ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಅರೆಶಿರೂರು ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

Posted by Vidyamaana on 2023-04-13 07:08:47 |

Share: | | | | |


ಅರೆಶಿರೂರು ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

ಬೈಂದೂರು: ಹೆಲಿಕಾಪ್ಟರ್ ಟೆಕ್ ಆಫ್ ಆಗುವ ಸಂದರ್ಭ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಎ. 13ರ ಗುರುವಾರ ಅರೆಶಿರೂರಿನಲ್ಲಿ ನಡೆದಿದೆ.ಸಿಎಂ ಬೊಮ್ಮಾಯಿ ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರು ಅಗಮಿಸಿದ ಸಂದರ್ಭ ಈ ಘಟನೆ ಸಂಭವಿಸಿದೆ.ಸಿಎಂ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅವಘಡ ತಪ್ಪಿದೆ.

ಹೆಲಿಕಾಪ್ಟರ್ ಫ್ಯಾನ್ ಗಾಳಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸ್ಥಳದಲ್ಲಿ  ಬೈಂದೂರು ಅಗ್ನಿಶಾಮಕ ದಳದವರಿಂದ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಲಾಗಿದೆ. ‌ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಂಪತಿ ಸಮೇತ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಪ್ರಾಂಗಣದ ಗರುಡಗಂಬಕ್ಕೆ ಪೂಜೆ ಸಲ್ಲಿಸಿದರು.

ಮಾಜಿ ಸಚಿವ ಎಸ್‌ ಅಂಗಾರ ಅವರ ನಿವಾಸಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Posted by Vidyamaana on 2024-03-20 15:37:58 |

Share: | | | | |


ಮಾಜಿ ಸಚಿವ ಎಸ್‌ ಅಂಗಾರ ಅವರ ನಿವಾಸಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

ಸುಳ್ಯ: ಮಾಜಿ ಸಚಿವ ಎಸ್ ಅಂಗಾರ ಅವರ ನಿವಾಸಕ್ಕೆ ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ನೀಡಿ ಆಶೀರ್ವಾದ ಪಡೆದರು.

ಎಸ್.ಅಂಗಾರರವರ ದೊಡ್ಡತೋಟ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ,ಮುಖಂಡರಾದ ಹರೀಶ್ ಕಂಜಿಪಿಲಿ, ಎ.ವಿ. ತೀರ್ಥರಾಮ ಮತ್ತಿತರರು ಉಪಸ್ಥಿತರಿದ್ದರು.

ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

Posted by Vidyamaana on 2023-10-11 21:28:27 |

Share: | | | | |


ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: HMS ಗ್ರೂಪ್ಸ್ ನವರ ಉಪಯೋಗಿಸಿದ ಕಾರುಗಳು ಮತ್ತು ಗೂಡ್ಸ್ ವಾಹನಗಳ ಮಾರಾಟ, ಖರೀದಿ ಮತ್ತು ವಿನಿಮಯ ಕೇಂದ್ರ ಕಬಕ ಸಮೀಪದ ಮಿತ್ತೂರು ಮಸೀದಿ ಬಳಿ ಅ.30ರಂದು ಶುಭಾರಂಭಗೊಳ್ಳಲಿದೆ.


ಇನ್ಸೂರೆನ್ಸ್, ಕಾರ್ ಸರ್ವೀಸ್ ಘಟಕ ಹಾಗೂ ವೆಹಿಕಲ್ ಲೋನ್ ಸೌಲಭ್ಯ ಕೂಡಾ ಇರಲಿದೆ. ಶುಭಾರಂಭ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಭಾರತ್ ವೆಹಿಕಲ್ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವಿಶಿಷ್ಟ ಕ್ಯಾಂಪೇನ್ ಕಾರ್ ಬಿಟ್ಟು ರಿಕ್ಷಾ ಏರಿ ಪ್ರಚಾರ ನಡೆಸಿದ ಕೈ ಅಭ್ಯರ್ಥಿ

Posted by Vidyamaana on 2024-04-15 08:36:00 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವಿಶಿಷ್ಟ ಕ್ಯಾಂಪೇನ್ ಕಾರ್ ಬಿಟ್ಟು ರಿಕ್ಷಾ ಏರಿ ಪ್ರಚಾರ ನಡೆಸಿದ ಕೈ ಅಭ್ಯರ್ಥಿ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ವಿವಿದೆಡೆ ಪ್ರಚಾರ ಕಾರ್ಯ ನಡೆಯಿತು.


ಪದ್ಮರಾಜ್ ಆರ್. ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮನೆ, ಅಂಗಡಿಗಳಿಗೆ ತೆರಳಿ, ಮತ ಯಾಚನೆ ನಡೆಸಿದರು.

ಕೋಟೆಕಾರ್, ಕಾಪಿಕಾಡ್, ತಲಪಾಡಿಯ ಕೆ.ಸಿ. ರೋಡ್ ಜಂಕ್ಷನ್, ಕುಂಪಲಕ್ರಾಸ್, ಕುಂಪಲ ಆಶ್ರಯ ಕಾಲನಿ, ಪಿಲಾರು, ಕುತ್ತಾರು, ಅಂಬ್ಲಮೊಗರು, ಅಸೈಗೋಳಿ, ಕೊಣಾಜೆ, ಗ್ರಾಮಚಾವಡಿ ಮೊದಲಾದೆಡೆ ಪ್ರಚಾರ ಕಾರ್ಯ ನಡೆಸಲಾಯಿತು.

ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

Posted by Vidyamaana on 2023-06-10 11:06:52 |

Share: | | | | |


ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

ಬೆಂಗಳೂರು : ನಾಳೆ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಷರತ್ತು ವಿಧಿಸಿರುವಂತ ರಾಜ್ಯ ಸರ್ಕಾರ, ಈಗ ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ. ಅದೇ ಸ್ಟಿಕ್ಕರ್ ಇದ್ದಂತ ಬಸ್ ಗಳಲ್ಲಿ ಮಾತ್ರವೇ ಸಂಚರಿಸೋದಕ್ಕೆ ಮಹಿಳೆಯರಿಗೆ ಅವಕಾಶ ನೀಡಿದೆ.ಈ ಕುರಿತಂತೆ ಇಂದು ನಾಳೆ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆಗೊಳಿಸಲಿದ್ದಾರೆ ಎಂಬುದಾಗಿ ತಿಳಿಸಿದರು.ನಾಳೆ ಮಧ್ಯಾಹ್ನ 1ರ ನಂತ್ರ ರಾಜ್ಯಾಧ್ಯಂತ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಐಡಿ ಕಡ್ಡಾಯಗೊಳಿಸಲಾಗಿದೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ಇನ್ನೂ ಈವರೆಗೆ ರಾಜಹಂಸ, ಎಸಿ, ನಾನ್ ಎಸಿ ಸ್ಲೀಪರ್ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರಲಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈಗ ಮತ್ತೊಂದು ಹೊಸ ರೂಲ್ಸ್ ಬಗ್ಗೆಯೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಅದೇ ಸ್ಟಿಕ್ಕರ್ ಇರುವಂತ ಸಾರಿಗೆ ಬಸ್ ಗಳಲ್ಲಿ ಮಾತ್ರವೇ ಮಹಿಳೆಯರು ಪ್ರಯಾಣಿಸಲು ಅವಕಾಶ ಎಂಬುದಾಗಿದೆ

ಮಂಗಳೂರು; ಮೆಹಂದಿ ಕಾರ್ಯಕ್ರಮದ ದಿನ ವರ ಕಿಶನ್ ಶೆಟ್ಟಿ ನಾಪತ್ತೆ

Posted by Vidyamaana on 2023-05-31 17:01:17 |

Share: | | | | |


ಮಂಗಳೂರು; ಮೆಹಂದಿ ಕಾರ್ಯಕ್ರಮದ ದಿನ ವರ ಕಿಶನ್ ಶೆಟ್ಟಿ ನಾಪತ್ತೆ

ಮಂಗಳೂರು; ಮದುವೆಗೆ ಮೊದಲ ದಿನ ಮೆಹಂದಿ ಕಾರ್ಯಕ್ರಮದಂದು ವರನೊಬ್ಬ ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಕೊಣಾಜೆ ತೌಡುಗೋಳಿ ವರ್ಕಾಡಿ ಎಂಬಲ್ಲಿ ನಡೆದಿದೆ.

ತೌಡುಗೋಳಿ-ವರ್ಕಾಡಿ ದೇವಂದಪಡುವಿನ ಉದ್ಯಮಿಯೋರ್ವರ ಸುಪುತ್ರ ಕಿಶನ್ ಶೆಟ್ಟಿ ನಾಪತ್ತೆಯಾದ ವರ.ಕಿಶನ್ ಗೆ ನಾಳೆ ವಿವಾಹವಾಗಬೇಕಾಗಿತ್ತು.ಕಿಶನ್ ಗೆ ಇಂದು ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಪೋಷಕರು ಸಿದ್ಧತೆ

ಕಿಶನ್ ಹಣ್ಣು ಖರೀದಿಗೆಂದು ತೆರಳಿ ಬಳಿಕ ನಾಪತ್ತೆಯಾಗಿದ್ದಾರೆ.ಇದೀಗ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ.ಕಿಶನ್ ಶೆಟ್ಟಿಗೆ ಜಪ್ಪಿನಮೊಗರಿನಲ್ಲಿರುವ ಕುಟುಂಬವೊಂದರ ಉಪನ್ಯಾಸಕಿಯೊಂದಿಗೆ ವಿವಾಹ ನಿಗದಿಯಾಗಿತ್ತು.ಈ ಕುರಿತು ಕೊಣಾಜೆ ಠಾಣೆಯಲ್ಲಿ ಕಿಶನ್ ತಂದೆ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.



Leave a Comment: