ಭೀಕರ ರಸ್ತೆ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಉದ್ಯಮಿ ಪ್ರಜ್ವಲ್ ನಿಧನ

ಸುದ್ದಿಗಳು News

Posted by vidyamaana on 2024-06-29 08:45:20 | Last Updated by Vidyamaana on 2024-06-29 08:45:20

Share: | | | | |


ಭೀಕರ ರಸ್ತೆ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಉದ್ಯಮಿ ಪ್ರಜ್ವಲ್ ನಿಧನ

ಬೆಳ್ತಂಗಡಿ: ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಮೃತಪಟ್ಟಿದ್ದಾರೆ.ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತ ರಭಸಕ್ಕೆ ಚಾಲಕ ಪ್ರಜ್ವಲ್ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಅಪಘಾತದಲ್ಲಿ ನಿಧನ ಹೊಂದಿದ ಪ್ರಜ್ವಲ್ ನಾಯಕ್ ಅವರು ಬೆಳ್ತಂಗಡಿ ಸಂತೆಕಟ್ಟೆ ನಿವಾಸಿ ಹೆಸರಾಂತ ಉದ್ಯಮಿ, ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ, ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕ ಪ್ರಮೋದ್ ಆರ್. ನಾಯಕ್ ಅವರ ಪುತ್ರ.

ಉದ್ಯಮಿ ಪ್ರಜ್ವಲ್ ಉಜಿರೆಯ ಡಿ.ಎಂ. ಗೌಡ ಕಾಂಪ್ಲೆಕ್ಸ್ ನಲ್ಲಿ ಗೇಮಿಂಗ್ ಶಾಪ್ ಮಾಲೀಕ ಹಾಗೂ ಉದ್ಯಮಿಯಾಗಿದ್ದರು

 Share: | | | | |


ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ

Posted by Vidyamaana on 2023-06-22 00:55:18 |

Share: | | | | |


ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಿದ್ದಾರೆ. ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ ಆಗಿರುವ ಸಂಗತಿಯನ್ನು ಚರ್ಚಿಸಿದರು.ಇದು ಸೌಹಾರ್ದ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ರಾಜ್ಯದ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಪ್ರಮುಖವಾಗಿ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. " ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು" ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಬೆಳಗ್ಗೆ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಚರ್ಚಿಸುವುದಾಗಿ ಅಮಿತ್ ಶಾ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಗೃಹ ಸಚಿವರಿಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಭಾರೀ ಮಳೆ ಹಿನ್ನಲೆ : ನಾಳೆ (ಜೂ. 27) ದ.ಕ. ಜಿಲ್ಲಾದ್ಯಂತ ಶಾಲೆಗಳಿಗೆ ರಜೆ

Posted by Vidyamaana on 2024-06-26 19:19:30 |

Share: | | | | |


ಭಾರೀ ಮಳೆ ಹಿನ್ನಲೆ : ನಾಳೆ (ಜೂ. 27) ದ.ಕ. ಜಿಲ್ಲಾದ್ಯಂತ ಶಾಲೆಗಳಿಗೆ ರಜೆ

ಮಂಗಳೂರು: ಜೂನ್ 27ರಂದು ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ನಾಳೆ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇದರ ಪ್ರಕಟನೆ ಹೀಗಿದೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 27-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ.

ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ

Posted by Vidyamaana on 2023-12-12 04:48:39 |

Share: | | | | |


ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ  ವಿದ್ಯುತ್ ವ್ಯತ್ಯಯ

ಪುತ್ತೂರು: ಮಾಣಿ ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಹಾಗೂ 110/33/11ಕೆವಿ ಮಾಡಾವು ವಿದ್ಯುತ್‌ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.12 ರಂದು ಮಂಗಳವಾರ ಪೂರ್ವಾಹ್ನ 10:00 ರಿಂದ ಸಾಯಂಕಾಲ 5:00 ವರೆಗೆ  ಮಾಡಾವು-ಕಾವು-ಸುಳ್ಯ, 33ಕೆವಿ ಮಾಡಾವು-ಬೆಳ್ಳಾರೆ ಮತ್ತು 33 ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು ವಿದ್ಯುತ್ ಮಾರ್ಗ ಹಾಗೂ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ವಿದ್ಯುತ್ ಮಾರ್ಗಗಳ ವಿದ್ಯುತ್‌ ನಿಲುಗಡೆ ಮಾಡಲಾಗುವುದು.


ಆದ್ದರಿಂದ 110/33/11ಕೆವಿ ಮಾಡಾವು. 33/11ಕೆವಿ ಸುಳ್ಯ, ಬೆಳ್ಳಾರೆ, ಗುತ್ತಿಗಾರು ಮತ್ತು ಕಾವು ವಿದ್ಯುತ್ “ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡಗರ್‌ಳು ಮತ್ತು 33/11ಕೆವಿ ಕುಂಬ್ರ ವಿದ್ಯುತ್‌ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಟಾಟಾ ಸುಮೋ - ಬಸ್‌ ನಡುವೆ ಭೀಕರ ಅಪಘಾತ 5 ಮಂದಿ ಸ್ಥಳದಲ್ಲೇ ಸಾವು

Posted by Vidyamaana on 2023-10-16 16:10:38 |

Share: | | | | |


ಟಾಟಾ ಸುಮೋ - ಬಸ್‌ ನಡುವೆ ಭೀಕರ ಅಪಘಾತ 5 ಮಂದಿ ಸ್ಥಳದಲ್ಲೇ ಸಾವು

ಗದಗ ಅ.16: ಕೆಎಸ್​ಆರ್​ಟಿಸಿ ಬಸ್ ಹಾಗೂ ಟಾಟಾ ಸುಮೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐದು ಜನ ಸಾವನ್ನಪ್ಪಿದ್ದು, ನಾಲ್ವವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಬಳಿ ನಡೆದಿದೆ. ಮೃತರು ಗುಲಬರ್ಗಾ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದವರು ಎಂದು ತಿಳಿದುಬಂದಿದೆ.


ಗದಗ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಮಠಕ್ಕೆ ಹೋಗುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಟಾಟಾ ಸೊಮೊ ನಲ್ಲಿದ್ದ 5 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದರೆ. ಇನ್ನು ವಾಯುವ್ಯ ಸಾರಿಗೆ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 




ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದಿಂದ ಟಾಟಾ ಸೊಮೊನಲ್ಲಿ ಶಿರಹಟ್ಟಿಯ ಫಕ್ಕೀರೇಶ್ವರ ಮಠಕ್ಕೆ ಹೊರಟಿದ್ದರು. ಆದರೆ, ಏಕಾಏಕಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಆದ್ರೆ, ವಿಧಿ ದೇವಸ್ಥಾನಕ್ಕೆ ಹೊರಟವರನ್ನು ಮಸಣಕ್ಕೆ ಕರೆದೊಯ್ದಿದೆ. ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್‌ ಕ್ಲಿಯರ್ ಮಾಡಿದರು.


ಅಪಘಾತವಾದ ರಭಸಕ್ಕೆ ಕಾರು ಸಂಪೂರ್ಣ ಹಾನಿ ಅದರಲ್ಲಿದ್ದ ಪ್ರಯಾಣಿಕರ ಮುಖ, ದೇಹದ ಭಾಗಗಳು ಗುರುತಿಸದಷ್ಟು ಹಾನಿಯಾಗಿವೆ. ಸದ್ಯ ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ

Watch Video:ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

Posted by Vidyamaana on 2024-06-07 16:38:03 |

Share: | | | | |


Watch Video:ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

ಕೇರಳ: ಅಯ್ಯೋ ನನ್ನ ಸಾವು ಕಣ್ಣೆದುರೇ ಪಾಸ್ ಆದಂತೆ ಆಯ್ತು. ಆ ಘಟನೆಯಿಂದ ನಾನು ಬದುಕಿ ಬಂದಿದ್ದೇ ಪವಾಡ ಹಾಗೆ ಹೀಗೆ ಅಂತ ಹೇಳೋದನ್ನು ಕೇಳಿದ್ದೀರಿ. ಆದ್ರೇ ಇಲ್ಲೊಬ್ಬ ಸಾವಿನಿಂದ ಜಸ್ಟ್ ಮಿಸ್ ಆಗಿದ್ದಾರೆ. ಕಂಡೆಕ್ಟರ್ ಸಹಾಯದಿಂದ ಬದುಕಿ ಬಂದ ಬಡಜೀವದ ಬಗ್ಗೆ ಮುಂದೆ ಓದಿ.

ಕೇರಳದ ಮಲಬಾರ್ ಬಸ್ ನಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದನು. ಬಸ್ಸಿನ ಡೋರ್ ಬಳಿಯಲ್ಲೇ ನಿಂತು, ಟಿಕೆಟ್ ಖರೀದಿಸಲು ಮುಂದಾಗಿದ್ದಾನೆ. ಬಸ್ ಕಂಡಕ್ಟರ್ ತನ್ನ ಪಾಡಿಗೆ ತಾನು ಡೋರ್ ಸಮೀಪವೇ ನಿಂತಿದ್ದಂತ ವ್ಯಕ್ತಿಗೆ ಟಿಕೆಟ್ ಕೊಡೋದಕ್ಕೆ ಮುಂದಾಗಿದ್ದಾನೆ.

ಅಳಿಕೆ ಗ್ರಾಮದ ಮುಳಿಯದಲ್ಲಿ ಪ್ರಚಾರ ಸಭೆ

Posted by Vidyamaana on 2023-05-01 05:37:43 |

Share: | | | | |


ಅಳಿಕೆ ಗ್ರಾಮದ ಮುಳಿಯದಲ್ಲಿ ಪ್ರಚಾರ ಸಭೆ

ಪುತ್ತೂರು: ಕಳೆದ 5 ವರ್ಷಗಳಲ್ಲಿ ಬಿಜೆಪಿ ಮಾಡಿದ ಅಭಿವೃದ್ದಿ ಕೆಲಸವನ್ನು ಜನತೆಗೆ ತಿಳಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸವಾಲು ಹಾಕಿದರು. ಅಲ್ಲೊ ಇಲ್ಲೋ ಕೆಲವು ಕಡೆ ರಸ್ತೆಗೆ ಡಾಮಾರು,ಸಿಮೆಂಟ್ ಹಾಕಿದ್ದನ್ನು ಬಿಟ್ಟರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ . ಅಕ್ರಮ ಸಕ್ರಮ ಕಡತಗಳನ್ನು ಹಣ ಕೊಡದೆ ವಿಲೇವಾರಿ ಮಾಡಿದ್ದಾರ? ಬಡವರ ಕಣ್ಣೀರೊರೆಸುವ ಕೆಲಸವನ್ನು ಬಿಜೆಪಿ ಮಾಡಿಯೇ ಇಲ್ಲ. 40% ಕಮಿಷನ್ ಹೊಡೆಯುವ ಉದ್ದೇಶದಿಂದ ಹೆಚ್ಚು ಅನುದಾನವನ್ನು ರಸ್ತೆಗೆ ಬಳಕೆ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಂಜೂರು ಮಾಡಿಸಿಲ್ಲ. ಸಾವಿರಾರು ಕುಟುಂಬಗಳು ಸರಕಾರದ ವಸತಿ ಯೋಜನೆಯಲ್ಲಿ ಮನೆ ನಿವೇಶನಕ್ಕೆ ಅರ್ಜಿ ಹಾಕಿದರೂ ಬಿಜೆಪಿ ಸರಕಾರ ಮನೆ ನೀಡಿಲ್ಲ ಇದು ಬಡವರಿಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಹೇಳಿದರು. ಸಭೆಯಲ್ಲಿ  ಕೆಪಿಸಿ ಲಸ ಸದಸ್ಯಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಪ್ರವೀಣ್ಚಂದ್ರ ಆಳ್ವ, ಪೆರುವಾಯಿ ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪಾ, ಬ್ಲಾಕ್ ಅಧ್ಯಕ್ಷರಾದ ಡಾ.ರಾಜರಾಂ ಕೆ ಬಿ, ವೇದನಾಥ ಸುವರ್ಣ,ಅಳಿಕೆ ಗ್ರಾಪಂ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ಅಳಿಕೆ ಗ್ರಾಪಂ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.



Leave a Comment: