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ.


ಈ ನಡುವೆ ಮನೆಯವರೇ ಈ ಸ್ಕೂಟರ್‌ ಸಿಕ್ಕಿದ ಆಸುಪಾಸಿನಲ್ಲಿ ಏನಾದರೂ ಕುರುಹುಗಳು ಸಿಗಬಹುದೇ ಎಂದು ಹುಡುಕಿದ್ದರು. ಆಗ ಒಂದು ಕಡೆ ಹಸಿ ಮಣ್ಣು ಕಂಡಿತ್ತು. ಅದನ್ನು ಸ್ವಲ್ಪ ಸರಿಸಿದಾಗ ದೀಪಿಕಾ ಅವರ ಶವ ಪತ್ತೆಯಾಗಿತ್ತು. ಅಲ್ಲಿಗೆ ಶಾಲೆಯಿಂದ ಹೊರಟ ದೀಪಿಕಾ ಅವರನ್ನು ಯಾರೋ ಕೊಲೆ ಮಾಡಿ ಹೂತು ಹಾಕಿದ್ದು ಸ್ಪಷ್ಟವಾಗಿತ್ತು. ಅದಕ್ಕೆ ಪೂರಕವಾಗಿ ಯೋಗ ನಾರಸಿಂಹ ಬೆಟ್ಟಕ್ಕೆ ಹೋಗಿ ಯುವಕರ ತಂಡವೊಂದು ಬೆಟ್ಟದ ಭಾಗದಲ್ಲಿ ನಡೆದ ಒಂದು ಘಟನೆಯ ವಿಡಿಯೊವನ್ನು ಪೊಲೀಸರಿಗೆ ಒಪ್ಪಿಸಿತ್ತು. ಅದರಲ್ಲಿ ತಪ್ಪಲಿನಲ್ಲಿ ಮಹಿಳೆ ಮತ್ತು ಯುವಕರಿಬ್ಬರು ಕಿತ್ತಾಡುತ್ತಿರುವುದು ಕಂಡುಬಂದಿತ್ತು.


ನಿಜವೆಂದರೆ ದೀಪಿಕಾ ಕೊಲೆಯಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಹಂತಕ ಯಾರು ಎಂಬ ವಿಚಾರದಲ್ಲಿ ಆ ಭಾಗದ ಜನರಿಗೆ ಸ್ಪಷ್ಟತೆ ಇತ್ತು. ಆತನೇ ಆ ಭಾಗದ ಪ್ರಭಾವಿ ವ್ಯಕ್ತಿಯೊಬ್ಬರ ಮಗ ನಿತೇಶ್‌! ಹೌದು, ನಿತೇಶ್‌ ಮತ್ತು ದೀಪಿಕಾ ಕಳೆದ ಎರಡು ವರ್ಷಗಳಿಂದ ಆತ್ಮೀಯರಾಗಿಯೇ ಇದ್ದರು. ಅದು ದೀಪಿಕಾ ಪತಿ ಲೋಕೇಶ್‌ಗೆ ಕೂಡಾ ಗೊತ್ತಿತ್ತು.


ಹಾಗಂತ ಅದೇನೂ ಕೆಟ್ಟ ಸಂಬಂಧವಾಗಿರಲಿಲ್ಲ. 22 ವರ್ಷದ ನಿತೇಶ್‌ ದೀಪಿಕಾರನ್ನು ಅಕ್ಕ ಅಕ್ಕ ಎಂದೇ ಕರೆಯುತ್ತಿದ್ದ. ಆಕೆಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದ. ಆಕೆಯ ರೀಲ್ಸ್‌ಗೆ ಕೂಡಾ ನೆರವಾಗುತ್ತಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಗಾಸಿಪ್‌ ಗಳು ಹರಿದಾಡುತ್ತಿದ್ದವು. ನಿತೇಶ್‌ ಅಕ್ಕನೆಂದು ಕರೆಯುತ್ತಿದ್ದ ದೀಪಿಕಾ ಅವರ ವಿಚಾರದಲ್ಲಿ ಬೇರೆ ಭಾವನೆಗಳನ್ನು ವ್ಯಕ್ತಪಡಿಸಲು ಶುರು ಮಾಡಿದ್ದ ಎನ್ನಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಜನರ ಬಾಯಿಗೆ ಅವರು ಆಹಾರವಾಗಿದ್ದರು.


ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ದೀಪಿಕಾ ಆತನಿಂದ ಅಂತರ ಕಾಯ್ದುಕೊಂಡಿದ್ದರು. ಮೊದಲಿನಷ್ಟು ಮಾತುಕತೆ, ಭೇಟಿ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಇದು ದೀಪಿಕಾಳನ್ನು ಅತಿಯಾಗಿ ಹಚ್ಚಿಕೊಂಡಿದ್ದ ನಿತೇಶ್‌ಗೆ ಭಾರಿ ಆಕ್ರೋಶವನ್ನು ಉಂಟು ಮಾಡಿತ್ತು ಎನ್ನಲಾಗಿದೆ.


ಹುಟ್ಟುಹಬ್ಬದ ನೆಪದಲ್ಲಿ ಕರೆಸಿಕೊಂಡಿದ್ದ ನಿತೇಶ್‌


ಕಳೆದ ಶನಿವಾರ ನಿತೇಶ್‌ ಹುಟ್ಟುಹಬ್ಬವಿತ್ತು. ಹಿಂದೆಲ್ಲ ನಿತೇಶ್‌ ಹುಟ್ಟುಹಬ್ಬವನ್ನು ದೀಪಿಕಾ ಸಂಭ್ರಮಿಸುತ್ತಿದ್ದರು. ಈ ಬಾರಿ ಆಕೆ ವಿಷ್‌ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಆತನೇ ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿದ್ದ ದೀಪಿಕಾ ಅವರಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಸುಮಾರು ಒಂದು ಗಂಟೆ ಕಾಲ ಶತಪಥ ತಿರುಗುತ್ತಾ ಫೋನಿನಲ್ಲಿ ಮಾತನಾಡಿದ್ದ ದೀಪಿಕಾ ಅಲ್ಲಿಂದ ಹೊರಟಿದ್ದರು.


ಹಾಗೆ ಹೊರಟ ದೀಪಿಕಾ ಬಂದಿದ್ದೇ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ. ಅಲ್ಲಿ ಅವರ ಮಧ್ಯೆ ಮಾತುಕತೆ ನಡೆದಿದೆ. ಎರಡು ವರ್ಷಗಳಿಂದ ಜತೆಯಾಗಿದ್ದು ಈಗ ಏಕಾಏಕಿಯಾಗಿ ದೂರ ಮಾಡಿದ್ದನ್ನು ಪ್ರಶ್ನಿಸಿ ದೂರ ಮಾಡಬೇಡಿ ಎಂದು ಕೇಳಿಕೊಂಡಿದ್ದಾನೆ ಎನ್ನಲಾಗಿದೆ. ಆಗ ಅವರಿಬ್ಬರ ನಡುವೆ ಜಗಳ ನಡೆದು ಅಂತಿಮವಾಗಿ ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕೆಳಗೆ ಎಳೆದುಕೊಂಡು ಹೋಗಿ ಮಣ್ಣಲ್ಲೇ ಹೂತು ಹಾಕಿದ್ದಾನೆ.


ಶನಿವಾರದಿಂದಲೇ ನಾಪತ್ತೆಯಾಗಿದ್ದ ನಿತೇಶ್‌


ನಿಜವೆಂದರೆ ಕಳೆದ ಜನವರಿ 23ರಂದು ನಿತೇಶ್‌ ಮೇಲೆ ಸಂಶಯ ಬರಲು ಕಾರಣವಾಗಿದ್ದು ಆತನ ನಾಪತ್ತೆ ಪ್ರಕರಣ. ಆವತ್ತು ದೀಪಿಕಾ ಮೃತದೇಹ ಸಿಕ್ಕಿದ ದಿನದಿಂದಲೇ ಇವನೂ ನಾಪತ್ತೆಯಾಗಿದ್ದ. ಅಂದು ಆತ ನನ್ನ ಹುಡುಕಬೇಡಿ ಅಕ್ಕನಿಗೆ ಒಳ್ಳೆ ಕಡೆ ಮದುವೆ ಮಾಡಿ ಎಂದು ತಂದೆಗೆ ಹೇಳಿದ್ದನಂತೆ. ಇತ್ತ ದೀಪಿಕಾಗೆ ಕೊನೆಯದಾಗಿ ಕರೆ ಮಾಡಿ ಅಷ್ಟು ಹೊತ್ತು ಮಾತನಾಡಿದ್ದು ಕೂಡಾ ಇವನೇ ಎನ್ನುವುದು ಕರೆಗಳಿಂದ ಸ್ಪಷ್ಟವಾಗಿದೆ.


ತಪ್ಪೊಪ್ಪಿಕೊಂಡನಾ ಕೊಲೆಗಾರ ನಿತೇಶ್‌ ?


ಅಂದು ಮೇಲುಕೋಟೆಯಿಂದ ತಪ್ಪಿಸಿಕೊಂಡಿದ್ದ ಆರೋಪಿ ನಿತೇಶ್‌ ಊರು ಬಿಟ್ಟಿದ್ದ. ಆತನ ಮೊಬೈಲ್‌ ಲೋಕೇಶನ್‌ ಆಧಾರದಲ್ಲಿ ಆತನನ್ನು ಹೊಸಪೇಟೆಯಲ್ಲಿ ಬಂಧಿಸಲಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮೀಯವಾಗಿದ್ದ ಟೀಚರ್‌ ಸಂಗವನ್ನು ತೊರೆದುದೇ ಕೊಲೆಗೆ ಕಾರಣ ಎಂದು ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ರುದ್ರಪಾದೆಯಲ್ಲಿ ಪತ್ತೆಯಾಗಿದ್ದ ಚಪ್ಪಲಿ ವಸಂತ್ ಅವರದ್ದೇ | ವಸಂತ್ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ

Posted by Vidyamaana on 2023-04-27 12:11:12 |

Share: | | | | |


ರುದ್ರಪಾದೆಯಲ್ಲಿ ಪತ್ತೆಯಾಗಿದ್ದ ಚಪ್ಪಲಿ ವಸಂತ್ ಅವರದ್ದೇ | ವಸಂತ್ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ

ಪುತ್ತೂರು: ಪುರುಷರಕಟ್ಟೆಯ ಕುರೆಮಜಲು ಮೂಲದ ವಸಂತ ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಗುರುವಾರ ಸಂಜೆ ವೇಳೆ ಪತ್ತೆಯಾಗಿದೆ.

New Categories
Recent News
Popular News


Leave a Comment: