ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕರಿಸಿದ ಸವಣೂರಿನ ಶಾರದಾ ಮಾಲೆತ್ತಾರು

Posted by Vidyamaana on 2024-03-13 11:34:16 |

Share: | | | | |


ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕರಿಸಿದ ಸವಣೂರಿನ ಶಾರದಾ ಮಾಲೆತ್ತಾರು

ಸವಣೂರು : ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ದ.ಕ.ಜಿಲ್ಲೆಯ ಕಡಬ ತಾಲ್ಲೂಕಿನ ಸವಣೂರು ಗ್ರಾಮದ ಮಾಲೆತ್ತಾರಿನ ಶಾರದಾ ಎಂ.ಭಾಜನರಾಗಿದ್ದಾರೆ.

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದೆ. ಮಾರ್ಚ್ 12 ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ್‌ ಬಾಲ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ₹ 25,000 ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಸರ್ಕಾರ ಪ್ರತಿ ವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಧಕ ಮಹಿಳೆಯರಿಗೆ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. 26 ಪ್ರಶಸ್ತಿಗಳನ್ನು 7 ವಿಭಾಗದಲ್ಲಿ ನೀಡಲಾಗುತ್ತದೆ. ಮಹಿಳಾ ಅಭಿವೃದ್ಧಿಗಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ 6, ಮಹಿಳಾ ಅಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ 8, ಕಲೆಯಲ್ಲಿ ಸಾಧನೆ 5, ಸಾಹಿತ್ಯದಲ್ಲಿ ಸಾಧನೆ 3, ಕ್ರೀಡೆಯಲ್ಲಿ ಸಾಧನೆ 2 ಹಾಗೂ ಶಿಕ್ಷಣ, ವೀರ ಮಹಿಳೆ ವಿಭಾಗದಲ್ಲಿ ತಲಾ 1 ಪ್ರಶಸ್ತಿ ನೀಡಲಾಗಿದೆ.


  ಸವಣೂರು ಗ್ರಾ.ಪಂ.ನ ಗ್ರಂಥಪಾಲಕರಾಗಿರುವ ಶಾರದಾ ಅವರು ಕಲಾ ವಿಭಾಗದಲ್ಲಿ ಮಾಡಿರುವ ಸೇವೆಗೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.


ಶಾರದಾ ಮಾಲೆತ್ತಾರು ಅವರು ಸವಣೂರಿನ ಪದ್ಮಶ್ರೀ ಯುವತಿ ಮಂಡಲದ ಅಧ್ಯಕ್ಷರಾಗಿ ತಮ್ಮ ತಂಡವನ್ನು ತಾಲೂಕು ಮಟ್ಟದಿಂದ ರಾಜ್ಯ‌ಮಟ್ಟದವರೆಗೆ ಯುವಜನ ಮೇಳದಲ್ಲಿ ತೊಡಗಿಸುವ ಕಾರ್ಯ ಮಾಡಿದ್ದಾರೆ.ಅಲ್ಲದೆ ವಿವಿಧ ವೇದಿಕೆಗಳಲ್ಲಿ ಮಹಿಳೆಯರನ್ನು ಸೇರಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಅಲ್ಲದೆ ದ.ಕ.ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ.


ಶಾರದಾ ಅವರು ಸವಣೂರು ಗ್ರಾಮದ ಮಾಲೆತ್ತಾರು  ದಿ.ಚೆನ್ನಪ್ಪ ಗೌಡ ಮತ್ತು ಶ್ರೀಮತಿ ಪದ್ಮಾವತಿ ದಂಪತಿಗಳ ಪುತ್ರಿ

ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸುಂದರ್ ಮೃತ್ಯು

Posted by Vidyamaana on 2024-05-03 20:42:57 |

Share: | | | | |


ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸುಂದರ್ ಮೃತ್ಯು

ಉಡುಪಿ (ಮೇ 3): ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸಾವನ್ನಪ್ಪಿರುವ ಘಟನೆ ಉಡುಪಿಯ ಅಜೆಕಾರು ಸಮೀಪದ ಎಣ್ಣೆಹೊಳೆಯಲ್ಲಿ ನಡೆದಿದೆ.

ಬೆಳ್ತಂಗಡಿ : ಬೈಕಿಗೆ ಪಿಕಪ್ ಢಿಕ್ಕಿ; ಸವಾರ ಪುರುಷೋತ್ತಮ ಸ್ಥಳದಲ್ಲೇ ಮೃತ್ಯು , ಸಹಸವಾರ ತೌಫೀಕ್ ಗಂಭೀರ

Posted by Vidyamaana on 2024-03-25 18:24:34 |

Share: | | | | |


ಬೆಳ್ತಂಗಡಿ : ಬೈಕಿಗೆ ಪಿಕಪ್ ಢಿಕ್ಕಿ; ಸವಾರ ಪುರುಷೋತ್ತಮ ಸ್ಥಳದಲ್ಲೇ ಮೃತ್ಯು , ಸಹಸವಾರ ತೌಫೀಕ್ ಗಂಭೀರ

ಬೆಳ್ತಂಗಡಿ: ಹಳೇಕೋಟೆ ಬಳಿ ದ್ವಿಚಕ್ರ ವಾಹನ ಹಾಗೂ ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪೈಂಟರ್ ವೃತ್ತಿ ನಿರ್ವಹಿಸುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಾ.25ರ ಮಧ್ಯಾಹ್ನ ನಡೆದಿದೆ.ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ದಿ.ಜಯರಾಮ್ ಮತ್ತು ಜಯಂತಿ ದಂಪತಿಗಳ ದ್ವಿತೀಯ ಪುತ್ರ ಪುರುಷೋತ್ತಮ (19) ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಸಹಸವಾರ ಲಾಯಿಲ ಗ್ರಾಮದ ರಾಘವೇಂದ್ರ ನಗರದ ತೌಶೀಫ್ ಮಗ ತೌಫೀಕ್ (17)  ಗಂಭೀರ ಗಾಯಗೊಂಡಿದ್ದಾನೆ.ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿಯತ್ತ ಹೋಗುತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬರುತಿದ್ದ ಪಿಕಪ್ ವಾಹನ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಮಗುಚಿ ಬಿದ್ದು ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಪುರುಷೋತ್ತಮ ಮೃತಪಟ್ಟಿದ್ದು, ತೌಫೀಕ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ

ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ: ಹೈಕೋರ್ಟ್ ಆದೇಶ

Posted by Vidyamaana on 2023-08-04 02:03:39 |

Share: | | | | |


ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ: ಹೈಕೋರ್ಟ್ ಆದೇಶ

ಬೆಂಗಳೂರು: ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಲಲಿತಾ ಕುಮಾರಿ ಕೇಸ್​ನ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಮಾರ್ಗಸೂಚಿ, ಸುತ್ತೋಲೆ ಹೊರಡಿಸಲು ಡಿಜಿ ಮತ್ತು ಐಜಿಪಿಗೆ ಸೂಚನೆ ನೀಡಲಾಗಿದೆ.


ಲಲಿತಾ ಕುಮಾರಿ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸುವ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ತೀರ್ಪಿನ 120ನೇ ಪ್ಯಾರಾವನ್ನು ಕನ್ನಡ, ಆಂಗ್ಲ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್ಐಆರ್ ದಾಖಲಿಸಲು ವಿಳಂಬ ಮಾಡದಂತೆ ತಾಕೀತು ಮಾಡಲಾಗಿದೆ.


ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ಅಗತ್ಯವಿಲ್ಲ. ಅದೇ ರೀತಿಯಾಗಿ ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಬಹುದು. 7 ದಿನದೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು. ಗಂಭೀರ ಅಪರಾಧ ಕಂಡುಬಂದಾಗ ಎಫ್ಐಆರ್ ದಾಖಲಿಸಬೇಕು. ಪೊಲೀಸ್​ ಠಾಣೆಯ ಡೈರಿಯಲ್ಲಿ ತನಿಖೆಯ ಮಾಹಿತಿ ಉಲ್ಲೇಖಿಸಬೇಕು ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ

ಬಿಜೆಪಿಗೆ ಗುಡ್​​ಬೈ ಹೇಳ್ತಾರಾ ಎಂಎಲ್​​ಸಿ ತೇಜಸ್ವಿನಿಗೌಡ?

Posted by Vidyamaana on 2024-03-22 21:43:15 |

Share: | | | | |


ಬಿಜೆಪಿಗೆ ಗುಡ್​​ಬೈ ಹೇಳ್ತಾರಾ ಎಂಎಲ್​​ಸಿ ತೇಜಸ್ವಿನಿಗೌಡ?

ಬೆಂಗಳೂರು : ವಿಧಾನಪರಿಷತ್ತಿನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಕೂಡ ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಜೂನ್‌ ತಿಂಗಳಲ್ಲಿ ಅವರ ವಿಧಾನಪರಿಷತ್‌ ಸದಸ್ಯ ಸ್ಥಾನದ ಅವಧಿಯೂ ಮುಕ್ತಾಯಗೊಳ್ಳುತ್ತಿದೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದ ಅವರು ಎರಡೂ ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ.ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶಿಸಿದ್ದ ತೇಜಸ್ವಿನಿ, ಕನಕಪುರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಸೋಲಿಸಿ ಮುನ್ನೆಲೆಗೆ ಬಂದಿದ್ದರು.


ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ. ಸುರೇಶ್‌ ಅವರನ್ನೇ ರಾಜಕೀಯ ಗುರುಗಳೆಂದಿದ್ದ ತೇಜಸ್ವಿನಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಾಗ ಡಿಕೆಶಿ ಸಹೋದರರ ವಿರುದ್ಧ ಕಟು ಶಬ್ದ ಬಳಸಿದ್ದರು. ಈಗ ಮತ್ತೆ ಕಾಂಗ್ರೆಸ್‌ ಸೇರುವ ಇಂಗಿತವನ್ನು ಆಪ್ತವಲಯದಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

Posted by Vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.



Leave a Comment: