ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಎಡ್ವರ್ಡ್ ನೇಮಕ

Posted by Vidyamaana on 2024-03-28 20:08:33 |

Share: | | | | |


ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಎಡ್ವರ್ಡ್ ನೇಮಕ

ಪುತ್ತೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಯುಐ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಎಡ್ವರ್ಡ್ ಪುತ್ತೂರುರವರನ್ನು ಆಯ್ಕೆ ಮಾಡಲಾಗಿದೆ. ಎನ್‌ಎಸ್‌ಯುಐ ಜಿಲ್ಲಾ ಉಸ್ತುವಾರಿಗಳಾದ ಝಕೀರ್ ಹುಸೈನ್ ಮತ್ತು ಭರತ್ ರಾಮ್ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎಡ್ವರ್ಡ್‌ರವರು ಪ್ರಸ್ತುತ ಪುತ್ತೂರಿನ ಸರಕಾರಿ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು NSUI ವಿದ್ಯಾರ್ಥಿ ಸಂಘಟನೆಯಲ್ಲಿ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಮ್ಮಿನಡ್ಕ ನಿವಾಸಿ ಮಿಂಗಲ್ ಡಿಸೋಜ ಮತ್ತು ಗ್ರೇಸಿ ಡಿಸೋಜ ದಂಪತಿಯ ಪುತ್ರ.

ಛೆ.. ಎಂಥಾ ಅವಸ್ಥೆ.. ನಿಮ್ಮ ಜೊತೆ- ನಿಮ್ಮ ಕಷ್ಟಕ್ಕೆ ನಾನಿದ್ದೇನೆ

Posted by Vidyamaana on 2023-08-26 16:08:11 |

Share: | | | | |


ಛೆ.. ಎಂಥಾ ಅವಸ್ಥೆ.. ನಿಮ್ಮ ಜೊತೆ- ನಿಮ್ಮ ಕಷ್ಟಕ್ಕೆ ನಾನಿದ್ದೇನೆ

ಪುತ್ತೂರು:ದುಷ್ಕರ್ಮಿಯಿಂದ ಕೊಲೆಯಾದ ಅಳಿಕೆ ಕುದ್ದುಪದವು ನಿವಾಸಿ ಗೌರಿ ಮನೆಗೆ ಆ. ೨೬ ರಂದು ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅತ್ಯಂತ ಕಡುಬಡತನದಲ್ಲಿ ಕಾಲ ಕಳೆಯುತ್ತಿರುವ ಮೃತ ಗೌರಿ ತಾಯಿಯ ಕಷ್ಟ ಕಂಡು ಶಾಸಕರು ಮರುಗಿದರು. ಗೌರಿ ತಾಯಿಯ ಜೊತೆ ಮಾತನಾಡುವ ವೇಳೆ ಶಾಸಕರಲ್ಲಿ ತನ್ನ ಕುಟುಂಬದ ಸಂಕಷ್ಟವನ್ನು ವಿವರಿಸುವ ವೇಳೆ ನನ್ನ ಸಹೋದರಿ ಅಂಗವಿಕಲೆ ಆಕೆಗೆ ಯಾವುದೇ ಪಿಂಚಣಿ ನೀಡುತ್ತಿಲ್ಲ, ಆಧಾರ್ ಕಾರ್ಡು ಇಲ್ಲ ಎಂದು ಅಧಿಕಾರಿಗಳು ಆಕೆಗೆ ಯಾವುದೇ ಸವಲತ್ತನ್ನು ನೀಡಿಲ್ಲ ಎಂದು ಶಾಸಕರಲ್ಲಿ ಹೇಳಿದರು. ತಕ್ಷಣವೇ ವಿಕಲಚೇತನ ಯುವತಿ ಮಲಗಿದ್ದ ಸ್ಥಳಕ್ಕೆ ತೆರಳಿದ ಶಾಸಕರು ಒಮ್ಮೆಲೆ ಅಚ್ಚರಿಗೊಂಡದ್ದು ಮಾತ್ರವಲ್ಲದೆ ಪಿಂಚನಿ ಕೊಡದೇ ಇರುವ ವಿಚಾರ ಕೇಳಿ ಆಕ್ರೋಶಗೊಂಡರು.

ಛೇ.. ಎಂಥಾ ಅವಸ್ಥೆ.... ವಿಕಲ ಚೇತನಳಾದರೂ ಪಿಂಛಣಿ ಕೊಡ್ಲಿಕ್ಕೆ ಆಗ್ಲಿಲ್ವ ಇಲ್ಲಿನ ವ್ಯವಸ್ಥೆಗೆ? ಎಷ್ಟು ವರ್ಷದಿಂದ ಯುವತಿ ಮಲಗಿದ್ದಲ್ಲೇ ಇದ್ದಾರೆ? ನಿಮ್ಮ ಮನೆಗೆ ಓಟು ಕೇಳಲು ರಾಜಕೀಯದವರು ಬರುವುದಿಲ್ಲವೇ ತಾಯಿ ಎಂದು ಗೌರಿ ತಾಯಿಯನ್ನು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಗೌರಿ ತಾಯಿ ನನ್ನ ಸಹೋದರಿ ಶಾರದಾ ಅನೇಕ ವರ್ಷಗಳಿಂದ ಮಲಗಿದ್ದಲ್ಲೇ ಇದ್ದಾಳೆ, ನಾನು ಕೂಲಿ ಕೆಲಸಕ್ಕೆ ತೆರಳಿ ಮಕ್ಕಳನ್ನು ಸಾಕುತ್ತಿದ್ದೇನೆ, ವಿಕಲ ಚೇತನ ನನ್ನ ಸಹೋದರಿಗೆ ಆಧಾರ್ ಕಾರ್ಡು ಇಲ್ಲದ ಕಾರಣ ಸರಕಾರದಿಂದ ಏನೂ ಸಿಗುತ್ತಿಲ್ಲ ಎಂದು ಹೇಳಿದರು.

ನಾಳೆ ನಿಮ್ಮ ಮನೆಗೆ ನನ್ನ ಕಚೇರಿಯಿಂದ ಜನ ಬರುತ್ತಾರೆ ಅವರು ನಿಮ್ಮ ಸಹೋದರಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ ಮುಂದಿನ ತಿಂಗಳು ಅವರಿಗೆ ವಿಕಲಚೇತನ ಪಿಂಚಣಿ ಬರುತ್ತದೆ ಏನೂ ಹೆದರಬೇಡಿ, ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಕಷ್ಟದ ಜೊತೆ ನಾನಿದ್ದೇನೆ, ಧೈರ್ಯವಾಗಿ ಇರಿ ಎಂದು ಗೌರಿ ತಾಯಿಗೆ ಸಾಂತ್ವನ ಹೇಳಿದರು. ಗೌರಿ ಕುಟುಂಬದ ಬಡತನವನ್ನು ಕಂಡು ಶಾಸಕರ ಕಣ್ಣುಗಳು ತೇವಗೊಂಡವು...

ಮೈಸೂರಿನಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು

Posted by Vidyamaana on 2023-07-18 03:38:37 |

Share: | | | | |


ಮೈಸೂರಿನಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು

ಪಿರಿಯಾಪಟ್ಟಣ: ಬೆಳ್ಳಂಬೆಳಗ್ಗೆ ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ.

ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು( ಜುಲೈ 18) ಮುಂಜಾನೆ 4.30ಕ್ಕೆ ಈ ದುರ್ಘಟನೆ ಸಂಭವಿಸಿದೆ.


ಘಟನೆಯಲ್ಲಿ ಮುದಾಸೀರ್, ಮುಜಾಯಿದ್, ಅಹ್ಮದ್​​​ ಪಾಷಾ  ಮೃತಪಟ್ಟಿದ್ದಾರೆ.

ಇನ್ನುಳಿದ ಮೂವರಿಗೆಗಾಯಗಳಾಗಿದ್ದು, ಅಪಘಾತ ನಡೆದ ವೇಳೆ ಅದೇ ರಸ್ತೆಯಲ್ಲಿ ಪುತ್ತೂರು ಬಪ್ಪಳಿಗೆಯ ಶಾಫಿ ಗಡಪ್ಪಿಲ ಬಪ್ಪಳಿಗೆ, ಅಮ್ಮಿ ಗಡಪ್ಪಿಲ ಬಪ್ಪಳಿಗೆ, ಹುರೈಸ್ ಬಪ್ಪಳಿಗೆ, ಆಶಿಕ್ ಬಪ್ಪಳಿಗೆ ಮೊದಲಾದವರು ತೆರಳುತ್ತಿದ್ದ ಘಟನೆ ನೋಡಿದ ಅವರು ತಮ್ಮ ಕಾರನ್ನು ನಿಲ್ಲಿಸಿ ಕೂಡಲೇ ಕಾರಿನ ಗಾಜು ಡೋರನ್ನು ಸರಳಿನಿಂದ ತೆಗೆದು ಮೂರು ಮೃತ ದೇಹಗಳನ್ನು ಹೊರ ತೆಗೆಯಲು ಸಹಕರಿಸಿದ್ದಾರೆ

ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

Posted by Vidyamaana on 2023-09-19 15:27:03 |

Share: | | | | |


ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

ಚೆನ್ನೈ: ಯುವ ರೌಡಿಯೊರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಿಜೋರಾಂ ಮೂಲದ ಯುವತಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದು, ಈ ಕೊಲೆಯ ಹಿಂದೆ ರೋಚಕ ಕಹಾನಿ ಇದೆ. ಚೆನ್ನೈನ 24 ವರ್ಷದ ರೌಡಿ ಸತ್ಯ (Rowdy Satya) ಎಂಬಾತನನ್ನು ಸೆಪ್ಟೆಂಬರ್ 10 ರಂದು ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಚೆನ್ನೈನ ಪುಝಲ್ ಕವಂಕರೈ 15ನೇ ಬೀದಿಯ ನಿವಾಸಿಯಾಗಿದ್ದ ರೌಡಿ ಸತ್ಯನನ್ನು ಚೆನ್ನೈನ ಎಗ್ಮೋರ್‌ನಲ್ಲಿ (Egmore) ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈತನ ಹತ್ಯೆಯ ಆರೋಪಿಗಳ ಪತ್ತೆಗೆ ಎಗ್ಮೋರ್ ಇನ್ಸ್ ಪೆಕ್ಟರ್ ತಿರುಮಲ್ ನೇತೃತ್ವದಲ್ಲಿ ವಿಶೇಷ ಪಡೆ ರಚಿಸಲಾಗಿತ್ತು.


ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆದ ಪೊಲೀಸರಿಗೆ ಈ ಪ್ರಕರಣಕ್ಕೂ ಮಿಜೋರಾಂ ಮೂಲದ ಮಾಡೆಲ್‌ (Mizoram model) ಒಬ್ಬಳಿಗೂ ಲಿಂಕ್ ಇರುವ ವಿಚಾರ ತಿಳಿದು ಬಂದಿತು. ಈ ವಿಚಾರ ಬೆನ್ನತಿದ್ದ ಪೊಲೀಸರು ಮಿಜೋರಾಂ ಮೂಲದ ಮಾಡೆಲ್ ಜ್ಯೂಲಿ ಹಾಗೂ ಆತನ ಬಾಯ್‌ಫ್ರೆಂಡ್ ಕಿಶೋರ್ ಎಂಬಾತನನ್ನು ಬಂಧಿಸಿದ್ದು, ಅಲ್ಲೊಂದು ಸಿನಿಮಾವನ್ನು ಮೀರಿಸುವ ರೋಚಕ ಕ್ರೈಂ ಪ್ರೇಮ ಕಹಾನಿ ಬೆಳಕಿಗೆ ಬಂದಿದೆ. ಅಲ್ಲದೇ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. 2016ರಲ್ಲಿ ಶಿವರಾಜ್ ಎಂಬ ರೌಡಿಯನ್ನು ಚೆನ್ನೈನ (Chennai) ಬೇಸಿನ್‌ ಬ್ರಿಡ್ಜ್‌ನ (Chennai Basin Bridge) ಬಳಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್‌ ಮಿತ್ರರು ತಮ್ಮ ಆಪ್ತನ ಕೊಲೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಶಿವರಾಜ್ (Sivaraj) ಕೊಲೆಯಲ್ಲಿ ಭಾಗಿಯಾಗಿದ್ದ ವಕೀಲ ಅಖಿಲನ್ ಹಾಗೂ ನಾಯಿ ರಮೇಶ್‌ನನ್ನು ಈಗಾಗಲೇ ಮುಗಿಸಿದ್ದ ಈ ತಂಡದ ರೌಡಿ ಸತ್ಯ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕಾಯುತ್ತಿತ್ತು. ಆತ ಬಿಡುಗಡೆಯಾಗುವುದು ತಿಳಿಯುತ್ತಿದ್ದಂತೆ ಈ ಶಿವರಾಜ್‌ ತಂಡ ಆತನನ್ನು ಮುಗಿಸಲು ಪ್ರೇಮದ ಜಾಲವನ್ನು ಹೆಣೆದಿತ್ತು. ರೌಡಿಗಳು ಹೆಣೆದ ಪ್ರೇಮದ ಜಾಲಕ್ಕೆ ಪ್ರೇಯಸಿಯಾದ ಜೂಲಿ


ರೌಡಿ ಸತ್ಯನ ಬಲೆಗೆ ಕೆಡವಲು ಪ್ರೇಮ ಜಾಲ ಹೆಣೆದ ವಿರೋಧಿ ಶಿವರಾಜ್ ಬಣ ಇದಕ್ಕೆ ಮೀಜೋರಾಂ ಮೂಲದ ಜೂಲಿಯನ್ನು ಬಳಸಿಕೊಂಡಿತ್ತು. ಶಿವರಾಜ್ ಬಣದ ಅಣತಿಯಂತೆ ಪ್ರೀತಿಯ ನಾಟಕವಾಡಿ ರೌಡಿ ಸತ್ಯನನ್ನು ಬಲೆಗೆ ಕೆಡವಿದ ಜ್ಯೂಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಫೋನ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿಯೂ ಆತನೊಂದಿಗೆ ಟಚ್‌ನಲ್ಲಿದ್ದ ಜ್ಯೂಲಿ ಆತನನ್ನು ಮನಸಾರೆ ಪ್ರೀತಿಸುವುದಾಗಿ ನಟಿಸುತ್ತಿದ್ದಳು. ಸುಂದರವಾದ ಹೆಣ್ಣೊಬ್ಬಳು ಬಂದು ಪ್ರೇಮಿಸುವೆ ಎಂದು ಹಿಂದೆ ಬಿದ್ದರೆ ಯಾವ ಗಂಡು ತಾನೇ ಬೇಡ ಎನ್ನುತ್ತಾನೆ. ಅದೇ ರೀತಿ ಇಲ್ಲಿ ಜ್ಯೂಲಿಯ ಪ್ರೇಮ ನಿವೇದನೆಗೆ ಕರಗಿದ್ದ ಸತ್ಯ, ಆಕೆ ತನ್ನನ್ನು ಪ್ರೀತಿಸುತ್ತಾಳೆ ಎಂದು ಬಲವಾಗಿ ನಂಬಿದ್ದ. ಇದೇ ಆತ ಮಾಡಿದ ತಪ್ಪು..ಕಳೆದ ಸೆಪ್ಟೆಂಬರ್ 8 ರಂದು ಸತ್ಯನಿಂದ ಕೊಲೆಯಾಗಿದ್ದ ಶಿವರಾಜ್‌ ಹತ್ಯೆಯಾದ ದಿನವಾಗಿದ್ದು, ಅಂದೇ ಶಿವರಾಜ್ ಆಪ್ತರು ಸತ್ಯನ ಹತ್ಯೆಗೆ ಜಾಲ ಹೆಣೆದಿದ್ದರು. ಅಂದು ಜ್ಯೂಲಿ ಸತ್ಯಗೆ ಕರೆ ಮಾಡಿ ಮಾತನಾಡಿದ್ದು, ಇಗ್ಮೋರೆಗೆ ಬರುವಂತೆ ಮನವಿ ಮಾಡಿದ್ದಳು. ಆದರೆ ಸೆಪ್ಟೆಂಬರ್‌ 8 ರಂದು ಬಾರದ ಆತ ಜ್ಯೂಲಿ ಮನವಿಯಂತೆ ಸೆಪ್ಟೆಂಬರ್ 10 ರ ರಾತ್ರಿ ಜ್ಯೂಲಿಯನ್ನು ನೋಡಲು ಇಗ್ಮೋರೆಗೆ ಆಗಮಿಸಿದ್ದ. ಅದು ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿದ್ದ ಜ್ಯೂಲಿ ಹಾಗೂ ರೌಡಿ ಸತ್ಯನ ಮೊದಲ ಭೇಟಿ ಅದಾಗಿತ್ತು. ಇದೇ ವೇಳೆ ಸತ್ಯಗೆ ಸ್ಕೆಚ್ ಹಾಕಿದ ಶಿವರಾಜ್ ಬಣ ಅವನ್ನು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಸತ್ಯನನ್ನು ಪ್ರೀತಿಸುವ ಕಪಟ ನಾಟಕವಾಡಿ ಆತನ ಹತ್ಯೆಗೆ ಸಹಕರಿಸಿದ ಜ್ಯೂಲಿಯನ್ನು ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿಶೋರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 9 ಜನರ ಬಂಧನವಾಗಿದೆ.

ಅನ್ಯಕೋಮಿನ ಜೋಡಿಯ ಪ್ರೀತಿಗೆ ಮನೆಯವರ ವಿರೋಧ!

Posted by Vidyamaana on 2023-10-05 10:22:33 |

Share: | | | | |


ಅನ್ಯಕೋಮಿನ ಜೋಡಿಯ ಪ್ರೀತಿಗೆ ಮನೆಯವರ ವಿರೋಧ!

ಹೈದರಾಬಾದ್: ಪ್ರಿಯಕರನ ಸಾವಿನಿಂದ ನೊಂದಿದ್ದ ಪ್ರಿಯತಮೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.



ಪಂಜಾಬ್‌ ಮೂಲದ ನೇಹಾ (19) ಮೃತ ಯುವತಿ.


ಏನಿದು ಪ್ರಕರಣ?: ನೇಹಾ ಪಂಜಾಬ್ ಮೂಲದವರಾಗಿದ್ದು, ಹೈದರಾಬಾದ್ ನಲ್ಲಿ ಹಾಸ್ಟೆಲ್‌ನಲ್ಲಿ ವಾಸವಿದ್ದಳು. ಕಳೆದ 8 ತಿಂಗಳಿನಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್‌ ಎನ್ನುವ ಯುವಕನೊಬ್ಬನ ಜೊತೆ ನೇಹಾಳಿಗೆ ಪ್ರೀತಿ ಆಗಿದೆ.


ಆದರೆ ಇಬ್ಬರ ನಡುವಿನ ಪ್ರೀತಿಯ ವಿಚಾರ ಅಂಗಡಿಯ ಮಾಲೀಕರಿಗೆ ಗೊತ್ತಾಗಿದ್ದು, ಈ ಕಾರಣದಿಂದ ಸಲ್ಮಾನ್‌ ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದಲ್ಲದೆ ಸಲ್ಮಾನ್‌ ಮನೆಯವರಿಗೆ ನೇಹಾಳೊಂದಿಗಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ಮನನೊಂದಿದ್ದ ಸಲ್ಮಾನ್‌ ಅಕ್ಟೋಬರ್‌ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.ಪ್ರಿಯಕರ ಸಲ್ಮಾನ್‌ ಆತ್ಮಹತ್ಯೆ ಮಾಡಿಕೊಂಡ ವಿಚಾರದಿಂದ ಹತಾಶರಾಗಿ, ಖಿನ್ನತೆ ರೀತಿಯಿದ್ದ ನೇಹಾ ಮಂಗಳವಾರ (ಅ. 3ರಂದು) ಹಾಸ್ಟೆಲ್‌ ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.


ಸ್ವಚ್ಛತಾ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಲು ಬಂದಾಗ ಬಾಗಿಲು ತಟ್ಟಿದರೂ ನೇಹಾ ಸ್ಪಂದಿಸಲಿಲ್ಲ. ಹಾಸ್ಟೆಲ್ ಸಿಬ್ಬಂದಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ನೇಹಾ ಕೋಣೆಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.


ಈ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಿಯಕರನ ಆತ್ಮಹತ್ಯೆಯ ಸುದ್ದಿಯನ್ನು ಸಹಿಸಲಾಗದೆ ಆಕೆ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ

ಪುತ್ತೂರು :ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಫೀಝ ಹೃದಯಾಘಾತಕ್ಕೆ ಬಲಿ

Posted by Vidyamaana on 2024-02-16 08:59:27 |

Share: | | | | |


ಪುತ್ತೂರು :ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಫೀಝ ಹೃದಯಾಘಾತಕ್ಕೆ ಬಲಿ

ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ.

ಕೆ.ಎ. ಸ್ಟೋರ್ ಮಾಲಕ ದಾವೂದು ಎಂಬವರ ಪುತ್ರಿ ಹಫೀಝ (17) ಮೃತ ಬಾಲಕಿ.

ಹಫೀಝ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದು, ಇಂದು ಬೆಳಗ್ಗೆ ಎದ್ದೇಳುವಾಗ ಮೃತಪಟ್ಟಿದ್ದಳು.

ಮಲಗಿದಲ್ಲೇ ಹೃದಯಾಘಾತಕ್ಕೀಡಾಗಿ ಹಫೀಝ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.



Leave a Comment: