ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಸುದ್ದಿಗಳು News

Posted by vidyamaana on 2024-06-30 19:50:01 |

Share: | | | | |


ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು. 


ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


ಪುತ್ತಿಲ ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ | ದರ್ಬೆಯಲ್ಲಿ ಸಾವಿರಾರು ಸಂಖ್ಯೆಯ ಜಮಾಯಿಸಿದ ಕಾರ್ಯಕರ್ತರು

Posted by Vidyamaana on 2023-04-17 05:59:48 |

Share: | | | | |


ಪುತ್ತಿಲ ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ | ದರ್ಬೆಯಲ್ಲಿ ಸಾವಿರಾರು ಸಂಖ್ಯೆಯ ಜಮಾಯಿಸಿದ ಕಾರ್ಯಕರ್ತರು

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರು ಇಂದು ನಾಮಪತ್ರ ಸಲ್ಲಿಸಲಿದ್ದು, ದರ್ಬೆ ವೃತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದ ವರೆಗೆ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ದರ್ಬೆ ಜಂಕ್ಷನ್ ನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪುತ್ತಿಲ ಪರ ಪ್ರಚಾರ ನಡೆಸಲು ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು.

ಪಾಠ ಮಾಡಿ ಬಂದು ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತ; ಶಿಕ್ಷಕ ಸಾವು

Posted by Vidyamaana on 2023-12-27 05:21:20 |

Share: | | | | |


ಪಾಠ ಮಾಡಿ ಬಂದು ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತ; ಶಿಕ್ಷಕ ಸಾವು

ರಾಯಚೂರು: ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳು ಹೃದಯಾಘಾತಕ್ಕೀಡಾಗಿ (Heart Attack) ಸಾವನ್ನಪ್ಪಿದ್ದನ್ನು ಗಮನಿಸಿದ್ದೇವೆ. ಈಗ ಶಿಕ್ಷಕರೊಬ್ಬರು ಕುಳಿತ ಕುರ್ಚಿಯಲ್ಲೇ (School teacher death) ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆ (Raichur News) ಮಸ್ಕಿ ತಾಲೂಕಿನ ಗದ್ರಟಗಿ ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ (57) ಎಂಬವರೇ ಹೃದಯಾಘಾತಕ್ಕೆ ಬಲಿಯಾದವರು.ಅವರು ಬೆಳಗ್ಗೆ ಮೊದಲ ತರಗತಿ ಪಾಠ ಮುಗಿಸಿ ಕಚೇರಿಗೆ ಬಂದು ಕುಳಿತಿದ್ದರು. ಮುಂದೆ ಶಾಲೆಗೆ ಸಂಬಂಧಿಸಿದ ಯಾವುದೋ ದಾಖಲೆ ತೆಗೆದು ಬರೆಯಲು ಆರಂಭಿಸುತ್ತಿದ್ದಂತೆಯೇ ಅಲ್ಲೇ ಹೃದಯ ಸ್ತಬ್ಧಗೊಂಡಿದೆ. ಹೀಗಾಗಿ ಕುಳಿತ ಕುರ್ಚಿಯಲ್ಲಿ ಬರೆಯುತ್ತಿದ್ದ ಸ್ಥಿತಿಯಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ.


ಮೂಲತಃ ರಾಣೆಬೆನ್ನೂರಿನವರಾಗಿರುವ ಮೃತ ಶಿಕ್ಷಕ ಸುರೇಶ್ ಅವರು ಶಾಲೆಯಲ್ಲಿ ಒಬ್ಬ ಒಳ್ಳೆಯ ಶಿಕ್ಷಕನೆಂಬ ಗೌರವಕ್ಕೆ ಪಾತ್ರರಾಗಿದ್ದರು. ಜತೆಗೆ ಊರಿನವರ ನಡುವೆಯೂ ಪ್ರೀತಿ ಸಂಪಾದಿಸಿದ್ದರು. ಆದರೆ, ಇದೀಗ ವಿಧಿ ಅವರನ್ನು ಈ ರೀತಿಯಾಗಿ ಬಲಿ ಪಡೆದಿದೆ.


ಮುಖ್ಯ ಶಿಕ್ಷಕ ಸುರೇಶ್‌ ಅವರ ನಿಧನವನ್ನು ಅರಗಿಸಿಕೊಳ್ಳಲಾಗದ ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಕೂಡಾ ತೀವ್ರವಾಗಿ ಬೇಸರಗೊಂಡಿದ್ದಾರೆ. ಮೃತ ಶಿಕ್ಷಕ ಸುರೇಶ್ ಅವರಿಗೆ ಪತ್ನಿ ಮತ್ತು ಮೂವರು ಪುತ್ರರಿದ್ದಾರೆ

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 18

Posted by Vidyamaana on 2023-09-18 08:23:18 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 18

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 18 ರಂದು

ಬೆಳಗ್ಗೆ 10.30 ಖಾಸಗಿ ಕಾರ್ಯಕ್ರಮ


 ಮಧ್ಯಾಹ್ನ 3 ಗಂಟೆಗೆ ಮೂಡಬಿದ್ರೆಯಲ್ಲಿ ಕಂಬಳ ಕುರಿತ ಸಭೆಭಾಗವಹಿಸಲಿದ್ದಾರೆ 

ಉಡುಪಿ: ನಾನು ಹಸಿ ಮೀನು ಮುಟ್ಟಿದ್ದೇನೆಂದು ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ

Posted by Vidyamaana on 2023-04-28 02:54:41 |

Share: | | | | |


ಉಡುಪಿ: ನಾನು ಹಸಿ ಮೀನು ಮುಟ್ಟಿದ್ದೇನೆಂದು ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ

ಉಡುಪಿ: ಕಾಪು ತಾಲೂಕಿನ ಉಚ್ಚಿಲಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿನ ಶಾಲಿನಿ ಡಾ.ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಜಿಲ್ಲೆಯ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದ ಬಳಿಕ ಪಕ್ಕದಲ್ಲೇ ಇರುವ ಪುನರ್ನಿಮಾಣಗೊಂಡ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರಾದರೂ ದೇವಸ್ಥಾನ ದೊಳಗೆ ತೆರಳಲು ನಿರಾಕರಿಸಿದ್ದಾರೆ.

ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ನೀಡಿದ ಭಾರೀ ಗಾತ್ರದ ಅಂಜಲ್ ಮೀನನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಬಳಿಕ ಅದನ್ನು ಪಕ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ಪ್ರತಾಪನ್ ಅವರಿಗೆ ನೀಡಿದರು.ಇಲ್ಲಿಗೆ ಬರುವ ಸ್ವಲ್ಪ ಮೊದಲು ತಾನು ಹಸಿ ಮೀನು ಮುಟ್ಟಿದ್ದರಿಂದ ದೇವಸ್ಥಾನದ ಒಳಗೆ ಹೋಗಲು ರಾಹುಲ್ ಗಾಂಧಿ ನಿರಾಕರಿಸಿದರು. ದೇವಸಾನಕ್ಕೆ ಭೇಟಿ ನೀಡಿದ ಅವರನ್ನು ಒಳಗೆ ಬರಲು ಹೇಳಿದಾಗ ನಾನು ಮೀನು ಮುಟ್ಟಿರುವುದರಿಂದ ಒಳಗೆ ಹೋಗಲು ಆಗುವುದಿಲ್ಲ ಎಂದು ಒಳಗೆ ಹೋಗಲು ನಿರಾಕರಿಸಿದ್ದಾರೆ.

ಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು ; ಪೂರ್ತಿ ತಲೆಯೇ ಕಟ್

Posted by Vidyamaana on 2023-11-09 16:38:12 |

Share: | | | | |


ಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು ; ಪೂರ್ತಿ ತಲೆಯೇ ಕಟ್

ಬೆಂಗಳೂರು, ನ 09: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ ಗೆ ಕೂದಲು ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ ನಡೆದ ಘಟನೆಯಲ್ಲಿ ಶ್ವೇತಾ (34) ಎಂಬ ಮಹಿಳೆ ಮೃತಪಟ್ಟಿದ್ದಾರೆ. 


ಇದೊಂದು ಪೈಂಟ್‌ ಮಿಕ್ಸಿಂಗ್‌ ಕಾರ್ಖಾನೆಯಾಗಿದ್ದು, ಇಲ್ಲಿ ಒಂದು ಗ್ರೈಂಡರ್‌ನಲ್ಲಿ ಪೌಡರ್‌ ಮತ್ತು ಇತರ ಸಾಮಗ್ರಿಗಳನ್ನು ಹಾಕಿ ಬಣ್ಣವನ್ನು ತಯಾರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರೈಂಡರ್‌ಗೆ ಜಡೆ ಸಿಲುಕಿ ಮಹಿಳೆಯ ತಲೆಯೇ ಕತ್ತರಿಸಿ ಹೋಗಿದೆ.


ಗ್ರೈಂಡರ್‌ನ ಒಳಗೆ ಬಣ್ಣ ಗಟ್ಟಿಯಾಗಿತ್ತು. ಅದನ್ನು ಚೆಕ್‌ ಮಾಡಲೆಂದು ಒಳಗೆ ಬಗ್ಗಿದಾಗ ಒಮ್ಮೆಗೇ ತಲೆಕೂದಲು ಸಿಕ್ಕಿಹಾಕಿಕೊಂಡಿದೆ. ಆಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ, ಗ್ರೈಂಡರ್‌ ಸದ್ದಿನಿಂದಾಗಿ ಅವರ ಕೂಗು ಯಾರಿಗೂ ಕೇಳಿಸಲಿಲ್ಲ. ಕೊನೆಗೆ ಉಳಿದ ಕೆಲಸಗಾರರು ಬಂದು ನೋಡಿದಾಗ ಶ್ವೇತಾ ದಾರುಣವಾಗಿ ಮೃತಪಟ್ಟಿರುವುದು ಕಂಡುಬಂದಿದೆ. ತಲೆಕೂದಲು ಸಿಕ್ಕಿಕೊಂಡ ಬಳಿಕ ಬ್ಲೇಡ್‌ಗಳು ಆಕೆಯ ಕೊರಳನ್ನೇ ಕತ್ತರಿಸಿದ್ದವು.


ಶ್ವೇತಾ ಅವರು ತಮ್ಮ ಗಂಡ ಮತ್ತು ಮಗನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಈ ಘಟನೆಯಿಂದ ಕಾರ್ಖಾನೆ ಕಾರ್ಮಿಕರಲ್ಲಿ ಸೂತಕದ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಇಂಥ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಆತಂಕ ಕೂಡಾ ಕಾಡುತ್ತಿದೆ. ಪ್ರಕರಣ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಅಪರಾಧ ತಡೆ ಮಾಸಾಚಾರಣೆ, ಜಾಗೃತಿ ಜಾಥಾ | ರೋಟರಿ, ಇಂಟರ್ಯಾಕ್ಟ್, ಪೊಲೀಸ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಜಾಥಾ

Posted by Vidyamaana on 2022-12-29 06:41:59 |

Share: | | | | |


ಅಪರಾಧ ತಡೆ ಮಾಸಾಚಾರಣೆ, ಜಾಗೃತಿ ಜಾಥಾ | ರೋಟರಿ, ಇಂಟರ್ಯಾಕ್ಟ್, ಪೊಲೀಸ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಜಾಥಾ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಇಂಟರ್ಯಾಕ್ಟ್ ಕ್ಲಬ್ ರಾಮಕೃಷ್ಣ ಯುವ, ದ.ಕ. ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಡಿ. 28ರಂದು ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ನಡೆಯಿತು.


ಕೊಂಬೆಟ್ಟಿನಿಂದ ಆರಂಭಗೊಂಡ ಜಾಗೃತಿ ಜಾಥಾ, ಗಾಂಧಿಕಟ್ಟೆಯಲ್ಲಿ ಸಮಾರೋಪಗೊಂಡಿತು.



Leave a Comment: