ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಇನ್ಸ್ಟಾಗ್ರಾಮ್ ಮೂಲಕ ಪರಿಚಯ

Posted by Vidyamaana on 2023-06-29 11:23:59 |

Share: | | | | |


ಇನ್ಸ್ಟಾಗ್ರಾಮ್ ಮೂಲಕ ಪರಿಚಯ

ಮಂಗಳೂರು : ಇನ್​ಸ್ಟಾಗ್ರಾಂನಲ್ಲಿ ಯುವತಿಯನ್ನು ಪರಿಚಯಮಾಡಿಕೊಂಡು ಬಳಿಕ ಪ್ರೀತಿ ಪ್ರೇಮದ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕಡಬ ಮೂಲದ ವ್ಯಕ್ತಿ ಅನೀಶ್​ ರೆಹಮಾನ್​ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅನೀಶ್​ ಇನ್​ಸ್ಟಾಗ್ರಾಂ ಮೂಲಕ ಯುವತಿಯ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಈ ಸ್ನೇಹ ಪ್ರೇಮಕ್ಕೂ ತಿರುಗಿತ್ತು. ಆಕೆಯನ್ನು ಭೇಟಿ ಕೂಡ ಮಾಡಿದ್ದ ಅನೀಶ್​ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾರೆ. ಹೋಟೆಲ್​​​ನಲ್ಲಿ ಯುವತಿಯೊಂದಿಗೆ ರೂಮ್​ ಮಾಡಿದ್ದ ಈ ಪಾಪಿ ನಿರಂತರ 20 ದಿನಗಳ ಕಾಲ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.ಆದರೆ ಅನೀಶ್​ ತನಗೆ ಮೋಸ ಮಾಡಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಯುವತಿಯು ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾಳೆ. ಬಂಧಿತ ಅನೀಶ್​ ವಿರುದ್ಧ ಐಪಿಸಿ ಸೆಕ್ಷನ್​ 506, 417 ಹಾಗೂ 376ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಂದಹಾಗೆ ಬಂಧಿತ ಅನೀಶ್​ ರೆಹಮಾನ್​ ಈ ಹಿಂದೆ ಕಾವೂರು ಪೊಲೀಸ್​ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ಅಡಿಯಲ್ಲಿ ಅರೆಸ್ಟ್​ ಆಗಿದ್ದ ಅನ್ನೋದು ತನಿಖೆ ವೇಳೆ ತಿಳಿದು ಬಂದಿದೆ.

ಹೃದಯ, ಮೆದುಳಿನ ಶಸ್ತ್ರಚಿಕಿತ್ಸೆಗೆ ಬಾಲಕನಿಗೆ ಬೇಕಿದೆ ದಾನಿಗಳ ನೆರವು

Posted by Vidyamaana on 2023-03-09 13:27:52 |

Share: | | | | |


ಹೃದಯ, ಮೆದುಳಿನ ಶಸ್ತ್ರಚಿಕಿತ್ಸೆಗೆ ಬಾಲಕನಿಗೆ ಬೇಕಿದೆ ದಾನಿಗಳ ನೆರವು

ಚಿಕ್ಕಮಗಳೂರು: ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಚಿಕ್ಕಮಗಳೂರಿನ ಉಪ್ಪಳ್ಳಿಯ ಬಾಲಕ ನುಹ್ಮಾನ್ ಅವರ ಕುಟುಂಬ, ಚಿಕಿತ್ಸೆಯ ಖರ್ಚಿಗಾಗಿ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ಬಾಲಕ ನುಹ್ಮಾನ್ ಚುರುಕು ಹಾಗೂ ಪ್ರತಿಭಾವಂತ. ಇದ್ದಕ್ಕಿದ್ದಂತೆ ಒಂದು ದಿನ ಅನಾರೋಗ್ಯ ಕಾಡುತ್ತದೆ. ಅನಾರೋಗ್ಯ ತೀವ್ರಗೊಳ್ಳುತ್ತಿದ್ದಂತೆ, ಆಸ್ಪತ್ರೆಯ ಹಾದಿ ಹಿಡಿಯುತ್ತಾರೆ ಮನೆಯವರು. ವೈದ್ಯರು ಹೇಳಿದ ವಿಷಯ ಕೇಳಿ ದಂಗಾಗಿ ಬಿಡುತ್ತಾರೆ. ಕಾರಣ, ನುಹ್ಮಾನ್ ಏಕಕಾಲದಲ್ಲಿ ಮೆದುಳು‌ ಹಾಗೂ ಹೃದಯದ ಕಾಯಿಲೆಗೆ ತುತ್ತಾಗಿದ್ದ. ಸದ್ಯ ನುಹ್ಮಾನ್ ಬೆಂಗಳೂರಿನ‌ ನಿಮ್ಹಾನ್ಸಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಗನನ್ನೇನೋ ಆಸ್ಪತ್ರೆಗೆ ಸೇರಿಸಿದರು ಹೆತ್ತವರು. ಆದರೆ ವೈದ್ಯರು ಹೇಳಿದ 15 ಲಕ್ಷ ರೂ.ವನ್ನು‌ ಹೊಂದಿಸಿಕೊಳ್ಳಲು ಹೆತ್ತವರ ಕೈಯಿಂದ ಆಗುತ್ತಿಲ್ಲ. ಆದ್ದರಿಂದ ದಾನಿಗಳ ನೆರವಿಗಾಗಿ ಮನವಿ ಮಾಡಿದ್ದಾರೆ. ಸಂಪರ್ಕಕ್ಕಾಗಿ 7892938854,

ನಿಷ್ಠಾವಂತ ಬಿಜೆಪಿಯವರಿಗೆ ಮಾತ್ರ ಪದಾಧಿಕಾರಿ ಮಾಡಿದ್ದಾರೆ: ಶಾಸಕ ಯತ್ನಾಳ್ ಅಸಮಾಧಾನ

Posted by Vidyamaana on 2023-12-24 12:36:38 |

Share: | | | | |


ನಿಷ್ಠಾವಂತ ಬಿಜೆಪಿಯವರಿಗೆ ಮಾತ್ರ ಪದಾಧಿಕಾರಿ ಮಾಡಿದ್ದಾರೆ: ಶಾಸಕ ಯತ್ನಾಳ್ ಅಸಮಾಧಾನ

ವಿಜಯಪುರ:ಯುವ ಮತ್ತು ಹೊಸ ಮುಖಗಳು, ವಿವಿಧ ಪ್ರದೇಶಗಳ ನಾಯಕರು, ಆರೆಸ್ಸೆಸ್ ನಿಷ್ಠಾವಂತರು ಮತ್ತು ಪಕ್ಷದ ಹಿರಿಯರ ಮಿಶ್ರಣವನ್ನು ಹೊಂದಿರುವ ರಾಜ್ಯ ಪದಾಧಿಕಾರಿಗಳ ಪಟ್ಟಿಗೆ ಬಿಜೆಪಿ ಕೇಂದ್ರ ನಾಯಕತ್ವವು ಶನಿವಾರ ಅನುಮೋದನೆ ನೀಡಿದೆ.ಇನ್ನು ಪದಾಧಿಕಾರಿಗಳ ನೇಮಕಕ್ಕೆ ಶಾಸಕ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು."ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ.ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತರಾ? ನಾವು ದೇಶದ ಕಾರ್ಯಕರ್ತರು ಅಷ್ಟೆ. ನಿಷ್ಠಾವಂತ ಬಿಜೆಪಿಯವರಿಗೆ ಅಷ್ಟೆ ಪದಾಧಿಕಾರಿ ಮಾಡಿದ್ದಾರೆ" ಎಂದು ಶಾಸಕ ಯತ್ನಾಳ್ ಹೇಳಿದರು.


ಬಿಎಸ್ ಯಡಿಯೂರಪ್ಪ ಪಾಳೆಯದ ಭಾಗವಾಗಿರುವ ಹಲವಾರು ನಾಯಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಅವರ ವಿರೋಧಿಗಳಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿ ಸೋಮಣ್ಣ ಅವರು ಪಟ್ಟಿಗೆ ಬರಲು ವಿಫಲರಾಗಿದ್ದಾರೆ.


ಪದಾಧಿಕಾರಿಗಳಲ್ಲಿ 10 ರಾಜ್ಯ ಉಪಾಧ್ಯಕ್ಷರು, 10 ರಾಜ್ಯ ಕಾರ್ಯದರ್ಶಿಗಳು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಮುಖ್ಯಸ್ಥರು ಸೇರಿದ್ದಾರೆ.


ರಾಜ್ಯ ಉಪಾಧ್ಯಕ್ಷರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜುಗೌಡ ನಾಯ್ಕ್, ಎನ್.ಮಹೇಶ್,ಅನಿಲ್ ಬೆನಕೆ, ಹರತಾಳ್ ಹಾಲಪ್ಪ, ರೂಪಾಲಿ ನಾಯ್ಕ್, ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್, ಎಂ.ರಾಜೇಂದ್ರ ಇದ್ದಾರೆ.


ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಬಿಜೆಪಿ ರಾಷ್ಟ್ರೀಯ ನಾಯಕತ್ವದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಉತ್ತರ ಕರ್ನಾಟಕದ ಪ್ರಭಾವಿ ಪಂಚಮಸಾಲಿ ಲಿಂಗಾಯತ ಮುಖಂಡ, ಮಾಜಿ ಸಚಿವ ನಿರಾಣಿ ಅವರನ್ನು ನೇಮಿಸಿದ ಕ್ರಮವು ಪ್ರತಿತಂತ್ರವಾಗಿದೆ.


ಆರೆಸ್ಸೆಸ್ ನಿಷ್ಠಾವಂತ ಮಾಜಿ ಸಚಿವ ವಿ ಸುನೀಲ್ ಕುಮಾರ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸ್ಥಾನ ಪಡೆದಿದ್ದಾರೆ. ಇತರ ಮೂವರಲ್ಲಿ ಪಿ ರಾಜೀವ್, ಎನ್ ಎಸ್ ನಂದೀಶ್ ರೆಡ್ಡಿ ಮತ್ತು ಪ್ರೀತಂ ಗೌಡ ಸೇರಿದ್ದಾರೆ.ಯುವ ಮತ್ತು ತಾಜಾ ಮುಖಗಳು ಸೇರಿದಂತೆ 10 ರಾಜ್ಯ ಕಾರ್ಯದರ್ಶಿಗಳು: ಶೈಲೇಂದ್ರ ಹೆಬ್ಬಾಳೆ, ಡಿ ಎಸ್ ಅರುಣ್, ಬಸವರಾಜು ಮತ್ತಿಮೋಡ್, ಸಿ ಮುನಿರಾಜು, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಪುರ, ಲಕ್ಷ್ಮಿ ಅಶ್ವಿನ್ ಗೌಡ ಮತ್ತು ಅಂಬಿಕಾ ಹುಲಿನಾಯ್ಕರ್.


ವಿವಿಧ ಮೋರ್ಚಾ ಮುಖ್ಯಸ್ಥರಲ್ಲಿ ಎ ಎಸ್ ಪಾಟೀಲ್ ನಡಹಳ್ಳಿ (ರೈತ ಮೋರ್ಚಾ), ಅನಿಲ್ ಥಾಮಸ್ (ಅಲ್ಪಸಂಖ್ಯಾತ ಮೋರ್ಚಾ), ರಘು ಕೌಟಿಲ್ಯ (ಹಿಂದುಳಿದ ವರ್ಗಗಳ ಮೋರ್ಚಾ), ಎಸ್ ಮಂಜುನಾಥ್ (ಎಸ್ ಸಿ ಮೋರ್ಚಾ), ಬಂಗಾರು ಹನುಮಂತು (ಎಸ್ ಟಿ ಮೋರ್ಚಾ), ಧೀರಜ್ ಮುನಿರಾಜು (ಯುವ ಮೋರ್ಚಾ) ಮತ್ತು ಸಿ. ಮಂಜುಳಾ (ಮಹಿಳಾ ಮೋರ್ಚಾ).


ಸುಬ್ಬನರಸಿಂಹ ಅವರನ್ನು ರಾಜ್ಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕೆಲವು ನಾಯಕರಾದ ಹರತಾಳ್ ಹಾಲಪ್ಪ, ರೂಪಾಲಿ ನಾಯ್ಕ್ ಮತ್ತು ಎಎಸ್ ಪಾಟೀಲ್ ನಡಹಳ್ಳಿ ಅವರಿಗೂ ಅವಕಾಶ ಕಲ್ಪಿಸಲಾಗಿದೆ.


ಕುತೂಹಲಕಾರಿಯಾಗಿ ಹಿಂದಿನ ಆಡಳಿತದಲ್ಲಿ ಬಿಜೆಪಿ ಸೇರಲು ಕಾಂಗ್ರೆಸ್ ಬಂಡಾಯಗಾರರಲ್ಲಿ ಒಬ್ಬರಾಗಿದ್ದ ಬೈರತಿ ಬಸವರಾಜ್ ಮತ್ತು ಮಾಜಿ ಬಿಎಸ್ಪಿ ನಾಯಕರಾದ ಕೊಳ್ಳೇಗಾಲದ ಮಾಜಿ ಶಾಸಕ ಎನ್ ಮಹೇಶ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


ಯುವ ನಾಯಕರಾದ ಪ್ರೀತಂ ಗೌಡ ಮತ್ತು ಪಿ ರಾಜೀವ್ ಕೂಡ ಸೇರ್ಪಡೆಗೊಂಡಿದ್ದಾರೆ.


ಈ ಹಿಂದೆ ಎಂಎಲ್‌ಸಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಮಾಳವಿಕಾ ಅವಿನಾಶ್‌ ಅವರು ರಾಜ್ಯ ಉಪಾಧ್ಯಕ್ಷರ ಪೈಕಿ ಏಕೈಕ ಮಹಿಳೆಯಾಗಿದ್ದಾರೆ. ಲಕ್ಷ್ಮಿ ಅಶ್ವಿನ್ ಗೌಡ ಅವರಂತಹ ತಾಜಾ ಮುಖಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


ಬಿಜೆಪಿ ಹೈಕಮಾಂಡ್ ಇತ್ತೀಚೆಗೆ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಗಳನ್ನು ಭರ್ತಿ ಮಾಡಿದ ನಂತರ ಪದಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು ಅಂಬಾರಿ ಉಡುಗೊರೆ

Posted by Vidyamaana on 2023-08-03 08:24:27 |

Share: | | | | |


ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು ಅಂಬಾರಿ ಉಡುಗೊರೆ

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸತ್ ಭವನದಲ್ಲಿ ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.


ಸಿದ್ದರಾಮಯ್ಯ ಅವರು ಎರಡನೇ ಸಲ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತಿರುವುದು.


ಭೇಟಿ ವೇಳೆ ಸಿದ್ದರಾಮಯ್ಯ ಅವರು, ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರ ಬಳಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.


ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರಾದ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದರು.

ಪುತ್ತೂರು – ಉಪ್ಪಿನಂಗಡಿ ಟ್ವಿನ್ ಸಿಟಿ ನಡುವಿನ ಚತುಷ್ಪಥ ಕಾಮಗಾರಿಗೆ ವೇಗ

Posted by Vidyamaana on 2023-01-18 08:17:32 |

Share: | | | | |


ಪುತ್ತೂರು – ಉಪ್ಪಿನಂಗಡಿ ಟ್ವಿನ್ ಸಿಟಿ ನಡುವಿನ ಚತುಷ್ಪಥ ಕಾಮಗಾರಿಗೆ ವೇಗ

ಪುತ್ತೂರು: ಒಂದೊಮ್ಮೆ ಉಪ್ಪಿನಂಗಡಿ ತಾಲೂಕು ಕೇಂದ್ರ. ಕ್ರಮೇಣ ತಾಲೂಕು ಕೇಂದ್ರ ಪುತ್ತೂರಿಗೆ ವರ್ಗವಾಯಿತು. ಹಾಗೆಂದು ಈ ಎರಡು ಪಟ್ಟಣಗಳ ನಡುವಿನ ಸಂಬಂಧ ಪ್ರತ್ಯೇಕಗೊಂಡಿಲ್ಲ. ಎರಡೂ ಪಟ್ಟಣಗಳು ಹುಬ್ಬಳ್ಳಿ – ಧಾರವಾಡ ಟ್ವಿನ್ ಸಿಟಿ ಮಾದರಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಇನ್ನಷ್ಟು ಬಲ ತುಂಬುವ ದಿಶೆಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ವೇಗ ಪಡೆಯುತ್ತಿದೆ.

ಕಡಬ: ಸಿಡಿಲು ಬಡಿದು ಓರ್ವ ಮೃತ್ಯು, ಇಬ್ಬರು ಗಂಭೀರ

Posted by Vidyamaana on 2024-05-11 18:56:18 |

Share: | | | | |


ಕಡಬ: ಸಿಡಿಲು ಬಡಿದು ಓರ್ವ ಮೃತ್ಯು, ಇಬ್ಬರು ಗಂಭೀರ

ಕಡಬ, ಮೇ.11. ಸಿಡಿಲು ಬಡಿದು ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಚಿಲಂಪಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.



Leave a Comment: