ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಉಡುಪಿ ಹತ್ಯಾಕಾಂಡ: ದಾರಿ ಮಧ್ಯೆ ರಕ್ತಸಿಕ್ತ ಬಟ್ಟೆ ಸುಟ್ಟು ಹಾಕಿದ ನರಹಂತಕ ಪ್ರವೀಣ್ ಚೌಗುಲೆ!

Posted by Vidyamaana on 2023-11-20 15:24:56 |

Share: | | | | |


ಉಡುಪಿ ಹತ್ಯಾಕಾಂಡ: ದಾರಿ ಮಧ್ಯೆ ರಕ್ತಸಿಕ್ತ ಬಟ್ಟೆ ಸುಟ್ಟು ಹಾಕಿದ ನರಹಂತಕ ಪ್ರವೀಣ್ ಚೌಗುಲೆ!

ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರವೀಣ್ ಅರುಣ್ ಚೌಗುಲೆ ಕೃತ್ಯ ನಡೆಸಿ ರಕ್ತಸಿಕ್ತ ಬಟ್ಟೆಯಲ್ಲೇ ಸ್ಥಳದಿಂದ ಪರಾರಿಯಾಗಿದ್ದು, ಆ ಬಟ್ಟೆಯನ್ನು ಮಂಗಳೂರು ತೆರಳುವ ಮಾರ್ಗ ಮಧ್ಯೆ ಸುಟ್ಟು ಹಾಕಿ ಸಾಕ್ಷ್ಯನಾಶ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.



ಆದರೆ ಅದರ ಕುರುಹು ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.



ಕೊಲೆ ಮಾಡುವ ಮೊದಲು ಹೆಜಮಾಡಿ ಟೋಲ್ ನಿಂದ ಆಚೆಗೆ ಕಾರು ನಿಲ್ಲಿಸಿದ್ದ ಆರೋಪಿ ಪ್ರವೀಣ್, ನಂತರ ನೇಜಾರುವಿನಿಂದ ಪರಾರಿಯಾಗಿದ್ದು, ಸಾಕ್ಷ್ಯನಾಶ ಪಡಿಸಲು ಮಂಗಳೂರಿಗೆ ತೆರಳುವ ಮುನ್ನವೇ ಸುರಕ್ಷಿತ ಜಾಗ ನೋಡಿ ಕೃತ್ಯದ ವೇಳೆ ರಕ್ತಸಿಕ್ತವಾದ ಬಟ್ಟೆಯನ್ನು ಬಿಚ್ಚಿ ಸುಟ್ಟು ಹಾಕಿದ್ದ ಕುರಿತು ಪೊಲೀಸರಲ್ಲಿ ಹೇಳಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ.

ಚಂದ್ರಯಾನದ ಯಶಸ್ಸಿಗೆ ಮಸೀದಿ ಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ

Posted by Vidyamaana on 2023-08-23 08:47:08 |

Share: | | | | |


ಚಂದ್ರಯಾನದ ಯಶಸ್ಸಿಗೆ ಮಸೀದಿ ಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ

ಮಂಗಳೂರು :ದೇಶಕ್ಕೆ ದೇಶವೇ ಕಾತರದಿಂದ ಕಾಯುತ್ತಿರುವ ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಗುರಿ ತಲುಪುವಂತಾಗಳು ಪ್ರತೀ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ನಡೆಸುವಂತೆ ರಾಜ್ಯ ದಾರಿಮಿ ಒಕ್ಕೂಟ ಕರೆ ನೀಡಿದೆ.

ದೇಶದ ಕೀರ್ತಿ ಬಾನೆತ್ತರಕ್ಕೇರಿ ಆ ಮೂಲಕ ದೇಶದ ಪ್ರಜೆಗಳು ಅಭಿಮಾನ ಪಡುವಂತಾಗಲು ಚಂದ್ರಯಾನ ಯಶಸ್ಸು ಕಾಣ ಬೇಕಿರುವುದು ನಮ್ಮೆಲ್ಲರ ಅಗತ್ಯವಾಗಿದೆ.

ಇದಕ್ಕಾಗಿ ರಾತ್ರಿ ಹಗಲೆನ್ನದೇ ದುಡಿದ ವಿಜ್ಞಾನಿಗಳ ,ಸಿಬ್ಬಂದಿ ವರ್ಗದವರ ಒಳಿತಿಗಾಗಿ ಕೂಡಾ  ಪ್ರಾರ್ಥನೆ ನಡೆಸಲು ಸಂಘಟನೆ ಕರೆ ನೀಡಿದೆ.

ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಎಗರಿಸಿದ ಖತರ್ನಾಕ್ ಕಳ್ಳ

Posted by Vidyamaana on 2023-09-21 16:09:12 |

Share: | | | | |


ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಎಗರಿಸಿದ ಖತರ್ನಾಕ್ ಕಳ್ಳ

ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಖತರ್ನಾಕ್ ಕಳ್ಳನೊಬ್ಬ ಎಗರಿಸಿದ ಘಟನೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.


ಮೆಲ್ಕಾರ್ ಟ್ರಾಫಿಕ್ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದಿಂದಾಗಿ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಅವರು ಮಲಗಿದ್ದ ವೇಳೆ ಇವರ ಬೆಡ್ ಪಕ್ಕದಲ್ಲಿ ಟೇಬಲ್ ಮೇಲೆ ಇರಿಸಲಾಗಿದ್ದ ಆಂಡ್ರಾಯ್ಡ್ ಮೊಬೈಲ್ ಹಾಗೂ ಕೀ ಪೇಡ್ ಮೊಬೈಲ್ ಫೋನ್ ನ್ನು ಕಳ್ಳನೊಬ್ಬ ಎಗರಿಸಿದ್ದಾನೆ. ಇನ್ನು ಕಳ್ಳ ಮೊಬೈಲ್ ಕಳ್ಳತನ ಮಾಡಿದ ಮತ್ತು ಆತ ಆಸ್ಪತ್ರೆಗೆ ಬಂದು ಹೋಗುವ ಬಗ್ಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.


ಈತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿಯೋರ್ವರಲ್ಲಿ ಒಮ್ಮೆ ಪೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಪೋನ್ ಮಾಡಲು ಇದೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋಗಿ ಮೊಬೈಲ್ ಸಮೇತ ಎಸ್ಕೆಪ್ ಆಗಿದ್ದ. ಇದೀಗ ಆತನೇ ಪೊಲೀಸ್ ಸಿಬ್ಬಂದಿಯ ಮೊಬೈಲ್ ಕಳ್ಳತನ ಮಾಡಿದ್ದು ಈತನ ಓಡಾಟದ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ


ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು,ಈತನ ಚಹರೆ ಯನ್ನು ಗಮನಿಸಿದವರು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

ಪುತ್ತೂರಿನ ನೆಲದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ – ಹತ್ತೂರ ಜನತೆಯನ್ನು ಧನ್ಯರಾಗಿಸಿದ ಪುತ್ತಿಲ ಪರಿವಾರದ ಕಾರ್ಯಕ್ರಮ

Posted by Vidyamaana on 2023-12-27 11:43:03 |

Share: | | | | |


ಪುತ್ತೂರಿನ ನೆಲದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ – ಹತ್ತೂರ ಜನತೆಯನ್ನು ಧನ್ಯರಾಗಿಸಿದ ಪುತ್ತಿಲ ಪರಿವಾರದ ಕಾರ್ಯಕ್ರಮ

ಪುತ್ತೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೂಲಕ ಶತಮಾನಗಳ ಹೋರಾಟದ ಫಲವಾಗಿ ಕನಸು ನನಸಾಗುತ್ತಿದೆ. ಈ ನಿಟ್ಟಿನಲ್ಲಿ ವಿಶೇಷ ಜವಾಬ್ದಾರಿ ಇಂದಿನಿಂದ ಆರಂಭವಾಗುತ್ತಿದೆ. ಮುಂದೆ ಆಚಂದ್ರಾರ್ಕವಾಗಿ ರಾಮಮಂದಿರ ಉಳಿಯಬೇಕು. ಮತ್ತೊಮ್ಮೆ ಪರಕೀಯರ ಪಾಲಾಗಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಸೋಮವಾರ ರಾತ್ರಿ ವೈಭವದಿಂದ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ಹಿಂದುಗಳು ಹಿಂದೂಗಳಾಗಿ ಉಳಿದರೆ ರಾಮ ಮಂದಿರ ಉಳಿಯುತ್ತದೆ. ಜತೆಗೆ ಮೋದಿ ಇರುವಷ್ಟು ಕಾಲ ಮಂದಿರ ಇರುತ್ತದೆ. ಮೋದಿಯನ್ನು ಕಿತ್ತೊಗೆಯುವ ಅಪಸ್ವರಗಳು ಪ್ರಸ್ತುತ ಕೇಳಿ ಬರುತ್ತಿದ್ದು, ಅದನ್ನು ಸುಳ್ಳಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ರಕ್ತಗತಗೊಳಿಸಬೇಕಾದ ಅಗತ್ಯವಿದೆ ಎಂದು ನುಡಿದರು.

ಸ್ವಾಮೀಜಿಯವರು ಶ್ರೀನಿವಾಸ ಕಲ್ಯಾಣೋತ್ಸವದ ಮಾಂಗಲ್ಯ ಧಾರಣೆ ಸಹಿತ ಎಲ್ಲಾ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಈ ಸಂದರ್ಭ ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ಸ್ವಾಮೀಜಿಗಳಿಗೆ ಪುಷ್ಪವೃಷ್ಠಿ ಸಮರ್ಪಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯಾಧ್ಯಕ್ಷ ಉಮೇಶ್ಕೋಡಿಬೈಲು, ಪ್ರಸನ್ನ ಕುಮಾರ ಮಾರ್ತ ಸಹಿತಿ ಸೇವಾರ್ಥಿಗಳು ಪುಷ್ಪವೃಷ್ಠಿ ಮಾಡಿದರು.

ಸೋಮವಾರ ರಾತ್ರಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದು, ಶ್ರೀನಿವಾಸ ಕಲ್ಯಾಣೋತ್ಸವವನ್ನು ಸಂಭ್ರಮದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಭಜನೆ, ಭಜನಾ ಸಂಕೀರ್ತನೆ, ಆಕರ್ಷಕ ಕುಣಿತ ಭಜನೆ, ಭಕ್ತಿ ರಸಮಂಜರಿ ಜರಗಿತು. ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಸುಡುಮದ್ದು ಪ್ರದರ್ಶನವೂ ನಡೆಯಿತು. ತಿರುಪತಿ ಕ್ಷೇತ್ರ ಮೂಲದ ಬೆಂಗಳೂರಿನ ಲಕ್ಷ್ಮೀಪತಿ ನೇತೃತ್ವದಲ್ಲಿ ಸುಮಾರು 27 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ಸಂಜೆ ಗೋಧೋಳಿ ಸಮಯದಲ್ಲಿಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. 

ಈ ಸಂದರ್ಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು, ಕೋಶಾಧಿಕಾರಿ ಉದಯ ಕುಮಾರ್ ರೈ ಸಂಪ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕಿರಣ್ಧರ್ಮಸ್ಥಳ, ಸಂಚಾಲಕ  ರವಿಕುಮಾರ್ ರೈ ಕೆದಂಬಾಡಿ, ಕಾರ್ಯದರ್ಶಿಗಳಾದ ಗಣೇಶ್ ಚಂದ್ರ ಭಟ್, ನಟೇಶ್ಪೂಜಾರಿ, ವಿವಿಧ ಸಮಿತಿ ಸಂಚಾಲಕರು, ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಎಲ್ಲವನ್ನೂ ಕಳೆದುಕೊಂಡ ಬನ್ನೂರಿನ ಮಹಿಳೆ...

Posted by Vidyamaana on 2023-04-27 08:55:55 |

Share: | | | | |


ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಎಲ್ಲವನ್ನೂ ಕಳೆದುಕೊಂಡ ಬನ್ನೂರಿನ ಮಹಿಳೆ...

ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಅಕ್ರಮಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಮಹಿಳೆಯೋರ್ವರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಲಂಚ ನೀಡಿ ತನ್ನ ಸಂಪತ್ತೆಲ್ಲವನ್ನೂ ಕಳೇದುಕೊಂಡಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸುಳ್ಯಪದವಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಾರೆ.

ತನ್ನ ಸ್ವಾಧೀನದಲ್ಲಿರುವ ಒಂದು ಎಕ್ರೆ ಜಾಗವನ್ನು ಸಕ್ರಮ ಮಾಡಿಕೊಡುವಂತೆ ಪುತ್ತೂರು ಹೊರವಲಯದ ಬನ್ನೂರು ನಿವಾಸಿ ಮಹಿಳೆಯೋರ್ವರು ಅರ್ಜಿ ಹಾಕಿದ್ದರು. ಇವರು ಸಲ್ಲಿಸಿದ ಅರ್ಜಿ ತಾಲೂಕು ಕಚೇರಿಗೆ ತಲುಪಿದಾಗ ಇವರಿಗೆ ಕರೆ ಬರುತ್ತದೆ. ಕಚೇರಿಗೆ ತೆರಳಿದಾಗ ಇವರ ಬಳಿ ಹಣ ಕೇಳುತ್ತಾರೆ. ಒಂದು ಎಕ್ರೆಗೆ ಎರಡು ಲಕ್ಷ ನೀಡಿದರೆ ಮಾತ್ರ ನಿಮ್ಮದು ಸಕ್ರಮವಾಗುತ್ತದೆ ಎಂದು ತಿಳಿಸಿದ್ದಾರೆ. ವಿದಿ ಇಲ್ಲದೆ ಮಹಿಳೆ ತನ್ನ ಮನೆಯಲ್ಲಿದ್ದ ಎರಡು ಸಾಕು ದನಗಳನ್ನು ಮಾರಿದ ಹಣ ಸೇರಿಸಿ ಒಟ್ಟು ೬೦ ಸಾವಿರ ಸಂಬಂಧಪಟ್ಟವರ ಕೈಗೆ ನೀಡಿದ್ದು ಆಬಳಿಕ ಉಳಿದ ಮೊತ್ತವನ್ನು ನೋಡುವಂತೆ ಮತ್ತು ಬಾಕಿ ಮೊತ್ತವನ್ನು ನೀಡದೇ ಇದ್ದಲ್ಲಿ ನಿಮ್ಮ ಫೈಲು ಮುಂದೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಆರ್ಥಿಕವಾಗಿ ಬಡತನದಲ್ಲಿರುವ ಮಹಿಳೆ ಹಣ ನೀಡದ ಕಾರಣಕ್ಕೆ ಅವರ ಫೈಲು ಪೆಂಡಿಂಗ್ ಆಗಿದೆ. ಆಬಳಿಕ ಮಹಿಳೆ ತನ್ನ ಕಚೇರಿಗೆ ಬಂದು ವಿಷಯ ತಿಳಿಸಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಮಹಿಳೆ ಕಚೇರಿಯಲ್ಲಿ ಬಂದು ಕಣ್ಣೀರು ಹಾಕಿ ಸಂಬಂಧಿಸಿದವರಿಗೆ ಹಿಡಿಶಾಪ ಹಾಕುತ್ತಿದ್ದರು. ಅವರನ್ನು ಸಮಾಧಾನಿಸಿ ದನ ಖರೀದಿ ಮಾಡುವಂತೆ ಆರ್ಥಿಕವಾಗಿ ನೆರವು ನೀಡಿದ್ದು ಮಾತ್ರವಲ್ಲದೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ ನಿಮ್ಮ ಅಕ್ರಮ ಸಕ್ರಮ ಫೈಲನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದೇನೆ. ಇಂಥಹ ಸಾವಿರಾರು ಫೈಲುಗಳು ತಾಲೂಕು ಕಚೇರಿಯಲ್ಲಿದ್ದು ಎಲ್ಲವೂ ಮೈ ಕೊಡವಿ ಮೇಲೆ ಬರಲು ಜನರ ಆಶೀರ್ವಾದ ಬೇಕು ಎಂದು  ಎಂದು ಸಭೆಯಲ್ಲಿ ಅಶೋಕ್ ರೈ ಮನವಿ ಮಾಡಿದರು.

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ದಿವ್ಯಾ ನಾಪತ್ತೆ

Posted by Vidyamaana on 2024-06-01 22:54:07 |

Share: | | | | |


ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ದಿವ್ಯಾ ನಾಪತ್ತೆ

ಬೆಳ್ತಂಗಡಿ: ಉಜಿರೆಯ ಎಸ್.ಡಿ ಎಂ ಕಾಲೇಜಿನ ಕ್ರೀಡಾ ವಸತಿ ಶಾಲೆಯ ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದಾಳೆ.

ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದ ಸಹಾಯಕ ನಿಲಯ ಪಾಲಕಿ ನೀಡಿರುವ ದೂರಿನಂತೆ ಬೇಲೂರಿನ ದಿವ್ಯಾ. ಎಸ್, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ



Leave a Comment: