ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಜೂ. 18: ಪುತ್ತೂರು ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

Posted by Vidyamaana on 2023-06-15 15:37:11 |

Share: | | | | |


ಜೂ. 18: ಪುತ್ತೂರು ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 18ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಬಂಟರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ.


ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೂತನ ಶಾಸಕ ಅಶೋಕ್ ರೈ ಅವರನ್ನು ಅಭಿನಂದಿಸಲಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ಬಂಟರ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಯನ್ ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಬೂಡಿಯಾರ್ ರಾಧಾಕೃಷ್ಣ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮಕ್ಕೆ ಮೊದಲು ಹರೀಣಾಕ್ಷಿ ಜೆ ಶೆಟ್ಟಿ ನೇತೃತ್ವದಲ್ಲಿ  ‘ನೃತ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಕರಾವಳಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೃತ್ಯ ವೈಭವ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಅವರು ಶಾಸಕರ ಅಭಿನಂದನಾ ಸಮಾರಂಭವು ಕಾರ್ಯಕ್ರಮವು ರಾಜಕೀಯ ರಹಿತವಾಗಿ ಎಲ್ಲರನ್ನೂ ಸೇರಿಸಿಕೊಂಡು  ನಡೆಸಲಾಗುತ್ತಿದೆ. ಪುತ್ತೂರಿನಲ್ಲಿ ಆಶೋಕ್ ರೈ ಸೇರಿದಂತೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಬಂಟ ಸಮುದಾಯದ 6 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಟ ಸಮುದಾಯವು ನಾಯಕತ್ವದಲ್ಲಿ ಮುಂದೆ ಇದ್ದಾರೆ. ಈ ನಿಟ್ಡಿನಲ್ಲಿ ಮುಂದೆ ಮಾತೃ ಸಂಘದ ವತಿಯಿಂದ ಬಂಟ ಸಮುದಾಯದ ಎಲ್ಲಾ 6 ಶಾಸಕರನ್ನು ದೊಡ್ಡ ಮಟ್ಟದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ನಾಯಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ; 30 ವರ್ಷದ ವಾಚ್‌ಮೆನ್ ವಿರುದ್ಧ ಎಫ್‌ಐಆರ್

Posted by Vidyamaana on 2023-10-08 08:38:13 |

Share: | | | | |


ನಾಯಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ; 30 ವರ್ಷದ ವಾಚ್‌ಮೆನ್ ವಿರುದ್ಧ ಎಫ್‌ಐಆರ್

 ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ ನಾಯಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 30 ವರ್ಷದ ವಾಚ್ಮೆನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ

ಸೊಸೈಟಿಯ ಸದಸ್ಯರೊಬ್ಬರು ನೀಡಿದ ದೂರಿನ ಮೇರೆಗೆ ವಸತಿ ಸಮುಚ್ಚಯದಲ್ಲಿ ಕೆಲಸ ಮಾಡುವ ವಾಚ್ಮೆನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಕ್ಟೋಬರ್ 5ರ ರಾತ್ರಿ ಭದ್ರತಾ ಕ್ಯಾಬಿನ್ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಡಬ: ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಸಹೋದರ ಶಿಜು ಡೆಂಗ್ಯೂ ಜ್ವರದಿಂದ ಮೃತ್ಯು

Posted by Vidyamaana on 2024-01-31 17:36:02 |

Share: | | | | |


ಕಡಬ: ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಸಹೋದರ ಶಿಜು ಡೆಂಗ್ಯೂ ಜ್ವರದಿಂದ ಮೃತ್ಯು

ಕಡಬ : ಡೆಂಗ್ಯೂ ಮತ್ತು ಮಲೇರಿಯಾ ಜ್ವರ ವಿಪರೀತವಾದ ಹಿನ್ನೆಲೆಯಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕುಟ್ರುಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ನಡೆದಿದೆ.


ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ ಶಿಜು ಕಲ್ಲೋಳಿಕಲ್ (31) ಎಂಬವರು ಮೃತಪಟ್ಟವರು.ಭಾನುವಾರ ಜ್ವರ  ಹಿನ್ನೆಲೆಯಲ್ಲಿ ಕಡಬದ ಖಾಸಗಿ ಮೆಡಿಕಲ್ ಸೆಂಟರ್‌ಗೆ ಅವರು ಚಿಕಿತ್ಸೆಗಾಗಿ ಆಗಮಿಸಿದ್ದರು.ಅಲ್ಲಿ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರ ಪತ್ತೆಯಾಗಿದೆ. ನಂತರದಲ್ಲಿ ಮನೆಗೆ ಬಂದ ಶಿಜು ಅವರಿಗೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಾರನೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದರು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು.ಆದರೆ ಮಂಗಳೂರಿನ ಆಸ್ಪತ್ರೆಗೆ ತಲುಪಿದ ವೇಳೆಗಾಗಲೇ ಶಿಜು ಅವರು ಮೃತಪಟ್ಟಿದ್ದರು.


ಶಿಜು ಅವರು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಅವರ ಸಹೋದರಾಗಿದ್ದಾರೆ. ಶಿಜು ಅವರು ಅಜ್ಜಿ, ತಾಯಿ ಸಾಲಿ,ಪತ್ನಿ ಧನ್ಯ, ಸಹೋದರಿ ಸ್ವಪ್ನ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.ಮೃತ ಶಿಜು ಅವರ ಅಂತ್ಯ ಸಂಸ್ಕಾರ ಕಾರ್ಯಗಳು ವಿಮಲಗಿರಿ ಸಂತ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚಿನಲ್ಲಿ ನೆರವೇರಿತು.

ಗುಂಡು ಹಾರಿಸಿ ನಟೋರಿಯಸ್ ರೌಡಿ ರೋಹಿದಾಸ್‌ ಕೆ. ಆಲಿಯಾಸ್‌ ಆಕಾಶಭವನ ಶರಣ್‌ ಬಂಧನ

Posted by Vidyamaana on 2024-01-10 04:29:14 |

Share: | | | | |


ಗುಂಡು ಹಾರಿಸಿ ನಟೋರಿಯಸ್ ರೌಡಿ ರೋಹಿದಾಸ್‌ ಕೆ. ಆಲಿಯಾಸ್‌ ಆಕಾಶಭವನ ಶರಣ್‌ ಬಂಧನ

ಮಂಗಳೂರು, ಜ.10: ನಟೋರಿಯಸ್ ರೌಡಿ ಆಕಾಶಭವನ್ ಶರಣ್ ಬೆನ್ನು ಬಿದ್ದಿದ್ದ ಮಂಗಳೂರಿನ ಸಿಸಿಬಿ ಪೊಲೀಸರು ಆತನನ್ನು ಕಡೆಗೂ ಬಲೆಗೆ ಹಾಕಿದ್ದು ರೋಚಕ ಮಿಸ್ಟರಿ. ಮೂರು ದಿನಗಳ ಹಿಂದೆ ಕಾವೂರಿನಲ್ಲಿ ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಕಾರು ಹಾಯಿಸಿದ್ದ ರೌಡಿಯನ್ನು ಬಂಧಿಸಲೇಬೇಕೆಂದು ಪೊಲೀಸರು ಬೆನ್ನು ಬಿದ್ದಿದ್ದರು. ಕೊನೆಗೆ, ಮಲ್ಪೆಯಲ್ಲಿ ಅಡಗಿದ್ದಾನೆಂಬ ಮಾಹಿತಿ ಪಡೆದು ಅಲ್ಲಿಂದ ಚೇಸಿಂಗ್ ಮಾಡಿಕೊಂಡು ಬಂದು ಕಡೆಗೂ ಮಂಗಳೂರಿನಲ್ಲಿ ಅಡ್ಡಹಾಕಿ ಬಂಧಿಸಿದ್ದಾರೆ.


ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಒಟ್ಟು ಪ್ರಕರಣದ ಪಿನ್ ಟು ಪಿನ್ ಮಾಹಿತಿಯನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಎರಡು ಜಿಲ್ಲೆಯಲ್ಲಿ ಆತನ ಮೇಲೆ ಸುಮಾರು 25ಕ್ಕೂ ಹೆಚ್ಚು ಕೇಸುಗಳಿವೆ. ಜೈಲಿನಲ್ಲಿ ಕೊಲೆಯತ್ನ, ಸುಳ್ಯದ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ ಸೇರಿ 20ಕ್ಕೂ ಹೆಚ್ಚು ಪ್ರಕರಣ ಮಂಗಳೂರಿನಲ್ಲೇ ಇವೆ. ಹಲವಾರು ಪ್ರಕರಣಗಳಲ್ಲಿ ಅರೆಸ್ಟ್ ವಾರೆಂಟ್ ಇತ್ತು. ಹೀಗಾಗಿ 15 ದಿನಗಳಿಂದ ಶರಣ್ ಬಂಧನ ಮಾಡುವುದಕ್ಕಾಗಿ ನಮ್ಮ ಪೊಲೀಸರು ಹಿಂದೆ ಬಿದ್ದಿದ್ದರು.ಮೂರು ದಿನಗಳ ಹಿಂದೆ ಕಾವೂರಿನಲ್ಲಿ ಅಪಾರ್ಟ್ಮೆಂಟ್ ನಲ್ಲಿದ್ದ ಮಾಹಿತಿ ಅರಿತು ಬಂಧನಕ್ಕೆ ಬಲೆ ಬೀಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಕಾರು ಹಾಯಿಸಿ ಪರಾರಿಯಾಗಿದ್ದ ಬಗ್ಗೆ ಕಾವೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಈ ನಡುವೆ, ಆತನಿಗೆ ಯಾರೆಲ್ಲ ಸಪೋರ್ಟ್ ಮಾಡಿದ್ದಾರೆಂದು ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಶರತ್ ಭಂಡಾರಿ, ಮಯೂರಿ, ನೀಲಾ ಮತ್ತಿತರರನ್ನು ವಶಕ್ಕೆ ಪಡೆದು ಮಾಹಿತಿ ಪಡೆಯಲಾಗಿತ್ತು. ಮಲ್ಪೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದಾನೆಂದು ಮಾಹಿತಿ ತಿಳಿದು ಇಂದು ಬೆಳಗ್ಗೆ ಸಿಸಿಬಿ ಎಸ್ಐ ಸುದೀಪ್ ಮತ್ತು ಶರಣಪ್ಪ ಅವರ ತಂಡ ಉಡುಪಿಗೆ ತೆರಳಿತ್ತು.ಪೊಲೀಸರು ಮಲ್ಪೆ ತಲುಪಿದಾಗ ಶರಣ್ ತಪ್ಪಿಸಿಕೊಂಡಿದ್ದ. ಆಶ್ರಯ ಕೊಟ್ಟಿದ್ದ ಮಂಜೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಿಳಿ ಐ20 ಕಾರಿನಲ್ಲಿ ಪರಾರಿಯಾಗಿರುವುದು ತಿಳಿದುಬಂದಿತ್ತು. ಟೋಲ್ ಗೇಟ್ ನಲ್ಲಿ ಚೆಕ್ ಮಾಡಿದಾಗ ಮಂಗಳೂರಿಗೆ ಬಂದಿರುವುದು ತಿಳಿದು ಪೊಲೀಸರು ಬೆನ್ನತ್ತಿ ಬಂದಿದ್ದರು. ಪಂಪ್ವೆಲ್ ನಲ್ಲಿ ಐ20 ಕಾರಿನಲ್ಲಿ ಒಬ್ಬಂಟಿಯಾಗಿ ಕಂಕನಾಡಿ ಕಡೆಗೆ ಎಸ್ಕೇಪ್ ಆಗಿರುವುದು ತಿಳಿದು ಚೇಸ್ ಮಾಡಲಾಗಿತ್ತು. ಜೆಪ್ಪು ಕುದ್ಪಾಡಿಯಲ್ಲಿ ನಮ್ಮ ಪೊಲೀಸ್ ತಂಡ ಖಾಸಗಿ ಕಾರಿನಲ್ಲಿ ಆತನನ್ನು ಅಡ್ಡಹಾಕಿತ್ತು. ಕುದ್ಪಾಡಿಯಲ್ಲಿ ಡೆಡ್ ಎಂಡ್ ಆಗಿದ್ದರಿಂದ ಯು ಟರ್ನ್ ಪಡೆಯುತ್ತಲೇ ಪೊಲೀಸರು ಸುತ್ತುವರಿದಿದ್ದಾರೆ. ಅಷ್ಟರಲ್ಲಿ ತನ್ನ ಕೈಲಿದ್ದ ಚೂರಿಯನ್ನು ತೋರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಮ್ಮ ತಂಡದ ಪ್ರಕಾಶ್ ಎಂಬ ಪೇದೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸಿಸಿಬಿ ಎಸ್ಐ ಸುದೀಪ್ ಅವರು ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಪ್ರಕಾಶ್ ಅವರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಶರಣ್ ಕಾಲಿಗೆ ಗಾಯಗೊಂಡಿದ್ದು ಅಪಾಯ ಏನೂ ಆಗಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.ಆಕಾಶಭವನ್ ಶರಣ್ ಮಂಗಳೂರಿನ ನಟೋರಿಯಸ್ ರೌಡಿಯಾಗಿದ್ದು, 25ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ. ಹಲವು ಕೇಸುಗಳಲ್ಲಿ ಅರೆಸ್ಟ್ ವಾರೆಂಟ್ ಇದ್ದರೂ ಒಂಟಿ ತೋಳದ ರೀತಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಸುಳ್ಯದ ಕೆವಿಜಿ ಆಡಳಿತಾಧಿಕಾರಿಯ ಕೊಲೆ ಪ್ರಕರಣದಲ್ಲಿ ಈತನ ಮೇಲಿನ ಆರೋಪ ಸಾಬೀತಾಗಿದ್ದು, ದೋಷಿಯೆಂದು ಕೋರ್ಟ್ ತೀರ್ಪು ನೀಡಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆಯಿಂದ ಪಾರಾಗಿದ್ದಾನೆ. ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಪರವಾಗಿ ಹಫ್ತಾ ವಸೂಲಿ ಮಾಡುತ್ತಿದ್ದಾನೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕಮಿಷನರ್ ಬಳಿ ಕೇಳಿದಾಗ, ಅಂಡರ್ ವರ್ಲ್ಡ್ ಸಂಪರ್ಕ ಇರುವ ಮಾಹಿತಿ ಇದೆ. ಆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಬೆಳಗಾವಿ : ಭೀಕರ ಅಪಘಾತದಲ್ಲಿ ಇಬ್ಬರು ಸಾವು; ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರ

Posted by Vidyamaana on 2023-06-17 08:05:29 |

Share: | | | | |


ಬೆಳಗಾವಿ : ಭೀಕರ ಅಪಘಾತದಲ್ಲಿ ಇಬ್ಬರು ಸಾವು; ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರ

ಬೆಳಗಾವಿ: ಕಾರು ಮತ್ತು ಕಂಟೇನರ್‌ಗಳ ಮಧ್ಯೆ ಭೀಕರ ಸರಣಿ ಅಪಘಾತದಲ್ಲಿಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ  ಗಂಭೀರ ಗಾಯಗಳಾಗಿವೆ. ಮೃತರಿಬ್ಬರೂ ಸ್ವಾಮೀಜಿಗಳ ಸೇವಕರಾಗಿದ್ದಾರೆ.

ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಮೀಜಿಗಳ ಕಾರು, ಕಂಟೇನರ್‌ ಮತ್ತು ಇತರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಸಹಾಯಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರು ತೀವ್ರ ಗಾಯಗಳೊಂದಿಗೆ ಪ್ರಾಣ ಕಳೆದುಕೊಂಡರು.

ಕೂಡಲೇ ಸ್ವಾಮೀಜಿ ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕರೆದೊಯ್ಯುವ ಕೆಲಸವನ್ನು ತ್ವರಿತಗೊಳಿಸಿದರು.

ಸ್ವಾಮೀಜಿಯವರ ಸೇವಕರಿಬ್ಬರ ಮೃತದೇಹಗಳನ್ನು ಬೀಮ್ಸ್‌ನ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತ ಸೇವಕರ ಹೆಸರು ಇನ್ನೂ ತಿಳಿದುಬಂದಿಲ್ಲ.

ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರು

ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಆಯೋಜನೆಗೊಂಡಿದ್ದ ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ಪ್ರತಿಭಟನೆ ಆಯೋಜನೆಯಾಗಿದೆ.

ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆಯೆಂದು ಹೇಳಿ ನಂಬಿಸಿ ವಂಚನೆ

Posted by Vidyamaana on 2023-10-30 08:01:08 |

Share: | | | | |


ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆಯೆಂದು ಹೇಳಿ ನಂಬಿಸಿ ವಂಚನೆ

ಬೆಂಗಳೂರು: ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ವಂಚಕರು ಆಕೆಯಿಂದಲೇ 13 ಲಕ್ಷ ರೂ. ಪೀಕಿಸಿದ ಘಟನೆ ನಡೆದಿದೆ. 


ಬೆಂಗಳೂರು ನಗರದ ವಿಕ್ಟೋರಿಯಾ ಲೇಔಟ್‌ ಪಾಮ್‌ಗ್ರೋವ್ ರಸ್ತೆಯ ನಿವಾಸಿ 62 ವರ್ಷದ ಪ್ರಿಯಾ (ಹೆಸರು ಬದಲಿಸಲಾಗಿದೆ) ವಂಚನೆಗೊಳಗಾದ ಮಹಿಳೆ. ಮಹಿಳೆ ಯಾವುದೇ ಪಾರ್ಸೆಲ್ ಕಳುಹಿಸದಿದ್ದರೂ, ನೀವು ಥಾಯ್ಲೆಂಡಿಗೆ ಪಾರ್ಸೆಲ್ ಮಾಡಿದ್ದೀರಿ ಎಂದು ಹೇಳಿ ಆಕೆಯ ಆಧಾರ್ ಕಾರ್ಡ್ ಸಂಖ್ಯೆ ತಿಳಿಸಿ ನಂಬಿಸಿ ಯಾಮಾರಿಸಿದ್ದಾರೆ. 


ಮುಂಬೈನ ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿ ಮಹಿಳೆಗೆ ದೂರವಾಣಿ ಕರೆ ಮಾಡಿದ್ದ ವಂಚಕರು, ಥಾಯ್ಲೆಂಡ್ಗೆ ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ 140 ಗ್ರಾಂ ಎಂಡಿಎಂ ಡ್ರಗ್ಸ್, ಎಂಟು ಪಾಸ್‌ಪೋರ್ಟ್‌ಗಳು ಮತ್ತು ಐದು ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಹಿಳೆ ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದಿದ್ದಾರೆ. ಆದರೆ, ವಂಚಕರು ಆಕೆಯನ್ನು ನಂಬಿಸಲು ಆಕೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಹೇಳಿದ್ದು ನಂಬಿಕೆ ಬರುವಂತೆ ಮಾಡಿದ್ದಾರೆ. 


ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಪಾರ್ಸೆಲ್ ಅನ್ನು ವಶಪಡಿಸಿದ್ದಾರೆ. ನಾವು ಕೂಡ ಮುಂಬೈ ಸೈಬರ್ ಕ್ರೈಮ್ ಪೊಲೀಸರನ್ನು ಸಂಪರ್ಕಿಸಿದ್ದೇವೆ ಎಂದು ಹೇಳಿ, ಆಕೆಯಲ್ಲಿ ಆತಂಕ ಹೆಚ್ಚಿಸಿದ್ದಾರೆ. ಅಲ್ಲದೆ, ಮಹಿಳೆಗೆ ಸ್ಕೈಪ್ ಡೌನ್ ಲೋಡ್ ಮಾಡುವಂತೆ ತಿಳಿಸಿ, ಕಸ್ಟಮ್ಸ್ ಕೇಸಿನಿಂದ ಪಾರಾಗಲು ವ್ಯವಸ್ಥೆ ಮಾಡುತ್ತೇವೆಂದು ಹೇಳಿ ವೈಯಕ್ತಿಕ ಮಾಹಿತಿಗಳನ್ನು ತಿಳಿಸುವಂತೆ ಲಿಂಕ್ ಕಳುಹಿಸಿದ್ದಾರೆ. ಬಳಿಕ ಬ್ಯಾಂಕ್ ಖಾತೆಯ ಸಂಖ್ಯೆ ನೀಡಿ, ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾರೆ.


ಇದನ್ನು ನಂಬಿದ ಮಹಿಳೆ ಮರುದಿನ ಬ್ಯಾಂಕ್ಗೆ ಹೋಗಿ ವಂಚಕರು ನೀಡಿದ್ದ ಬ್ಯಾಂಕ್ ಖಾತೆಯ ಸಂಖ್ಯೆಗೆ 13 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ಖಾತೆಗೆ ಹಣ ಬರುತ್ತಿದ್ದಂತೆಯೇ ವಂಚಕರು ತಮಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ನಾಶಪಡಿಸಿ ಸಂಪರ್ಕ ಕಡಿತಗೊಳಿಸಿದ್ದಾರೆ. ವಂಚನೆ ತಿಳಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.



Leave a Comment: