ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

Posted by Vidyamaana on 2024-06-24 14:11:13 |

Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ಪ್ರಮಾಣ ವಚನ ಸ್ವೀಕರಿಸಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಸಿಟಿ ರವಿ, ಕಿವಿ ಹಿಂಡಿ ಅಭಿನಂದಿಸಿದ ಸಿಎಂ!

ಬೆಂಗಳೂರು : ಕರ್ನಾಟಕದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪ್ರಮಾಣ ವಚನ (MLC Oath Ceremony) ಬೋಧಿಸಿದರು

ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್‌ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.

ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಸಾವು

Posted by Vidyamaana on 2024-04-22 08:58:47 |

Share: | | | | |


ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಸಾವು

ಕಾರವಾರ: ಮಕ್ಕಳು ಸೇರಿ ಒಂದೇ ಕುಟುಂಬದ ಆರು ಪ್ರವಾಸಿಗರು‌‌ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ನಡೆದಿದೆ.

40 ವರ್ಷದ ನಝೀರ್ ಅಹ್ಮದ್, 38 ವರ್ಷದ ರೇಷಾ ಉನ್ನಿಸಾ, 15 ವರ್ಷದ ಇಫ್ರಾ‌ ಅಹ್ಮದ್, 12 ವರ್ಷದ ಅಬೀದ್ ಅಹ್ಮದ್, 10 ವರ್ಷದ ಅಲ್ಛೀಯಾ ಅಹ್ಮದ್ ಮತ್ತು 6 ವರ್ಷದ ಮೋಹಿನ್ ಮೃತರು. ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳು.

ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜಿನ ವಾರ್ಷಿಕೋತ್ಸವ

Posted by Vidyamaana on 2022-11-17 12:35:37 |

Share: | | | | |


ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜಿನ ವಾರ್ಷಿಕೋತ್ಸವ

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಡೆಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹರಿಣಾಕ್ಷ ಕೆ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸದಸ್ಯ ಹಾಗೂ ಉದ್ಯಮಿ ವಿ.ಕೆ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿನಿಯರಿಗೆ ಕಲಿಕೆಯೊಂದಿಗೆ ಒಳ್ಳೆಯ ಗುಣಗಳನ್ನು ಮೈಗೊಡಿಸಿಕೊಳ್ಳಬೇಕೆಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ವಿಷ್ಣು ಭಟ್ ಮಾತನಾಡಿ, ಸಾಂಪ್ರದಾಯಿಕ ಆಚರಣೆಗಳ, ನೈತಿಕ ನೈರ್ಮಲ್ಯಗಳನ್ನು ವಿದ್ಯಾರ್ಥಿಗಳೆಲ್ಲರೂ ಅಳವಡಿಸಿಕೊಂಡು ಭವ್ಯ ಭಾರತವನ್ನು ಕಟ್ಟಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷೆ ದೀಕ್ಷಾ ಪೈ ಮತ್ತು ಸದಸ್ಯ ಚಂದ್ರಕಾಂತ ನಾಯಕ್ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಪ್ರಮೀಳ ಜೆಸ್ಸಿ ಕ್ರಾಸ್ತಾ ವರದಿ ವಾಚಿಸಿದರು. ಭೂಮಿಕ ಪ್ರಾರ್ಥಿಸಿದರು. ಉಪನ್ಯಾಸಕಿ ಚಿತ್ರಲೇಖಾ ಕೆ. ಸ್ವಾಗತಿಸಿದರು. ಅಶೋಕ ಪಿ. ವಂದಿಸಿದರು ಶೋಭಾ ಕೆ. ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಕೆ, ಗ್ರೀಷ್ಮಾ, ಧನ್ಯಶ್ರೀ ಪಿ. ಮತ್ತು ದಾಮೋದರ ವಿಜೇತರ ಪಟ್ಟಿ ವಾಚಿಸಿದರು. ಭೋಜರಾಜ ಆಚಾರಿ ಕೆ.ರವರು ದತ್ತಿ ನಿಧಿ ನಗದು ಬಹುಮಾನ ಪಡೆದ ವಿದ್ಯಾರ್ಥಿನಿಯರ ಪಟ್ಟಿ ವಾಚಿಸಿದರು.

ಮಣಿಪುರ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Posted by Vidyamaana on 2023-07-28 03:52:06 |

Share: | | | | |


ಮಣಿಪುರ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು, ಜುಲೈ 27: ಮಣಿಪುರದಲ್ಲಿ ಸರಣಿ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ, ಹತ್ಯಾಕಾಂಡ ವಿಚಾರದಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ಕೆಥೋಲಿಕ್ ಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೇರಿದ ಎರಡು ಸಾವಿರಾರು ಜನರು, ಬಿಜೆಪಿ ಸರಕಾರದ ಇಬ್ಬಗೆ ನೀತಿಯ ಬಗ್ಗೆ ಖಂಡನೆ, ಧಿಕ್ಕಾರ ಕೂಗಿದರು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಯ್ ಕ್ಯಾಸ್ಟಲಿನೋ, ಮಣಿಪುರದಲ್ಲಿ ಕುಕ್ಕಿ ಮತ್ತು ಮೈಥಿ ಸಮುದಾಯಗಳ ನಡುವೆ ಬಿಕ್ಕಟ್ಟು, ಕಲಹ 40 ವರ್ಷಗಳಿಂದಲೂ ನಡೀತಿದೆ. ಆದರೆ, ಅದನ್ನೀಗ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಮೊನ್ನೆ ಮಹಿಳೆಯರ ಬೆತ್ತಲೆ ಮೆರವಣಿಗೆ ಹೊರಬಂದಾಗ ಇಡೀ ದೇಶ ಕಂಬನಿ ಹಾಕಿತ್ತು. ಆದರೆ ಒಬ್ಬರು ಮಾತ್ರ ಕನಿಕರ ತೋರಲಿಲ್ಲ. ನಿರ್ಲಕ್ಷ್ಯ ನೋಡಿದರೆ, ಕ್ರೈಸ್ತರನ್ನು ಹೊರಗಟ್ಟುವ ಷಡ್ಯಂತ್ರ ಇರುವಂತೆ ಕಾಣುತ್ತಿದೆ. ಇಂಟರ್ನೆಟ್ ಬ್ಯಾನ್ ಮಾಡಿ, ಅಲ್ಲಿನ ಹೆಣ್ಮಕ್ಕಳ ಚಿತ್ರಹಿಂಸೆ, ಹತ್ಯೆ ಘಟನೆಗಳು ಹೊರಬರದಂತೆ ಮಾಡಿದ್ದಾರೆ. ಪ್ರಧಾನಿಯ 56 ಇಂಚಿನ ಎದೆಯ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ಮೊಸಳೆಯ ಫೋಟೋ ತೋರಿಸಿ ಅಣಕಿಸಿದೆ. ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಎನ್ನುವವರು ಮಣಿಪುರದಲ್ಲಿ ಯಾಕೆ ಮೂರು ತಿಂಗಳಿನಿಂದ ಗಲಭೆ ಹತ್ತಿಕ್ಕಲು ಸಾಧ್ಯವಾಗಿಲ್ಲ. 70 ದಿನಗಳ ಇಂಟರ್ನೆಟ್ ಸ್ಥಗಿತ ಕೊನೆಗೊಂಡಾಗಲೇ ಒಂದು ವಿಡಿಯೋ ಹೊರಬಂದಿತ್ತು. ಆ ವಿಡಿಯೋ ಉದ್ದೇಶಪೂರ್ವಕ ಹೊರಬಿಟ್ಟಿದ್ದು, ಇಡೀ ದೇಶದ ಜನರನ್ನು ಭಯ ಪಡಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.ಇದೇ ವೇಳೆ, ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, 56 ಇಂಚಿನ ಎದೆಗಾರರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಮಣಿಪುರದ ಜನರು ಊಟಕ್ಕಾಗಿ ಪರದಾಡುತ್ತಿದ್ದರೆ ಪ್ರಧಾನಿಯ ಮನಸ್ಸು ಕರಗಲಿಲ್ಲ. ಸಂಸತ್ತಿನಲ್ಲಿ ಹೇಳಿಕೆ ಕೊಡಿ ಎಂದರೂ, ನಿರ್ಲಕ್ಷ್ಯ ತೋರುತ್ತಾರೆ. ಇದರ ನಡುವೆ, ಮುಂದಿನ ಪ್ರಧಾನಿ ನಾನೇ ಎಂದು ಅಬ್ಬರಿಸುತ್ತಾರೆ. 2024ರಲ್ಲಿ ಜನರು ಈ ರೀತಿಯ ಫ್ಯಾಸಿಸ್ಟ್ ಸರಕಾರವನ್ನು ಬದಲಾಯಿಸಬೇಕು ಎಂದು ಹೇಳಿದರು.ಉಲೇಮಾ ಹಿಂದ್ ಸಂಘಟನೆಯ ಮಹಮ್ಮದ್ ದಾರಿಮಿ ಮಾತನಾಡಿ, ನಾವು ರಾಮಾಯಣ, ಮಹಾಭಾರತ ಓದಿಕೊಂಡು ಬೆಳೆದವರು. ದುಶ್ಶಾಸನ ದ್ರೌಪದಿಯ ಸೀರೆ ಎಳೆದಿದ್ದೇ ಮಹಾಭಾರತಕ್ಕೆ ಕಾರಣವಾಯಿತು. ಅದೇ ಕಾರಣಕ್ಕೆ ಶ್ರೀಕೃಷ್ಣ ಧರ್ಮದ ಪರವಾಗಿ ನಿಂತು ಅಧರ್ಮಿಗಳನ್ನು ವಧಿಸುವಂತೆ ಮಾಡಿದ. ರಾಮಾಯಣ, ಮಹಾಭಾರತ ಬರೀಯ ಹಿಂದುಗಳದ್ದಲ್ಲ. ಅದು ಈ ದೇಶದ ಅಸ್ಮಿತೆ. ನಾವೀಗ ಈ ದೇಶದ ನೈಜ ಹಿಂದುಗಳನ್ನು ಉಳಿಸುವುದಕ್ಕಾಗಿ ಹೋರಾಡಬೇಕಿದೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿರುವ ಹಿಂದುಗಳನ್ನು ಹಿಂದುತ್ವದ ಹೆಸರಲ್ಲಿ ವಿಭಜಿಸಲು, ಧ್ರುವೀಕರಣ ಮಾಡಲು ಹೊರಟಿದ್ದಾರೆ. ಕ್ರೈಸ್ತ, ಮುಸ್ಲಿಮರನ್ನು ಎತ್ತಿ ಕಟ್ಟಿ ಮತ ಗಳಿಸುತ್ತಿದ್ದಾರೆ. ನಾವೀಗ ಹಿಂದುಗಳ ಪರ ನಿಲ್ಲುವ ಅವಶ್ಯಕತೆಯಿದೆ. ನೈಜ ಹಿಂದು ಯಾವತ್ತೂ ಕೇಡು ಬಗೆಯಲ್ಲ. ಉದಾರಿ ವ್ಯಕ್ತಿತ್ವದವರು ಎಂದು ಹೇಳಿದರು.ಪ್ರತಿಭಟನಾ ಸಭೆಯಲ್ಲಿ ಮಣಿಪುರದ ಜನರು ನಮ್ಮವರೇ, ಅವರೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಕೂಗಿದರು. ಅಲ್ಲದೆ, ನೂರಾರು ಪ್ಲೇಕಾರ್ಡ್ ಹಿಡಿದು ಮಣಿಪುರದ ಪರವಾಗಿ ಘೋಷಣೆ ಕೂಗಿದರು. ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಿಂದಲೂ ಧರ್ಮಗುರು ಸಹಿತ ಭಗಿನಿಯರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದ್ದರು.

ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಸುರಕ್ಷಾ ಆತ್ಮಹತ್ಯೆ

Posted by Vidyamaana on 2023-09-30 12:45:02 |

Share: | | | | |


ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಸುರಕ್ಷಾ ಆತ್ಮಹತ್ಯೆ

ಚಿಕ್ಕಮಗಳೂರು: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಾವರಿ ಎಂಬ ಗ್ರಾಮದಲ್ಲಿ ನಡೆದಿದೆ.



ಶೃಂಗೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸುರಕ್ಷಾ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು.

ಸುರಕ್ಷಾ ಗಣೇಶ ಹಬ್ಬಕ್ಕೆಂದು ಮನೆಗೆ ತೆರಳಿದ್ದಾಗ, ಪೋಷಕರು ಹಲವು ವಿಷಯದಲ್ಲಿ ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಲ್ ಝೋನ್ ಗ್ರೇಟ್ ಫೆಸ್ಟಿವಲ್ ಸೇಲ್ ನಲ್ಲಿ ಗಮನ ಸೆಳೆಯುವ ಆಫರ್ ಗಳು

Posted by Vidyamaana on 2023-09-19 17:28:51 |

Share: | | | | |


ಸೆಲ್ ಝೋನ್ ಗ್ರೇಟ್ ಫೆಸ್ಟಿವಲ್ ಸೇಲ್ ನಲ್ಲಿ ಗಮನ ಸೆಳೆಯುವ ಆಫರ್  ಗಳು

ಪುತ್ತೂರು: ಮೊಬೈಲ್ ಕ್ಷೇತ್ರದಲ್ಲಿ 2003ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸೆಲ್ ಝೋನ್ ಇದೀಗ ಗ್ರೇಟ್ ಫೆಸ್ಟಿವಲ್ ಸೇಲ್ ಅನ್ನು ಗ್ರಾಹಕರ ಮುಂದಿಟ್ಟಿದೆ.

ಗ್ರೇಟ್ ಫೆಸ್ಟಿವಲ್ ಸೇಲ್’ನಲ್ಲಿ ಗ್ರೇಟ್ ಎಕ್ಸ್’ಚೇಂಜ್ ಆಫರನ್ನು ಜನತೆಯ ಮುಂದಿಡಲಾಗಿದೆ. ಮುನ್ನಡೆಯಿರಿ ಹೊಸ ತಂತ್ರಜ್ಞಾನದೆಡೆಗೆ 5ಜಿ ಫೋನಿಗೆ ಅಪ್’ಗ್ರೇಡ್ ಆಗಿರಿ ಎನ್ನುವ ಸಂದೇಶದೊಂದಿಗೆ ತಂತ್ರಜ್ಞಾನದ ಪ್ರಸ್ತುತತೆಯನ್ನು ಗ್ರಾಹಕರಿಗೆ ನೀಡುವ ಕಾಯಕವೂ ಇಲ್ಲಿ ಆಗುತ್ತಿದೆ.

ಇದರೊಂದಿಗೆ, ಸ್ಮಾರ್ಟ್ ಫೋನ್ ಖರೀದಿಸಿದರೆ, ಹೀರೋ ಬೈಕ್ ಸಹಿತ ಹತ್ತು ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಲಾಗಿದೆ. ನಿಮ್ಮ ಬಜೆಟಿಗೆ ಫಿಟ್ ಆಗೋ ಸುಲಭ ಕಂತುಗಳೊಂದಿಗೆ ಆಕ್ಸೆಸರೀಸ್ ಮೇಲೆ ಶೇ. 50ರಷ್ಟು ಆಫ್ ಕೊಡಲಾಗಿದೆ. ಪ್ರತಿ ಖರೀದಿಗೂ ಖಚಿತ ಉಡುಗೊರೆಯನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಈ ಗ್ರೇಟ್ ಫೆಸ್ಟಿವಲ್ ಸೇಲ್’ನ ಇನ್ನೊಂದು ವಿಶೇಷವೇನೆಂದರೆ, ಮಲ್ಟಿ ಬ್ರಾಂಡ್ ಸ್ಮಾರ್ಟ್ ವಾಚ್’ಗಳ ಎಕ್ಸ್’ಕ್ಲೂಸಿವ್ ಸಂಗ್ರಹ ಎಂದು ಸೆಲ್ ಝೋನ್ ಪ್ರಕಟಣೆ ತಿಳಿಸಿದೆ.



Leave a Comment: