ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಸುದ್ದಿಗಳು News

Posted by vidyamaana on 2024-07-01 19:31:51 |

Share: | | | | |


ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಮಳೆಗಾಲ ಆರಂಭವಾಗಿದ್ದು, ಈ ಋತುವಿನಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯವಾಗಿದೆ. ಋತುಮಾನದ ಕಾಯಿಲೆಗಳ ಜೊತೆಗೆ ಡೆಂಗ್ಯೂ ಅಪಾಯವಿದೆ. ಡೆಂಗ್ಯೂ ವಾಸ್ತವವಾಗಿ ಹೆಣ್ಣು ಈಜಿಪ್ಟಿ (ಈಡಿಸ್ ಸೊಳ್ಳೆ) ಸೊಳ್ಳೆಗಳಿಂದ ಹರಡುತ್ತದೆ.

ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದ್ರೆ, ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿ ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಕೇವಲ ಮನುಷ್ಯನ ಕೆಳಗಿನ ಅಂಗಗಳನ್ನ ಗುರಿಯಾಗಿಸುತ್ತಾರೆ. ಈ ಸೊಳ್ಳೆಗಳು ಕಚ್ಚಿದರೆ ತೀವ್ರ ಜ್ವರದ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಡೆಂಗ್ಯೂ ಸೊಳ್ಳೆಗಳು ಕೂಲರ್‌, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಛಾವಣಿಗಳು, ಟೈರ್‌ಗಳು, ಗುಂಡಿಗಳು ಇತ್ಯಾದಿಗಳಲ್ಲಿ ತಮ್ಮ ಮೊಟ್ಟೆಗಳನ್ನ ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನ ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆಗಳಾಗಿ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳು ಹುಟ್ಟಿದ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ.

ಡೆಂಗ್ಯೂ ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂ ಲಕ್ಷಣಗಳು ಕಾಣಿಸುವುದಿಲ್ಲ. ಆದ್ರೆ, ಕೆಲವು ದಿನಗಳ ನಂತರ ಅದರ ಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈಡಿಸ್ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಬರುತ್ತದೆ. ಈ ಸೊಳ್ಳೆಗಳು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ಡೆಂಗ್ಯೂ ಸೊಳ್ಳೆಗಳು ಮನೆಗಳ ಮೂಲೆಗಳಲ್ಲಿ ಪರದೆಯ ಹಿಂದೆ, ಸೊಳ್ಳೆಗಳು ಇರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ.

ಡೆಂಗ್ಯೂ ಜ್ವರದ ಲಕ್ಷಣಗಳು.!

ಡೆಂಗ್ಯೂ ಈಡಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಜ್ವರದಂತಿರುತ್ತವೆ. ಆದ್ರೆ, ಇದು ತೀವ್ರವಾದ ಹೆಮರಾಜಿಕ್ ಜ್ವರಕ್ಕೆ ಕಾರಣವಾಗಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ವೈದ್ಯರು.

ಲಕ್ಷಣಗಳೇನು.?

ತೀವ್ರವಾದ ಜ್ವರ, ತಲೆನೋವು, ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಣ್ಣುಗಳ ಕೆಳಗೆ ನೋವು, ಮೊಣಕಾಲು ನೋವು, ಊತ, ಹಲ್ಲು, ಮೂಗು, ಒಸಡುಗಳಿಂದ ರಕ್ತಸ್ರಾವ ಇತ್ಯಾದಿಗಳನ್ನ ಗಮನಿಸಿದರೆ ತಕ್ಷಣವೇ ಎಚ್ಚರಗೊಳ್ಳಿ.

ಡೆಂಗ್ಯೂ ತಡೆಗಟ್ಟುವುದು ಹೇಗೆ.?

* ವಿಶೇಷವಾಗಿ ಮಳೆಗಾಲದಲ್ಲಿ ದೇಹವನ್ನ ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನ ಧರಿಸಿ.

* ಮಲಗುವಾಗ ಸೊಳ್ಳೆ ಪರದೆಗಳನ್ನ ಬಳಸಿ.

* ಸೊಳ್ಳೆ ಕಡಿತವನ್ನು ತಡೆಯಲು ದೇಹಕ್ಕೆ ಎಣ್ಣೆ ಅಥವಾ ಕ್ರೀಮ್ ಹಚ್ಚಿ.

* ನಿಮ್ಮ ಮನೆ ಮತ್ತು ಸುತ್ತಮುತ್ತ ಕೊಳಕು ನೀರು ಬರುವುದನ್ನ ತಪ್ಪಿಸಿ.

* ಅನಗತ್ಯ ವಸ್ತುಗಳು ಹಾಗೂ ಕೂಲರ್ ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು.

* ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 Share: | | | | |


ಮೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Posted by Vidyamaana on 2023-08-15 15:25:16 |

Share: | | | | |


ಮೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಪುತ್ತೂರು: ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನಡೆಯಿತು.

ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆಯ ಸಹಾಯಕ ಅಭಿಯಂತರ ರಾಜೇಶ್ ಕೆ. ಧ್ವಜಾರೋಹಣ ನೆರವೇರಿಸಿದರು. 

ವಕೀಲರಾದ ಜಗನ್ನಾಥ್ ರೈ, ಮಹಾಬಲ ಗೌಡ, ವಿರೂಪಾಕ್ಷ ಭಟ್, ಸಂಕಪ್ಪ ಗೌಡ, ಬಿಲ್ಡಿಂಗ್ ವ್ಯವಸ್ಥಾಪಕ ಜಯಂತ್ ಕುಮಾರ್, ಮೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸಂತೋಷ್ ಜಾಧವ್ ಅವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು, ನಬಿಸಾಬ್ ನದಾಫ್ ಅವರು ಕಾರ್ಯಕ್ರಮವನ್ನು ವಂದಿಸಿದರು.

ಇಂದಿನಿಂದ ಬೆಂಗಳೂರು ಕಂಬಳ

Posted by Vidyamaana on 2023-11-25 08:52:02 |

Share: | | | | |


ಇಂದಿನಿಂದ ಬೆಂಗಳೂರು ಕಂಬಳ

ಬೆಂಗಳೂರು:ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಐತಿಹಾಸಿಕ ಕಂಬಳ ಕೂಟಕ್ಕೆ ಬೆಂಗಳೂರು ಸಜ್ಜಾಗಿದೆ.

ನಗರದ ಅರಮನೆ ಮೈದಾನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಬಂದಿರುವ 180ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದ ಕರೆಯಲ್ಲಿ ಓಟದ ರಸದೂಟ ಉಣಿಸಲಿವೆ. ಬೆಂಗಳೂರು ಕಂಬಳವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಜನತೆ ಕಾತುರರಾಗಿದ್ದಾರೆ.

ಅರಮನೆ ಮೈದಾನದ ಗೇಟ್‌ ನಂ. 5ರೊಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಕರಾವಳಿಯ ಸೊಗಡು ಕಣ್ತುಂಬುತ್ತಿದೆ. ಅಲಂಕಾರಗೊಂಡಿರುವ ಮೂರು ಬೃಹತ್‌ ವೇದಿಕೆಗಳ ಮೂಲಕ ಕಂಬಳಪ್ರಿಯರಿಗೆ ರಸದೌತಣ ನೀಡಲು ಬೆಂಗಳೂರು ಕಂಬಳದ ಕರೆ ಸಜ್ಜಾಗಿದೆ.

ಡೇ ಕೇರ್‌ನಲ್ಲಿ ಕಂದಮ್ಮಗಳ ಹೊಡೆದಾಟ ಪ್ರಕರಣ

Posted by Vidyamaana on 2023-06-24 03:45:14 |

Share: | | | | |


ಡೇ ಕೇರ್‌ನಲ್ಲಿ ಕಂದಮ್ಮಗಳ ಹೊಡೆದಾಟ ಪ್ರಕರಣ

ಬೆಂಗಳೂರು: ಶಿಶುಪಾಲನಾ ಕೇಂದ್ರವೊಂದರಲ್ಲಿ ಮೂರು ವರ್ಷದ ಬಾಲಕ 2 ವರ್ಷದ ಬಾಲಕಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಬಿಕೇರ್ ಕೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸುಬ್ರಮಣ್ಯನಗರ ಪೊಲೀಸರು ನೋಟೀ ಸ್ ನೀಡಿದ್ದಾರೆ. ಮತ್ತೊಂದೆಡೆ ರಾಜ್ಯ ಮಕ್ಕಳ ಹಕ್ಕುಗಳ ಅಯೋ ಗವು ಘಟನೆ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಎಷ್ಟು ವರ್ಷಗಳಿಂದ ಡೇ ಕೇರ್ ನಡೆಸಲಾಗುತ್ತಿದೆ? ಶಿಕ್ಷಣ ಇಲಾಖೆ ಯಿಂದ ಅನುಮತಿ ಪಡೆಯಲಾಗಿದೆಯೇ? ಮಕ್ಕಳ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಂಡಿದ್ದೀರಾ? ಎಂಬುದರ ಬಗ್ಗೆ ಡೇ ಕೇರ್‌ಸೆಂಟರ್ ಮಾಲೀಕರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.ಜತೆಗೆ ಡೇ ಕೇರ್‌ಗೆ ಅನುಮತಿ ನೀಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೂ ಸೂಚಿಸಲಾಗಿದೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲ್ಲಸಂದ್ರ ದಲ್ಲಿ ಡೇ ಕೇರ್‌ನಲ್ಲಿ ಎರಡು ವರ್ಷದ ಬಾಲಕಿ ಮೇಲೆ ಮೂರು ವರ್ಷದ ಬಾಲಕ ಹಲ್ಲೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲಿ ವಿಡಿಯೋ ವೈರಲ್ ಆಗಿತ್ತು.ಘಟನೆಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿ ತ್ತು. ಈ ಹಿನ್ನೆಲೆಯಲ್ಲಿ ಡೇ ಕೇರ್ ತಾತ್ಕಾಲಿಕ ಬಂದ್ ಮಾಡಲಾಗಿದೆ. ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಡೇ ಕೇರ್‌ಗೆ ದೌಡಾಯಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಬಾಲಕಿಯ ಪೋಷಕರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.ಎಂದು ಪೊಲೀಸರು ತಿಳಿಸಿದ್ದಾರೆ.

ಕೇರ್ ಸೆಂಟರ್‌ನಲ್ಲಿ ಸಾಕಷ್ಟು ಮಕ್ಕಳಿದ್ದರು. ಕೊಠಡಿಯೊಂದರಲ್ಲಿ ಹಲ್ಲೆಗೊಳಗಾದ ಬಾಲಕಿ ಜತೆಗೆ ಬಾಲಕ ಸೇರಿ ಏಳು ಮಕ್ಕಳಿದ್ದರು. ಮಗುವೊಂದು ಶೌಚಾಲಯಕ್ಕೆ ತೆರಳಲು ಹೋಗಬೇಕಾಗಿದ್ದರಿಂದ ಸಿಬ್ಬಂದಿ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ ಬಾಲಕ ಬಾಲಕಿ ಗೆ ಹೊಡೆದಿದ್ದ. ನಿರಂತರವಾಗಿ ಏಳು ನಿಮಿಷಗಳ ಕಾಲ ಸೆರೆ ಯಾದ ವಿಡಿಯೋದಲ್ಲಿ ಹಲವು ಬಾರಿ ಹಲ್ಲೆ ಮಾಡಿದ್ದಾನೆ. ಪೋಷಕರು ಬಾ ಲಕಿಯನ್ನು ಮನೆಗೆ ಕರೆದೊಯ್ಯಲು ಬಂದಾಗ ಮುಖದ ಮೇಲೆ ಕೆನ್ನೆ ಹಾಗೂ ಕೈಗಳ ಮೇಲೆ ಗಾಯದ ಗುರುತು ಇರುವುದನ್ನು ಕಂಡಿ ದ್ದಾರೆ. ಇತರ ಮಕ್ಕಳಿಂದ ಮಾಹಿತಿ ಪಡೆದಿದ್ದರು. ಕೊಠಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು.

ಯಶಸ್ವಿಯಾಗಿ ನಡೆದ ದಿವಂಗತ ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಸ್ಮರಣಾರ್ಥ ಪುರುಷರಕಟ್ಟೆಯಲ್ಲಿ ಮಾದರಿ ರಕ್ತದಾನ ಶಿಬಿರ..!

Posted by Vidyamaana on 2024-06-24 18:27:43 |

Share: | | | | |


ಯಶಸ್ವಿಯಾಗಿ ನಡೆದ ದಿವಂಗತ ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಸ್ಮರಣಾರ್ಥ ಪುರುಷರಕಟ್ಟೆಯಲ್ಲಿ ಮಾದರಿ ರಕ್ತದಾನ ಶಿಬಿರ..!

ಪುತ್ತೂರು :ಇಲ್ಲಿನ ಪುರುಷರಕಟ್ಟೆಯ ನಿವಾಸಿಯಾಗಿದ್ದ ದಿ.ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಶಾಂತಿಗೋಡು ಇವರ ಸ್ಮರಣಾರ್ಥ ಟೈ ಬ್ರೇಕರ್ಸ್ ಪುರುಷರಕಟ್ಟೆ ಹಾಗೂ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಜಂಟಿ ಸಾರಥ್ಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ.) ಸಹಯೋಗದಲ್ಲಿ ರೋಟರಿ ಕ್ಯಾಂಪ್ಕೊ ಪುತ್ತೂರು ಬ್ಲಡ್ ಸೆಂಟರ್ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುರುಷರಕಟ್ಟೆ ಜಂಕ್ಷನ್ ನಲ್ಲಿ ಜೂ 24ರಂದು ಯಶಸ್ವಿಯಾಗಿ ನಡೆಯಿತು.

 60 ಮಂದಿ ಸ್ವಯಂ ಪ್ರೇರಿತರಾಗಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಜೀವದಾನಿಗಳಾದರು.

ಸ್ಕೂಟರ್ ಗೆ ಬಿಎಂಟಿಸಿ ಬಸ್ ಡಿಕ್ಕಿ: ವಿದ್ಯಾರ್ಥಿನಿ ಕುಸುಮಿತಾ ಮೃತ್ಯು

Posted by Vidyamaana on 2024-02-02 21:32:38 |

Share: | | | | |


ಸ್ಕೂಟರ್ ಗೆ ಬಿಎಂಟಿಸಿ ಬಸ್ ಡಿಕ್ಕಿ: ವಿದ್ಯಾರ್ಥಿನಿ  ಕುಸುಮಿತಾ ಮೃತ್ಯು

ಬೆಂಗಳೂರು: ಬಿಎಂಟಿಸಿ ಬಸ್ಸೊಂದು ಬೈಕ್ ಡಿಕ್ಕಿಯಾಗಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.



ಕೆಂಗೇರಿಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದ ಮಲ್ಲೇಶ್ವರ ನಿವಾಸಿ ಯುವತಿ ಕುಸುಮಿತಾ (21) ಇಂದು ಬೆಳಗ್ಗೆ 8.30ಕ್ಕೆ ಕಾಲೇಜಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.


ಕೂಡಲೇ ಅವರನ್ನು ಸ್ಥಳೀಯ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ

ರಸ್ತೆ ಡಿವೈಡ್‌ರ್ ಮೇಲೆ ಕುಳಿತು ಮಾತನಾಡುತ್ತಿದ್ದ ಯುವಕರ ಮೇಲೆ ಹರಿದ ಟ್ರಕ್ ನಾಲ್ವರು ಯುವಕರ ದುರ್ಮರಣ

Posted by Vidyamaana on 2023-10-18 16:33:56 |

Share: | | | | |


ರಸ್ತೆ ಡಿವೈಡ್‌ರ್ ಮೇಲೆ ಕುಳಿತು ಮಾತನಾಡುತ್ತಿದ್ದ ಯುವಕರ ಮೇಲೆ ಹರಿದ ಟ್ರಕ್ ನಾಲ್ವರು ಯುವಕರ ದುರ್ಮರಣ

ವಿಜಯಪುರ, ಅ.18: ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತು ಮಾತನಾಡುತ್ತಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್‌ ಯುವಕರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಟೋಲ್ ಗೇಟ್ ಬಳಿ ನಡೆದಿದೆ.


ಮೃತ ಯುವಕರನ್ನು ವಿಜಯಪುರ ವಜ್ರಹನುಮಾನ ನಗರದ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ (26) ಮತ್ತು ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.


ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಸೇರಿ ಊಟಕ್ಕೆ ಹೊರಗಡೆ ಹೋಗಿದ್ದಾರೆ. ಊಟ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್​ಗೇಟ್ ಹತ್ತಿರದ ಟ್ರಕ್ ಬೇ ಬಳಿ ಇರುವ ಡಿವೈಡರ್ ಮೇಲೆ ಯುವಕರು ಕುಳಿತಿದ್ದರು. ಈ ವೇಳೆ ಜವರಾಯನ ರೂಪದಲ್ಲಿ ಬಂದ ಲಾರಿ ಯುವಕರ‌ ಮೇಲೆ ಹರಿದಿದೆ. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಕರೆ ಮಾಡಿ ತೀವ್ರವಾಗಿ ಗಾಯಗೊಂಡ ಯುವಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು‌ ಮುಂದಾಗಿದ್ದರು. ಆದ್ರೆ ಯುವಕರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಇನ್ನು, ಈ ಘಟನೆಯಲ್ಲಿ ಯುವಕರಿಗೆ ಸೇರಿದ ಬೈಕ್​ಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ.


ಸುದ್ದಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಸೇರಿದಂತೆ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪ್ರೆಗೆ ರವಾನಿಸಿದರು. ಬದುಕಿ ಬಾಳಿ ಸುಂದರ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ನಾಲ್ವರು ಸ್ನೇಹಿತರು ದಾರುಣ ಅಂತ್ಯ ಕಂಡಿರುವುದರಿಂದ ಕುಟುಂಬಸ್ಥರು ಮತ್ತು ಸಂಬಂಧಿಕರು ಶೋಕ ಸಾಗರದಲ್ಲಿ‌ ಮುಳುಗಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.



Leave a Comment: