ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಲೋಕಸಭಾ ಚುನಾವಣೆ ಕಾಂಗ್ರೆಸ್ ನ 46 ಅಭ್ಯರ್ಥಿಗಳ ಪಟ್ಟಿ ಪ್ರಕಟ ದಕ್ಷಿಣ ಕನ್ನಡದ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್

Posted by Vidyamaana on 2024-03-24 04:48:37 |

Share: | | | | |


ಲೋಕಸಭಾ ಚುನಾವಣೆ  ಕಾಂಗ್ರೆಸ್ ನ 46 ಅಭ್ಯರ್ಥಿಗಳ ಪಟ್ಟಿ ಪ್ರಕಟ  ದಕ್ಷಿಣ ಕನ್ನಡದ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ 46 ಅಭ್ಯರ್ಥಿಗಳ ನಾಲ್ಕೆನೇ ಪಟ್ಟಿ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಿರುವಳ್ಳೂರಿನಿಂದ ಸ್ಪರ್ಧಿಸಲಿದ್ದಾರೆ.

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸಸಿಕಾಂತ್ ಸೆಂಥಿಲ್ ಗೆ ತಮಿಳುನಾಡಿನ ತಿರುವಳ್ಳೂರಿನಿಂದ ಟಿಕೆಟ್ ನೀಡಲಾಗಿದೆ.ಅಸ್ಸಾಂ 1, ಅಂಡಮಾನ್ ನಿಕೋಬಾರ್ 1, ಚತ್ತೀಸ್ ಗಡ್ 1, ಜಮ್ಮು ಕಾಶ್ಮೀರ 2, ಮಧ್ಯಪ್ರದೇಶ 12, ಮಹಾರಾಷ್ಟ್ರ 4, ಮಣಿಪುರ 2, ಮಿಜೋರಾಂ 1, ರಾಜಸ್ಥಾನ 3, ತಮಿಳುನಾಡು 7, ಉತ್ತರ ಪ್ರದೇಶ 9, ಉತ್ತರಾಖಂಡ 2, ಪಶ್ಚಿಮ ಬಂಗಾಳದ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.

ಸವಾದ್ ನ ಕೊಲೆಗೈದು ಪ್ರಕರಣ

Posted by Vidyamaana on 2023-06-22 06:15:32 |

Share: | | | | |


ಸವಾದ್ ನ ಕೊಲೆಗೈದು  ಪ್ರಕರಣ

ಮೂಡಿಗೆರೆ : ಬಂಟ್ವಾಳದ ಸವಾದ್ ಎಂಬಾತನನ್ನು ಕೊಲೆ ಮಾಡಿ ಮೂಡಿಗೆರೆ ಪ್ರವಾಸಿ ತಾಣ ದೇವರಮನೆ ಗಡ್ಡೆಯ ಬಳಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝನುಲ್ಲಾ ಎಂದು ಗುರುತಿಸಲಾಗಿದೆ. 

ಪ್ರಕರಣದಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮೃತದೇಹದ ಪತ್ತೆಯ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ಗುರುವಾಯನಕೆರೆ ಎಂಬಲ್ಲಿ ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿ ಸವಾದ್ ನನ್ನು ಬೆಂಗ್ರೆ ಎಂಬಲ್ಲಿ ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದರು ಎಂದು ತಿಳಿದು ಬಂದಿದೆ. ಜೂನ್ 8 ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಬಳಿಕ ಬಂಟ್ವಾಳ ಮೂಲದ ಸವಾದ್ ಕುಟುಂಬ ಮಗನ ಮೃತದೇಹದ ಗುರುತು ಪತ್ತೆ ಮಾಡಿತ್ತು.

ನನ್ನ ಬೂತ್ ನಾನೇ ಅಭ್ಯರ್ಥಿ ಕಾಂಗ್ರೆಸ್ಸಿನಿಂದ ವಿಶೇಷ ಅಭಿಯಾನ

Posted by Vidyamaana on 2023-05-07 06:52:22 |

Share: | | | | |


ನನ್ನ ಬೂತ್ ನಾನೇ ಅಭ್ಯರ್ಥಿ ಕಾಂಗ್ರೆಸ್ಸಿನಿಂದ ವಿಶೇಷ ಅಭಿಯಾನ

ಪುತ್ತೂರು: ಮೇ 10ರ೦ದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೇನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪರವಾಗಿ ಮೇ 6ರಂದು ನನ್ನ ಬೂತ್ ನಾನೇ ಅಭ್ಯರ್ಥಿ ವಿಶೇಷ ಅಭಿಯಾನ ನಡೆಯಿತು.


ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 220 ಬೂತ್‌ಗಳಿಗೂ ಒಂದೇ ದಿನ ತೆರಳಿ ಅಭ್ಯರ್ಥಿ ಪರ ಮತಯಾಚಿಸಿದರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಗ್ಯಾರೆಂಟಿಗಳ ಭರವಸೆ, ಪಕ್ಷ ಮಾಡಿರುವ ಸಾಧನೆ ಮತ್ತು ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಮಾಡಿರುವ ಜನ ಸೇವೆ ಇತ್ಯಾದಿಗಳ ಕುರಿತು ಮತದಾರರಿಗೆ ಮಾಹಿತಿ ನೀಡಿದ ಪಕ್ಷದ ಕಾರ್ಯಕರ್ತರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿಗೆ ಆಶೀರ್ವದಿಸುವಂತೆ ಕೋರಿದರು.

ಪುತ್ತೂರು : ಅಡಿಕೆ ಕಳವು ಪ್ರಕರಣ : ಸೊತ್ತು ಸಹಿತ ಇಬ್ಬರು ಆರೋಪಿಗಳ ಬಂಧನ

Posted by Vidyamaana on 2023-08-30 23:02:37 |

Share: | | | | |


ಪುತ್ತೂರು : ಅಡಿಕೆ ಕಳವು ಪ್ರಕರಣ : ಸೊತ್ತು ಸಹಿತ ಇಬ್ಬರು ಆರೋಪಿಗಳ ಬಂಧನ

ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಸಮೀಪದ ನೆಕ್ಕರೆ ಕಾರ್ಮಿನ್ ಮಿರಾಂದ ಅವರ ಮನೆಯಿಂದ ಮೂರು ದಿನದ ಹಿಂದೆ ಲಕ್ಷ ರೂ. ಮೌಲ್ಯದ ಅಡಿಕೆ ಕಳವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಮರೀಲು ನಿವಾಸಿ ಉಬೈದ್ ಮತ್ತು ಜಿಡೆಕಲ್ಲು ನಿವಾಸಿ ಮಹಮ್ಮದ್‌ ಇಝಾರ್ ಬಂಧಿತ ಆರೋಪಿಗಳು.



ಕಾರ್ಮಿನ್ ಮಿರಾಂದ ಅವರ ಮನೆಯ ಅಂಗಳದಲ್ಲಿ ಅವರ ತಾಯಿಗೆ ಸಂಬಂಧಿಸಿದ ಅಡಿಕೆ ಒಣಗಿಸಿ, ಅಡಿಕೆಯನ್ನು ಸುಲಿದು ತೂಕ ಮಾಡಿ ಇಟ್ಟಿದ್ದರು. ಸುಲಿದ 276 ಕೆ.ಜಿ. ಅಡಿಕೆಯನ್ನು 6 ಗೋಣಿಗಳಲ್ಲಿ ತುಂಬಿಸಿ ಮನೆಯ ಎದುರಿನ ಹಾಲ್‌ನಲ್ಲಿ ಇಡಲಾಗಿತ್ತು. ಆದರೇ ಸುಲಿದ ಅಡಿಕೆ ಮತ್ತು ಕೆಲಸಗಾರರಿಗೆ ನೀಡಲೆಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ 10 ಸಾವಿರ ರೂ. ಹಣ ಕಳವಾಗಿತ್ತು.


ಈ ಕುರಿತು ಕಾರ್ಮಿನ್ ಮಿರಾಂದ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಆರೋಪಿಗಳನ್ನು ಕಾವೇರಿಕಟ್ಟೆಯ ಬಳಿಯಿಂದ ಆ.28 ರಂದು ರಾತ್ರಿ ವಶಕ್ಕೆ ಪಡೆದು ಅವರು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳವು ಮಾಡಿ

ಕಾವೇರಿಕಟ್ಟೆ ಬಳಿಯ ಬಾಡಿಗೆ ಮನೆಯ ಕೊಠಡಿಯಲ್ಲಿ ದಾಸ್ತಾನು ಮಾಡಿದ್ದರೆನ್ನಲಾದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ನರಿಮೊಗರು ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ

Posted by Vidyamaana on 2024-02-27 15:54:22 |

Share: | | | | |


ನರಿಮೊಗರು ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ

ಪುತ್ತೂರು: ಪುರುಷರಕಟ್ಟೆ ಟೈ ಬ್ರೇಕರ್ಸ್ ನೇತೃತ್ವದಲ್ಲಿ ಮತ್ತು ಪ್ರಕಾಶ್ ಪುರುಷರಕಟ್ಟೆ ಸಾರಥ್ಯದಲ್ಲಿ ನರಿಮೊಗರು ಶಾಲಾ ಮೈದಾನದಲ್ಲಿ ಫೆ. 24, 25ರಂದು ನಡೆದ 25ನೇ ವರ್ಷದ ಹೊನಲು ಬೆಳಕಿನ ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಸರ್ಕಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

2 ದಿನಗಳ ಪಂದ್ಯ ಅದ್ಭುತವಾಗಿ ಮೂಡಿಬಂದಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿತ್ತು. ತುಳುನಾಡ ಚಕ್ರವರ್ತಿ ತಂಡ ರನ್ನರ್ಸ್ ಆಗಿ ಮೂಡಿಬಂತು. ಪ್ರಥಮ ಬಹುಮಾನವಾಗಿ 50 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 25 ಸಾವಿರ ರೂ.ವನ್ನು ನೀಡಲಾಯಿತು. ಗೆದ್ದ ತಂಡದ ಮಾಲಕ ಅನ್ಸರ್ ಪುರುಷರಕಟ್ಟೆ ಅವರಿಗೆ ಫ್ರಿಡ್ಜ್ ಅನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಯಿತು.

 ಸರಣಿ ಶ್ರೇಷ್ಠ  ಪ್ರಶಸ್ತಿಗೆ ಭಾಜನರಾದ ಮಸೂದ್ ಮುಕ್ವೆ ಪಂದ್ಯದುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದರು. ಬೆಸ್ಟ್ ಕ್ಯಾಪ್ಟನ್, ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್ ಹೀಗೆ ತಂಡವನ್ನು ಮುನ್ನಡೆಸುವಲ್ಲಿ ಆಲ್ ರೌಂಡರ್ ಆಗಿ ಕಾರ್ಯನಿರ್ವಹಿಸಿದರು. ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಎಲ್ಲಾ ವಲಯಗಳಲ್ಲೂ ತನ್ನ ಛಾಪು ಮೂಡಿಸಿ, ಸರಣಿ ಶ್ರೇಷ್ಠ ಎನಿಸಿಕೊಂಡರು.

ಆಬೀದ್ ರೆಂಜಲಾಡಿ ಅಂಡರ್ ಗ್ರೌಂಡ್ ನಲ್ಲಿ ಬೆಸ್ಟ್ ಬೌಲರ್, ಇಸ್ಮಾಯಿಲ್ ರೆಂಜಲಾಡಿ ಅಂಡರ್ ಗ್ರೌಂಡ್ ನಲ್ಲಿ ಬೆಸ್ಟ್ ಬ್ಯಾಟ್ಸ್ ಮನ್, ಬಾತಿ ಐ.ಬಿ. ಉತ್ತಮ ಫೀಲ್ಡರ್, ಸಾಸ್ಸಾ ಉತ್ತಮ ಕೀಪರ್, ಜಂಜಿರ್ ಕೊಡ್ನೀರ್ ಉತ್ತಮ ಹಿಡಿತಗಾರ, ಸಂದೀಪ್ ಎನರ್ಜಿಕ್ ಪ್ಲೇಯರ್ ಪ್ರಶಸ್ತಿಯನ್ನು ಪಡೆದುಕೊಂಡರು.

ಗಂಡನಿಲ್ಲವೆಂದು ಲೈನ್‌ಮ್ಯಾನ್ ಸಖ್ಯ ಬೆಳೆಸಿದ ಗೃಹಿಣಿ, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

Posted by Vidyamaana on 2023-12-17 12:34:13 |

Share: | | | | |


ಗಂಡನಿಲ್ಲವೆಂದು ಲೈನ್‌ಮ್ಯಾನ್ ಸಖ್ಯ ಬೆಳೆಸಿದ ಗೃಹಿಣಿ, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಚಮರಾಜನಗರ (ಡಿ.16): ಮದುವೆಯಾಗಿ ಸಂಸಾರ ಈಗಷ್ಟೇ ಶುರುವಾಗಿದೆ ಎನ್ನುವಷ್ಟರಲ್ಲೇ ವಿಧಿಯಾಟಕ್ಕೆ ಗಂಡ ಬಲಿಯಾಗುತ್ತಾನೆ. ಆದರೆ, ಗಂಡನಿಲ್ಲದ ನಂತರ ಈಕೆಗೆ ಹರೆಯದ ವಯಸ್ಸಾದ್ದರಿಂದ ಲೈನ್‌ಮ್ಯಾನ್‌ನ ಸಖ್ಯವನ್ನು ಬೆಳೆಸಿ ಲಿವಿಂಗ್‌ ಟುಗೆದರ್‌ ರೀತಿ ವಾಸಿಸುತ್ತಿದ್ದಳು.ಆದರೆ, ಅವರ ಸಹವಾಸವನ್ನು ಬಿಡುವಂತೆ ಮನೆಯವರು ಗಲಾಟೆಯನ್ನು ಮಾಡಿದ್ದರು. ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ ಲಿವಿಂಗ್ ಟುಗೆದರ್‌ನಲ್ಲಿದ್ದ ಗೃಹಿಣಿ ಈಗ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.


ಹೌದು, ಅನುಮಾನಸ್ಪದ ರೀತಿಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಆದರ್ಶನಗರದ ಮನೆಯೊಂದರಲ್ಲಿ ನಡೆದಿದೆ. ಅಗರ ಗ್ರಾಮದ ರೇಖಾ (27) ಮೃತ ದುರ್ದೈವಿ ಆಗಿದ್ದಾಳೆ. ಕಳೆದ ಎರೆಡು ವರ್ಷದ ಹಿಂದೆ ರೇಖಾಳ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸಾವಿನ ಬಳಿಕ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದನ ಸಹವಾಸದಲ್ಲಿದ್ದಳು. ಇಬ್ಬರ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್‌ನಲ್ಲಿ ವಾಸವಾಗಿದ್ದರು.ಈ ವಿಚಾರವನ್ನು ತಿಳಿದ ಮನೆಯವರು ರೇಖಾ ಮತ್ತು ಆಕೆಯೊಂದಿಗೆ ಸಂಬಂಧದಲ್ಲಿದ್ದವನ ಜೊತೆಗೆ ಗಲಾಟೆ ಮಾಡಿದ್ದರು. ಮನೆಯಲ್ಲಿ ಎಷ್ಟೇ ಗಲಾಟೆ ಗದ್ದಲವಾದ್ರು ರೇಖಾ ಮಾತ್ರ ನಾಗೇಂದ್ರ ಅಲಿಯಾಸ್ ಆನಂದನ ಸಕ್ಯ ಬಿಟ್ಟಿರಲಿಲ್ಲ. ಈಗ ಅದೇ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದನ ಮನೆಯಲ್ಲಿ ರೇಖಾಳ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೆಳೆಯ ನಾಗೇಂದ್ರ ಅಲಿಯಾಸ್ ಆನಂದನೆ ರೇಖಾಳನ್ನ ಹೊಡೆದು ಕೊಂದಿರುವ ಆರೋಪ ಕೇಳಿಬಂದಿದೆಘಟನೆ ತಿಳಿಯುತ್ತಿದ್ದಂತೆ ಕೊಗ್ಳೆಗಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃದೇಹವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ಮುಂದಾದಾಗ, ಯಾವುದೇ ಕಾರಣಕ್ಕೂ ಶವ ಮುಟ್ಟದಂತೆ ಮೃತಳ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ನೀವು ಆರೋಪಿಯನ್ನು ಬಂಧಿಸಿದ ನಂತರವೇ ಶವವನ್ನು ಕೊಂಡೊಯ್ಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಸಂಬಂಧಿಕರ ಮನವೊಲಿಸಿದ ಪೊಲೀಸರು ಆಕೆಯ ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.



Leave a Comment: