ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಬೆಳ್ತಂಗಡಿ : ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Posted by Vidyamaana on 2023-11-07 21:53:20 |

Share: | | | | |


ಬೆಳ್ತಂಗಡಿ : ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳ್ತಂಗಡಿ : 11 ವರ್ಷಗಳ ಹಿಂದೆ ಕೊಲೆಯಾದ ಕಾಲೇಜ್ ವಿದ್ಯಾರ್ಥಿ ಸೌಜನ್ಯ ಪ್ರಕರಣ ಆರೋಪಿಗೆ ನಿರ್ದೋಷಿ ಎಂದು ತೀರ್ಪು ನೀಡಿದ ಹಲವು ತಿಂಗಳ ಬಳಿಕ ಇದೀಗ ಸಿಬಿಐ ಅಧಿಕಾರಿಗಳು ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ಗೆ ಸಾಕ್ಷದಾರ ಕೊರತೆಯಿಂದ ನಿರ್ದೋಷಿ ಎಂದು ತೀರ್ಪು ನೀಡಿದ್ದು ಇದೀಗ ನ.5 ಶನಿವಾರದಂದು ಸಿಬಿಐ ತನಿಖಾಧಿಕಾರಿಗಳು ಹೈ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಕೆಲವೇ ದಿನಗಳಲ್ಲಿ ಹೈಕೋರ್ಟ್ ಪ್ರಕರಣ ದಾಖಲಿಸಿದ ದಾವೆಯ CC ಹೊರಡಿಸಲಿದೆ.


ಇನ್ನೂ ಸೌಜನ್ಯ ಪ್ರಕರಣದಲ್ಲಿ ನಕಲಿ ಹೋರಾಟ ಮಾಡುವವರಿಗೆ ನಡುಕ ಹುಟ್ಟಿಸಿದೆ. ಈವರೆಗೆ ನಕಲಿ ಹೋರಾಟ ಮಾಡುವವರಿಗೆ ಕರ್ನಾಟಕದಲ್ಲಿ ಇನ್ನೂ ಮುಂದೆ ಹೋರಾಟ ನಿರ್ಬಂಧ ಹೇರಲಾಗುತ್ತೆ ಎನ್ನಲಾಗಿದೆ. ಅದಲ್ಲದೇ ಪ್ರಕರಣ ಯಾವ ರೀತಿಯಲ್ಲಿ ಮುಂದುವರಿಯತ್ತದೆ ಎಂದು ಕಾದು ನೋಡಬೇಕಾಗಿದೆ.

ನ್ಯೂ ಮಾನಕ ಜ್ಯುವೆಲ್ಸ್ ಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

Posted by Vidyamaana on 2023-05-29 17:34:44 |

Share: | | | | |


ನ್ಯೂ ಮಾನಕ ಜ್ಯುವೆಲ್ಸ್ ಗೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಪುತ್ತೂರು: ಮಾನಕ ಜ್ಯುವೆಲ್ಸಿನ ನೂತನ ಶೋರೂಂನ 2ನೇ ಮಳಿಗೆ ನ್ಯೂ ಮಾನಕ ಜ್ಯುವೆಲ್ಸ್ ಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.

ಇದೇ ಸಂದರ್ಭ ಸಂಸ್ಥೆಯ ಮಾಲಕರಾದ ಸಿದ್ಧನಾಥ್ ಅವರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಶಾಲು ಹೊದಿಸಿ, ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಫೊಟೋ ನೀಡಿ ಗೌರವಿಸಿದರು.

ಲವರ್ ಜೊತೆ ಪತ್ನಿಯ ರಾಸಲೀಲೆ - ಕಣ್ಣಾರೆ ಕಂಡ ಪತಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ!

Posted by Vidyamaana on 2024-01-14 16:09:48 |

Share: | | | | |


ಲವರ್ ಜೊತೆ ಪತ್ನಿಯ ರಾಸಲೀಲೆ - ಕಣ್ಣಾರೆ ಕಂಡ ಪತಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ!

ಬೆಂಗಳೂರು :- ತಮ್ಮ ರಾಸಲೀಲೆ ಕಂಡ ಪತಿಯನ್ನು ರುಬ್ಬುವ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಬಳಿಕ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಥೆ ಸೃಷ್ಟಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ.ಎಚ್‌ಎಸ್‌ಆರ್‌ ಲೇಔಟ್‌ 2ನೇ ಸೆಕ್ಟರ್‌ನ ನಂದಿನಿ ಬಾಯಿ (22) ಮತ್ತು ಆಕೆಯ ಪ್ರಿಯಕರ ನಿತೀಶ್‌ ಕುಮಾರ್‌ (22) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್‌ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಈ ಸಂಬಂಧ ಮೃತನ ತಂದೆ ಲಕ್ಷ್ಮೀ ನಾಯಕ್‌ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.


ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಆ ಬಳಿಕ ಪತ್ನಿ ನಂದಿನಿ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ ತೆಗೆದು ತವರು ಮನೆಗೆ ಹೋಗುತ್ತಿದ್ದಳು. ಅಲ್ಲದೆ, ತನ್ನ ಮೂರು ವರ್ಷದ ಮಗಳನ್ನು ತನ್ನ ತವರು ಮನೆಯಲ್ಲೇ ಬಿಟ್ಟಿದ್ದಳು. ಈ ಮಧ್ಯೆ ತನ್ನ ವಿದ್ಯಾರ್ಥಿ ಜೀವನದ ಗೆಳೆಯನ ಜತೆ ಮೊಬೈಲ್‌ ನಲ್ಲಿ ಹೆಚ್ಚು ಮಾತನಾಡುತ್ತಿದ್ದಳು. ಈ ವಿಚಾರ ತಿಳಿದ ಪತಿ ವೆಂಕಟರಮಣ ಪತ್ನಿ ಜತೆ ಜಗಳ ಮಾಡಿದ್ದ.ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿದ್ದರು ಎಂಬುದು ಗೊತ್ತಾಗಿದೆ.


ಪತಿ ಹಾಗೂ ಹಿರಿಯರು ಎಚ್ಚರಿಕೆ ನೀಡಿದರೂ ನಂದಿನಿ, ಪ್ರಿಯಕರ ಜತೆಗಿನ ಮಾತುಕತೆ ಮುಂದುವರಿಸಿದ್ದಳು. ಅಲ್ಲದೆ, ಬೆಂಗಳೂರಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ರಾಸಲೀಲೆಯಲ್ಲಿ ತೊಡಗಿದ್ದಾಳೆ. ಅದೇ ವೇಳೆ ಪತಿ ವೆಂಕಟರಮಣ ಮನೆಗೆ ಬಂದಿದ್ದು, ಇಬ್ಬರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಮೂವರ ನಡುವೆ ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್‌ ಕುಮಾರ್‌ ಹಲ್ಲೆ ನಡೆಸಿ, ಕೆಳಗೆ ಬಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಇಬ್ಬರು ಸೆಕ್ಯೂರಿಟಿ ಗಾರ್ಡ್‌ ಕೊಠಡಿಯ ಬಳಿಯ ಶೌಚಾಲಯಕ್ಕೆ ಎಳೆದೊಯ್ದು ಮಲಗಿಸಿದ್ದಾರೆ.ಆರೋಪಿ ನಿತೀಶ್‌ ಕುಮಾರ್‌ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.


ಆ ನಂತರ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿದ ನಂದಿನಿ, ಪತಿ ಶೌಚಾಲಯದಲ್ಲಿ ಕಾರು ಜಾರಿ ಬಿದ್ದಿದ್ದಾರೆ ಎಂದು ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರಿಗೆ, ವೆಂಕಟರಮಣನ ಮೃತದೇಹ ಗಮನಿಸಿದಾಗ ಬಿದ್ದು ಮೃತಪಟ್ಟಿರಲು ಸಾಧ್ಯವಿಲ್ಲ. ಯಾರೋ ಹಲ್ಲೆ ನಡೆಸಿಯೇ ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಅಲ್ಫಿಯಾ ಜೊತೆ ಅಖಿಲ್ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು.

Posted by Vidyamaana on 2023-06-21 07:59:35 |

Share: | | | | |


ಅಲ್ಫಿಯಾ ಜೊತೆ ಅಖಿಲ್ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು.

ತಿರುವನಂತಪುರಂ: ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆ ಆಗಲು ಹೋದ ವೇಳೆ ಪೊಲೀಸರು ಮಂಟಪದಿಂದ ಯುವತಿಯನ್ನು ಎಳೆದೊಯ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಜೂ.17 ರಂದು ಆಲ್ಫಿಯಾ (18) ಅಖಿಲ್ (21) ನನ್ನು ತಿರುವನಂತಪುರಂನಲ್ಲಿರುವ ಕೋವಲಂ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ನಡೆದು ತಾಳಿ ಕಟ್ಟುವ ವೇಳೆಯೇ ಪೊಲೀಸರು ದೇವಸ್ಥಾನಕ್ಕೆ ಬಂದು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.ಮುಸ್ಲಿಂ ಯುವತಿ ಆಗಿರುವ ಆಲ್ಫಿಯಾ ಹಿಂದೂ ಯುವಕ ಅಖಿಲ್‌ ನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾಳೆ. ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಎರಡೂ ಕಡೆಯಿಂದ ಸಂಬಂಧಕ್ಕೆ ವಿರೋಧವಿದೆ.


ಜೂ.16 ರಂದು ಆಲ್ಫಿಯಾ ವಿವಾಹವಾಗುವ ನಿಟ್ಟಿನಲ್ಲಿ ತಿರುವನಂತಪುರಂಕ್ಕೆ ತೆರಳಿದ್ದಾರೆ. ಮರುದಿನ ಆಲ್ಫಿಯಾ ಮನೆಯವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ದೇವಸ್ಥಾನದಲ್ಲಿ ಇನ್ನೇನು ಅಖಿಲ್‌ – ಆಲ್ಫಿಯಾ ವಿವಾಹ ನಡೆಯಬೇಕು ಅಷ್ಟರಲ್ಲೇ ಪೊಲೀಸರು ಬಂದಿದ್ದಾರೆ. ಪ್ರಕರಣವನ್ನು ಮುಕ್ತಾಯಗೊಳಿಸಲು ಆಲ್ಫಿಯಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿದ್ದು,  ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದಿದ್ದಕ್ಕೆ ಆಲ್ಫಿಯಾಳನ್ನು ಪೊಲೀಸರು ಎಳೆದೊಯ್ದು ವಾಹನದಲ್ಲಿ ಕೂರಿಸಿದ್ದಾರೆ.ನಾನು ಸ್ವಇಚ್ಛೆಯಿಂದ ಅಖಿಲ್‌ ನೊಂದಿಗೆ ಮದುವೆಯಾಗಲು ಮನೆಯಿಂದ ಬಂದಿರುವುದಾಗಿ ಪೊಲೀಸರ ಬಳಿ ಜೂ.16 ರಂದು ಹೇಳಿದ್ದೆ. ನನಗೆ 18 ವರ್ಷ ಆಗಿಲ್ಲ ಎಂದಿದ್ದಾರೆ. ನನ್ನ ಮನೆಯವರು ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ ಎಂದು ಯುವತಿ ಅಲ್ಫಿಯಾ ಹೇಳಿದ್ದಾಳೆ.

ಪುತ್ತೂರು ಮತ್ತು ಬೆಳ್ತಂಗಡಿ ಮುಳಿಯ ದಲಿ ಕರಿಮೆಣಿ ಉತ್ಸವ - 1000 ಕ್ಕೂ ಅಧಿಕ ಕರಿಮಣಿ ಗಳ ಸಂಗ್ರಹ - 50 ಕ್ಕೂ ಅಧಿಕ ಆಕರ್ಷಕ ವಿನ್ಯಾಸ ಗಳ ಕರಿಮಣಿಗಳು

Posted by Vidyamaana on 2024-02-17 02:45:19 |

Share: | | | | |


ಪುತ್ತೂರು ಮತ್ತು ಬೆಳ್ತಂಗಡಿ ಮುಳಿಯ ದಲಿ ಕರಿಮೆಣಿ ಉತ್ಸವ - 1000 ಕ್ಕೂ ಅಧಿಕ ಕರಿಮಣಿ ಗಳ ಸಂಗ್ರಹ - 50 ಕ್ಕೂ ಅಧಿಕ ಆಕರ್ಷಕ ವಿನ್ಯಾಸ ಗಳ ಕರಿಮಣಿಗಳು

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವಕ್ಕೆ ಫೆ.15ರಂದು ಚಾಲನೆ ದೊರೆಯಿತು. ಇಲ್ಲಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯವರು ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, "ಮಾಂಗಲ್ಯದಲ್ಲಿ ಮಂಗಳ ಶಬ್ದವಿದೆ. ಮಂಗಳವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷವಾಗಿ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳ ಸೂತ್ರವನ್ನು ಧರಿಸದಾಗಲೇ ಮುತ್ತೈದೆ ಭಾಗ್ಯದ ಜೊತೆಗೆ ಗೃಹಣಿಗೆ ಸಂಸ್ಕಾರ ದೊರೆಯುತ್ತದೆ. ಇಂತಹ ಕರಿಮಣಿಗಳು ಮುಳಿಯದಲ್ಲಿ 2 ಗ್ರಾಂನಿಂದ ಪ್ರಾರಂಭಿಸಿ ಅತ್ಯಧಿಕ ಚಿನ್ನದ ತನಕ ಗ್ರಾಹಕರಿಗೆ ದೊರೆಯಲಿದೆ." ಎಂದರು.


ಕನಿಷ್ಠ 2 ಗ್ರಾಂನ ಕರಿಮಣಿಯ ಮೂಲಕ ಬೆಳ್ಳಿಯ ಕರಿಮಣಿ ಧರಿಸುವ ಬಡವರಿಗೂ ಚಿನ್ನದ ಧರಿಸುವಂತ ಅವಕಾಶ ಮುಳಿಯ ಜ್ಯುವೆಲ್ಸ್ ಮೂಲಕ ದೊರೆಯಲಿದೆ. ಸಂಸ್ಥೆಯ ಶಾಖೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ . ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಗಳು ದೊರೆಯಲಿ ಎಂದರು.ಮುಳಿಯ ಜ್ಯುವೆಲ್ಸ್‌ನ, ಚೇರ್ಮೆನ್ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, " ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ಹಲವು ಹೊಸತನಗಳನ್ನು ಮುಳಿಯ ಜ್ಯುವೆಲ್ಸ್ ಸಂಸ್ಥೆ ಪರಿಚಯಿಸಿದೆ. 25 ವರ್ಷಗಳ ಹಿಂದೆ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಿದೆ. ಆಧುನಿಕತೆಯಲ್ಲಿ ಮಹಿಳೆಯರಿಗೆ ವಿವಿಧ ಕಾರ್ಯಕ್ರಗಳಿಗೆ ತಕ್ಕಂತೆ ಅವರವರ ಮನದಿಚ್ಚೆಯ ಕರಿಮಣಿಗಳನ್ನು ಧರಿಸಲು ಅವಕಾಶವಿದೆ ಎಂದರು.ಸುಮಾರು 1000 ರಕ್ಕೂ ಅಧಿಕ ಕರಿಮಣಿ ಸರಗಳ ಸಂಗ್ರಹ ಈ ಸಂದರ್ಭದಲ್ಲಿ ಲಭ್ಯವಾಗಲಿದ್ದು 50 ಕ್ಕೂ ಅಧಿಕ ಆಕರ್ಷಣೀಯ ವಿನ್ಯಾಸಗಳ ಕರಿಮಣಿಗಳು ಲಭ್ಯವಿದೆ. ಇದಕ್ಕಾಗಿ ಕರಿಮಣಿ ಉತ್ಸವದ ಮೂಲಕ ಹೊಸ ಹೊಸ ಶೈಲಿಯ, ಆಕರ್ಷಕ ವಿನ್ಯಾಸದ ಕರಿಮಣಿ ಉತ್ಸವದಲ್ಲಿ ಲಭ್ಯವಿದ್ದು ಫೆ.15ರಿಂದ ಪ್ರಾರಂಭಗೊಂಡು ಫೆ.29ರ ತನಕ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಶೋರೂಂ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್, ಮಾರ್ಕೆಟಿಂಗ್ ಮ್ಯಾನೇಜ‌ರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವ್ಯಶ್ರೀ ಪ್ರಾರ್ಥಿಸಿದರು. ಯತೀಶ್ ಆಚಾರ್ಯ ಸ್ವಾಗತಿಸಿರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್‌ ಕಾರ್ಯಕ್ರಮ ನಿರೂಪಿಸಿದರು.


ಫೆ.16ರಿಂದ ಪ್ರಾರಂಭಗೊಂಡಿರುವ ಕರಿಮಣಿ ಉತ್ಸವವು ಫೆ.29ರ ತನಕ ನಡೆಯಲಿದ್ದು ಇದರಲ್ಲಿ ನವನವೀನ ಮಾದರಿಯ, ವಿವಿಧ ವಿನ್ಯಾಸ ಕರಿಮಣಿ ಸರಗಳು ಅತೀ ಕಡಿಮೆ ಸುಮಾರು 2 ಗ್ರಾಂ ನಿಂದ ಪ್ರಾರಂಭಿಸಿ ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಎಲ್ಲಾ ರೀತಿಯ ಕರಿಮಣಿ ಸರಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬಂಟ್ವಾಳ: ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರವೀಣ್ ಹೃದಯಾಘಾತದಿಂದ ಮೃತ್ಯು..!!!

Posted by Vidyamaana on 2023-05-05 11:57:17 |

Share: | | | | |


ಬಂಟ್ವಾಳ: ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರವೀಣ್ ಹೃದಯಾಘಾತದಿಂದ ಮೃತ್ಯು..!!!

ಪುಂಜಾಲಕಟ್ಟೆ: ಮನೆ, ಮನೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರೋರ್ವರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೇ.5ರ ಶುಕ್ರವಾರ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಲಾಯಿ ಎಂಬಲ್ಲಿ ಸಂಭವಿಸಿದೆ.ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಇಲ್ಲಿನ ನಿವಾಸಿ ಪ್ರವೀಣ್ ನಾಯಕ್( 45) ಮೃತಪಟ್ಟವರಾಗಿದ್ದಾರೆ.ಪ್ರವೀಣ್ ಮತ್ತು ತಂಡ ಅವರ ನಿವಾಸದ ಪರಿಸರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾಗ ಮಧ್ಯಾಹ್ನ ಸುಮಾರು 1.30 ಗಂಟೆಯ ಹೊತ್ತಿಗೆ ಎದೆನೋವೆಂದು ಕುಸಿದು ಬಿದ್ದಿದ್ದರು. ತತ್ ಕ್ಷಣ ಅವರನ್ನು ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರಕ್ಕೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಮುಲ್ಕಾಜೆ ಮಾಡದಲ್ಲಿ ಪ್ರವೀಣ್ ಡಿಜಿಟಲ್ ಸ್ಟುಡಿಯೋ ನಡೆಸುತ್ತಿದ್ದ ಅವರು ಸೌಮ್ಯ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದರು.



Leave a Comment: