ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಸುದ್ದಿಗಳು News

Posted by vidyamaana on 2024-07-01 19:31:51 |

Share: | | | | |


ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಮಳೆಗಾಲ ಆರಂಭವಾಗಿದ್ದು, ಈ ಋತುವಿನಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯವಾಗಿದೆ. ಋತುಮಾನದ ಕಾಯಿಲೆಗಳ ಜೊತೆಗೆ ಡೆಂಗ್ಯೂ ಅಪಾಯವಿದೆ. ಡೆಂಗ್ಯೂ ವಾಸ್ತವವಾಗಿ ಹೆಣ್ಣು ಈಜಿಪ್ಟಿ (ಈಡಿಸ್ ಸೊಳ್ಳೆ) ಸೊಳ್ಳೆಗಳಿಂದ ಹರಡುತ್ತದೆ.

ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದ್ರೆ, ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿ ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಕೇವಲ ಮನುಷ್ಯನ ಕೆಳಗಿನ ಅಂಗಗಳನ್ನ ಗುರಿಯಾಗಿಸುತ್ತಾರೆ. ಈ ಸೊಳ್ಳೆಗಳು ಕಚ್ಚಿದರೆ ತೀವ್ರ ಜ್ವರದ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಡೆಂಗ್ಯೂ ಸೊಳ್ಳೆಗಳು ಕೂಲರ್‌, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಛಾವಣಿಗಳು, ಟೈರ್‌ಗಳು, ಗುಂಡಿಗಳು ಇತ್ಯಾದಿಗಳಲ್ಲಿ ತಮ್ಮ ಮೊಟ್ಟೆಗಳನ್ನ ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನ ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆಗಳಾಗಿ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳು ಹುಟ್ಟಿದ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ.

ಡೆಂಗ್ಯೂ ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂ ಲಕ್ಷಣಗಳು ಕಾಣಿಸುವುದಿಲ್ಲ. ಆದ್ರೆ, ಕೆಲವು ದಿನಗಳ ನಂತರ ಅದರ ಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈಡಿಸ್ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಬರುತ್ತದೆ. ಈ ಸೊಳ್ಳೆಗಳು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ಡೆಂಗ್ಯೂ ಸೊಳ್ಳೆಗಳು ಮನೆಗಳ ಮೂಲೆಗಳಲ್ಲಿ ಪರದೆಯ ಹಿಂದೆ, ಸೊಳ್ಳೆಗಳು ಇರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ.

ಡೆಂಗ್ಯೂ ಜ್ವರದ ಲಕ್ಷಣಗಳು.!

ಡೆಂಗ್ಯೂ ಈಡಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಜ್ವರದಂತಿರುತ್ತವೆ. ಆದ್ರೆ, ಇದು ತೀವ್ರವಾದ ಹೆಮರಾಜಿಕ್ ಜ್ವರಕ್ಕೆ ಕಾರಣವಾಗಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ವೈದ್ಯರು.

ಲಕ್ಷಣಗಳೇನು.?

ತೀವ್ರವಾದ ಜ್ವರ, ತಲೆನೋವು, ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಣ್ಣುಗಳ ಕೆಳಗೆ ನೋವು, ಮೊಣಕಾಲು ನೋವು, ಊತ, ಹಲ್ಲು, ಮೂಗು, ಒಸಡುಗಳಿಂದ ರಕ್ತಸ್ರಾವ ಇತ್ಯಾದಿಗಳನ್ನ ಗಮನಿಸಿದರೆ ತಕ್ಷಣವೇ ಎಚ್ಚರಗೊಳ್ಳಿ.

ಡೆಂಗ್ಯೂ ತಡೆಗಟ್ಟುವುದು ಹೇಗೆ.?

* ವಿಶೇಷವಾಗಿ ಮಳೆಗಾಲದಲ್ಲಿ ದೇಹವನ್ನ ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನ ಧರಿಸಿ.

* ಮಲಗುವಾಗ ಸೊಳ್ಳೆ ಪರದೆಗಳನ್ನ ಬಳಸಿ.

* ಸೊಳ್ಳೆ ಕಡಿತವನ್ನು ತಡೆಯಲು ದೇಹಕ್ಕೆ ಎಣ್ಣೆ ಅಥವಾ ಕ್ರೀಮ್ ಹಚ್ಚಿ.

* ನಿಮ್ಮ ಮನೆ ಮತ್ತು ಸುತ್ತಮುತ್ತ ಕೊಳಕು ನೀರು ಬರುವುದನ್ನ ತಪ್ಪಿಸಿ.

* ಅನಗತ್ಯ ವಸ್ತುಗಳು ಹಾಗೂ ಕೂಲರ್ ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು.

* ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 Share: | | | | |


ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ

Posted by Vidyamaana on 2024-05-10 07:23:36 |

Share: | | | | |


ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ

ಮಂಡ್ಯ, ಮೇ 9: ಮಂಡ್ಯ ಜಿಲ್ಲೆಯಲ್ಲಿ SSLC ಫಲಿತಾಂಶ ಪ್ರಕಟಗೊಂಡ ನಂತರ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿಯ ಫಲಿತಾಂಶ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದಾಳೆ. ಆದರೆ, ಕಡಿಮೆ ಅಂಕ ಬಂದಿದ್ದಕ್ಕೆ ತಾನು ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹುಲಿಗೆರೆಪುರ ಗ್ರಾಮದ ಅಮೃತಾ (16) ಮೃತ ದುರ್ದೈವಿ‌. ಅಮೃತಾ ನಗರಕೆರೆ ಗ್ರಾಮದ ಪೂರ್ಣಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡ ನಂತರ ಅದನ್ನು ಮೊಬೈಲ್‌ನಲ್ಲಿ ನೋಡಿದ್ದಾಳೆ. ಆದರೆ, 400ಕ್ಕಿಂತ ಕಡಿಮೆ ಅಂಕ ಬಂದಿರುವುದನ್ನು ನೋಡಿ ತಾನು ಫೇಲ್ ಆಗಿದ್ದೇನೆಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೊಬೈಲ್ ನಲ್ಲಿ ಹೊಡೆದು ಅತ್ತೆಯನ್ನು ಕೊಂದ ಪಾಪಿ ಸೊಸೆ

Posted by Vidyamaana on 2024-05-03 22:21:22 |

Share: | | | | |


ಮೊಬೈಲ್ ನಲ್ಲಿ ಹೊಡೆದು ಅತ್ತೆಯನ್ನು ಕೊಂದ ಪಾಪಿ ಸೊಸೆ

ಮಡಿಕೇರಿ: ಅತ್ತೆಯನ್ನು ಸೊಸೆಯೇ ಹತ್ಯೆ ಮಾಡಿದ ನಿಗೂಢ ರಹಸ್ಯಕಾರಿ ಸಿನಿಮಾ ಮಾದರಿ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಸಹಜ ಸಾವು ಎಂದು ನಂಬಲಾಗಿದ್ದ ಪ್ರಕರಣ ತಿರುವು ಪಡೆದುಕೊಂಡು ಕೊಲೆ ಎಂಬುದು ಬಯಲಾಗಿ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.


ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಎಂಬವರನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಆರೋಪದಲ್ಲಿ ಸೊಸೆ ಬಿಂದು (26) ಎಂಬಾಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಪೂವಮ್ಮ ಅವರ ಪುತ್ರ ಶಿಕ್ಷಕರಾಗಿರುವ ಪ್ರಸನ್ನ, ಪತ್ನಿ ಬಿಂದು ಮತ್ತು ಒಂದು ವರ್ಷದ ಪುತ್ರಿಯೊಂದಿಗೆ ವಾಸವಾಗಿದ್ದರು. ಅತ್ತೆ ಮತ್ತು ಸೊಸೆ ನಡುವೆ ತೀವ್ರ ಮನಸ್ತಾಪ ಇತ್ತು ಎಂದು ತಿಳಿದು ಬಂದಿದೆ.

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿದ್ದ ಹೋರಿ ನಾಪತ್ತೆ

Posted by Vidyamaana on 2024-05-04 21:54:38 |

Share: | | | | |


ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿದ್ದ ಹೋರಿ ನಾಪತ್ತೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುತ್ತಿದ್ದ ಸಾಧು ಸ್ವಭಾವದ ‘ಅಣ್ಣು’ ಎಂಬ ಹೆಸರಿನ ಹೋರಿಯೊಂದು ನಾಪತ್ತೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.ಎ.30ರಿಂದ ಈ ಹೋರಿ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ.

6 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಸಲಿಂಗ ಜೋಡಿ

Posted by Vidyamaana on 2023-09-15 21:51:08 |

Share: | | | | |


6 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಸಲಿಂಗ ಜೋಡಿ


 ಮಹಾರಾಷ್ಟ್ರ :ಪ್ರೀತಿಗೆ ಯಾವುದೇ ಧರ್ಮ, ವಯಸ್ಸು, ಬಣ್ಣ, ಸೌಂದರ್ಯ ಮುಖ್ಯವಲ್ಲ ಅಂತಾ ಹೇಳುವ ಒಂದು ಕಾಲವಿತ್ತು. ಆದರೆ ಇದೀಗ ಪ್ರೀತಿಗೆ ಲಿಂಗವೂ ಮುಖ್ಯವಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೊರದೇಶದಲ್ಲಿ ಆಗುತ್ತಿದ್ದ ಸಲಿಂಗಕಾಮಿಗಳ ಮದುವೆ ಇದೀಗ ನಮ್ಮ ಭಾರತ ದೇಶದಲ್ಲೂ ನಡೆಯುತ್ತಿದೆ. ಅನೇಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಉಂಟು. ಇದಕ್ಕೆ ಉದಾಹರಣೆ ಮಹಾರಾಷ್ಟ್ರದ ಅವಿನಾಶ್ ಹಾಗೂ ವರುಣ್ ದಂಪತಿ.


6 ವರ್ಷಗಳ ಕಾಲ ಪ್ರೀತಿ ಮಾಡಿದ ಇವರು ಕುಟುಂಬದ ಒಪ್ಪಿಗೆ ಮೇರೆಗೆ ಲೋನಾವಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ತಮ್ಮ ಸಂಬಂಧ ಬಗೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ವರುಣ ಪೋಸ್ಟ್ ಮಾಡಿದ್ದಾರೆ. 6 ವರ್ಷಗಳ ದೀರ್ಘ ಪ್ರೇಮ ಸಂಬಂಧ ಮುಗ್ಗರಿಸಿದ್ದರಿಂದ ನಾನು ತೀವ್ರ ಬೇಸರದಲ್ಲಿದ್ದೆ. 2021ರಲ್ಲಿ ಪೋಷಕರನ್ನು ನೋಡಲು ಆಗಷ್ಟೇ ಭಾರತಕ್ಕೆ ಬಂದಿದ್ದ ನಾನು ಅವಿನಾಶ್ ಅವರನ್ನು ಭೇಟಿಮಾಡಿದೆ. ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದೆ.


ನಾನು ಮತ್ತು 37 ವರ್ಷದ ಅವಿನಾಶ್ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು.ಆದರೆ ನಮ್ಮ ಸಂಬಂಧವನ್ನು ಮೊದಮೊದಲು ಎರಡೂ ಕಡೆಯ ಪೋಷಕರು ಒಪ್ಪಲಿಲ್ಲ. ಕೊನೆಗೆ ಒಪ್ಪಿಕೊಂಡರು. ಸಾಕಷ್ಟು ಕಲ್ಯಾಣಮಂಟಪಗಳು ಬಾಡಿಗೆ ಕೊಡಲು ನಿರಾಕರಿಸಿದವು. ಕೊನೆಗೆ ಲೋನಾವಾಲದಲ್ಲಿ ಸಪ್ತಪದಿಯನ್ನು ತುಳಿದೆವು.

150 ಜನರು ಅತಿಥಿಗಳು ನಮ್ಮ ಮದುವೆಗೆ ಬಂದು ಹಾರೈಸಿದರು. ಪೋಷಕರು ಮನದುಂಬಿ ಹಾರೈಸಿದರು. ಸಿಯಾರಾ (ನಾಯಿ)ಳೊಂದಿಗೆ ನಮ್ಮ ಪುಟ್ಟ ಸಂಸಾರ ನೌಕೆ ಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ

ನಾನು ಜೆಡಿಎಸ್ ನಲ್ಲೇ ಇದ್ದೇನೆ, ಬಿಜೆಪಿಯನ್ನೂ ಬೆಂಬಲಿಸುತ್ತೇನೆ: ಬಾವ

Posted by Vidyamaana on 2024-03-18 15:32:01 |

Share: | | | | |


ನಾನು ಜೆಡಿಎಸ್ ನಲ್ಲೇ ಇದ್ದೇನೆ, ಬಿಜೆಪಿಯನ್ನೂ ಬೆಂಬಲಿಸುತ್ತೇನೆ: ಬಾವ

ಮಂಗಳೂರು: ನಾನು ಜೆಡಿಎಸ್ ನಲ್ಲೇ ಇದ್ದೇನೆ, ಬಿಜೆಪಿಯನ್ನೂ ಬೆಂಬಲಿಸುತ್ತೇನೆ. ಆದರೆ ಬಿಜೆಪಿಯ ಎಲ್ಲ ಸಿದ್ಧಾಂತಗಳ ಬಗ್ಗೆ ನನಗೆ ಸಹಮತವಿಲ್ಲ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಹೇಳಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸುತ್ತೇನೆ. ಆದರೆ ಬಿಜೆಪಿಯ ಎಲ್ಲಾ ಸಿದ್ಧಾಂತಗಳಿಗೆ ಸಹಮತ ಇಲ್ಲ. ಸಿಎಎ, ಹಿಜಾಬ್, ಆಝಾನ್ ಗೆ ವಿರೋಧದ ಬಿಜೆಪಿಯ ಸಿದ್ಧಾಂತಗಳನ್ನು ನಾನು ವಿರೋಧಿಸುತ್ತೇನೆ ಎಂದರು.

ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧೆಗಿಳಿಯುವ ನಿಟ್ಟಿನಲ್ಲಿ ನನ್ನ ಬೆಂಬಲಿಗರು ಇಚ್ಛೆ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ನಿರ್ಧಾರ ಇನ್ನೂ ಮಾಡಿಲ್ಲ. ಮಾ.28ರಂದು ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಬಾವ ಹೇಳಿದರು.

ರಾಜ್ಯ ಸರ್ಕಾರ ದಿಂದ ಕೋವಿಡ್ ಸೋಂಕಿ ನಿಂದ ಮೃತಪಟ್ಟವರ ಅಂತ್ಯ ಕ್ರಿಯೆ ಬಗ್ಗೆ ಮಹತ್ವದ ಆದೇಶ

Posted by Vidyamaana on 2024-01-11 16:45:44 |

Share: | | | | |


ರಾಜ್ಯ ಸರ್ಕಾರ ದಿಂದ ಕೋವಿಡ್ ಸೋಂಕಿ ನಿಂದ ಮೃತಪಟ್ಟವರ ಅಂತ್ಯ ಕ್ರಿಯೆ ಬಗ್ಗೆ ಮಹತ್ವದ ಆದೇಶ

ಬೆಂಗಳೂರು : ಕೋವಿಡ್-19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ನಡೆಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಗಳ ಅನ್ವಯ ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ಸಾಮಾನ್ಯ ಚಿತಾಗಾರ / ಸ್ಮಶಾನ/ ರುದ್ರಭೂಮಿಯಲ್ಲಿ ನಡೆಸುವಂತೆ ಸೂಚಿಸಿದೆ.ಮುಂದುವರೆದು, ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ನಡೆಸಲು ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಚಿತಾಗಾರ / ಸ್ಮಶಾನ/ ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆಗೆ ತರುವ ಮೃತದೇಹಗಳನ್ನು ಚಿತಾಗಾರ / ಸ್ಮಶಾನದ ಸಿಬ್ಬಂದಿಯು ನಿರಾಕರಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು (N -95 ಮಾಸ್ಕ್, ಗೊವ್ ಹಾಗೂ ಪಿಪಿಇ ಕಿಟ್ ಧರಿಸುವುದು ಮತ್ತು ಅಂತ್ಯಕ್ರಿಯೆ ನಡೆಸಿದ ನಂತರ ಅವುಗಳನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡುವುದು) ಅಂತ್ಯಕ್ರಿಯೆಯನ್ನು ನಡೆಸಲು ತಿಳಿಸುವಂತೆ ಈ ಮೂಲಕ ಸೂಚಿಸಿದೆ.


ಈ ನಿಟ್ಟಿನಲ್ಲಿ, ಬಿ, ಬಿ.ಎಂ.ಪಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತಗಳು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದೆ.



Leave a Comment: