ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಶೋಭಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ BSY ಹೇಳಿಕೆಗೆ CT ರವಿ ತಿರುಗೇಟು

Posted by Vidyamaana on 2024-02-27 04:40:39 |

Share: | | | | |


ಶೋಭಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ BSY ಹೇಳಿಕೆಗೆ CT ರವಿ ತಿರುಗೇಟು

ಬೆಂಗಳೂರು : ಲೋಕಸಭೆ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿಯ ಮಾಜಿ ಸಚಿವ ಸಿ ಟಿ ರವಿ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು ನಿನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶೋಭಾ ಅಭಿರುದ್ಧ ವ್ಯವಸ್ಥಿತವಾದಂತ ಪಿತೂರಿ ಹಾಗೂ ಗಡ್ಯಂತರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದರು.ಈ ಒಂದು ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇದೀಗ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು ಬಾಸ್ ಇಸ್ ಆಲ್ವೇಸ್ ರೈಟ್ ಎಂದು ಹೇಳುವ ಮೂಲಕ ತಿರುಗೇಟನ್ನು ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು ಹೀಗಾಗಿ ಬಾಸ್ ಇಸ್ ಆಲ್ವೇಸ್ ರೈಟ್ ಎಂದು ಸಿಟಿ ರವಿ ಕುಟಕಿದ್ದಾರೆ.


ನಾನು ಟಿಕೆಟ್ ಕೇಳಿಲ್ಲ ಅಂತ ಹತ್ತಾರು ಬಾರಿ ಹೇಳಿದ್ದೇನೆ.ನನಗೆ ಗೊತ್ತಿರುವುದು ಪಕ್ಷನಿಷ್ಠೆ ಪರಿಶ್ರಮ ಮಾತ್ರ. ನಮ್ಮ ಗುರಿ ಒಂದೇ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕೆಂಬುವುದು. ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿ ವರ್ತನೆ ಮಾಡುವವರಿಗೆ ಅದು ಅನ್ವಯವಾಗುತ್ತದೆ.ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿದರು.

ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

Posted by Vidyamaana on 2023-04-24 04:45:02 |

Share: | | | | |


ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಮನೆ ಸೇರಿದಂತೆ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದೆ.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ಟಿಕೆಟ್‌ ರಕ್ಷಿತ್ ಶಿವರಾಂ ಅವರಿಗೆ ಲಭಿಸುತ್ತಲೆ ರಾಜಕೀಯ ಓಡಾಟದಿಂದ ಹಿಂದೆ ಸರಿದಿದ್ದರು. ಇದೀಗ ಐಟಿ ದಾಳಿ ಶಾಕ್ ನೀಡಿದೆ.

ಪುತ್ತೂರು ನಗರದ ರಕ್ಷಣೆಗೆ ಆರಕ್ಷಕ ಸಿಬ್ಬಂದಿ ಗಳ ಕೊರತೆ

Posted by Vidyamaana on 2023-09-08 21:29:28 |

Share: | | | | |


ಪುತ್ತೂರು ನಗರದ ರಕ್ಷಣೆಗೆ ಆರಕ್ಷಕ ಸಿಬ್ಬಂದಿ ಗಳ ಕೊರತೆ

ಪುತ್ತೂರು: ಸರಣಿ ಅಪರಾಧ ಪ್ರಕರಣಗಳು, ಬೆಚ್ಚಿಬೀಳಿಸುವ ದರೋಡೆಯಂತಹ ಪ್ರಕರಣಗಳು, ಬೆನ್ನುಬೆನ್ನಿಗೇ ಸಾಲಾಗಿ ನಿಂತಿರುವ ಹಬ್ಬಗಳು... ಸೂಕ್ಷ್ಮ ಪ್ರದೇಶಗಳಲ್ಲಿ ಮೊದಲ ಸಾಲಿನಲ್ಲಿ ಗುರುತಿಸಿಕೊಂಡಿದೆ ಪುತ್ತೂರು. ಹಾಗಾಗಿ ಆರಕ್ಷಕ ಸಿಬ್ಬಂದಿ ಅಥವಾ ಪೊಲೀಸ್ ವ್ಯವಸ್ಥೆ ಸರ್ವಸನ್ನದ್ಧ ವಾಗಿ ಇರಬೇಕತ್ತು. ಆದರೆ ಹಾಗಿಲ್ಲ ಎನ್ನುವುದೇ ಇಲ್ಲಿನ ವಾಸ್ತವ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮುಖ್ಯ ಹುದ್ದೆಯಾದ ಪಿ.ಎಸ್.ಐ (ಸಬ್ ಇನ್ಸ್‌ಪೆಕ್ಟರ್) ಹುದ್ದೆಯೇ ಖಾಲಿ ಇರುವುದು ದುರಂತವೇ ಸರಿ.

ಪುತ್ತೂರು ನಗರ ಠಾಣೆಯಲ್ಲಿ ಒಟ್ಟು 4 ಹುದ್ದೆಗಳಿದ್ದು, ಅದರಲ್ಲಿ 3 ಹುದ್ದೆಗಳು ಖಾಲಿಯಾಗಿವೆ. ಅಂದರೆ ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ.

ಪಿ.ಎಸ್.ಐ. ಶ್ರೀಕಾಂತ್ ರಾಥೋಡ್ ಅವರ ವರ್ಗಾವಣೆ ಬಳಿಕ ಕಾನೂನು ಸುವ್ಯವಸ್ಥೆಯ ಹುದ್ದೆಯೂ ತೆರವಾಗಿದ್ದು, ಖಾಲಿ ಇರುವ ಹುದ್ದೆಗಳ ಜವಾಬ್ದಾರಿಯೆಲ್ಲಾ ಪೊಲೀಸ್ ನಿರೀಕ್ಷಕ (ಇನ್ಸ್‌ಪೆಕ್ಟರ್)ರ ಮೇಲೆ ಬಿದ್ದಿದೆ‌.

ಇದನ್ನು ಕಳ್ಳರು ಗಮನಿಸಿದಂತಿದೆಯೋ ಏನೋ!? ಪುತ್ತೂರೇ ಬೆಚ್ಚಿಬೀಳಿಸುವಂತಹ ಘಟನೆಗಳು ಒಂದರ ಬೆನ್ನಿಗೆ ಇನ್ನೊಂದರಂತೆ ಬಂದೆರಗುತ್ತಿದೆ. ಸರಣಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳ ಕೊರತೆ ಇದ್ದು, ಕೃತ್ಯ ಘಟಿಸಿದ ಬಳಿಕವಷ್ಟೇ ಕ್ರಮ ಕೈಗೊಳ್ಳುವ ಭರವಸೆ ನೀಡುವಂತಾಗಿದೆ. ಶಾಸಕರೂ ಇದರ ಬಗ್ಗೆ ಮುತುವರ್ಜಿ ವಹಿಸಿ, ತಕ್ಷಣ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನಹರಿಸುವ ಜರೂರತ್ತು ಇದೆ.


ವಾರದೊಳಗೆ ಭರ್ತಿ: ಶಾಸಕ ಅಶೋಕ್ ರೈ

ಪಿ.ಎಸ್.ಐ. ಹುದ್ದೆ ಖಾಲಿ ಆಗಿರುವ ಬಗ್ಗೆ ಮಾಹಿತಿ ಇದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಪೊಲೀಸ್ ಅಧಿಕಾರಿಗಳು ಬರಲು ಕೇಳುವುದೇ ಇಲ್ಲ. ಹಾಗಾಗಿ ಪೊಲೀಸ್ ಠಾಣೆಯ ಪ್ರಮುಖ ಹುದ್ದೆಗಳೆಲ್ಲ ಖಾಲಿಯಾಗಿವೆ. ವಾರದೊಳಗೆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

- ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ..ಸುಳ್ಳುಗಳಿಗೆ ದಾಳವಾಗಬೇಡಿ; ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Posted by Vidyamaana on 2023-07-27 16:32:20 |

Share: | | | | |


ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ..ಸುಳ್ಳುಗಳಿಗೆ ದಾಳವಾಗಬೇಡಿ; ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಒತ್ತಡಗಳ ನಡುವೆಯೂ ನಾನು ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಗುರುವಾರ ಜು 27 ರಂದು ಅರಮನೆ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಧ್ಯಕ್ಷತೆವಹಿಸಿ ಮಾತನಡಿದ ಅವರು, ಸರಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಜತೆಗೆ, ಶಾಸಕರಲ್ಲಿ ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ಸಲಹೆ ನೀಡಿದರು.


ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರವನ್ನು ತಮ್ಮದಲ್ಲ ಎಂದು ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾಗಿದೆ. ವಿಪರ್ಯಾಸ ಅಂದರೆ ಸತ್ಯ ಏನು ಎಂದು ಗೊತ್ತಾಗುವುದರೊಳಗೆ ಅವರು ಸುಳ್ಳನ್ನು ವ್ಯಾಪಕವಾಗಿಹರಡಿದ್ದಾರೆ ಎಂದ ಅವರು, ಕರ್ನಾಟಕ ರಾಜ್ಯದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ನೀಡಿರುವ ತೀರ್ಪು ಇಡೀ ದೇಶದ ರಾಜಕಾರಣಕ್ಕೆ ಗೇಮ್ ಚೇಂಜರ್ ಎನ್ನುವ ವಿಶ್ಲೇಷಣೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ. ಹೀಗಾಗಿ ಸುಳ್ಳಿನ ಸರಮಾಲೆಗಳ ಮೂಲಕ ಅವರು ಐದು ಗ್ಯಾರಂಟಿಗಳ ಯಶಸ್ಸು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಈ ಬಗ್ಗೆ ಪ್ರತಿಯೊಬ್ಬ ಶಾಸಕರೂ ಎಚ್ಚರದ ಸ್ಥಿತಿಯಲ್ಲಿದ್ದು ಅವರ ಸುಳ್ಳುಗಳಿಗೆ ನೀವೂ ದಾಳ ಆಗಬೇಡಿ ಎಂದು ಸಿದ್ದರಾಮಯ್ಯ ಎಚ್ಚರಿಸಿದರುಬಿಜೆಪಿ ಸುಳ್ಳಿನ ಕಾರ್ಖಾನೆ: ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ತಮ್ಮ ಸುಳ್ಳಿನ ಪರಿವಾರದ ಮೂಲಕ ಹರಡಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದ ಅವರು, ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳನ್ನು ಸೃಷ್ಟಿಸಿ, ಅದನ್ನು ಸತ್ಯ ಎನ್ನುವಂತೆ ಬಿಂಬಿಸುತ್ತಾರೆ. ಇದಕ್ಕಾಗಿ ಅವರು ವಿಪರೀತ ಖರ್ಚು ಮಾಡುತ್ತಾರೆ. ಇದನ್ನೆಲ್ಲಾ ನಾವು ಸರಿಯಾಗಿ ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕೆಂದು ಅವರು ಹೇಳಿದರು.


ಹೊಸ ಸರಕಾರ ಬಂದ ಬಳಿಕ ನಮ್ಮಎದುರಿಗೆ ತಕ್ಷಣಕ್ಕೆ ರಾಜ್ಯದ ಆರ್ಥಿಕತೆಯನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇತ್ತು. ಜತೆಗೆ ಆಯವ್ಯಯ ರೂಪಿಸುವ ಹೊಣೆಗಾರಿಕೆಯೂ ಇತ್ತು. ಹಾಗೂ ಹೊಸ ಸರ್ಕಾರವಾದ್ದರಿಂದ ಜಂಟಿ ಅಧಿವೇಶನವನ್ನೂ ಕರೆಯಬೇಕಿತ್ತು. ಹೊಸ ಶಾಸಕರಿಗೂ ತಮ್ಮ ಅಭಿಪ್ರಾಯ, ನಿಲುವನ್ನು ವ್ಯಕ್ತಪಡಿಸಲು ಅವಕಾಶ ಆಗಬೇಕು ಎನ್ನುವ ಕಾರಣದಿಂದ ಮೂರು ವಾರ ಮೊದಲ ಅಧಿವೇಶನವನ್ನು ನಡೆಸಿದೆವು ಎಂದರು.

ಮಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ 3 ಕೋ.ರೂ. ವಂಚನೆ ಆರೋಪ - ದೂರು

Posted by Vidyamaana on 2023-02-04 04:00:56 |

Share: | | | | |


ಮಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ 3 ಕೋ.ರೂ. ವಂಚನೆ ಆರೋಪ - ದೂರು

ಮಂಗಳೂರು.ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆಂದು ಹೂಡಿಕೆ ಮಾಡಿಸಿಕೊಂಡು 3 ಕೋ.ರೂ. ವಂಚಿಸಿರುವ ಬಗ್ಗೆ ಕಣ್ಣೂರು ಬೋರುಗುಡ್ಡೆಯ ನಿವಾಸಿಯೊಬ್ಬರು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮುಹಮ್ಮದ್ ಶಫದ್ ಸಿ.ಕೆ. ಮತ್ತು ಮುಹಮ್ಮದ್ ಅಫೀದ್ ಸಿ.ಕೆ. ಆರೋಪಿಗಳು.

   ದೂರುದಾರ ಕಣ್ಣೂರು ಬೋರುಗುಡ್ಡೆಯ ದೂರುದಾರ ವ್ಯಕ್ತಿಯ ಬಳಿ ಪರಿಚಯದ ಮುಹಮ್ಮದ್ ಶಫದ್ ಎಂಬಾತ 2020ರ ಜನವರಿಯ ಮೊದಲ ವಾರದಲ್ಲಿ ತಾನು ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಸಂಪಾದಿಸಿದ್ದು, ಯಾರಾದರೂ ಒಳ್ಳೆಯ ಹೂಡಿಕೆದಾರರು ಇದ್ದರೆ ತಿಳಿಸಿ ಎಂದಿದ್ದ ಎನ್ನಲಾಗಿದೆ. ಅದರಂತೆ ದೂರುದಾರರು ಮುಹಮ್ಮದ್ ಶಫದ್‌ನನ್ನು ಭೇಟಿಯಾಗಿದ್ದು, ಆವಾಗ ಆತ ಲ್ಯಾಪ್‌ಟಾಪ್‌ನಲ್ಲಿ ಕ್ರಿಪ್ಟೋ ವ್ಯವಹಾರದ ಮಾಹಿತಿ ನೀಡುತ್ತಾ ತಿಂಗಳಿಗೆ ಶೇ.25 ಲಾಭಾಂಶ ನೀಡುವುದಾಗಿ ತಿಳಿಸಿದ್ದ ಎಂದು ಹೇಳಲಾಗಿದೆ.

ಜನವರಿ 3ನೇ ವಾರದಲ್ಲಿ ಮುಹಮ್ಮದ್ ಶಫದ್ ಮತ್ತು ಆತನ ತಮ್ಮ ಮುಹಮ್ಮದ್ ಅಫೀದ್ ದೂರುದಾರರ ಮನೆಗೆ ಭೇಟಿ ನೀಡಿದಾಗ ತಾನು 35 ಲಕ್ಷ ರೂ. ನಗದನ್ನು ಆರೋಪಿ ಸಹೋದರರಿಗೆ ನೀಡಿದ್ದೆ ಎಂದು ದೂರಿನಲ್ಲಿ ತಿಳಿಸಲಾಗಿದೆ

ಒಂದು ತಿಂಗಳ ಬಳಿಕ ಮುಹಮ್ಮದ್ ಶಫದ್ ವಾಟ್ಸಪ್ ಮೂಲಕ ದೂರುದಾರರಿಗೆ ಒಂದು ತಿಂಗಳ 8.75 ಲಕ್ಷ ರೂ. ಲಾಭಾಂಶ ಬಂದಿರುವುದಾಗಿ ಕ್ರಿಪ್ಟೋ ಕರೆನ್ಸಿಯ ಅಕೌಂಟ್ ತೋರಿಸಿದ್ದ. ಕೋವಿಡ್ ಕಾರಣದಿಂದ ಲಾಭಾಂಶ ವಿಳಂಬವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಪ್‌ಡೇಟ್ ಆಗುತ್ತದೆ ಎಂದು ನಂಬಿಸಿದ್ದ. ಬಳಿಕ ಮತ್ತೆ ಕರೆ ಮಾಡಿ ಲಾಭಾಂಶದ ಬಗ್ಗೆ ನಂಬಿಸಿದ್ದ ಎನ್ನಲಾಗಿದೆ.

ಜಾಸ್ಮಿನ್ ಹಂಝ ಎಂಬವರ ಹೆಸರು ಸೂಚಿಸಿ ಅವರ ಮೂಲಕ ದೂರುದಾರರಿಂದ 7 ಲ.ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದ. ದೂರುದಾರರು ತನ್ನ ಸ್ನೇಹಿತರಿಂದ ಸಂಗ್ರಹಿಸಿ ಆರೋಪಿಗಳಿಗೆ 3 ಕೋ.ರೂ. ನೀಡಿದ್ದು, ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಆರೋಪಿಸಲಾಗಿದೆ.

2022ರಲ್ಲಿ ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಮುಹಮ್ಮದ್ ಶಫದ್ ಮತ್ತು ಮುಹಮ್ಮದ್ ಅಫೀದ್ ಭಾಗಿಯಾಗಿರುವ ಮಾಹಿತಿ ತನಗೆ ಸಿಕ್ಕಿದ್ದು, ಆ ಹಿನ್ನೆಲೆಯಲ್ಲಿ ಆರೋಪಿಗಳಾದ ಮುಹಮ್ಮದ್ ಶಫದ್ ಸಿ.ಕೆ, ಮುಹಮ್ಮದ್ ಅಫೀದ್ ಸಿ.ಕೆ., ಸಾದಿಕ್, ಜಾಸ್ಮಿನ್, ಮುಹಮ್ಮದ್ ಬಶೀರ್ ವಿರುದ್ಧ ನೀಡಿದ್ದ ದೂರಿನಂತೆ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆಲ್ಯಡ್ಕ ಮುಳುಗು ಸೇತುವೆ ದುರಸ್ತಿ ಕಾರ್ಯ – ಬೇರೆ ಮಾರ್ಗದಲ್ಲಿ ಸಂಚರಿಸಲು ಸೂಚನೆ

Posted by Vidyamaana on 2023-10-27 07:27:10 |

Share: | | | | |


ಚೆಲ್ಯಡ್ಕ ಮುಳುಗು ಸೇತುವೆ ದುರಸ್ತಿ ಕಾರ್ಯ – ಬೇರೆ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಪುತ್ತೂರು : ತಾಲೂಕಿನ ಮುಳುಗು ಸೇತುವೆಗಳಲ್ಲಿ ಒಂದಾದ ಚೆಲ್ಯಡ್ಕ ಮುಳುಗು ಸೇತುವೆಯ ಅಪ್ರೋಚ್‌ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಬೇಕಾಗಿರುವುದರಿಂದ ಅ.27 ರಿಂದ ನ. 6ರ ವರೆಗೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ.


ಆರ್ಯಾಪು ಗ್ರಾಮದ ಒಳತ್ತಡ್ಕ-ದೇವಸ್ಯದಿಂದ ಬೆಟ್ಟಂಪಾಡಿ-ಪಾಣಾಜೆ ಮೂಲಕ ಕೇರಳ ಪ್ರವೇಶಿಸುವ ವಾಹನಗಳು ಬದಲಿ ರಸ್ತೆಯಾಗಿ ದೇವಸ್ಯ- ಬೈರೋಡಿ-ಕಾಪಿಕಾಡು-ಕೈಕಾರ ಮಾರ್ಗವಾಗಿ ವಾಹನಗಳು ಚಲಿಸುವಂತೆ ಸೂಚನೆ ನೀಡಲಾಗಿದೆ.



Leave a Comment: