ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಮಾರ್ಚ್ 24ರಂದು ಚುನಾವಣಾ ದಿನಾಂಕ ಪ್ರಕಟ ಸಾಧ್ಯತೆ!

Posted by Vidyamaana on 2023-02-21 04:05:24 |

Share: | | | | |


ಮಾರ್ಚ್ 24ರಂದು ಚುನಾವಣಾ ದಿನಾಂಕ ಪ್ರಕಟ ಸಾಧ್ಯತೆ!

ಪುತ್ತೂರು: ವಿಧಾನಸಭಾ ಚುನಾವಣೆಯ ಗುಂಗು ಹೆಚ್ಚುತ್ತಿದ್ದಂತೆ, ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆಯೂ ಬಹುತೇಕ ಸ್ಪಷ್ಟವಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ 24ರಂದೇ ಚುನಾವಣಾ ದಿನಾಂಕ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಚುನಾವಣೆಗಾಗಿ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಆಕಾಂಕ್ಷಿ ಅಭ್ಯರ್ಥಿಗಳಂತೂ ಭರ್ಜರಿಯಾಗಿಯೇ ತಯಾರಾಗುತ್ತಿದ್ದಾರೆ. ಇದರ ನಡುವೆ ರಾಜಕೀಯ ಊಹಾಪೋಹಗಳು, ಅಭ್ಯರ್ಥಿಗಳ ಕುರಿತಾದ ಅಂತೆ-ಕಂತೆಗಳ ಸುದ್ದಿಗಳು ಎಗ್ಗಿಲ್ಲದೆ ಹರಿದಾಡುತ್ತಿದೆ. ಇದಕ್ಕೆಲ್ಲಾ ಮಾರ್ಚ್ 24ರ ಹೊತ್ತಿಗೆ ತೆರೆ ಬೀಳಲಿದೆ.

ಒಂದು ವೇಳೆ ಮಾರ್ಚ್ 24ರಂದು ಚುನಾವಣಾ ದಿನಾಂಕ ಪ್ರಕಟವಾದರೆ, ಮುಂದೆ ಅಂತಿಮ ಸಿದ್ಧತೆಗಳಿಗಷ್ಟೇ ಸಮಯ ಮೀಸಲು. ಪ್ರಚಾರದ ಅಂತಿಮ ದಿನ, ನಾಮಪತ್ರ ಸಲ್ಲಿಕೆಯಿಂದ ಹಿಡಿದು, ಚುನಾವಣಾ ಫಲಿತಾಂಶದವರೆಗಿನ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟ ಮಾಡಲಿದೆ. ರಾಜಕೀಯ ಕುರಿತಾಗಿ ಈಗ ಮೂಡಿರುವ ಎಲ್ಲಾ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಮಾರ್ಚ್ 24ರಂದೇ ತೆರೆಬೀಳುವ ಸಾಧ್ಯಾತೆ ದಟ್ಟವಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಆರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿ ನಿಧನ

Posted by Vidyamaana on 2023-06-02 02:03:52 |

Share: | | | | |


ಹಿರಿಯ ಕಾಂಗ್ರೆಸ್ ಮುಖಂಡ  ಆರ್ತಿಕೆರೆ  ಅಬ್ದುಲ್ ರಹಿಮಾನ್ ಹಾಜಿ ನಿಧನ

ಪುತ್ತೂರು :ಹಿರಿಯ ಕಾಂಗ್ರೆಸ್ ಮುಖಂಡ ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಗಿರುವ ಆರ್ತಿಕೆರೆ  ಅಬ್ದುಲ್ ರಹಿಮಾನ್ ಹಾಜಿ ಅವರು ಜೂ 1 ರಂದು ರಾತ್ರಿ ನಿಧನರಾದರು.

ಈ ಹಿಂದೆ ಸಾಮಾಜಿಕ ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅಬ್ದುಲ್ ರಹಿಮಾನ್ ಹಾಜಿಯವರು ಮಸೀದಿಯ ಪದಾಧಿಕಾರಿಯಾಗಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾಗಿ ಸೇವೆ ಸಲ್ಲಿಸಿದ್ದರು.

  ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಲ್ಲಿ

ಓರ್ವರಾಗಿದ್ದ ಇವರು ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರ ದಫನ ಕಾರ್ಯ ಭಕ್ತ ಕೋಡಿ ಮಸೀದಿ ದಫನ ಸ್ಥಾನದಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.






ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

Posted by Vidyamaana on 2023-03-30 06:23:29 |

Share: | | | | |


ನೆಲ್ಯಾಡಿ : ಚತುಷ್ಪಥ ಕಾಮಗಾರಿ ಹಿನ್ನಲೆ ಅಳವಡಿಸಿದ ಡಿವೈಡರ್ ಗೆ ಕಾರು ಢಿಕ್ಕಿ – ಮಹಿಳೆ ಮೃತ್ಯು, ಪುತ್ರ ಹಾಗೂ ಪತಿ ಗಂಭೀರ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ನೆಲ್ಯಾಡಿ ಸಮೀಪದ ಜ್ಞಾನೋದಯ ಬೆಥನಿ ಕಾಲೇಜು ಸಮೀಪ ಕರ್ಬಸಂಕ ಎಂಬಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಪತಿ ಮತ್ತು ಪುತ್ರ ಗಂಭೀರ ಗಾಯಗೊಂಡ ಘಟನೆ ಮಾ.30ರಂದು ಬೆಳಿಗ್ಗೆ ನಡೆದಿದೆ.ಅನ್ನಪೂರ್ಣ(50ವ.) ಮೃತ ಮಹಿಳೆ. ಇವರ ಪುತ್ರ ಅಶ್ವಿನ್(25ವ)ಹಾಗೂ ಪತಿ ಭಾಸ್ಕರ(56)ಗಂಭೀರ ವಾಗಿ ಗಾಯಗೊಂಡವರು. ಕಾರನ್ನು ಅಶ್ವಿನ್ ಚಲಾಯಿಯಿಸುತ್ತಿದ್ದು ಕಾರು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಚಲಿಸುತಿತ್ತು ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆಕರೆದುಕೊಂಡು ಹೋಗಲಾಗಿದೆ.

ಅಪಘಾತವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ರಸ್ತೆ ಹಾಗೂ ಸೇತುವೆ ಕಾಮಾಗಾರಿ ನಡೆಯುತ್ತಿರುವ ಹಿನ್ನಲೆ ಡಿವೈಡರ್ ಆಳವಡಿಸಲಾಗಿದೆ. ಇದಕ್ಕೆ ಚಾಲಕ ಢಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿ ಬಿ.ಎಸ್., ಸಬ್ ಇನ್ಸೆಕ್ಟರ್ ರಾಜೇಶ್ ಕೆ.ವಿ., ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ, ಕುಶಾಲಪ್ಪ ನಾಯ್ಕರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ

Posted by Vidyamaana on 2024-03-16 19:18:55 |

Share: | | | | |


ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ

ಮಂಗಳೂರು : ಅರುಣ್ ಕುಮಾರ್ ಪುತ್ತಿಲ ಮಂಗಳೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಕಾರ್ಯಕರ್ತರು ಶಾಲು ಹಾಕಿ ಸ್ವಾಗತಿಸಿದರು.ಅರುಣ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ ನೀಡುವ ಹಿನ್ನೆಲೆ  ನೂರಾರು ಕಾರ್ಯಕರ್ತರು ಆಗಮಿಸಿದರು.

ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

Posted by Vidyamaana on 2023-07-23 02:34:27 |

Share: | | | | |


ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ರಚನಾ ಸಭೆಯು ಗುರುವಾರ ರೋಟರಿ ಮನಿಷಾ ಹಾಲ್‌ನಲ್ಲಿ ನಡೆಯಿತು.


ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಜಳ್ ಉಜಿರೆ ಸಭೆಯ ಅಧ್ಯಕ್ಷತೆ ವಹಿಸಿ ವಹಿಸಿ, ದುಆಃ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.


ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರದಾನ ಕಾರ್ಯದರ್ಶಿ ಅಬೂ ಸುಫ್‌ಯಾನ್ ಎಚ್. ಐ. ಇಬ್ರಾಹಿಂ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ. ಹಂಝ ಸಖಾಫಿ ನೇತೃತ್ವದಲ್ಲಿ 14 ಪದಾಧಿಕಾರಿಗಳನ್ನು ಒಳಗೊಂಡ 31 ಮಂದಿ ಸದಸ್ಯರ ಈಸ್ಟ್ ಜಿಲ್ಲಾ ಸಮಿತಿಯನ್ನು ರಚಿಸಿದರು.ಅಧ್ಯಕ್ಷರಾಗಿ ಅಬ್ದುರಹ್ಮಾನ್ ಹಾಜಿ ಅರಿಯಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಮುಹಮ್ಮದ್ ಕಾಮಿಲ್ ಸಖಾಫಿ, ಕೋಶಾಧಿಕಾರಿಯಾಗಿ ಬಿ.ಪಿ. ಇಸ್ಮಾಯಿಲ್ ಹಾಜಿ ಬೈತಡ್ಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಮುಹಮ್ಮದ್ ಕುಂಞ ಗೂನಡ್ಕ ಎ.ಕೆ. ಅಹ್ಮದ್ ಪರಪ್ಪು, ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಕೆ.ಬಿ. ಕಾಸಿಂ ಹಾಜಿ ಮಿತ್ತೂರು, ಕಾರ್ಯದರ್ಶಿಯಾಗಿ ಕೆ.ಇ. ಅಬೂಬಕ್ಕರ್ ನೆಲ್ಯಾಡಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಕಾಸಿಂ ಪದ್ಮುಂಜ, ಅಬ್ಬೋನು ಮದ್ದಡ್ಕ, ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗೂ ಮಾಧ್ಯಮ ಕಾರ್ಯದರ್ಶಿಯಾಗಿ ಹಾಜಿ ಯೂಸುಫ್ ಸಯೀದ್‌ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮ‌ ಮುಸ್ಲಿಯಾರ್ ಮರ್ಧಾಳ, ಅಶ್ರಫ್ ಸಖಾಫಿ ಸವಣೂರು, ಕೆ.ಎಂ. ಮುಸ್ತಫಾ ಸುಳ್ಯ ಹನೀಫ್ ಹಾಜಿ ಇಂದ್ರಾಜೆ, ಅಬ್ಬಾಸ್ ಮದನಿ ಬಂಡಾಡಿ, ಅಬ್ಬಾಸ್ ಬಟ್ಲಡ್ಕ ಇಟ್ಬಾಲ್ ಬಪ್ಪಳಿಗೆ, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಯು.ಕೆ. ಹನೀಫ್ ಉಜಿರೆ, ಪಿ.ಯು. ಅಬ್ದುರಹ್ಮಾನ್ ಮುಸ್ಲಿಯಾರ್ ನಾವೂರು, ಇಬ್ರಾಹೀಂ ಮುಸ್ಲಿಯಾರ್ ಕೊಡಂಗಾಯಿ, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಉಸ್ಮಾನ್ ಹಾಜಿ ಸರ್ಕಲ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಮುಹಮ್ಮದ್ ರಫಿ ಕಾಜೂರು, ಎಸ್‌ವೈಎಸ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಹಾಗೂ ಎಸ್ಸೆಸ್ಸೆಫ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಕಳಂಜಿಬೈಲ್ ಅವರನ್ನು ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಸಯ್ಯದ್ ಎಸ್.ಎಂ. ತಂಜಳ್ ಬೆಳ್ತಂಗಡಿ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಬಿ. ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಕರ್ನಾಟಕ ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹೀಂ ಸಅದಿ ಉಪಸ್ಥಿತರಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು.

ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2024-05-07 11:48:08 |

Share: | | | | |


ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 3ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಹಮದಾಬಾದ್ನಲ್ಲಿ ಮತದಾನ ಮಾಡಿದರು



Leave a Comment: