ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಈದ್ ಶುಭಾಶಯ

Posted by Vidyamaana on 2024-04-11 15:51:49 |

Share: | | | | |


ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಈದ್ ಶುಭಾಶಯ

ನವದೆಹಲಿ : ದೇಶದ ಅನೇಕ ಭಾಗಗಳಲ್ಲಿ ಕಂಡುಬರುವ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿದ್ದು, ನಾಳೆ ದೇಶಾದ್ಯಂತ ಆಡಂಬರದಿಂದ ಈದ್ ಆಚರಿಸಲಾಗುವುದು. ಸಧ್ಯ ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ.ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ಈದ್-ಉಲ್-ಫಿತರ್ ಶುಭಾಶಯಗಳು

ಚಿಕ್ಕಮಗಳೂರು :ಬ್ಯಾಂಕ್ ಸಿಬಂದಿಗಳಿಂದಲೇ ಬ್ಯಾಂಕ್‌ ಗೆ ಕೋಟ್ಯಂತರ ರೂ. ಮೋಸ

Posted by Vidyamaana on 2023-12-01 08:57:16 |

Share: | | | | |


ಚಿಕ್ಕಮಗಳೂರು :ಬ್ಯಾಂಕ್ ಸಿಬಂದಿಗಳಿಂದಲೇ ಬ್ಯಾಂಕ್‌ ಗೆ  ಕೋಟ್ಯಂತರ ರೂ. ಮೋಸ

ಚಿಕ್ಕಮಗಳೂರು: ಬ್ಯಾಂಕ್ ಸಿಬಂದಿಗಳೇ ಬ್ಯಾಂಕ್‌ಗೆ ದೋಖಾ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಂಕ್ ಸಿಬಂದಿಗಳು ಬ್ಯಾಂಕ್‌ನಲ್ಲಿ ಗ್ರಾಹಕರು ಇರಿಸಿದ್ದ ಚಿನ್ನ ಮತ್ತು ಎಫ್‌ಡಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು ನಕಲಿ ಚಿನ್ನದ ಮೇಲೆ ಲೋನ್ ಮಾಡಿ ಹಣ ದುರುಪಯೋಗಪಡಿಸಿಕೊಂಡಿದ್ದು ಇದರಿಂದ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಗ್ರಾಹಕರು ಇರಿಸಿದ್ದ ಚಿನ್ನವನ್ನು ಮಾರಾಟ ಮಾಡಿ ಆ ಜಾಗದಲ್ಲಿ ನಕಲಿ ಚಿನ್ನವನ್ನು ಇರಿಸಲಾಗಿದೆ. ಹಾಗೂ ಎಫ್‌ಡಿ ಹಣವನ್ನು ಡ್ರಾ ಮಾಡಿಕೊಂಡು ಗ್ರಾಹಕರಿಗೆ ಬ್ಯಾಂಕ್ ಸಿಬಂದಿಗಳು ವಂಚಿಸಿದ್ದಾರೆ.


ಬೆಂಗಳೂರಿನ ಬ್ಯಾಂಕ್ ಅಧಿಕಾರಿಗಳು ಈ ಸಂಬಂಧ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಹಕರು ಬ್ಯಾಂಕ್‌ನಲ್ಲಿ ಇರಿಸಿದ್ದ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಆ ಜಾಗದಲ್ಲಿ ಇರಿಸಲಾಗಿದ್ದು, 141 ಚಿನ್ನದ ಪ್ಯಾಕೇಟ್‌ಗಳಲ್ಲಿ 140 ಪ್ಯಾಕೇಟ್‌ಗಳಲ್ಲಿ ನಕಲಿ ಚಿನ್ನವನ್ನು ಇರಿಸಿರು ವುದು ಪರಿಶೀಲನೆ ವೇಳೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿದು ಬಂದಿದೆ.


ಬ್ಯಾಂಕ್ ಸಿಬಂದಿಗಳು ಕೋಟ್ಯಂತರ ರೂ. ಬ್ಯಾಂಕ್‌ಗೆ ಮೋಸ ಮಾಡಿದ್ದು, ಈ ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಸಿಬಂದಿಗಳಾದ ಶಾಖೆಯ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್, ನಾರಾಯಣಸ್ವಾಮಿ, ಲಾವಣ್ಯ, ಶ್ವೇತಾ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಮ್ಯಾನೇಜರ್ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದು, ತನಿಖೆಯಿಂದ ಇನಷ್ಟು ಮಾಹಿತಿ ಬಹಿರಂಗಗೊಳ್ಳಬೇಕಿದೆ.

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್

Posted by Vidyamaana on 2023-12-20 17:11:58 |

Share: | | | | |


ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಮೆಷಿನ್ ಅಯತಪ್ಪಿ ಕೆಳಗೆ ಬುದ್ದಿದ್ದು.ಚಾಲನ ಸ್ಥಿತಿಯಲ್ಲಿದ್ದ ಮೆಷಿನಿನ ಗರಗಸ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ಡಿ. 20 ರಂದು ನಡೆದಿದೆ.



ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ಎಂಬಲ್ಲಿ ತನ್ನ ಮನೆಯ ಬಳಿ ಡಿ.19 ರಂದು ಬೆಳಗ್ಗೆ 11:30 ರ ಸಮಯಕ್ಕೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ಜೊತೆ ಮರ ಕಡಿಯುವ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುವ ಸಮಯದಲ್ಲಿ ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಿಷಿನ್ ಜೊತೆಗೆ ಹಿಡಿತ ತಪ್ಪಿ ನೆಲಕ್ಕೆ ಬಿದ್ದಾಗ ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಯ ಬಳಿ ತಾಗಿ, ತೀವ್ರ ರಕ್ತ ಗಾಯಗಳಾಗಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ತಕ್ಷಣ ಮೂಡಬಿದ್ರೆ ಆಳ್ವಾಸ್  ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದಾಗ ಚಿಕಿತ್ಸೆ ಫಲಿಸದೆ ಪ್ರಶಾಂತ್ ಪೂಜಾರಿ (36) ಎಂಬವರು ಡಿ.20ರಂದು(ಇಂದು) ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಹೋದರ ಪ್ರಮೋದ್ (33) ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಡಬ ಠಾಣಾ ಎಸ್‌ಐ ಆಂಜನೇಯ ರೆಡ್ಡಿ ದಿಢೀರ್ ವರ್ಗಾವಣೆ

Posted by Vidyamaana on 2023-08-30 11:11:11 |

Share: | | | | |


ಕಡಬ ಠಾಣಾ ಎಸ್‌ಐ ಆಂಜನೇಯ ರೆಡ್ಡಿ ದಿಢೀರ್ ವರ್ಗಾವಣೆ

ಕಡಬ : ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಆಂಜನೇಯ ರೆಡ್ಡಿಯವರನ್ನು ವರ್ಗಾಯಿಸಲಾಗಿದ್ದು, ನೂತನ ಸಬ್ ಇನ್ಸ್‌ಪೆಕ್ಟರ್ ಆಗಿ ಅಭಿನಂದನ್ ಎಂ.ಎಸ್. ಅವರನ್ನು ನೇಮಿಸಲಾಗಿದೆ.

ಇಂದು ಮಹತ್ವಾಕಾಂಕ್ಷಿ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ; ಏನಿದು ಸ್ಕೀಮ್.? ಯಾರಿಗೆ ಲಾಭ.? ಡಿಟೈಲ್ಸ್ ಇಲ್ಲಿದೆ

Posted by Vidyamaana on 2023-09-17 08:19:37 |

Share: | | | | |


ಇಂದು ಮಹತ್ವಾಕಾಂಕ್ಷಿ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ; ಏನಿದು ಸ್ಕೀಮ್.? ಯಾರಿಗೆ ಲಾಭ.? ಡಿಟೈಲ್ಸ್ ಇಲ್ಲಿದೆ

ನವದೆಹಲಿ : ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಯೋಜನೆಯನ್ನ ತರಲಿದೆ. ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವ್ರು ಕೆಂಪು ಕೋಟೆಯಲ್ಲಿ ಘೋಷಿಸಿದ ವಿಶ್ವಕರ್ಮ ಯೋಜನೆಗೆ ಇಂದು (ಸೆಪ್ಟೆಂಬರ್ 17) ಚಾಲನೆ ನೀಡಲಿದ್ದಾರೆ.ಇಂದು ವಿಶ್ವಕರ್ಮ ಜಯಂತಿಯಿದ್ದು, ಇದೇ ದಿನ ಕೇಂದ್ರ ಸರ್ಕಾರ ಈ ಹೊಸ ಯೋಜನೆ ತರುತ್ತಿದೆ. ಅಂದ್ಹಾಗೆ, ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನವು ಕೂಡ ಅನ್ನೋದು ಗಮನಾರ್ಹ.

Read more...

ವಿಶ್ವಕರ್ಮ ಮಹೋತ್ಸವ ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ

https://vidyamaana.com/news/vishwakarma-mahotsava-grand-Vishwakarma-vehicle-procession

30 ಲಕ್ಷ ಕುಟುಂಬಗಳಿಗೆ ಲಾಭ.

ವಿಶ್ವಕರ್ಮ ಯೋಜನೆ ಆನ್‌ಲೈನ್‌ನಲ್ಲಿ ಅರ್ಜಿ : ವಿಶ್ವಕರ್ಮ ಯೋಜನೆ ಮೂಲಕ ಕೇಂದ್ರ ಸರ್ಕಾರ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನ ಉತ್ತೇಜಿಸಲು ಆರ್ಥಿಕ ನೆರವು ನೀಡುತ್ತದೆ. ಸರಳ ಷರತ್ತುಗಳೊಂದಿಗೆ ಅರ್ಹ ಕರಕುಶಲಕರ್ಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಕೇಂದ್ರದ ಪ್ರಕಾರ ವಿಶ್ವಕರ್ಮ ಯೋಜನೆಯಿಂದ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ.2 ಲಕ್ಷದವರೆಗಿನ ಸಾಲ.!

ವಿಶ್ವಕರ್ಮ ಯೋಜನೆ ಪ್ರಯೋಜನಗಳು : ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳ ಆಧಾರದ ಮೇಲೆ, ಆಯಾ ವರ್ಗಗಳಿಂದ ವಿಶ್ವಕರ್ಮ ಯೋಜನೆಗೆ ಅರ್ಹ ವ್ಯಕ್ತಿಗಳನ್ನ ಗುರುತಿಸಲಾಗುತ್ತದೆ. ಮೊದಲ ಕಂತಿನಲ್ಲಿ ಶೇ.5ರ ಸಬ್ಸಿಡಿ ಬಡ್ಡಿಯೊಂದಿಗೆ 1 ಲಕ್ಷ ರೂಪಾಯಿ ಸಾಲದ ನೆರವು ಮಂಜೂರು ಮಾಡಲಾಗುವುದು. ಬಳಿಕ ಎರಡನೇ ಕಂತಿನಲ್ಲಿ 2 ಲಕ್ಷ ರೂಪಾಯಿ ಸಾಲ ನೀಡಲಾಗುತ್ತದೆ. ಕುಶಲಕರ್ಮಿಗಳು ತಮ್ಮ ಕೌಶಲ್ಯ, ಟೂಲ್ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ನವೀಕರಿಸಲು ಈ ಸಾಲಗಳನ್ನ ಮಂಜೂರು ಮಾಡಲಾಗಿದೆ.


ದಿನಕ್ಕೆ 500 ರೂಪಾಯಿಯೊಂದಿಗೆ ತರಬೇತಿ..!

ವಿಶ್ವಕರ್ಮ ಯೋಜನೆ ಮೂಲಕ ಎರಡು ರೀತಿಯ ಕೌಶಲ್ಯ ಕಾರ್ಯಕ್ರಮಗಳಿವೆ. ಬೇಸಿಕ್ ಮತ್ತು ಅಡ್ವಾನ್ಸ್ಡ್ ಇವೆ. ತರಬೇತಿ ಪಡೆಯುತ್ತಿರುವಾಗ ಫಲಾನುಭವಿಗಳಿಗೆ ಕೇಂದ್ರವು ದಿನಕ್ಕೆ 500 ರೂಪಾಯಿ ಸ್ಟೈಫಂಡ್ ನೀಡುತ್ತದೆ. ಇದು ಸುಧಾರಿತ ಉಪಕರಣಗಳನ್ನ ಖರೀದಿಸಲು ಹಣಕಾಸಿನ ನೆರವು ನೀಡುತ್ತದೆ.


ಅಗತ್ಯ ದಾಖಲೆಗಳು.!

ಆಧಾರ್ ಕಾರ್ಡ್, ಗುರುತಿನ ಚೀಟಿ, ವಿಳಾಸ ದಾಖಲೆ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪಾಸ್‌ಬುಕ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಗತ್ಯವಿದೆ.


ವಿಶ್ವಕರ್ಮ ಯೋಜನೆ ಅರ್ಹತೆ.!

ಬಡಿಗೇರರು, ದೋಣಿ ತಯಾರಕರು, ಆಯುಧ ತಯಾರಕರು, ಕಮ್ಮಾರರು, ಕಬ್ಬಿಣದ ಉಪಕರಣ ತಯಾರಕರು, ಬೀಗದ ಕೆಲಸಗಾರರು, ಅಕ್ಕಸಾಲಿಗರು, ಕುಂಬಾರರು (ಮಡಕೆ ತಯಾರಕರು), ವಿಗ್ರಹ ತಯಾರಕರು (ಮೂರ್ತಿಕರ್, ಕಲ್ಲು ಕೆತ್ತುವವರು, ಕಲ್ಲು ಒಡೆಯುವವರು), ಚರ್ಮಕಾರರು (ಶೂ ತಯಾರಕರು), ಮೇಸ್ತ್ರಿಗಳು, ಬುಟ್ಟಿ/ ಚಾಪೆ/ಬ್ರೂಮ್ ತಯಾರಕರು/ಲಿನಿನ್ ತಯಾರಕರು, ಸಾಂಪ್ರದಾಯಿಕ ಆಟಿಕೆ ತಯಾರಕರು, ಕ್ಷೌರಿಕರು, ಹೂವಿನ ಹಾರ ತಯಾರಕರು, ಟ್ಯಾನರ್‌ಗಳು, ಟೈಲರ್ಗಳು, ಮೀನು ಬಲೆ ತಯಾರಕರು ಅರ್ಹರು.


ವಿಶ್ವಕರ್ಮ ಯೋಜನೆಗೆ ಮೋದಿ ಚಾಲನೆ : ಇತ್ತೀಚೆಗಷ್ಟೇ ಕೇಂದ್ರ ಕ್ಯಾಬಿನೆಟ್ ಕೂಡ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಕೇಂದ್ರದಿಂದ 15 ಸಾವಿರ ಕೋಟಿ ಮಂಜೂರು ಮಾಡಿದೆ. ಸಾಂಪ್ರದಾಯಿಕ ಕರಕುಶಲ ಕೌಶಲ್ಯಗಳನ್ನ ಉತ್ತೇಜಿಸುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿಯೇ ಈ ಯೋಜನೆಯನ್ನ ಪರಿಚಯಿಸಲಾಗುತ್ತಿದೆ. ವಿಶ್ವಕರ್ಮ ಜಯಂತಿಯಂದು ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. 70 ಕ್ಷೇತ್ರಗಳ 70 ಸಚಿವರು ಇದರಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ

Posted by Vidyamaana on 2024-02-26 21:08:26 |

Share: | | | | |


ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ

ಬೆಂಗಳೂರು (ಫೆ.26): ಹಣಕ್ಕಾಗಿ ವೃದ್ಧೆಯೊಬ್ಬರ ಕೈ, ಕಾಲು ಕತ್ತರಿಸಿ ಭೀಕರವಾಗಿ ಕೊಂದು ಬಳಿಕ ಡ್ರಮ್‌ನಲ್ಲಿ ಮೃತದೇಹವನ್ನು ತುಂಬಿ ಬೀದಿಗೆ ಬಿಸಾಡಿ ಮೃತರ ಪರಿಚಿತರೇ ಪರಾರಿ ಆಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೆ.ಆರ್‌.ಪುರ ಸಮೀಪದ ನಿಸರ್ಗ ಲೇಔಟ್‌ ನಿವಾಸಿ ಸುಶೀಲಮ್ಮ (76) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪರಿಚಿತ ದಿನೇಶ್ ಹಾಗೂ ಆತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ನಿಸರ್ಗ ಲೇಔಟ್‌ನ ಮನೆಗಳ ಓಣಿಯಲ್ಲಿ ಎರಡು ದಿನಗಳಿಂದ ಅನಾಥವಾಗಿ 10 ಲೀಟರ್‌ ಸಾಮರ್ಥ್ಯದ ಡ್ರಮ್‌ ಇಟ್ಟಿರುವುದನ್ನು ಭಾನುವಾರ ಗಮನಿಸಿದ ಸ್ಥಳೀಯರು, ಶಂಕೆ ಮೇರೆಗೆ ಆ ಡ್ರಮ್‌ ಅನ್ನು ಬಳಿ ತೆರಳಿ ನೋಡಿದಾಗ ಅದರೊಳಗೆ ಸುಶೀಲಮ್ಮ ಅವರ ಮೃತದೇಹ ಕಂಡು ಬಂದಿದೆ. ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಕೊಲೆ ಹಿಂದೆ ಪರಿಚಿತರ ಕೈವಾಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಿಜೆಪಿ ಕಾರ್ಯಕರ್ತೆ:


ಚಿಕ್ಕಬಳ್ಳಾಪುರ ಜಿಲ್ಲೆಯ ಮೃತ ಸುಶೀಲಮ್ಮ ಅವರು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ ಮನೆ ಬೋಗ್ಯಕ್ಕೆ ಪಡೆದು ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು. ಅದೇ ಕಟ್ಟಡದಲ್ಲಿ ಅವರ ಕಿರಿಯ ಪುತ್ರಿ ಮತ್ತು ಮಗಳು ಹಾಗೂ ಅಜ್ಜಿ ಮನೆ ಸಮೀಪದಲ್ಲೇ ಅವರ ಮಗ ಕೂಡ ವಾಸವಾಗಿದ್ದರು. ಪ್ರತಿ ತಿಂಗಳು ತಾಯಿಗೆ ₹2-3 ಸಾವಿರವನ್ನು ಪುತ್ರ ನೀಡುತ್ತಿದ್ದರು.


ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಸುಶೀಲಮ್ಮ ಅವರು, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಆಗ ಅವರಿಗೆ ದಿನೇಶ್ ಎಂಬಾತನ ಪರಿಚಯವಾಗಿದ್ದು, ಆಗಾಗ್ಗೆ ಅಜ್ಜಿಗೆ ಮನೆಗೆ ಬಂದು ಹೋಗುವುದನ್ನು ಆತ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.ಈ ಹತ್ಯೆಗೆ ನಿಖರವಾಗಿ ಕಾರಣ ಗೊತ್ತಾಗಿಲ್ಲ. ಹಣಕ್ಕಾಗಿ ದಿನೇಶ್ ಕೃತ್ಯ ಎಸಗಿರಬಹುದು ಎಂದು ಶಂಕೆ ಇದೆ. ಮನೆಯಲ್ಲಿ ಅಜ್ಜಿ ಜತೆ ದಿನೇಶ್ ಮಾತನಾಡುತ್ತ ನಿಂತಿರುವುದನ್ನು ಮೃತರ ಮೊಮ್ಮಗಳು ನೋಡಿದ್ದಳು. ಇದಾದ ಬಳಿಕ ಅಜ್ಜಿ ಹತ್ಯೆಯಾಗಿದೆ. ಹೀಗಾಗಿ ದಿನೇಶ್ ಮೇಲೆ ಅನುಮಾನ ಹೆಚ್ಚಿದ್ದು, ಕೃತ್ಯ ಬೆಳಕಿಗೆ ಬಂದ ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಮನೆ ಹಿಂಬದಿ ಓಣಿಯಲ್ಲಿ ಶವವಿದ್ದ ಡ್ರಮ್‌ ಪತ್ತೆಮನೆಯಲ್ಲಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಡ್ರಮ್‌ನಲ್ಲಿ ತುಂಬಿ ಮನೆ ಹಿಂಬದಿಯ ಓಣಿಯಲ್ಲಿ ಮೃತದೇಹ ತುಂಬಿದ್ದ ಡ್ರಮ್ಮನ್ನು ಇಟ್ಟು ಪರಾರಿಯಾಗಿದ್ದರು. ಈ ಹತ್ಯೆ ಕೃತ್ಯ ಶುಕ್ರವಾರ ರಾತ್ರಿ ನಡೆದಿರಬಹುದು. ಕೆಲವು ಬಾರಿ ಎರಡ್ಮೂರು ದಿನಗಳು ಅಜ್ಜಿ ಯಾರಿಗೂ ತಿಳಿಸದೆ ಹೊರ ಹೋಗುತ್ತಿದ್ದರು. ಹೀಗಾಗಿ ಎರಡು ದಿನಗಳಿಂದ ಮನೆ ಬಳಿ ಕಾಣದೆ ಹೋದಾಗ ಮೃತರ ಮಗಳು ಹಾಗೂ ಮೊಮ್ಮಗಳಿಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಹತ್ಯೆಕೃತ್ಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Leave a Comment: