ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ಚಾರ್ಮಾಡಿ ಘಾಟಿಯಲ್ಲಿ ಬ್ಲಾಕ್ ನಲ್ಲಿ ಸಿಲುಕಿ ಗರ್ಭಿಣಿ ಪರದಾಟ

Posted by Vidyamaana on 2023-07-08 13:47:02 |

Share: | | | | |


ಚಾರ್ಮಾಡಿ ಘಾಟಿಯಲ್ಲಿ ಬ್ಲಾಕ್ ನಲ್ಲಿ ಸಿಲುಕಿ ಗರ್ಭಿಣಿ ಪರದಾಟ

   ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಅದರಲ್ಲಿ ಖಾಸಗಿ ವಾಹನದಲ್ಲಿ ಬಂದಿದ್ದ  ಧರ್ಮಸ್ಥಳದಿಂದ ಬೆಂಗಳೂರಿಗೆ ಸಾಗುತ್ತಿದ್ದ ಗರ್ಭಿಣಿ ಮಹಿಳೆ ಚೈತ್ರಾ ಎಂಬವರು ಹೆರಿಗೆ ನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಶುಕ್ರವಾರ ಚಾರ್ಮಾಡಿ ಘಾಟ್ ನಲ್ಲಿ ಗಂಟೆಗಟ್ಟಲೆ  ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅಸ್ವಸ್ಥತೆಗೊಂಡಿದ್ದರಿಂದ ಸ್ಥಳದಲ್ಲಿದ್ದ  ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಪ್ ಅವರು ಅವರ ಅಂಬುಲೆನ್ಸ್ ನಲ್ಲಿ ವಾಹನ ದಟ್ಟಣೆಯಲ್ಲೂ ಸೈರನ್ ಹಾಕಿ ಮೂಡಿಗೆರೆ ಆಸ್ಪತ್ರೆಗೆ ತಂದು ದಾಖಲು ಮಾಡಿದರು.ಇದರಿಂದ ಗರ್ಭಿಣಿ ಮಹಿಳೆಯನ್ನು ತುರ್ತು ಸಮಯದಲ್ಲಿ ಪ್ರಾಣ ಉಳಿಸಿದಂತಾಯಿತು ಎಂದು ಕುಟುಂಬದವರು ಆರೀಫ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಬೆಳ್ತಂಗಡಿ: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

Posted by Vidyamaana on 2023-09-22 21:09:47 |

Share: | | | | |


ಬೆಳ್ತಂಗಡಿ: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ತಾಲೂಕಿನ ಸೋಣಂದೂರಿನಲ್ಲಿ ನಡೆದಿದೆ.


ಸೋಣಂದೂರು ಮುಂಡಾಡಿ ಮನೆ ನಿವಾಸಿಯಾಗಿರುವ ಪ್ರಶಾಂತ್‌ ಮೃತಪಟ್ಟವರು.


ಪ್ರಶಾಂತ್‌ ಸೆ.18 ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಮನೆಯವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.


ಘಟನೆಯ ಬಗ್ಗೆ ಮೃತನ ಸಂಬಂಧಿಯಾಗಿರುವ ಪ್ರತೀಕ್‌ ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು : ಫೆ 29 ಮತ್ತು ಮಾ.01ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

Posted by Vidyamaana on 2024-02-27 12:04:37 |

Share: | | | | |


ಪುತ್ತೂರು : ಫೆ 29 ಮತ್ತು ಮಾ.01ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಪುತ್ತೂರು: ಫೆ.29 ಮತ್ತು ಮಾ.1ರಂದು ಪಡೀಲು, ಹಾರಾಡಿ,ಚಿಕ್ಕಮುಡ್ನೂರು    ಬನ್ನೂರು ವಠಾರಕ್ಕೆ ನಗರಭೆಯ ಕುಡಿಯುವ ನೀರು ಸರಬರಾಜು ಇರುವುದಿಲ್ಲ. ಪುತ್ತೂರು ನಗರಸಭೆಯ ನೀರು ಸರಬರಾಜು ನೆಕ್ಕಿಲಾಡಿ ಮೇಲ್ಮಟ್ಟದ ಸ್ಥಾವರದಲ್ಲಿ ಜಲಸಿರಿ ಟ್ರಾಂಚ್ -2 ನಲ್ಲಿ ಟ್ರಾನ್ಸ್ ಫಾರ್ಮ‌್ರಗಳ ಮತ್ತು ಪಂಪ್‌ಗಳ ಬದಲಾವಣೆ ಕಾರ್ಯನಿಮಿತ್ತ ನೀರಿನ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ವಿನಂತಿಸಿದ್ದಾರೆ.

ಸುಳ್ಯದ ಖ್ಯಾತ ಉದ್ಯಮಿ ಸೊಸೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತಿ ಅತ್ತೆ ಮಾವ ಸೇರಿ ಐವರ ಬಂಧನ

Posted by Vidyamaana on 2023-11-03 09:04:02 |

Share: | | | | |


ಸುಳ್ಯದ ಖ್ಯಾತ ಉದ್ಯಮಿ ಸೊಸೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತಿ ಅತ್ತೆ ಮಾವ ಸೇರಿ ಐವರ ಬಂಧನ

ಸುಳ್ಯ :ಸುಳ್ಯದ ಖ್ಯಾತ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ರಾಜೇಶ್, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ, ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.


ಕಳೆದ 5 ವರ್ಷಗಳ ಹಿಂದೆ ರಾಜೇಶ್ ಅವರನ್ನು ಐಶ್ವರ್ಯ ಮದುವೆಯಾಗಿದ್ದರು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದರು. ಪತಿ ರಾಜೇಶ್, ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕರಾಗಿದ್ದಾರೆ.ಇದೇ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣ್ಯ ಅವರ ತಂಗಿ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಆದರೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣ್ಯ ಅವರ ಕುಟುಂಬದಲ್ಲಿ ಕಲಹ ಇದ್ದಿದ್ದರಿಂದ ಅದನ್ನು ಮಗಳ ಮೇಲೆ ತೀರಿಸಿಕೊಂಡಿದ್ದರು ಎನ್ನಲಾಗಿದೆ.


ರವೀಂದ್ರ ಕುಟುಂಬ ಐಶ್ಯರ್ಯ ಚಾರಿತ್ರ್ಯವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ.ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.ಅಲ್ಲದೇ ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದರಂತೆ.ಎಲ್ಲಾ ಘಟನೆಗಳಿಂದ ಮನನೊಂದ ಐಶ್ವರ್ಯಾ, 20 ದಿನಗಳ ಹಿಂದೆ ತವರು ಸೇರಿದ್ದರು.


ಅ. 26 ರಂದು ಮನನೊಂದು ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದರು. ಘಟನೆ ಸಂಬಂಧ ಐಶ್ವರ್ಯಾಳ ತಾಯಿ,ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ,ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರುನೀಡಿದ್ದರು. ಅಲ್ಲದೇ ರವೀಂದ್ರ, ಗೀತಾ, ಶಾಲಿನ, ಓಂಪ್ರಕಾಶ್ಎಂಬುವವರ ಮೇಲೂ ದೂರು ದಾಖಲಿಸಿದ್ದರು.ಅದರಂತೆ ಐವರನ್ನು ಬಂಧಿಸಲಾಗಿದೆ.

ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

Posted by Vidyamaana on 2023-04-24 04:45:02 |

Share: | | | | |


ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಮನೆ ಸೇರಿದಂತೆ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದೆ.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ಟಿಕೆಟ್‌ ರಕ್ಷಿತ್ ಶಿವರಾಂ ಅವರಿಗೆ ಲಭಿಸುತ್ತಲೆ ರಾಜಕೀಯ ಓಡಾಟದಿಂದ ಹಿಂದೆ ಸರಿದಿದ್ದರು. ಇದೀಗ ಐಟಿ ದಾಳಿ ಶಾಕ್ ನೀಡಿದೆ.

ಸಾಮೂಹಿಕ ಪ್ರಾರ್ಥನೆಗೂ., ಸಂಘಟನೆಯ ಹೆಸರು ಉಲ್ಲೇಖಿಸಿ ಬಂದಿರುವ ವರದಿಗೂ ಸಂಬಂಧವಿಲ್ಲ ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ

Posted by Vidyamaana on 2024-02-03 04:46:16 |

Share: | | | | |


ಸಾಮೂಹಿಕ ಪ್ರಾರ್ಥನೆಗೂ., ಸಂಘಟನೆಯ ಹೆಸರು ಉಲ್ಲೇಖಿಸಿ ಬಂದಿರುವ ವರದಿಗೂ ಸಂಬಂಧವಿಲ್ಲ ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಫೆ.1 ರಂದು ನಡೆದ ಸಾಮೂಹಿಕ ಪ್ರಾರ್ಥನೆಗೂ ಸಂಘಟನೆಯ ಹೆಸರನ್ನು ಉಲ್ಲೇಖಿಸಿ ಪತ್ರಿಕಾ ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೂ ಸಂಬಂಧವಿಲ್ಲ ಎಂದು ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ ನೀಡಿದ್ದಾರೆಂದು ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ತಿಳಿಸಿದ್ದಾರೆ.


ಅಭಿಮಾನಿ ಬಳಗದ ಹೆಸರಿನಲ್ಲಿ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಕೆಲವೊಂದು ಸಭೆಗಳು ನಡೆದಿದೆ ಅನ್ನೋದು ಪತ್ರಿಕೆ-ಮಾಧ್ಯಮಗಳಲ್ಲಿ ಬಂದಿರುತ್ತದೆ. ಈ ಸಭೆಗೂ ಸಂಘಟನೆಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸಂಘಟನೆಯು ಸ್ಪಷ್ಟಪಡಿಸುತ್ತಿದೆ. ಮತ್ತು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೂ ಸಂಘಟನೆಯ ಹೆಸರನ್ನು ಉಲ್ಲೇಖಿಸಿ ಪತ್ರಿಕಾ-ಮಾಧ್ಯಮಗಳಲ್ಲಿ ವರದಿಗಳು ಬಂದಿರುವುದು ಸಂಘಟನೆಯ ಗಮನಕ್ಕೆ ಬಂದಿರುವುದರಿಂದ ಈ ಕಾರ್ಯಕ್ರಮಕ್ಕೂ ಸಂಘಟನೆಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.


ಅದೇ ರೀತಿ ಈಗಾಗಲೇ ಜಾಗರಣಾ ವೇದಿಕೆಯ ಹೊಸ ಸಂಘಟನಾ ವ್ಯವಸ್ಥೆಯಲ್ಲಿ ಪ್ರಾಂತ, ಜಿಲ್ಲೆ, ತಾಲೂಕು ಸಮಿತಿಗಳನ್ನು ರಚಿಸಲಾಗಿದೆ. (ಈ ಹಿಂದೆ ಇದ್ದ ವಲಯ, ಘಟಕಗಳನ್ನು ವಿಸರ್ಜಿಸಲಾಗಿದೆ) ಹಿಂದೂ ಜಾಗರಣ ವೇದಿಕೆಯು ಒಂದು ಆಂದೋಲನಾತ್ಮಕ ರೂಪದಲ್ಲಿ ಜಾಗೃತ, ಸಂಘಟಿತ, ಸುರಕ್ಷಿತ ಹಿಂದೂ ಸಮಾಜದ ನಿರ್ಮಾಣದ ಕಾರ್ಯಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಯಾಗಿರುತ್ತದೆ. ಕಾರ್ಯ ಮತ್ತು ಆಯಾಮಗಳ ಮೂಲಕ ಸಂಘಟನೆಯು ಹೊಸ ಸಂಘಟನಾ ವ್ಯವಸ್ಥೆಯಲ್ಲಿ ಕಾರ್ಯ ಚಟುವಟಿಕೆಯನ್ನು ಈಗಾಗಲೇ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.



Leave a Comment: