ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಸುದ್ದಿಗಳು News

Posted by vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಕೆಎಎಸ್‌ ಅಧಿಕಾರಿಗಳು

ಡಾ. ಜಗದೀಶ್‌ ಕೆ. ನಾಯಕ್‌

ರಘುನಂದನ್‌ ಎ.ಎನ್‌

ಪ್ರಸನ್ನ ಕುಮಾರ್‌ ವಿ.ಕೆ

ಹುಲ್ಲುಮನಿ ತಿಮ್ಮಣ್ಣ

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಬಿ. ರಮೇಶ -ಡಿಐಜಿಪಿ, ಪೂರ್ವ ವಲಯ, ದಾವಣಗೆರೆ

ಎನ್. ವಿಷ್ಣು ವರ್ಧನ್ -ಎಸ್.ಪಿ. ಮೈಸೂರು ಜಿಲ್ಲೆ

ಸೀಮಾ ಲಾಟ್ಕರ್ -ಪೊಲೀಸ್ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ

ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ

ಸುಮನ್ ಡಿ. ಪೆನ್ನೇಕರ್ -ಎಸ್‌ ಪಿ, ಬಿಎಂಟಿಎಫ್

ಸಿ.ಬಿ. ರಿಷ್ಯಂತ್ -ಎಸ್.ಪಿ

ಚನ್ನಬಸವಣ್ಣ - ಎಐಜಿಪಿ, ಆಡಳಿತ, ಡಿಜಿ ಕಚೇರಿ

ಲಾಬೂ ರಾಮ್ -ಐಜಿಪಿ ಕೇಂದ್ರ ವಲಯ

ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ

ಕೆ. ತ್ಯಾಗರಾಜನ್ -ಐಜಿಪಿ, ಐ.ಎಸ್.ಡಿ.

ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

ಪ್ರದೀಪ್‌ ಗುಂಡಿ - ಎಸ್‌ ಪಿ. ಬೀದರ್‌ ಜಿಲ್ಲೆ

ಯತೀಶ್‌ ಎನ್. - ಎಸ್‌ ಪಿ ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ ಬಾಲದಂಡ ಎಸ್‌ ಪಿ ಮಂಡ್ಯ ಜಿಲ್ಲೆ

ಡಾ.ಟಿ. ಕವಿತಾ ಎಸ್.ಪಿ. ಚಾಮರಾಜನಗರ ಜಿಲ್ಲೆ

ಬಿ. ನಿಖಿಲ್‌ ಎಸ್‌ ಪಿ ಕೋಲಾರ ಜಿಲ್ಲೆ

 Share: | | | | |


ದೌರ್ಜನ್ಯದ ಹಿಂದೆ ಕಾಂಗ್ರೆಸ್ ಪ್ರಭಾಕರ್ ಭಟ್ ಆರೋಪ

Posted by Vidyamaana on 2023-05-18 16:01:48 |

Share: | | | | |


ದೌರ್ಜನ್ಯದ ಹಿಂದೆ ಕಾಂಗ್ರೆಸ್ ಪ್ರಭಾಕರ್ ಭಟ್ ಆರೋಪ

ಪುತ್ತೂರು: ಬ್ಯಾನರ್‌ಗೆ ಚಪ್ಪಲಿಹಾರ ಹಾಕಿದ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯವಾಗಲು ಕಾಂಗ್ರೆಸ್ ಕಾರಣ, ಕಾಂಗ್ರೆಸ್ ಸರಕಾರ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಆರೋಪ ಮಾಡಿದ್ದು ಈ ಆರೋಪಕ್ಕೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಯಾವರು ಹೇಳಿಕೆ ನೀಡಿದ್ದಾರೆ.ಯಾರು ಹಲ್ಲೆ ಮಾಡಿಸಿದ್ದಾರೆ ಎಂದು ಪುತ್ತೂರಿನ ಪ್ರತೀಯೊಬ್ಬರಿಗೂ ಗೊತ್ತಿದೆ ಅನಾವಶ್ಯಕವಾಗಿ ಕಾಂಗ್ರೆಸ್ಸನ್ನು ಎಳೆದು ತರಬೇಡಿ ಎಂದು ಭಟ್‌ಗೆ ಖಾರವಾಗಿಯೇ ಉತ್ತರಿಸಿದ್ದಾರೆ.

ಅವರು ಇವರ ಮೇಲೆ ಆರೋಪ ಮಾಡುವುದು ಇವರು ಅವರ ಮೇಲೆ ಆರೋಪ ಮಾಡುವುದು ನಿಮ್ಮ ಈ ನಾಟಕ ಎಲ್ಲಾ ಇನ್ನು ನಡೆಯುವುದಿಲ್ಲ. ಪುತ್ತೂರಿನಲ್ಲಿ ಏನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ ನೀವು ಕಾಂಗ್ರೆಸ್ಸಿನ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಸಿದರು.

ಪುತ್ತೂರಿನ ಶಾಸಕರು ಎಲ್ಲದಕ್ಕೂ ಸಮರ್ಥರಿದ್ದಾರೆ. ಹೊರಗಿನಿಂದ ಬಂದವರು ಇಲ್ಲಿ ಪುಕ್ಕಟೆ ಸಲಹೆ ಕೊಡುವ ಅಗತ್ಯವಿಲ್ಲ. ಘಟನೆಯಲ್ಲಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಕಾಂಗ್ರಸ್ಸಿನ ಶಾಸಕರು ಮಾಡಿದ್ದಾರೆ, ತಪ್ಪತಸ್ಥರನ್ನು ಅಮಾನತು ಮಡಿಸಿದ್ದಾರೆ, ಅವರ ಮೇಲೆ ಕೇಸು ಕೂಡಾ ದಾಖಲಾಗಿದೆ. ಪಕ್ಷೇತರ ಅಭ್ಯರ್ಥಿಯನ್ನು ಎದುರಿಸುವ ತಾಕತ್ತಿಲ್ಲದ ನೀವು ಕಾಂಗ್ರೆಸ್ ಶಾಸಕರ ಬಗ್ಗೆ ಅಥವಾ ಕಾಂಗ್ರೆಸ್ ಸರಕಾರವನ್ನು ಟಾರ್ಗೆಟ್ ಮಾಡುತ್ತಿದ್ದೀರಿ.  ಬಿಜೆಪಿ ನಾಯಕರಿಗೆ ಸೋಲಿನಿಂದ ದೃತಿಗೆಟ್ಟಿದೆ ಅದಕ್ಕೆ ಸುಳ್ಲು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ ಹೇಮನಾಥ ಶೆಟ್ಟಿ ಯವರು ಬೆಳ್ತಂಗಡಿ ಶಾಸಕರು ಬಂದು ಇಲ್ಲಿ ಪುಕ್ಕಟೆ ಸಲಹೆ ಕೊಡುವುದು ಬೇಡ. ನಮ್ಮ ಶಾಸಕರಿಗೆ ನ್ಯಾಯ ಕೊಡಿಸಲು ಗೊತ್ತಿದೆ. ನಮ್ಮ ಶಾಸಕರು ಪುತ್ತೂರಿನ ಎಲ್ಲಾ ಸಮುದಾಯದ , ಎಲ್ಲಾ ವರ್ಗದವರ, ಪುತ್ತೂರಿನ ಸಮಸ್ತ ನಾಗರಿಕರ ಶಾಸಕಕರಾಗಿದ್ದು ನಿಮ್ಮ ಹಾಗೆ ಅಲ್ಲ ಎಂದು ಹೇಳಿದ ಅವರು ಆರೋಪ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಎಂದು ಎಚ್ಚರಿಸಿದರು.

ಆರ್ಯಾಪು ನಿಡ್ಪಳ್ಳಿ ಗ್ರಾ.ಪಂ. ಉಪಚುನಾವಣೆ

Posted by Vidyamaana on 2023-07-23 11:46:29 |

Share: | | | | |


ಆರ್ಯಾಪು ನಿಡ್ಪಳ್ಳಿ ಗ್ರಾ.ಪಂ. ಉಪಚುನಾವಣೆ

ಪುತ್ತೂರು: ಭರ್ಜರಿಯಾಗಿ ನಡೆದ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದ್ದರೆ, ಈ ಬಾರಿ ಪುತ್ತಿಲ ಪರಿವಾರ ಕಣಕ್ಕೆ ರಂಗು ತುಂಬಿತು. ಇದರಿಂದಾಗಿ ಗ್ರಾಮ ಪಂಚಾಯತ್ ಉಪ ಚುನಾವಣೆಯೂ ರಾಜ್ಯದ‌ ಗಮನ ಸೆಳೆಯಿತು.

ಆರ್ಯಾಪು ಗ್ರಾಮ ಪಂಚಾಯತಿಯ ಉಪಚುನಾವಣೆಯೂ ಕುಂಜೂರುಪಂಜ ಶಾಲೆಯ ಬೂತ್ ನಂಬರ್ 44ನಲ್ಲಿ ನಡೆದಿದ್ದು, 1237 ಒಟ್ಟು ಮತಗಳ ಪೈಕಿ 999 ಮತ ಚಲಾವಣೆಯಾಗಿದೆ.

ನಿಡ್ಪಳ್ಳಿ ಗ್ರಾಮ ಪಂಚಾಯತಿಯ ಉಪಚುನಾವಣೆ ನಿಡ್ಪಳ್ಳಿ ಶಾಲೆಯ 84ನೇ ಬೂತಿನಲ್ಲಿ ನಡೆದಿದ್ದು, ಒಟ್ಟು 607 ಮತಗಳ ಪೈಕಿ 529 ಮತ ಅಂದರೆ 87% ಮತ ಚಲಾವಣೆಯಾಯಿತು.

ಕುರಿಯದಲ್ಲಿ ಬಾಲಕಿಗೆ ಕಿರುಕುಳ ಆರೋಪಿಗಳಿಗೆ ನ್ಯಾಯಾಂಗ ಬಂಧನ

Posted by Vidyamaana on 2024-02-16 16:52:05 |

Share: | | | | |


ಕುರಿಯದಲ್ಲಿ ಬಾಲಕಿಗೆ ಕಿರುಕುಳ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಪುತ್ತೂರು:ಕುರಿಯ ಸಮೀಪ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಕ್ಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿ ಬಂಧಿತರಾಗಿದ್ದ ಇಬ್ಬರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.ಘಟನೆ ಫೆ.14ರಂದು ಸಂಜೆ ನಡೆದಿತ್ತು.ಬಾಲಕಿಯು ತನ್ನ ಈರ್ವರು ಗೆಳತಿಯರೊಂದಿಗೆ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪರ್ಪುಂಜ ಕಡೆಗೆ ಸ್ಕೂಟರ್(ಕೆಎ21-ಆರ್.8659)ನಲ್ಲಿ ಬಂದಿದ್ದ ಆರೋಪಿಗಳು ಬಾಲಕಿಯ ಕೈಹಿಡಿದೆಳೆಯಲು ಪ್ರಯತ್ನಿಸಿದ್ದರು.ಬಾಲಕಿಯ ಬೊಬ್ಬೆ ಕೇಳಿ ಸುತ್ತಮುತ್ತಲಿನ ಜನ ಬರುವುದನ್ನು ನೋಡಿ ಆರೋಪಿಗಳು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದರು ಎಂದು ಸಂತ್ರಸ್ತ ನೀಡಿದ್ದ ದೂರಿನ ಮೇರೆಗೆ ಪೊಕ್ಸಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ಆರೋಪಿಗಳಾದ ಪುತ್ತೂರು ಸಿಂಹವನ ನಿವಾಸಿ ರಿತೀಶ್ (39ವ) ಮತ್ತು ಏನೆಕಲ್ಲು ಗ್ರಾಮದ ಕಿಶನ್ ಎಂಬವರನ್ನು ಬಂಧಿಸಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಎನ್ ಐಎ ದಾಳಿ ಪ್ರಕರಣ:ಪುತ್ತೂರಿನಲ್ಲಿ ನಾಲ್ವರನ್ನು ವಶಕ್ಕೆ ಪಡದ ಎನ್ ಐಎ ಅಧಿಕಾರಿಗಳು

Posted by Vidyamaana on 2023-05-31 10:23:28 |

Share: | | | | |


ಎನ್ ಐಎ ದಾಳಿ ಪ್ರಕರಣ:ಪುತ್ತೂರಿನಲ್ಲಿ ನಾಲ್ವರನ್ನು ವಶಕ್ಕೆ ಪಡದ ಎನ್ ಐಎ ಅಧಿಕಾರಿಗಳು

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪುತ್ತೂರಿನಲ್ಲಿ ನಾಲ್ವರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್ ಕೋಡಿಂಬಾಡಿ (37), ಫೈಜಲ್ ಅಹಮ್ಮದ್ ತಾರಿಗುಡ್ಡೆ, ಸಂಶುದ್ದೀನ್ ಕೂರ್ನಡ್ಕ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಇವರಿಗೆ ಪಿಎಫ್‌ಐ ಲಿಂಕ್ ಸಾಧ್ಯತೆ ಇದೆ ಎನ್ನಲಾಗಿದೆ.

ತೆಂಗಿನ ಮರದಿಂದ ಬಿದ್ದು ಧರ್ಮಸ್ಥಳ ಮೂಲದ ವಿಶ್ವಾಂಬರನ್ ಮೃತ್ಯು

Posted by Vidyamaana on 2024-01-22 21:17:53 |

Share: | | | | |


ತೆಂಗಿನ ಮರದಿಂದ ಬಿದ್ದು  ಧರ್ಮಸ್ಥಳ ಮೂಲದ ವಿಶ್ವಾಂಬರನ್ ಮೃತ್ಯು

ಉಳ್ಳಾಲ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.


ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿ ಸದ್ಯ ಸಂತೋಷ ನಗರ ದಲ್ಲಿ ನೆಲೆಸಿರುವ ವಿಶ್ವಾಂಬರನ್ (58) ಮೃತಪಟ್ಟವರು.ಎಂದಿನಂತೆ ಇಂದು ಬೆಳಿಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ ತೆಂಗಿನಮರಕ್ಕೆ ಹತ್ತಿದ್ದವರು ಕಾಲುಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕೊಣಾಜೆ ಮೂರ್ತೆದಾರರ ಸಂಘದ ನಿರ್ದೇಶಕರಾಗಿದ್ದ ಇವರು, ಮೂರು ತಿಂಗಳ ಹಿಂದಷ್ಟೇ ರಾಜೀನಾಮೆ ನೀಡಿ ಸದಸ್ಯರಾಗಿ ಮುಂದುವರಿದಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Posted by Vidyamaana on 2023-04-17 09:01:08 |

Share: | | | | |


ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಾರಿನ ಗಾಜು ಹುಡಿ ಮಾಡಿದ ಘಟನೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ ತೆರಳುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರು.ಉಭಯ ತಂಡದಲ್ಲಿಯೂ ಸಾವಿರಾರು ಕಾರ್ಯಕರ್ತರು ಇದ್ದರು.ಈ ವೇಳೆ ಜೈ ಬಿಜೆಪಿ, ಜೈ ಕಾಂಗ್ರೆಸ್ ಘೋಷಣೆ ಮೊಳಗಿದ್ದು ಪರಸ್ಪರ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.



Leave a Comment: