ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಜಾರ್ಖಂಡ್ ನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ರದ್ದು

Posted by Vidyamaana on 2024-02-14 12:41:32 |

Share: | | | | |


ಜಾರ್ಖಂಡ್ ನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ರದ್ದು

ರಾಂಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ 2ನೇ ಹಂತದ ‘ಭಾರತ ಜೋಡೊ ನ್ಯಾಯ ಯಾತ್ರೆ’ಯನ್ನು ಜಾರ್ಖಂಡ್ ನಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಹುಲ್ ತೆರಳಿರುವುದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

‘ಮಂಗಳವಾರ ತಡರಾತ್ರಿ ಕೈಗೊಂಡ ನಿರ್ಧಾರದಂತೆ, ಜಾರ್ಖಂಡ್ ನಲ್ಲಿ ನಡೆಯಬೇಕಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕಾಂಗ್ರೆಸ್ ವಕ್ತಾರ ಸೋನಲ್ ಶಾಂತಿ ತಿಳಿಸಿದ್ದಾರೆ.

ಬಜ್ಪೆ: ಫಲ್ಗುಣಿ ನದಿಗೆ ಬಿದ್ದು ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Posted by Vidyamaana on 2023-11-23 12:49:32 |

Share: | | | | |


ಬಜ್ಪೆ: ಫಲ್ಗುಣಿ ನದಿಗೆ ಬಿದ್ದು ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಬಜ್ಪೆ: ಫಲ್ಗುಣಿ ನದಿಗೆ ಬಿದ್ದು ನೀರು ಪಾಲಾಗಿದ್ದ ಕಾವೂರು ಆಕಾಶಭವನ ನಿವಾಸಿ ಪ್ರಭಾಕರ ಆಚಾರಿ ಎಂಬವರ ಪುತ್ರ ಪ್ರಶಾಂತ್ ಕುಮಾರ್ ಅವರ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.ಮಂಗಳವಾರ ಬೆಳಗ್ಗೆ ತನ್ನ ಗೆಳೆಯರೊಂದಿಗೆ ಪೊಳಲಿ ದೇವಸ್ಥಾನಕ್ಕೆ ತೆರಳಿದ್ದ ಪ್ರಶಾಂತ್‌ ಆಚಾರಿ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನದಿಗೆ ಇಳಿದು ಸ್ನಾನ ಮಾಡಿದ್ದರು.ಬಳಿಕ ಅವರ ಶೂವೊಂದರ ದಾರ ನೀರಿನಲ್ಲಿ ಹೋಗಿದೆ ಎಂದು ಅದನ್ನು ಹುಡುಕಿ ನೀರಿಗೆ ಇಳಿದಿದ್ದ ವೇಳೆ ಅವರು ನದಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎಂದು ಅವರ ಸ್ನೇಹಿತರು ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.


ನಾಪತ್ತೆಯಾದ ಕುರಿತು ಮಾಹಿತಿ ತಿಳಿದೊಡನೆ ಬಜ್ಪೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಶಾಂತ್‌ ಆಚಾರಿ ಅವರಿಗಾಗಿ ಶೋಧಕಾರ್ಯ ಆರಂಭಿಸಿದ್ದರು.


ಬುಧವಾರ ಸಂಜೆ 3 ಗಂಟೆಯ ಸುಮಾರಿಗೆ ಪ್ರಶಾಂತ್‌ ಆಚಾರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜ್ಪೆ :ಯುವಕನಿಗೆ ಚೂರಿ ಇರಿತ ಪ್ರಕರಣ

Posted by Vidyamaana on 2023-09-04 06:48:12 |

Share: | | | | |


ಬಜ್ಪೆ :ಯುವಕನಿಗೆ ಚೂರಿ ಇರಿತ ಪ್ರಕರಣ

ಮಂಗಳೂರು: ಯುವಕನಿಗೆ ಚೂರಿ ಇರಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಪೊಲೀಸರು ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 


ಸುರತ್ಕಲ್ ಠಾಣೆ ವ್ಯಾಪ್ತಿಯ ಕಳವಾರಿನಲ್ಲಿ ನಿನ್ನೆ ರಾತ್ರಿ ಶಾಂತಿಗುಡ್ಡೆ ನಿವಾಸಿ ಅಬ್ದುಲ್  ಸಫ್ವಾನ್‌ (23) ಎಂಬಾತನಿಗೆ ಚೂರಿ ಇರಿತ ಆಗಿತ್ತು. ಪ್ರಕರಣ ಸಂಬಂಧಿಸಿ ಕಳವಾರು ನಿವಾಸಿಗಳಾದ ಪ್ರಶಾಂತ್ (28), ಧನರಾಜ್ (23) ಮತ್ತು ಯಜ್ಞೆಶ್ (22) ಎಂಬವರನ್ನು ಬಂಧಿಸಲಾಗಿದೆ. 

ಆಗಸ್ಟ್ 31ರಂದು ನಡೆದ ಗಲಾಟೆ ಬಗ್ಗೆ ಮಾತುಕತೆಗೆಂದು ಇಬ್ಬರನ್ನು ಕರೆದಿದ್ದು ಅಬ್ದುಲ್ ಸಫ್ವಾನ್ ಮತ್ತು ಮೊಹಮ್ಮದ್ ಸಫ್ವಾನ್ ಬೈಕಿನಲ್ಲಿ ಬರುತ್ತಿದ್ದಾಗಲೇ ಎರಡು ಬೈಕ್ ಗಳಲ್ಲಿ ಬಂದಿದ್ದ ಐದಾರು ಮಂದಿ ತಡೆದು ಹಲ್ಲೆ ನಡೆಸಿದ್ದರು‌‌. ಅಬ್ದುಲ್ ಸಫ್ವಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಬಳಿಕ ಸ್ಥಳದಲ್ಲಿ ಜನ ಸೇರುತ್ತಿದ್ದಾಗ ಆರೋಪಿಗಳು ಪರಾರಿಯಾಗಿದ್ದರು. ಸಫ್ವಾನ್‌ ಅವರ ಕೈ , ತೋಳು ಹಾಗೂ ಬೆನ್ನಿಗೆ ಚೂರಿಯಿಂದ ಇರಿದ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. 


ಸ್ಥಳಕ್ಕೆ ತೆರಳಿ ತನಿಖೆ‌ ನಡೆಸಿದ್ದ  ಸುರತ್ಕಲ್ ಠಾಣೆ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದಾರೆ. ‌ಹಲವರನ್ನು ವಶಕ್ಕೆ ಪಡೆದಿದ್ದು ಮೂವರನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪುನೀತ್, ಬಬ್ಬು ಗಣೇಶ್ ಸೇರಿದಂತೆ ಹಲವರ ವಿರುದ್ಧ ಕೊಲೆಯತ್ನ, ಜೀವ ಬೆದರಿಕೆ ಬಗ್ಗೆ ಪ್ರಕರಣ ದಾಖಲಾಗಿದೆ.

ಪುತ್ತೂರು : ಟೆಕ್ಸ್ ಟೈಲ್ ಸೆಂಟರ್ ಮಾಲಕ‌ ಯಹ್ಯಾ ಹಾಜಿ ನಿಧನ

Posted by Vidyamaana on 2024-02-23 20:53:06 |

Share: | | | | |


ಪುತ್ತೂರು : ಟೆಕ್ಸ್ ಟೈಲ್ ಸೆಂಟರ್ ಮಾಲಕ‌ ಯಹ್ಯಾ  ಹಾಜಿ ನಿಧನ

ಪುತ್ತೂರು: ಮೂಲತಃ ಚಿಕ್ಕಪುತ್ತೂರು ನಿವಾಸಿ,, ಕೋರ್ಟ್ ರಸ್ತೆಯ ಟೆಕ್ಸ್ಟೈಲ್ ಸೆಂಟರ್ ಮಾಲಕ‌ ಯಾಹೀಯಾ ಹಾಜಿ  ಅವರು ಫೆ. 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.

ಇವರು ಕಂಬಳಬೆಟ್ಟು ದಿ. ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರ. ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕೆ ಬೇಕಾಗುವ ವಸ್ತ್ರ (ಕಫನ್)ಗಳ ಮಾರಟಕ್ಕೆ ಟೆಕ್ಸ್ಟೈಲ್ ಸೆಂಟರ್ ಹೆಸರುವಾಸಿಯಾಗಿತ್ತು.

ಮೃತರು ಪತ್ನಿ, ಪುತ್ರ ಸಮೀರ್ ಅವರನ್ನು ಅಗಲಿದ್ದಾರೆ.

ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

Posted by Vidyamaana on 2023-10-24 20:27:34 |

Share: | | | | |


ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

ಬೀಜಿಂಗ್: ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ಅವರನ್ನು ಚೀನಾ ಸರ್ಕಾರ ತೆಗೆದುಹಾಕಿದೆ. ಇದಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ. ಚೀನಾ ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದ್ದು, ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಸಚಿವರನ್ನು ಸರಕಾರ ವಜಾ ಮಾಡಿದೆ ಎಂದಿದೆ.


ಯಾವುದೇ ವಿವರಣೆಯನ್ನು ನೀಡದೆ ಜುಲೈನಲ್ಲಿ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಮಾಜಿ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಬಳಿಕ  ಅದೇ ರೀತಿಯ ಕ್ರಮ ಎದುರಿಸಿದ ಎರಡನೇ ವ್ಯಕ್ತಿ ಲಿ ಅವರಾಗಿದ್ದಾರೆ.


ಮಾರ್ಚ್‌ನಲ್ಲಿ ಕ್ಯಾಬಿನೆಟ್ ಪುನರ್ರಚನೆಯ ಸಮಯದಲ್ಲಿ ರಕ್ಷಣಾ ಸಚಿವ ಆದ ಲಿ  ಆಗಸ್ಟ್ 29 ರಂದು ಭಾಷಣವೊಂದನ್ನು ಮಾಡಿದ ನಂತರ ಜನರ ಜೊತೆ ಕಾಣಿಸಿಕೊಂಡಿರಲಿಲ್ಲ. ಆವರು ಕಾಣೆಯಾಗಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಅವರ ಎಲ್ಲಿದ್ದಾರೆ ಏನ್‌ ಮಾಡ್ತಿದಾರೆ ಅಂತ ತಿಳುದು ಬಂದಿರಲಿಲ್ಲ.ಅಧ್ಯಕ್ಷ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಾಯಕ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರ ಮುಂದುವರಿಯುವ ಬಗ್ಗೆ ಪ್ರಶ್ನೆಗಳನ್ನು ಲಿ ಎತ್ತಿದ್ದರು. ಅಪಾರ ದೇಶ ನಿಷ್ಠೆ ತೋರುತ್ತಿದ್ದ ಆವರು ಸಾರ್ವಜನಿಕ ಮತ್ತು ಖಾಸಗಿ ಭ್ರಷ್ಟಾಚಾರದ ವಿರುದ್ಧ ಪಟ್ಟುಬಿಡದೆ ದನಿ ಎತ್ತುತ್ತಿದ್ದರು.


ಇದು ಜಿನ್‌ಪಿಂಗ್ ಅವರಿಗೆ ಮುಜುಗರ ತರುತ್ತಿತ್ತು. ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಬೇಕು, ಹದಗೆಡುತ್ತಿರುವ ಆರ್ಥಿಕತೆಯ ನಡುವೆ ಅಮೆರಿಕಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಮ್ಮ ಮಾತು ಕೇಳುವವರನ್ನು ಆ ಸ್ಥಾನಕ್ಕೆ ತರಬೇಕೆಂಬುದು ಅಧ್ಯಕ್ಷ ಜಿನ್‌ಪಿಂಗ್ ಯೋಚಿಸುತ್ತಿದ್ದರು ಎನ್ನಲಾಗಿದೆ.

ರೀಲ್ಸ್ ಮಾಡುವುದನ್ನು ವಿರೋಧಿಸಿದ್ದಕ್ಕೆ ಗಂಡನನ್ನೇ ಹತ್ಯೆ ಮಾಡಿದ ಪತ್ನಿ!

Posted by Vidyamaana on 2024-01-09 14:54:51 |

Share: | | | | |


ರೀಲ್ಸ್ ಮಾಡುವುದನ್ನು ವಿರೋಧಿಸಿದ್ದಕ್ಕೆ ಗಂಡನನ್ನೇ ಹತ್ಯೆ ಮಾಡಿದ ಪತ್ನಿ!

ಪಾಟ್ನಾ: ರೀಲ್ಸ್ ಮಾಡುವುದನ್ನು ವಿರೋಧಿಸಿದ್ದಕ್ಕೆ ಪತ್ನಿಯೊಬ್ಬಳು ಅಪ್ಪ- ಅಮ್ಮನೊಂದಿಗೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.ಈ ಘಟನೆ ಬಿಹಾರದ (Bihar) ಬೇಗುಸರಾಯ್‌ನಲ್ಲಿ (Begusarai) ನಡೆದಿದೆ. ಮಹೇಶ್ವರ್ ಕುಮಾರ್ ಸಾವನ್ನಪ್ಪಿದ ದುರ್ದೈವಿ. ಈ ವ್ಯಕ್ತಿ ಕೋಲ್ಕತ್ತಾದಲ್ಲಿ (Kolkata) ಕೂಲಿ ಕೆಲಸ ಮಾಡುತ್ತಿದ್ದರು.ಪತ್ನಿ ರಾಣಿಕುಮಾರಿಗೆ ರೀಲ್ಸ್ ಮಾಡುವ ಹುಚ್ಚಿತ್ತು. ಆದರೆ, ಪತಿ ಅದನ್ನು ವಿರೋಧಿಸಿದ್ದರು. ಹೀಗಾಗಿ ಕೋಪಗೊಂಡ ಪತ್ನಿಯು ತನ್ನ ತಂದೆ-ತಾಯಿಯೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.


ಫಫೌತ್ ಗ್ರಾಮದ ರಾಣಿ ಕುಮಾರಿ ಸುಮಾರು 7 ವರ್ಷಗಳ ಹಿಂದೆ ಮಹೇಶ್ವರ್ ನನ್ನ ಮದುವೆಯಾಗಿದ್ದರು. ಮಹೇಶ್ವರ್ ಕೆಲಸಕ್ಕೆ ಹೋಗುವ ವೇಳೆ ಫಫೌತ್ ಗ್ರಾಮದಲ್ಲಿನ ತನ್ನ ಅತ್ತೆಯ ಮನೆಗೆ ಹೋಗಿದ್ದರು ಎನ್ನಲಾಗಿದೆ. ಇನ್ಸ್ಟಾಗ್ರಾಂ ರೀಲ್ಸ್ ವಿಚಾರವಾಗಿ ಮಹೇಶ್ವರ್ ಮತ್ತು ರಾಣಿ ಕುಮಾರಿ ನಡುವೆ ವಾಗ್ವಾದ ನಡೆದಿತ್ತು. ಆಗ ಜಗಳ ವಿಕೋಪಕ್ಕೆ ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.



Leave a Comment: