ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ಬೆಳ್ತಂಗಡಿ: ಹಿಮ್ಮುಖವಾಗಿ ಚಲಿಸಿದ ಪಿಕಪ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

Posted by Vidyamaana on 2024-04-18 09:48:31 |

Share: | | | | |


ಬೆಳ್ತಂಗಡಿ: ಹಿಮ್ಮುಖವಾಗಿ ಚಲಿಸಿದ ಪಿಕಪ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಬೆಳ್ತಂಗಡಿ: ಶಿಬಾಜೆ ಗ್ರಾಮದ ತಂಬ್ಲಾಜೆಯಲ್ಲಿ ಚಾಲಕನ ಅಜಾಗರೂಕತೆಯಿಂದಾಗಿ ಪಿಕಪ್‌ ವಾಹನ ಹಿಮ್ಮುಖವಾಗಿ ಚಲಿಸಿ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ರುಕ್ಮ ಮುಗೇರ ಮೃತ ವ್ಯಕ್ತಿ. ಶಿಬಾಜೆ ಬಳಿ ಪಿಕಪ್ ನಿಲ್ಲಿಸಿದಾಗ ರುಕ್ಮ ಮುಗೇರ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದರು. ಅದರ ಚಾಲಕ ಜಯೇಶ್‌ ಅವರು ದುಡುಕುತನದಿಂದ ಹಿಮ್ಮುಖವಾಗಿ ಚಲಾಯಿಸಿ, ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ರುಕ್ಮ ಮುಗೇರ ಅವರಿಗೆ ಢಿಕ್ಕಿ ಹೊಡೆದಿದೆ.

8.30 ಕೋಟಿ ಮೌಲ್ಯದ ನೋಟುಗಳ ಮಳೆ!

Posted by Vidyamaana on 2023-10-27 08:42:15 |

Share: | | | | |


8.30 ಕೋಟಿ ಮೌಲ್ಯದ ನೋಟುಗಳ ಮಳೆ!

ಪ್ರೇಗ್‌: ನೋಡ ನೋಡುತ್ತಿದ್ದಂತೆಯೇ ಆಗಸದಲ್ಲಿ ನೋಟಿನ ಮಳೆಯಾದರೆ ಏನು ಮಾಡುತ್ತೀರಿ? ಆಗಲು ಸಾಧ್ಯವೇ ಇಲ್ಲ ಬಿಡಿ ಎಂದು ಯೋಚಿಸುತ್ತಿದ್ದೀರಾ? ಚೆಕ್‌ ಗಣರಾಜ್ಯದಲ್ಲಿ ಇಂಥ  ಘಟನೆ ನಡೆ ದೇಬಿಟ್ಟಿದೆ. ಕಮಿಲ್‌ ಬಟೋಶೆಕ್‌ (ಕಜ್ಮಾ) ಎಂಬ ಟಿ.ವಿ. ನಿರೂಪಕರೊಬ್ಬರು ಹೆಲಿಕಾಪ್ಟರ್‌ ಮೂಲಕ ನೋಟುಗಳ ಮಳೆಯನ್ನೇ ಸುರಿಸಿದ್ದಾರೆ!ಆರಂಭದಲ್ಲಿ ಕಜ್ಮಾ ತಮ್ಮ ಸಿನೆಮಾ “ಒನ್‌ ಮ್ಯಾನ್‌ ಶೋ: ದಿ ಮೂವಿ’ ಯಲ್ಲಿ ಅಡಗಿರುವ ಕೋಡ್‌ವೊಂದರ ಅರ್ಥ ವಿವರಿಸುವ ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ಗೆದ್ದ ವ ರಿಗೆ 8.30 ಕೋಟಿ ರೂ. ಬಹು ಮಾನವನ್ನೂ ಘೋಷಿಸಿದ್ದರು. ಆದರೆ, ಸ್ಪರ್ಧ ಕಷ್ಟವಾಗಿದ್ದ ಕಾರಣ ನೋಂದಣಿ ಮಾಡಿಕೊಂಡವರಲ್ಲಿ ಯಾರಿ ಗೂ ಗೆಲ್ಲಲು ಆಗಲಿಲ್ಲ. ಹೀಗಾ ಗಿ, ಕಜ್ಮಾ ಬಹುಮಾನದ ಮೊತ್ತವನ್ನು ಸ್ಪರ್ಧಾಕಾಂಕ್ಷಿಗಳಿಗೇ ಹಂಚಲು ನಿರ್ಧರಿಸಿದ್ದಾರೆ.


ಅದರಂತೆ, ಅವರೆಲ್ಲರಿಗೂ ಇಮೇಲ್‌ ಕಳುಹಿಸಿ, ಹಣ ಪಡೆಯಲು ಲೈಸಾ ಮತ್ತು ಲ್ಯಾಬೆಮ್‌ ಪ್ರದೇಶದ ಸಮೀಪದ ಹೊಲಕ್ಕೆ ಬರುವಂತೆ ಸೂಚಿಸಿದ್ದಾರೆ. ಹೇಳಿದ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್‌ನಲ್ಲಿ ಬಂದು ಕಜ್ಮಾ 8.30 ಕೋಟಿ ರೂ. ಮೊತ್ತದ ನೋಟುಗಳನ್ನು ಕೆಳಕ್ಕೆ ಎಸೆದಿದ್ದಾರೆ. ದೊಡ್ಡ ದೊಡ್ಡ ಚೀಲಗಳು, ಛತ್ರಿಗಳನ್ನು ಹಿಡಿದುಕೊಂಡು ಬಂದಿದ್ದ ಜನ, ನೋಟುಗಳ ಮಳೆಯಾಗುತ್ತಿದ್ದಂತೆ ಎಷ್ಟು ಸಾಧ್ಯವೋ ಅಷ್ಟನ್ನೂ ಬಾಚಿಕೊಂಡಿದ್ದಾರೆ!

ಪುತ್ತೂರಿನಲ್ಲಿ ಕರ್ನಾಟಕ ಪೊಲೀಸ್ ರನ್ - ಮಾದಕ ದ್ರವ್ಯಗಳ ದುಷ್ಪರಿಣಾಮ ಜಾಗೃತಿ

Posted by Vidyamaana on 2024-03-11 04:38:21 |

Share: | | | | |


ಪುತ್ತೂರಿನಲ್ಲಿ ಕರ್ನಾಟಕ ಪೊಲೀಸ್ ರನ್ - ಮಾದಕ ದ್ರವ್ಯಗಳ ದುಷ್ಪರಿಣಾಮ ಜಾಗೃತಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ


ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಪೊಲೀಸ್ ರನ್ - 2024 ಕಾರ್ಯಕ್ರಮಕ್ಕೆ ಪುತ್ತೂರಿನಲ್ಲಿ ಮಾ. 10 ರಂದು ಬೆಳಿಗ್ಗೆ ದರ್ಬೆ ಬೈಪಾಸ್ ವೃತ್ತದಿಂದ ನಗರ ಪೊಲೀಸ್ ಠಾಣೆಯ ತನಕದ ಪೊಲೀಸ್‌ ರನ್‌ ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಯುವ ಪೊಲೀಸ್ ರನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡರು. ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಸಹಿತ ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಉಪ ವಿಭಾಗ ಎಲ್ಲಾ ಪೊಲೀಸ್ ಠಾಣೆಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಮತ್ತು ವಿವೇಕಾನಂದ ಹಾಗು ಸಂತ ಫಿಲೋಮಿನಾ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಪೊಲೀಸ್ ರನ್ ನಲ್ಲಿ ಪಾಲ್ಗೊಂಡರು.


ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

Posted by Vidyamaana on 2024-06-11 14:40:36 |

Share: | | | | |


ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

ಬೆಂಗಳೂರು : ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಅವಧಿ ವಿಸ್ತರಣೆ ಮಾಡಿ ಜೂನ್.‌ 12ಕ್ಕೆ ಗಡುವು ವಿಸ್ತರಿಸಿದೆ

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ಜೂನ್‌ 12 ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂನ್.‌13 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ದೊರೆಯುವಂತಾಗಬೇಕು

Posted by Vidyamaana on 2023-12-24 11:43:47 |

Share: | | | | |


ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ದೊರೆಯುವಂತಾಗಬೇಕು

ಪುತ್ತೂರು: ಕಾಂಗ್ರೆಸ್ ಸರಕರದ ಗ್ಯಾರಂಟಿ ಯೋಜನೆಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯು ಕೆಲವೊಂದು ಮಹಿಳೆಯರಿಗೆ ಇನ್ನೂ ಸಿಕ್ಕಿಲ್ಲ ಇದು ಯಾವ ಕಾರಣಕ್ಕೆ ಸಿಕ್ಕಿಲ್ಲ ಮತ್ತು ಅದಕ್ಕೆ ತಕ್ಷಣವೇ ಪರಿಹಾರ ಒದಗಿಸಿ ಅವರಿಗೆ ಸರಕಾರದಿಂದ ಗೃಹಲಕ್ಷ್ಮಿ ಯೋಜನೆ ದೊರೆಯುವಂತೆ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಗ್ರಾಮೀಣ ಭಗದ ಜನರಿಗೆ ತಮ್ಮ ಬ್ಯಾಂಕ್ ಖಾತೆಯ ಬಗ್ಗೆ ಮತ್ತು ಅದರಲ್ಲಿ ಮಾಡಬೆಕಾದ ತಾಂತ್ರಿಕ ವಿಚಾರಗಳ ಬಗ್ಗೆ ಮಾಹಿತಿ ಕೊರತೆ ಇದೆ. ಹಲವು ಬಾರಿ ಬ್ಯಾಂಕ್‌ಗಳಿಗೆ ತೆರಳಿದರೂ ಖಾತೆ ಗೆ ಇನ್ನೂ ಹಣ ಬಂದಿಲ್ಲ ಎಂಬ ದೂರುಗಳಿವೆ. ಗ್ರಾಮೀಣ ಭಾಗದ ಬಡವರು ಬ್ಯಾಂಕ್‌ಗಳಿಗೆ ಬಂದಾಗ ಅವರಿಗೆ ಅದರ ಬಗ್ಗೆ ಸರಿಯದ ಮಾಹಿತಿಯನ್ನು ನೀಡಬೇಕು ಮತ್ತು ಅವರ ಖಾತೆಗೆ ಯಾಕೆ ಹಣ ಜಮೆಯಗುತ್ತಿಲ್ಲ ಎಂಬುದರ ಬಗ್ಗೆಯೂ ತಿಳಿಸಬೇಕು. ಡಿ.೨೭,೨೮,೨೯ ರಂದು ಮೂರು ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಪಂ ಕಚೇರಿಗಳಲ್ಲಿ ಕ್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಜನತೆ ಇದರ ಪ್ರಯೋಜನವನ್ನು ಪಡೆದು ಸರಕಾರದಿಂದ ದೊರೆಯುವ ಸೌಲಬ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕದ್ರಿ ಠಾಣೆಯಲ್ಲಿ ಯುವತಿಯ ಅಪರಾವತಾರ

Posted by Vidyamaana on 2023-09-10 07:37:19 |

Share: | | | | |


ಕದ್ರಿ ಠಾಣೆಯಲ್ಲಿ ಯುವತಿಯ ಅಪರಾವತಾರ

ಮಂಗಳೂರು: ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದ ಯವತಿಯೊಬ್ಬಳನ್ನು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಕಮಿಷನರ್ ಈ ಬಗ್ಗೆ ಅರೆಬರೆ ಸ್ಪಷ್ಟನೆ ನೀಡಿದ್ದಾರೆ. 


ಸೆ.1 ರಂದು ಬೆಳಗ್ಗೆ 6.45ಕ್ಕೆ ಪಂಪ್ವೆಲ್ ನಲ್ಲಿ ಮೆಡಿಕಲ್ ಒಂದಕ್ಕೆ ಯುವತಿ ಬಂದಿದ್ದು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಳು. ರೌಂಡ್ಸ್ ನಲ್ಲಿದ್ದ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಒಯ್ಯಲು ಯತ್ನಿಸಿದಾಗ, ಅಲ್ಲಿಯೂ ಆಕೆ ದಾಳಿಗೆ ಮುಂದಾಗಿದ್ದಾಳೆ. ಇದರಿಂದ ಬೇಸತ್ತು ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದರು. ಆದರೆ ಯುವತಿಯನ್ನು ಅಲ್ಲಿಯೂ ಹಿಡಿದಿಡಲು ಮಹಿಳಾ ಸಿಬಂದಿ ಹರಸಾಹಸ ಪಟ್ಟಿದ್ದಾರೆ. 




ಬಳಿಕ ಕಾಲಿಗೆ ಕೋಳ ತೊಡಿಸಿ ಕೈಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಿದ್ದಾರೆ. ಡ್ರಗ್ಸ್ ವ್ಯಸನದಿಂದ ಆಕೆ ಈ ರೀತಿ ವರ್ತಿಸುತ್ತಿದ್ದಾಳೆಂಬ ಸಂಶಯದಿಂದ ಚೆಕ್ ಮಾಡಿದಾಗ, ನೆಗೆಟಿವ್ ಬಂದಿದೆ. ಪೋಷಕರ ಬಗ್ಗೆ ಕೇಳಿದಾಗಲೂ ಮಾಹಿತಿ ನೀಡುತ್ತಿರಲಿಲ್ಲ. ಒಮ್ಮೆ ಹಿಂದಿ, ಇನ್ನೊಮ್ಮೆ ಇಂಗ್ಲಿಷ್ ಮಾತಾಡುತ್ತಿದ್ದಳು. ಮಾನಸಿಕ ತಜ್ಞರಲ್ಲಿ ತೋರಿಸಬೇಕೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಕಡೆಗೆ ಪೊಲೀಸರು ಒಯ್ಯುತ್ತಿದ್ದಾಗ, ಆಕೆ ತನ್ನ ಮನೆ ಇಲ್ಲೇ ಇದೆಯೆಂದು ಹೇಳಿದ್ದಾಳೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಆಕೆಗೆ ಮಾನಸಿಕ ಸಮಸ್ಯೆಯಂತೆ. ಹಾಗಾಗಿ ಮನೆಯಲ್ಲೇ ಇಟ್ಟು ಚಿಕಿತ್ಸೆ ನೀಡುತ್ತಿದ್ದರಂತೆ. ಆದರೆ, ಈ ಕುರಿತು ಸರಿಯಾದ ಮಾಹಿತಿ ಪೊಲೀಸರಲ್ಲಿ ಇಲ್ಲ. ಡ್ರಗ್ಸ್ ವ್ಯಸನಕ್ಕೆ ಬಲಿಯಾದವರು ಡ್ರಗ್‌ ಸಿಗದೇ ಇದ್ದಾಗ ಈ ರೀತಿ ವ್ಯಗ್ರವಾಗಿ ವರ್ತಿಸುತ್ತಾರೆ. ಯುವತಿಗೆ ಹಾಗೆ ಆಗಿರಬಹುದೇ ಎಂದು ಪೊಲೀಸರಲ್ಲಿ ಕೇಳಿದರೆ, ಇಲ್ಲ ಎನ್ನುತ್ತಾರೆ. ಆಕೆಯ ಸಮಸ್ಯೆ ಏನು ? ಯಾಕಾಗಿ ಅವಳು ಒಬ್ಬಂಟಿಯಾಗಿ ಅಂದು ಬೆಳಗ್ಗೆ ಪಂಪ್ವೆಲ್ ಬಂದಿದ್ದಳು. ಚಿಕಿತ್ಸೆಯಲ್ಲಿದ್ದರೆ, ಬೆಳ್ಳಂಬೆಳಗ್ಗೆ ಮೆಡಿಕಲ್ ಬಂದಿದ್ದು ಹೇಗೆ.. ವಿದ್ಯಾರ್ಥಿನಿಯೇ ಎಂದು ಕೇಳಿದರೆ, ಅದಕ್ಕೂ ಪೊಲೀಸರಲ್ಲಿ ಮಾಹಿತಿಯಿಲ್ಲ.



Leave a Comment: