ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


62ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾದ ಖತರ್ನಾಗ್ ಗ್ಯಾಂಗ್ ಸ್ಟರ್

Posted by Vidyamaana on 2024-03-21 15:39:55 |

Share: | | | | |


62ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾದ ಖತರ್ನಾಗ್ ಗ್ಯಾಂಗ್ ಸ್ಟರ್

ಬಿಹಾರ: ಲೋಕಸಭೆ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಕಿಮಿನಲ್​​ ಹಿನ್ನೆಲೆ ಇರುವ ಕುಖ್ಯಾತ ರೌಡಿಯೊಬ್ಬ ಚುನಾವಣೆಗೆ ನಿಲ್ಲುವ ಉದ್ದೇಶದಿಂದ ರಾತ್ರೋರಾತ್ರಿ ಮದುವೆ ಆಗಿದ್ದಾನೆ. ಮದುವೆಗೂ, ಚುನಾವಣೆಗೂ ಏನು ಸಂಬಂಧ ಎಂದು ನಿಮಗೆ ಪ್ರಶ್ನೆ ಮೂಡುತ್ತಿರಬಹುದು..

ಆದರೆ ಈ ಕುರಿತಾದ ಇಂಟ್ರಸ್ಟಿಂಗ್​ ಕಹಾನಿ ಇಲ್ಲಿದೆ…

ಅಶೋಕ್ ಮಹ್ತೋ ಬಿಹಾರದ ನವಾಡ ಪ್ರದೇಶದಲ್ಲಿ ದೊಡ್ಡ ಗ್ಯಾಂಗ್​ಸ್ಟರ್​. ನಾವಡ ಜೈಲ್ ಬ್ರೇಕ್ ಘಟನೆಯಲ್ಲೂ ಭಾಗಿಯಾಗಿದ್ದ. ಕೆಲವು ಕ್ರಿಮಿನಲ್​ ಹಿನ್ನೆಲೆ ಹೊಂದಿರುವ ಈತ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದಾನೆ. ಈ ಕುರಿತಾಗಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಈ ಹಿಂದೆ ಭೇಟಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

2001ರಲ್ಲಿ ನವಾಡ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ 17 ವರ್ಷ ಸೆರೆಮನೆವಾಸಕ್ಕೆ ಗುರಿಯಾದ ಅಶೋಕ್ ಮಹ್ತೋ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದವರಿಗೆ ಜೈಲಿನಿಂದ ಬಿಡುಗಡೆಯಾಗಿ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಹೀಗಾಗಿ ನೀನು ಮದುವೆ ಆಗು, ಪತ್ನಿಯನ್ನೇ ಚುನಾವಣೆಯಲ್ಲಿ ಕಣಕ್ಕಿಳಿಸುವಂತೆ ಆರ್‌ಜೆಡಿ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ. ಈ ಗ್ಯಾಂಗ್​ಸ್ಟರ್​​ ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ.

ಅಶೋಕ್ ಮಹ್ತೋ ಬಿಹಾರದ ಮುಂಗೇರ್ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಕ್ರಿಮಿನಲ್ ಹಿಸ್ಟರಿ ಇರುವ ಕಾರಣ ಟಿಕೆಟ್ ಸಿಗದಿದ್ದರೆ ಪತ್ನಿ ಮೂಲಕವಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.

ಗ್ಯಾಂಗಸ್ಟರ್​ ಅಶೋಕ್ ಮಹ್ತೋ 62 ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ಕೆಲವೇ ಮಂದಿ ಅತಿಥಿಗಳು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತೋ ವಿವಾಹ ಸಮಾರಂಭ ನೆರವೇರಿದೆ. ಅಶೋಕ್ ಮಹತೋ ಮದುವೆಯಾದ ಹುಡುಗಿಯ ಹೆಸರು ಕುಮಾರಿ ಅನಿತಾ. ಆಕೆಗೆ 46 ವರ್ಷ ಮತ್ತು ದೆಹಲಿಯ ಆರ್‌ಕೆ ಪುರಂ ನಿವಾಸಿ. ಪಾಟ್ನಾ ಜಿಲ್ಲೆಯ ಸೇಲಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರೌಟದಲ್ಲಿರುವ ಮಾ ಜಗದಂಬಾ ಸ್ಥಾನ ದೇವಸ್ಥಾನದಲ್ಲಿ ಮಂಗಳವಾರ ವಿವಾಹವಾದರು.

ವಿವಾಹದ ನಂತರ, ಅಶೋಕ್ ಮಹ್ತೋ ಪತ್ನಿ ಅನಿತಾ ಜತೆ ಮಾಜಿ ಸಿಎಂ ರಾಬಿದೇವಿಯವರ ನಿವಾಸಕ್ಕೆ ತೆರಳಿ ಆರ್ ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಆಶೀರ್ವಾದ ಪಡೆದರು. ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಲ್ಲಿ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಅವರು ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದ ಮತ್ತೋ, ಪತ್ನಿಗೆ ಟಿಕೆಟ್ ನೀಡುವ ಬಗ್ಗೆ ಲಾಲೂ ಯಾವುದೇ ಖಚಿತ ಭರವಸೆ ನೀಡಿಲ್ಲ.

ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದ ಈತನ ವಿರುದ್ಧ ಪ್ರಸ್ತುತ ನ್ಯಾಯಾಲಯಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ.

ಕರಾವಳಿಯ ಪ್ರಖ್ಯಾತ ಆಭರಣ ಸಂಸ್ಥೆ ಮೇಲೆ ಐಟಿ ಶಾಕ್

Posted by Vidyamaana on 2023-10-31 11:30:09 |

Share: | | | | |


ಕರಾವಳಿಯ ಪ್ರಖ್ಯಾತ ಆಭರಣ ಸಂಸ್ಥೆ ಮೇಲೆ ಐಟಿ ಶಾಕ್

ಮಂಗಳೂರು, ಅ.31: ಕರಾವಳಿಯ ಪ್ರಖ್ಯಾತ "ಆಭರಣ" ಸಂಸ್ಥೆಯ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಉಡುಪಿ, ಮಂಗಳೂರು, ಬೆಳ್ತಂಗಡಿ, ಪಡುಬಿದ್ರಿ, ಬ್ರಹ್ಮಾವರ ಸೇರಿದಂತೆ ಸಂಸ್ಥೆಯ ಮಳಿಗೆಗಳಲ್ಲಿ ದಾಳಿ ನಡೆಸಿದ್ದಾರೆ.‌ 


ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಸಂಸ್ಥೆಯ ಎಲ್ಲ ಆಭರಣ ಮಳಿಗೆಗಳ ಒಳಹೊಕ್ಕಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಉಡುಪಿ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಭರಣ ಜುವೆಲ್ಲರಿ ಸಂಸ್ಥೆ ಹದಿನೈದು ವರ್ಷಗಳ ಮೊದಲಿಗೆ ಉಡುಪಿಯಲ್ಲಿ ಆರಂಭಗೊಂಡಿತ್ತು. ಗುಜ್ಜಾಡಿ ನರಸಿಂಹ ನಾಯಕ್ ಸೋದರರು ಮಳಿಗೆಯನ್ನು ಸ್ಥಾಪಿಸಿದ್ದು ಆನಂತರದ ವರ್ಷಗಳಲ್ಲಿ ರಾಜ್ಯಾದ್ಯಂತ ಮಳಿಗೆಯನ್ನು ಆರಂಭಿಸಿದ್ದರು. ಉಡುಪಿ ಜಿಲ್ಲೆಯ ಉಡುಪಿ, ಪಡುಬಿದ್ರಿ, ಬ್ರಹ್ಮಾವರ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮೂರು ಕಡೆ ಜುವೆಲ್ಲರಿ ಇದೆ.‌ ಬಂಟ್ವಾಳ, ಬೆಳ್ತಂಗಡಿಯಲ್ಲೂ ಶಾಖೆ ಇದೆ. ಆಬಳಿಕ ಬೆಂಗಳೂರು, ಶಿವಮೊಗ್ಗದಲ್ಲಿಯೂ ಮಳಿಗೆ ಸ್ಥಾಪನೆಯಾಗಿತ್ತು. 


 ಅಧಿಕಾರಿಗಳು ಜುವೆಲ್ಲರಿ ಸಂಸ್ಥೆಯ ವಹಿವಾಟು, ಆಸ್ತಿ, ತೆರಿಗೆ ಸಂಗ್ರಹ ವಿಚಾರದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.‌


ಮಂಗಳೂರಿನ ಕದ್ರಿಯ ಶಿವಭಾಗ್ ನಲ್ಲಿ ಆಭರಣ ಜ್ಯುವೆಲ್ಲರಿಗೂ ಐಟಿ ದಾಳಿಯಾಗಿದ್ದು ಐಟಿ ಅಧಿಕಾರಿಗಳು ಟ್ಯಾಕ್ಸಿ ಇನೋವಾ ವಾಹನಗಳಲ್ಲಿ ದಾಳಿಗೆ ಬಂದಿದ್ದರು.‌ ಐದಾರು ಮಂದಿ ಅಧಿಕಾರಿಗಳು ತಪಾಸಣೆಯಲ್ಲಿ ತೊಡಗಿದ್ದು ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ ಎನ್ನುವ ಮಾಹಿತಿಯಿದ್ದು ಎಲ್ಲ ಕಡೆಯೂ ದಾಳಿ ಆಗಿದೆ ಎನ್ನಲಾಗುತ್ತಿದೆ.

ಸಂಜೀವ ಮಠಂದೂರಿಗೆ ಪುತ್ತೂರು ಮಂಡಲ ಅಧ್ಯಕ್ಷ ಪಟ್ಟ

Posted by Vidyamaana on 2024-02-05 13:20:13 |

Share: | | | | |


ಸಂಜೀವ ಮಠಂದೂರಿಗೆ ಪುತ್ತೂರು ಮಂಡಲ ಅಧ್ಯಕ್ಷ ಪಟ್ಟ

ಪುತ್ತೂರು: ಪುತ್ತೂರಿನ ಮಾಜಿ ಶಾಸಕ ಸಂಜೀವ


ಮಠಂದೂರು ಅವರನ್ನು ಪುತ್ತೂರು ಮಂಡಲದ ಅಧ್ಯಕ್ಷರನ್ನಾಗಿ ನೇಮಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ಹರಿದಾಡುತ್ತಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಅವರ ಸಹಿ ಇರುವ ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆ ಲೆಟರ್‌ಹೆಡ್‌ನ ಈ ಪಟ್ಟಿಯಲ್ಲಿ ಸಂಜೀವ ಮಠಂದೂರು ಅವರನ್ನು ಪುತ್ತೂರು ಮಂಡಲ ಅಧ್ಯಕ್ಷರಾಗಿ ನೇಮಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದು ನಕಲಿ ಪತ್ರ ಎಂದು ಹೇಳಲಾಗಿದೆ. ಈ ಕುರಿತು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ರವರು ಪತ್ರ ಮತ್ತು ಪಟ್ಟಿಯ ಬಗ್ಗೆ ಸ್ಪಷ್ಟನೆ ನೀಡಿದ್ದು ಇದೊಂದು ನಕಲಿ ಪಟ್ಟಿ ಎಂದು ಸ್ಪಷ್ಟಪಡಿಸಿದ್ದಾರೆ.

ಪುತ್ತೂರು : ತಾಲೂಕು ಮಟ್ಟದ ಕ್ರೀಡಾಕೂಟ

Posted by Vidyamaana on 2023-11-04 16:21:21 |

Share: | | | | |


ಪುತ್ತೂರು : ತಾಲೂಕು ಮಟ್ಟದ ಕ್ರೀಡಾಕೂಟ

ಪುತ್ತೂರು: 2022-23ರ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಕ್ರೀಡಾಕೂಟದಲ್ಲಿ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮಹಮ್ಮದ್ ಅಫ್ರಾಝ್ ಟ್ರಿಪಲ್ ಜಂಪ್ ವಿಭಾಗದಲ್ಲಿ ಪ್ರಥಮ ಮತ್ತು 400 ಮೀಟರ್ ರಿಲೇ ಯಲ್ಲಿ  ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕೇಂದ್ರ ಸಚಿವರ ಮಗಳನ್ನೇ ಪ್ರೀತಿಸಿ ಮದುವೆಯಾದ ತೆಲಂಗಾಣದ ಮುಂದಿನ ಮುಖ್ಯಮಂತ್ರಿ ರೇವಂತ್​ ರೆಡ್ಡಿಯ ಪ್ರೇಮ ಕಥೆ ಇಲ್ಲಿದೆ

Posted by Vidyamaana on 2023-12-07 04:45:13 |

Share: | | | | |


ಕೇಂದ್ರ ಸಚಿವರ ಮಗಳನ್ನೇ ಪ್ರೀತಿಸಿ ಮದುವೆಯಾದ ತೆಲಂಗಾಣದ ಮುಂದಿನ ಮುಖ್ಯಮಂತ್ರಿ ರೇವಂತ್​ ರೆಡ್ಡಿಯ ಪ್ರೇಮ ಕಥೆ ಇಲ್ಲಿದೆ

ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ(Revanth Reddy) ಅವರನ್ನು ಘೋಷಿಸಲಾಗಿದ್ದು, ಡಿಸೆಂಬರ್ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ರೇವಂತ್ ರೆಡ್ಡಿ ಅವರ ಪ್ರೇಮ ಕಥೆ ವೈರಲ್​ ಆಗಿದೆ. ಕೇಂದ್ರ ಸಚಿವ ಹಾಗೂ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ದಿವಂಗತ ನಾಯಕ ಜೈಪಾಲ್ ರೆಡ್ಡಿ ಅವರ ಕಿರಿಯ ಪುತ್ರಿ ಗೀತಾ ರೆಡ್ಡಿ ಅವರನ್ನು ರೇವಂತ ರೆಡ್ಡಿ ವರಿಸಿದ್ದು ಗೊತ್ತೇ ಇದೆ.ಆದರೆ ರೇವಂತ್ ರೆಡ್ಡಿ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ. 


ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ(Revanth Reddy) ಅವರನ್ನು ಘೋಷಿಸಲಾಗಿದ್ದು, ಡಿಸೆಂಬರ್ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ರೇವಂತ್ ರೆಡ್ಡಿ ಅವರ ಪ್ರೇಮ ಕಥೆ ವೈರಲ್​ ಆಗಿದೆ. ಕೇಂದ್ರ ಸಚಿವ ಹಾಗೂ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ದಿವಂಗತ ನಾಯಕ ಜೈಪಾಲ್ ರೆಡ್ಡಿ ಅವರ ಕಿರಿಯ ಪುತ್ರಿ ಗೀತಾ ರೆಡ್ಡಿ ಅವರನ್ನು ರೇವಂತ ರೆಡ್ಡಿ ವರಿಸಿದ್ದು ಗೊತ್ತೇ ಇದೆ. ಆದರೆ ರೇವಂತ್ ರೆಡ್ಡಿ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ.ರೇವಂತ್ ರೆಡ್ಡಿ ಮತ್ತು ಗೀತಾ ರೆಡ್ಡಿ ಪ್ರೇಮಕಥೆ ಶುರುವಾಗಿದ್ದು ಇಂಟರ್ ಮೀಡಿಯೇಟ್ ನಲ್ಲಿ. ಇವರಿಬ್ಬರು ನಾಗಾರ್ಜುನಸಾಗರದಲ್ಲಿ ಮೊದಲ ಬಾರಿ ಭೇಟಿಯಾದರು. ಅಲ್ಲಿಂದ ಶುರುವಾದ ಪರಿಚಯ ಒಳ್ಳೆ ಗೆಳೆತನಕ್ಕೆ ತಿರುಗಿ ಪ್ರೀತಿಗೆ ತಿರುಗಿತ್ತು. ಮೊದಲು ಪ್ರಸ್ತಾಪಿಸಿದವರು ರೇವಂತ್ ರೆಡ್ಡಿ. ಗೀತಾ ರೆಡ್ಡಿ ಕೂಡ ರೇವಂತ್ ಅವರ ನೇರ ವ್ಯಕ್ತಿತ್ವವನ್ನು ಮೆಚ್ಚಿದ್ದರಿಂದ ತಕ್ಷಣ ಒಪ್ಪಿಕೊಂಡರು. ಹಾಗೆ ಇಬ್ಬರು ತಮ್ಮ ಪ್ರೀತಿಯ ಪಯಣ ಆರಂಭಿಸಿದರು. ಡಿಗ್ರಿ ಮುಗಿದ ನಂತರ ಮನೆಯಲ್ಲಿ ಹೇಳಿ ಒಪ್ಪಿಸಿ 1992ರಲ್ಲಿ ಮದುವೆಯಾದರು.


ಮೊದಲು ಪೇಂಟರ್​ ಆಗಿ ವೃತ್ತ ಜೀವನ ಆರಂಭಿಸಿದ್ದ ರೇವಂತ್ ರೆಡ್ಡಿ, ನಂತರ ರಿಯಲ್​ ಎಸ್ಟೇಟ್​ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಹಂತ ಹಂತವಾಗಿ ಬೆಳೆದರು. ಹಾಗೆಯೇ ರಾಜಕೀಯ ಪ್ರವೇಶಿಸಿದರು.


ತಮ್ಮ ನೇರ ವ್ಯಕ್ತಿತ್ವದಿಂದ ತೆಲಂಗಾಣದಲ್ಲಿ ಬಂಡಾಯ ನಾಯಕರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ರೇವಂತ್

ರೆಡ್ಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿದ್ಯಾರ್ಥಿ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದ ರೇವಂತ್ ರೆಡ್ಡಿ ನಂತರ ಶಾಸಕರಾಗಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಸ್ವತಂತ್ರ ಶಾಸಕರಾಗಿ ಗೆದ್ದು ಟಿಡಿಪಿ ಸೇರಿದರು. ಆ ನಂತರ ರಾಜ್ಯ ಪ್ರತ್ಯೇಕಗೊಂಡು ರೇವಂತ್ ರೆಡ್ಡಿ ಟಿಡಿಪಿಯಿಂದ ಕಾಂಗ್ರೆಸ್‌ಗೆ ಬಂದರು.


ಅಂದಿನಿಂದ ಇಂದು ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಬಹುತೇಕ ಅವರೇ ಸಿಎಂ ಎನ್ನುತ್ತಿದ್ದಾರೆ. ಇಂದು ಸಿಎಲ್ ಪಿ ಸಭೆ ಮುಗಿದ ಬಳಿಕ ತೆಲಂಗಾಣ ರಾಜ್ಯದ ಎರಡನೇ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಅಧಿಕೃತವಾಗಿ ತಿಳಿಯಲಿದೆ. ರೇವಂತ್ ರಾಜಕೀಯ ಜೀವನದ ಬಗ್ಗೆ ಎಲ್ಲರಿಗೂ ಗೊತ್ತು.

ಚೈತ್ರಾ ಕುಂದಾಪುರ ವಂಚನೆ ಕೇಸ್: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಸಿಸಿಬಿ ಬುಲಾವ್

Posted by Vidyamaana on 2023-09-18 11:48:14 |

Share: | | | | |


ಚೈತ್ರಾ ಕುಂದಾಪುರ ವಂಚನೆ ಕೇಸ್: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಸಿಸಿಬಿ ಬುಲಾವ್

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಮತ್ತು ಇತರ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ದೂರುದಾರ ಗೋವಿಂದ ಬಾಬು ಪೂಜಾರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.


ಸಿಸಿಬಿ ಪೊಲೀಸರು ಗೋವಿಂದ ಬಾಬು ಬಳಿ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ.  ಹಣದ ಮೂಲವನ್ನು ತಿಳಿಸದಿದ್ರೆ ಗೋವಿಂದ ಬಾಬು ಪೂಜಾರಿಗೂ ಸಂಕಷ್ಟ ಎದುರಾಗಲಿದೆ. ಈಗಾಗಲೇ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ವಿಜಯನಗರದ ನಿವಾಸ, ಕೆಕೆ ಗೆಸ್ಟ್ ಹೌಸ್, ಗೋವಿಂದ ಬಾಬು ಪೂಜಾರಿ ಕಚೇರಿ ಸೇರಿ ಹಲವೆಡೆ ಮಹಜರು ನಡೆಸಲಾಗಿದೆ. ಸದ್ಯ ಐದು ಕೋಟಿ ಮೂಲದ ಹುಡುಕಾಟದಲ್ಲಿ ಸಿಸಿಬಿ ಇದೆ



Leave a Comment: