ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇಮಕ

Posted by Vidyamaana on 2023-02-05 03:16:52 |

Share: | | | | |


ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇಮಕ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿಯಾಗಿ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿರುವ ಬೆನ್ನಲೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯಾಗಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.

ಧರ್ಮೇಂದ್ರ ಪ್ರಧಾನ್ ಅವರನ್ನು ಉಸ್ತುವಾರಿಯಾಗಿ ಹಾಗೂ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ಅವರನ್ನು ಸಹ-ಪ್ರಭಾರಿಯಾಗಿ ಬಿಜೆಪಿ ನೇಮಕ ಮಾಡಲಾಗಿದೆ.

ಕೆ.ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇದರಿಂದ ಅವರಿಗೆ ಕರ್ನಾಟಕದ ಬಗ್ಗೆ ಸರಿಯಾಗಿ xತಿಳಿದಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಪರ್ಲಡ್ಕ : ಮಿನಿ ಪಿಕಪ್ ಗೆ ಆಕ್ಟಿವಾ ಡಿಕ್ಕಿ

Posted by Vidyamaana on 2023-11-24 04:43:28 |

Share: | | | | |


ಪರ್ಲಡ್ಕ : ಮಿನಿ ಪಿಕಪ್ ಗೆ ಆಕ್ಟಿವಾ ಡಿಕ್ಕಿ

ಪುತ್ತೂರು: ಪರ್ಲಡ್ಕ ಜಂಕ್ಷನ್ ನಲ್ಲಿ ರಿಕ್ಷಾವನ್ನು ಹಿಂದಿಕ್ಕಲು ಹೋದ ದ್ವಿಚಕ್ರ ವಾಹನವೊಂದು ಪಿಕಪ್  ಗೆ ಡಿಕ್ಕಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪರ್ಲಡ್ಕದಲ್ಲಿ ನ 23 ರಂದು ನಡೆದಿದೆ. ಡಿಕ್ಕಿಯಾದ ರಬಸಕ್ಕೆ   ದ್ವಿಚಕ್ರವಾಹನ ಛಿದ್ರವಾಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾರೆ.


ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಹೋದ ನಿಸಾನ್ ಕಾರಿಗೆ ಪೊಲೀಸರು ಲಾಕ್ ಹಾಕಿದ್ದು, ಇದನ್ನು ತಪ್ಪಿಸಲು ರಿಕ್ಷಾ ಹೋಗಿದ್ದು, ಈ ಸಂದರ್ಭ ಹಿಂಭಾಗದಿಂದ ಬರುತ್ತಿದ್ದ ದ್ವಿಚಕ್ರವಾಹನ ರಸ್ತೆಯ ಬಲ ಬದಿಗೆ ಬಂದಿದೆ. ಇದರಿಂದ ಮಡಿಕೇರಿ ಭಾಗದಿಂದ ಬರುತ್ತಿದ್ದ ಮಿನಿ ಪಿಕಪ್ ಗೆ ಡಿಕ್ಕಿಯಾಗಿದೆ.

ಸಂಜೀವ ಮಠಂದೂರಿಗೆ ಪುತ್ತೂರು ಮಂಡಲ ಅಧ್ಯಕ್ಷ ಪಟ್ಟ

Posted by Vidyamaana on 2024-02-05 13:20:13 |

Share: | | | | |


ಸಂಜೀವ ಮಠಂದೂರಿಗೆ ಪುತ್ತೂರು ಮಂಡಲ ಅಧ್ಯಕ್ಷ ಪಟ್ಟ

ಪುತ್ತೂರು: ಪುತ್ತೂರಿನ ಮಾಜಿ ಶಾಸಕ ಸಂಜೀವ


ಮಠಂದೂರು ಅವರನ್ನು ಪುತ್ತೂರು ಮಂಡಲದ ಅಧ್ಯಕ್ಷರನ್ನಾಗಿ ನೇಮಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ಹರಿದಾಡುತ್ತಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಅವರ ಸಹಿ ಇರುವ ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆ ಲೆಟರ್‌ಹೆಡ್‌ನ ಈ ಪಟ್ಟಿಯಲ್ಲಿ ಸಂಜೀವ ಮಠಂದೂರು ಅವರನ್ನು ಪುತ್ತೂರು ಮಂಡಲ ಅಧ್ಯಕ್ಷರಾಗಿ ನೇಮಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದು ನಕಲಿ ಪತ್ರ ಎಂದು ಹೇಳಲಾಗಿದೆ. ಈ ಕುರಿತು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ರವರು ಪತ್ರ ಮತ್ತು ಪಟ್ಟಿಯ ಬಗ್ಗೆ ಸ್ಪಷ್ಟನೆ ನೀಡಿದ್ದು ಇದೊಂದು ನಕಲಿ ಪಟ್ಟಿ ಎಂದು ಸ್ಪಷ್ಟಪಡಿಸಿದ್ದಾರೆ.

BREAKING:ಪೇಟಿಎಂ SVP ಪ್ರವೀಣ್‌ ಶರ್ಮಾ ರಾಜೀನಾಮೆ

Posted by Vidyamaana on 2024-03-24 13:47:23 |

Share: | | | | |


BREAKING:ಪೇಟಿಎಂ SVP ಪ್ರವೀಣ್‌ ಶರ್ಮಾ ರಾಜೀನಾಮೆ

ನವದೆಹಲಿ:ಪೇಟಿಎಂ ಬ್ರಾಂಡ್ನ ಮಾಲೀಕತ್ವ ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ (ಒಸಿಎಲ್) ಶನಿವಾರ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ, ವ್ಯವಹಾರದ ಹಿರಿಯ ಉಪಾಧ್ಯಕ್ಷ ಪ್ರವೀಣ್ ಶರ್ಮಾ ಮಾರ್ಚ್ 23 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಔಪಚಾರಿಕವಾಗಿ ಘೋಷಿಸಿದೆ.ಶರ್ಮಾ ತಮ್ಮ ವೃತ್ತಿಪರ ಪ್ರಯಾಣದ ಮುಂದಿನ ಹಂತದಲ್ಲಿ ಅವಕಾಶಗಳನ್ನು ಹುಡುಕಲು ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪೇಟಿಎಂಗೆ ಸೇರುವ ಮೊದಲು, ಶರ್ಮಾ ಭಾರತ ಮತ್ತು ಎಪಿಎಸಿ ಪ್ರದೇಶವನ್ನು ಒಳಗೊಂಡ ಗೂಗಲ್ನಲ್ಲಿ ನಾಯಕತ್ವದ ಹುದ್ದೆಗಳಲ್ಲಿ ಒಂಬತ್ತು ವರ್ಷಗಳನ್ನು ಕಳೆದರು.

ಇತ್ತೀಚಿನ ಊಹಾಪೋಹಗಳಿಗೆ ಉತ್ತರಿಸಿದ ಪೇಟಿಎಂ, ನಿರ್ದಿಷ್ಟ ವ್ಯವಹಾರ ವಿಭಾಗಗಳಲ್ಲಿ 25-50 ಪ್ರತಿಶತದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವ ವರದಿಗಳನ್ನು ಬಲವಾಗಿ ನಿರಾಕರಿಸಿದೆ.

ಇಂತಹ ವರದಿಗಳು ಆಧಾರರಹಿತ ಮತ್ತು ಕಂಪನಿಯ ಕಾರ್ಯಾಚರಣೆ ಮತ್ತು ಕಾರ್ಯತಂತ್ರದ ಯೋಜನೆಯನ್ನು ತಪ್ಪಾಗಿ ಪ್ರತಿನಿಧಿಸುತ್ತವೆ ಎಂದು ಪೇಟಿಎಂ ತನ್ನ ಫೈಲಿಂಗ್ನಲ್ಲಿ ತಿಳಿಸಿದೆ.ಫೈಲಿಂಗ್ ಪ್ರಕಾರ, ಪೇಟಿಎಂ ಪ್ರಸ್ತುತ ತನ್ನ ವಾರ್ಷಿಕ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿದೆ, ಇದು ತಂಡದ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ಮತ್ತು ಹೆಚ್ಚಿಸುವ ಗುರಿಯನ್ನು ಹೊಂದಿರುವ ವಾಡಿಕೆಯ ಸಾಂಸ್ಥಿಕ ಅಭ್ಯಾಸವಾಗಿದೆ. ಕಾರ್ಯಕ್ಷಮತೆಯ ಮೌಲ್ಯಮಾಪನಗಳು ಮತ್ತು ಪಾತ್ರ ಜೋಡಣೆಗಳ ಮೇಲೆ ಕೇಂದ್ರೀಕರಿಸಿದ ಈ ಪ್ರಕ್ರಿಯೆಯು ಕೈಗಾರಿಕೆಗಳಾದ್ಯಂತ ಪ್ರಮಾಣಿತವಾಗಿದೆ ಮತ್ತು ವಜಾಗಳನ್ನು ಸೂಚಿಸುವುದಿಲ್ಲ.

ಕಂಪನಿಯು ತನ್ನ ಪುನರ್ರಚನೆ ಪ್ರಯತ್ನಗಳು ಮತ್ತು ಕಾರ್ಯಕ್ಷಮತೆಗೆ ಸಂಬಂಧಿಸಿದ ಹೊಂದಾಣಿಕೆಗಳನ್ನು ವಜಾಗೊಳಿಸುವಿಕೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಪೇಟಿಎಂ ಬೆಳೆಯಲು ತನ್ನ ಬದ್ಧತೆಯನ್ನು ಭರವಸೆ ನೀಡುತ್ತದೆ ಎಂದು ಫೈಲಿಂಗ್ ಹೇಳುತ್ತದೆ.

ಶಾಸಕರ ಇಂದಿನ ಕಾರ್ಯಕ್ರಮ ಜು 15

Posted by Vidyamaana on 2023-07-15 01:36:27 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 15

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 15 ರಂದು.

ಬೆಳಿಗ್ಗೆ 10 ಗ್ರಾಪಂ ಉಪ ಚುನಾವಣೆಗೆ ಸಂಬಧಿಸಿದಂತೆ ನಿಡ್ಪಳ್ಳಿಯಲ್ಲಿ ಸಭೆ, ಬಳಿಕ ಆರ್ಯಾಪಿನಲ್ಲಿ ಸಭೆ 

ಉಳಿದಂತೆ ಖಾಸಗಿ ಕಾರ್ಯಕ್ರಮ

ಕೈ ಹಿಡಿತಾರಾ ಡಿವಿಎಸ್? ಮಾ.19ರಂದು ಮಹತ್ವದ ಸುದ್ದಿಗೋಷ್ಠಿ

Posted by Vidyamaana on 2024-03-18 12:12:08 |

Share: | | | | |


ಕೈ ಹಿಡಿತಾರಾ ಡಿವಿಎಸ್? ಮಾ.19ರಂದು ಮಹತ್ವದ ಸುದ್ದಿಗೋಷ್ಠಿ

ಬೆಂಗಳೂರು :ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ನಾಳೆ ಮಹತ್ವದ ಸುದ್ದಿಗೋಷ್ಠಿಯೊಂದನ್ನು ಕರೆದಿದ್ದು, ಬಹಳ ಕುತೂಹಲವನ್ನು ಉಂಟುಮಾಡಿದ್ದಾರೆ.ಲೋಕಸಭೆ ಚುನಾವಣೆ ಸಮಯಲ್ಲಿ ಡಿವಿ ಸದಾನಂದ ಗೌಡ ಅವರು ಸುದ್ದಿಗೋಷ್ಠಿಯನ್ನು ಕರೆದಿದ್ದು, ಇವರ ಮುಂದಿನ ನಡೆ ಏನು? ಯಾವ ಕಾರಣಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದೆ ಎಂಬ ಕುತೂಹಲ ಮೂಡಿದೆ. ನಾಳೆ ಬೆಳಗ್ಗೆ 10.30 ಕ್ಕೆ ಡಿವಿಎಸ್‌ ಸುದ್ದಿಗೋಷ್ಠಿ ಕರೆದಿದ್ದಾರೆ.ಬಿಜೆಪಿ ಹೈಕಮಾಂಡ್‌ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡಿದ್ದು, ಇತ್ತೀಚೆಗೆ ಶೋಭಾ ಅವರು ಡಿವಿಎಸ್‌ ಅವರ ಆಶೀರ್ವಾದ ಕೂಡಾ ಪಡೆದುಕೊಂಡಿದ್ದರು. ಅನಂತರ ಡಿವಿಎಸ್‌ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದವರಿಗೆ ಪೋಸ್ಟ್‌ವೊಂದನ್ನು ಮಾಡಿ, ಧನ್ಯವಾದ ಹೇಳಿಕೊಂಡಿದ್ದರು.


ಲೋಕಸಭಾ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ನಿನ್ನೆ ಬಂದು ಭೇಟಿ ಮಾಡಿದ್ದಾರೆ. ಚರ್ಚೆ ಮಾಡಿ ಆಫರ್‌ ಕೂಡಾ ನೀಡಿದ್ದಾರೆ. ಈ ಕುರಿತು ನನ್ನ ಮನೆಯವರೊಂದಿಗೆ ಮಾತನಾಡುವೆ. ನಂತರ ನಾಳೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಸಂಸದ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.


ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ ಸುದ್ದಿಗೋಷ್ಟಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ,ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ.. ತಿಳಿದೂ ಹೀಗೆ ಮಾಡಿರೋದು ಬೇಜಾರು ತಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸದಾನಂದಗೌಡ ಸೋಮವಾರ (ಇಂದು) ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಹೇಳಿದರು



Leave a Comment: