ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


ಪುತ್ತೂರಿನಲ್ಲಿ ಪೊಲೀಸ್ ದೌರ್ಜನ್ಯ ಆರೋಪ : ಆಂತರಿಕ ವಿಚಾರಣೆಗೆ ಆದೇಶಿಸಿದ: ಎಸ್ಪಿ

Posted by Vidyamaana on 2023-05-17 10:34:04 |

Share: | | | | |


ಪುತ್ತೂರಿನಲ್ಲಿ ಪೊಲೀಸ್ ದೌರ್ಜನ್ಯ ಆರೋಪ : ಆಂತರಿಕ ವಿಚಾರಣೆಗೆ ಆದೇಶಿಸಿದ: ಎಸ್ಪಿ

ಪುತ್ತೂರು : ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೊವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದ ಪುತ್ತೂರು ಪೊಲೀಸರು ಅವರಿಗೆ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೊ ಹಾಗು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿ ಆಧರಿಸಿ ಈ ಬಗ್ಗೆ ಆಂತರಿಕ ಆರಂಭಿಸಲಾಗಿದೆ ಎಂದು ದ.ಕ ಎಸ್ಪಿ ಐಪಿಎಸ್ ಡಾ.ಅಮಥೆ ವಿಕ್ರಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹಲವರಿಗೆ ಗಾಯ

Posted by Vidyamaana on 2023-12-21 13:29:57 |

Share: | | | | |


ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹಲವರಿಗೆ ಗಾಯ

ಪುತ್ತೂರು : ಓಮ್ನಿ ಕಾರು ಮತ್ತು ಆಲ್ಟೊ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನೆಹರುನಗರದಲ್ಲಿ ನಡೆದಿದೆ. ಡಿ 20 ರ  ತಡರಾತ್ರಿ ಈ ಘಟನೆ ನಡೆದಿದ್ದು, ಹಲವರಿಗೆ ಗಾಯಗಳಾಗಿವೆ. ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಖಾಸಗಿ ಕಾಲೇಜಿನ ಬಸ್ ಗೂ ಕಾರು ಡಿಕ್ಕಿಯಾಗಿದ್ದು, ಹಾನಿಯಾಗಿದೆ ಎಂದು ತಿಳಿದು ಬಂದಿದೆ

ಸಿಎಂ ಸಿದ್ದರಾಮಯ್ಯ – ಪ್ರಧಾನಿ ಮೋದಿ ಭೇಟಿ ದಿನಾಂಕ ಫಿಕ್ಸ್

Posted by Vidyamaana on 2023-08-01 11:06:07 |

Share: | | | | |


ಸಿಎಂ ಸಿದ್ದರಾಮಯ್ಯ – ಪ್ರಧಾನಿ ಮೋದಿ ಭೇಟಿ ದಿನಾಂಕ ಫಿಕ್ಸ್

ಬೆಂಗಳೂರು:  ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಆಗಸ್ಟ್  3 ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಬಳಿಕ  ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿದ್ದಾರೆ.


ನಾಳೆ ಬೆಳಗ್ಗೆ ದೆಹಲಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಜೊತೆ ಸಭೆ ಬಳಿಕ ಪ್ರಧಾನಿ ಮೋದಿಯವರನ್ನ ಭೇಟಿಯಾಗಲಿದ್ದು ರಾಜ್ಯದ ಅಭಿವೃದ್ಧಿ  ವಿಚಾರಗಳಬಗ್ಗೆ ಮೋದಿ ಜೊತೆ ಸಿದ್ದರಾಮಯ್ಯನವರು ಚರ್ಚೆ ನಡೆಸಲಿದ್ದಾರೆ. ಆಗಸ್ಟ್‌ 3ರ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ ಅವರು ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ತೇಜಸ್ವಿ ಕಥೆಯ ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಿದ ಸಿದ್ದರಾಮಯ್ಯ

Posted by Vidyamaana on 2023-06-15 06:32:50 |

Share: | | | | |


ತೇಜಸ್ವಿ ಕಥೆಯ ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಿದ ಸಿದ್ದರಾಮಯ್ಯ

ಬೆಂಗಳೂರು: ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.ಪೂರ್ಣಚಂದ್ರ ತೇಜಸ್ವಿ ಅವರ ಕಥೆಯೊಂದನ್ನು ಆಯ್ದು ನಿರ್ದೇಶಕ ಶಶಾಂಕ್ ಸೋಗಲ್ ಅವರು ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ  ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾವು ನೋಡುಗರ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.ಚಿತ್ರದ ತಂಡವು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತೆರಿಗೆ ವಿನಾಯತಿಗೆ ಮನವಿ ಮಾಡಿತ್ತು. ಕೋಮುಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಸಿನಿಮಾವನ್ನು ಇನ್ನಷ್ಟು ಜನರು ಮತ್ತು ಶಾಲಾ ಮಕ್ಕಳು ನೋಡಲು ಸಹಕಾರಿಯಾಗುವಂತೆ ಮಾಡಲು ತೆರಿಗೆ ವಿನಾಯತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಹಮತ ಸೂಚಿಸಿದ್ದಾರೆಚಿತ್ರದಲ್ಲಿ ಆಶಿತ್, ಪೂರ್ಣಚಂದ್ರ ತೇಜಸ್ವಿ, ಆದಿತ್ಯ ಅಶ್ರಿ ಮುಂತಾದ ನಟರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

ಸತ್ತ ಹೆಂಡತಿಗೆ ವರ್ಷಗಳ ಕಾಲ ಗಂಡ ಮೆಸ್ಸೆಜ್ ಕಳಿಸುತ್ತಲೇ ಇದ್ದ : ಕೊನೆಗೆ ಒಂದು ದಿನ ರಿಪ್ಲೆ ಬಂದೆ ಬಿಟ್ಟಿತು!

Posted by Vidyamaana on 2023-10-22 21:10:36 |

Share: | | | | |


ಸತ್ತ ಹೆಂಡತಿಗೆ ವರ್ಷಗಳ ಕಾಲ ಗಂಡ ಮೆಸ್ಸೆಜ್ ಕಳಿಸುತ್ತಲೇ ಇದ್ದ : ಕೊನೆಗೆ ಒಂದು ದಿನ ರಿಪ್ಲೆ ಬಂದೆ ಬಿಟ್ಟಿತು!

   ಈ ಜಗತ್ತನ್ನು ತೊರೆದ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳಲು ಈ ಪತಿ ಆಕೆ ಜೀವಂತ ಇದ್ದಾಗ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ವಿಧಾನವನ್ನು ಅಳವಡಿಸಿಕೊಂಡ!!! ರಿಪ್ಲೆ ಬರಲ್ಲ ಅಂತ ಗೊತ್ತಿದ್ದೂ ಕಳಿಸುತ್ತಿದ್ದ, ಆದರೆ ಕೊನೆಗೂ ಒಂದು ದಿನ ಆತ ಆ ಸಂದೇಶಗಳಿಗೆ ಉತ್ತರವನ್ನು ಪಡೆದೇಬಿಟ್ಟ! ಪ್ರೀತಿಪಾತ್ರರ ಸಾವಿನ ಆಘಾತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಅನೇಕ ಜನರು ಅದನ್ನು ಮರೆಯಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ.


ಅದೇ ರೀತಿ ಬ್ರಿಟನ್ನಿನ ಈ ವ್ಯಕ್ತಿ ಹೆಂಡತಿಯ ಮರಣದ ನಂತರ ತುಂಬಾ ದುಃಖಿತನಾದನು, ಹೆಂಡತಿ ಇನ್ನು ಮುಂದೆ ಈ ಜಗತ್ತಿನಲ್ಲಿ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆತನಿಗೆ ಆಗಲೇ ಇಲ್ಲ. ತನ್ನ ಹೆಂಡತಿಯ ನೆನಪಿಗಾಗಿ ಅವನು ಅವಳ ಮೊಬೈಲ್ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸತೊಡಗಿದನು. ವರ್ಷಗಳ ಕಾಲ ಕಳಿಸಿದರೂ ಯಾವುದೇ ರಿಪ್ಲೆ ಬರಲಿಲ್ಲ, ಬರುವುದಾದರೂ ಹೇಗೆ!


ಆದರೆ ಒಂದು ದಿನ ಅವರು ತಮ್ಮ ಹೆಂಡತಿಯ ಸಂಖ್ಯೆಯಿಂದ ರಿಪ್ಲೆ ಪಡೆದರು ಮತ್ತು ಆ ವ್ಯಕ್ತಿಗೆ ಶಾಕ್ ಆಯಿತು!  ಈ ವ್ಯಕ್ತಿ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳುವ ಮಾರ್ಗವೆಂದರೆ, ಪ್ರತಿವರ್ಷ ತಾಯಂದಿರ ದಿನದಂದು ಅವನು ತನ್ನ ಹೆಂಡತಿಯ ಸಂಖ್ಯೆಗೆ "ಹ್ಯಾಪಿ ಮದರ್ಸ್ ಡೇ" ಸಂದೇಶವನ್ನು ಕಳುಹಿಸುತ್ತಿದ್ದನು.


ಆರಂಭದಲ್ಲಿ ಕೆಲವು ವರ್ಷ ಯಾವುದೇ ಉತ್ತರವನ್ನು ಪಡೆಯಲಿಲ್ಲ, ನಂತರ ಒಂದು ದಿನ ಅವರು ಆ ಸಂಖ್ಯೆಯಿಂದ ಉತ್ತರವನ್ನು ಪಡೆದರು. ಈ ಘಟನೆ ಅವನಿಗೆ  ಆಶ್ಚರ್ಯವನ್ನುಂಟು ಮಾಡಿತು. ತನ್ನ ತೀರಿ ಹೋದ ಹೆಂಡತಿಯೇ ರಿಪ್ಲೆ ಮಾಡಿದಷ್ಟು ಖುಷಿಯಾಯಿತು.

ತಾಯಿಯ ದಿನದಂದು ಒಂದು ಮುದ್ದಾದ ಸಂದೇಶವನ್ನು ಸ್ವೀಕರಿಸಿದ ನಂತರ ತನ್ನ ಹೆಂಡತಿಯ ಸಂಖ್ಯೆಯಿಂದ ರಿಪ್ಲೆ ಬಂತು, ಅದು “ನೀವು ಯಾರು?” ಎಂಬುದಾಗಿತ್ತು. ಅದು ಆ ವ್ಯಕ್ತಿಗೆ ಸ್ವಲ್ಪ ಆಘಾತಕಾರಿಯಾಗಿತ್ತಾದರೂ, ಮೊದಲ ಬಾರಿಗೆ ಯಾರಾದರೂ ನನ್ನ ಸಂದೇಶಕ್ಕೆ ಉತ್ತರವನ್ನು ಕಳುಹಿಸಿದ್ದಾರಲ್ಲ ಎಂದು ಖುಷಿಯಾಯಿತು. ವಾಸ್ತವದಲ್ಲಿ ಅವರ ಸಂಖ್ಯೆಯನ್ನು ಬೇರೆಯವರಿಗೆ ಅಲಾಟ್ ಮಾಡಲಾಗಿತ್ತು, ಅವರೇ ರಿಪ್ಲೆ ಮಾಡಿದ್ದರು.ತಕ್ಷಣ ಆತ ಅವರಿಗೆ ರಿಪ್ಲೆ ಮಾಡಿದ “ಕ್ಷಮಿಸಿ, ಇದು ನನ್ನ ದಿವಂಗತ ಪತ್ನಿಯ ಸಂಖ್ಯೆ, ಅವಳ ನೆನಪಿಗಾಗಿ ನಾನು ಸಂದೇಶ ಕಳಿಸುತ್ತಿದ್ದೆ, ಯಾರೂ ರಿಪ್ಲೆ ಮಾಡಲ್ಲ ಅಂದುಕೊಂಡಿದ್ದೆ, ಕ್ಷಮಿಸಿ, ನಾನು ಇನ್ನು ಮುಂದೆ ಸಂದೇಶ ಕಳಿಸುವುದಿಲ್ಲ, ದೇವರು ನಿಮಗೆ ಒಳ್ಳೆದು ಮಾಡಲಿ” ಎಂಬರ್ಥದಲ್ಲಿ ಉತ್ತರಿಸಿದ.


ಸೋಶಿಯಲ್ ಮೀಡಿಯಾದಲ್ಲಿ ಜನರ ಭಾವುಕರಾದರು :

ಈ ಕಥೆಯನ್ನು ರೆಡ್ಡಿಟ್ ನಲ್ಲಿ ಓದಿದ ನಂತರ ಜನರು ಬಗ್ಗೆ ಸಾಕಷ್ಟು ಪ್ರತಿಕ್ರಿಯಿಸಿದ್ದಾರೆ. ತನ್ನ ಸೋದರ ಸಂಬಂಧಿಯ ಮರಣದ ನಂತರ ಅವನು ಸ್ವತಃ ಅದೇ ರೀತಿ ಮಾಡುತ್ತಿದ್ದನು ಎಂದು ಯಾರೋ ಬರೆದಿದ್ದಾರೆ, ಅವರು ತುಂಬಾ ಕೆಟ್ಟ ರಿಪ್ಲೆ ಪಡೆದಿದ್ದರು. ಅನೇಕ ಜನರು ತಮ್ಮ ಕಥೆಯನ್ನು ಹಂಚಿಕೊಂಡರು ಮತ್ತು ಅವರು ಅದೇ ರೀತಿ ಮಾಡುತ್ತಿದ್ದರಂತೆ.

BREAKING: ಸ್ಥಗಿತಗೊಂಡಿದ್ದ 5, 8, 9, ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ಮುಂದುವರೆಸಿ- ಹೈಕೋರ್ಟ್‌ ಆದೇಶ

Posted by Vidyamaana on 2024-03-22 12:26:54 |

Share: | | | | |


BREAKING: ಸ್ಥಗಿತಗೊಂಡಿದ್ದ 5, 8, 9, ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ಮುಂದುವರೆಸಿ- ಹೈಕೋರ್ಟ್‌ ಆದೇಶ

ಬೆಂಗಳೂರು : ರಾಜ್ಯ ಶಾಲಾ ಶಿಕ್ಷಣ ಇಲಾಖೆ ನಿಗದಿ ಪಡಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ಬಳಿಕ, ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಆದ್ರೇ ಹೈಕೋರ್ಟ್ ಗೆ ಬೋರ್ಡ್ ಪರೀಕ್ಷೆಗೆ ಅನುಮತಿ ಕೋರಿ ಪೋಷಕರು ಸಲ್ಲಿಸಿದ್ದಂತ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು.ಈ ಬಳಿಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂತಹ ತೀರ್ಪನ್ನು ಇಂದು ಪ್ರಕಟಿಸಿದ್ದು, ಸ್ಥಗಿತಗೊಂಡಿರುವಂತ ಪರೀಕ್ಷೆಗಳನ್ನು ಮುಂದುವರೆಸಲು ಹೈಕೋರ್ಟ್ ಸೂಚಿಸಿದೆ. 


ಶಾಲಾ ಶಿಕ್ಷಣ ಇಲಾಖೆ ನಿಗದಿ ಪಡಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಕೋರಿ ಖಾಸಗಿ ಶಾಲೆಗಳ ಸಂಘದಿಂದ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದಂತ ಏಕ ಸದಸ್ಯ ನ್ಯಾಯಪೀಠವು ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗಿಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್, 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.ಆದ್ರೇ ಹೈಕೋರ್ಟ್ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಸಂಘದಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು ಬಾಕಿ ಇರುವಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗೆ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಹೀಗಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಬೋರ್ಡ್ ಪರೀಕ್ಷೆಯನ್ನು ಮುಂದೂಡಿ ಆದೇಶ ಕೂಡ ಮಾಡಲಾಗಿತ್ತು.


ಈ ಬೆನ್ನಲ್ಲೇ ಬೋರ್ಡ್ ಪರೀಕ್ಷೆಗೆ ಅನುಮತಿ ಕೋರಿ ಪೋಷಕರಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿದ್ದಂತ ಸೂಚನೆಯಂತೆ ವಿಚಾರಣೆಯನ್ನು ಪೂರ್ಣಗೊಳಿಸಿತ್ತು. ಆ ನಂತ್ರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.ಇಂದು ಬೆಳಿಗ್ಗೆ 10.30ಕ್ಕೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರನ್ನೊಳ್ಳಗೊಂಡ ನ್ಯಾಯಪೀಠವು ಕಾಯ್ದಿರಿಸಿದ್ದಂತ ತೀರ್ಪನ್ನು ಪ್ರಕಟಿಸಿದೆ.


ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಮುಂದುವರೆಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಿದೆ. ಮುಂದಿನ ಶೈಕ್ಷಣಿಕ ವರ್ಷದೊಂದಿಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದೆ.



Leave a Comment: