ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಕೆಣಕಿದ ಅಶೋಕ್ ರೈಗೆ ಸವಾಲೆಸೆದ SDPI

Posted by Vidyamaana on 2023-05-01 09:19:13 |

Share: | | | | |


ಕೆಣಕಿದ ಅಶೋಕ್ ರೈಗೆ ಸವಾಲೆಸೆದ SDPI

ಪುತ್ತೂರು: ಚುನಾವಣಾ ಪ್ರಚಾರ ಸಭೆಗಳಲ್ಲಿ ಅಶೋಕ್ ಕುಮಾರ್ ರೈ ಅವರು ಎಸ್.ಡಿ.ಪಿ.ಐ. ಅನ್ನು ಕೆಣಕಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು ಎಂದು ಎಸ್.ಡಿ.ಪಿ.ಐ. ರಾಜ್ಯ ವಕ್ತಾರ ರಿಯಾಜ್ ಕಡಂಬು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲೀಲ್ ಕರೋಪಾಡಿ ಕೊಲೆಗೈದ ವ್ಯಕ್ತಿಗೆ ರಕ್ಷಣೆ ನೀಡಿರುವ, ತನ್ನ ಅಪಾರ್ಟ್ ಮೆಂಟಿನಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ ಎಂದು ಬೋರ್ಡ್ ಹಾಕಿರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಭಾಷಣಗಳಲ್ಲಿ ಕಾಂಗ್ರೆಸ್ ಸೆಕ್ಯುಲರ್ ಪಕ್ಷ ಎಂದು ಹೇಳಿಕೊಳ್ಳುವ ರಾಷ್ಟ್ರೀಯ ನಾಯಕರು, ಪುತ್ತೂರಿನಲ್ಲಿ ಸಂಘ ಪರಿವಾರದ ವ್ಯಕ್ತಿಗೆ ಟಿಕೇಟ್ ನೀಡಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಅಭ್ಯರ್ಥೀ ಸಂಘ ಪರಿವಾರದವರು, ಕಾಂಗ್ರೆಸಿನ ಅಭ್ಯರ್ಥಿಯೂ ಸಂಘ ಪರಿವಾರದವರು, ಪಕ್ಷೇತರರಾಗಿ ಸ್ಪರ್ಧಿಸಿದವರೂ ಸಂಘ ಪರಿವಾರದವರು. ಆದ್ದರಿಂದ ಪುತ್ತೂರಿನಲ್ಲಿ ನ್ಯಾಯ, ನೀತಿಯ ಪರವಾಗಿರುವ ಎಸ್.ಡಿ.ಪಿ.ಐ. ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ ಎಂದರು.

ಫ್ಯಾಸಿಸ್ಟ್ ಸರಕಾರದ ಧೊರಣೆಯಿಂದಾಗಿ ಶಾಫಿ ಬೆಳ್ಳಾರೆ ಜೈಲಿಗೆ ಹೋಗುವಂತಾಯಿತು. ಕೋಮುವಾದವನ್ನು ಸೃಷ್ಟಿಸಿ ಆ ಮೂಲಕ ಆಡಳಿತವನ್ನು ನಡೆಸುವ ಪಕ್ಷ ಬಿಜೆಪಿ, ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುತ್ತಿವೆ. ಇದರಿಂದಾಗಿ ಇಂದು ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಕ್ಷೇತ್ರ ಸಮಿತಿ ಸದಸ್ಯ ಇಬ್ರಾಹಿಂ ಹಾಜಿ ಸಾಗರ್, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮರ್ದ, ತಾಲೂಕು ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

Posted by Vidyamaana on 2023-07-25 13:41:53 |

Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ಆದೇಶಿಸಿದ್ದಾರೆ.

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

Posted by Vidyamaana on 2024-02-24 21:48:55 |

Share: | | | | |


Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳ ಬೀದಿಗೆ ಬರುವುದೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಮುನಿಸು, ಮನಸ್ತಾಪಗಳು ಬಗೆಹರಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಬೆಳೆದು ಕೆಲವೊಮ್ಮೆ ಡೈವೋರ್ಸ್ ನೀಡುವ ಹಂತದವರೆಗೂ ತಲುಪುತ್ತದೆ.ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಂಡ ಹೆಂಡಿರ ಜಗಳವು ಬೀದಿಗೆ ಬಂದಿದ್ದು, ರಸ್ತೆಯಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಈ ಜೋಡಿಯು ಜಗಳವಾಡುತ್ತಾ ಚರಂಡಿಗೆ ಬಿದ್ದಿದ್ದು, ಅಲ್ಲಿಯೂ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ.

ಯಾವ ಸಂಸಾರದಲ್ಲಿ ಜಗಳವಿರುವುದಿಲ್ಲ ಹೇಳಿ. ಜಗಳವಿದ್ದ ಕಡೆಯಲ್ಲಿ ಪ್ರೀತಿ ಹೆಚ್ಚಿರುತ್ತದೆ ಎನ್ನುವ ಮಾತಿದೆ. ಅತಿಯಾದ ಪ್ರೀತಿ, ಸಣ್ಣ ಪುಟ್ಟ ಮುನಿಸು ಜಗಳವಿದ್ದರೆ ಸಂಸಾರವೆನ್ನುವುದು ನೋಡಲು ಚಂದ. ಆದರೆ ಈ ಜಗಳವನ್ನೇ ದೊಡ್ಡದು ಮಾಡಿದರೆ ನಾಲ್ಕು ಗೋಡೆಗೆ ಸೀಮಿತವಾಗಿರಬೇಕಾದ ಜಗಳವು ಬೀದಿಗೆ ಬರುವುದಂತೂ ಪಕ್ಕಾ. ಇಲ್ಲೊಂದು ಜೋಡಿಯೂ ಸಂಸಾರದಲ್ಲಿನ ಜಗಳವನ್ನು ಮನೆಯಿಂದ ರಸ್ತೆಗೆ ತಂದಿದ್ದು, ಅಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಕೊನೆಗೆ ಇವರಿಬ್ಬರ ಜಗಳವು ಚರಂಡಿಯವರೆಗೂ ತಲುಪಿದೆ. ಗಂಡ ಹೆಂಡಿರ ಜಗಳದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರಿಬ್ಬರೂ ಹೊಡೆದಾಡುವ ರೀತಿ ಕಂಡು ಇದೇನಪ್ಪಾ ಹೀಗೆ ಎನ್ನುತ್ತಿದ್ದಾರೆ.ವಿಡಿಯೋದಲ್ಲಿ ಪತಿ ಪತ್ನಿಯರಿಬ್ಬರೂ ಮನೆಯಿಂದ ಹೊರಗಡೆ ರಸ್ತೆಯಲ್ಲಿ ಜಗಳವನ್ನು ಶುರು ಮಾಡಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿದ್ದು, ಇದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರುವಂತೆ ಕಾಣುತ್ತಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್‌ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ಗುದ್ದುತ್ತಾಳೆ. ಅಲ್ಲಿಂದ ಜಗಳವು ಶುರುವಾಗಿದ್ದು, ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಆದರೆ ಅಲ್ಲಿಯೂ ಜಗಳವೇನು ನಿಂತಿಲ್ಲ. ನಾರುತ್ತಿರುವ ಚರಂಡಿಯ ನೀರಿನಲ್ಲಿಯೂ ಈ ದಂಪತಿಗಳು ಹೊಡೆದಾಡಿಕೊಂಡಿದ್ದಾರೆ.


ವಿಡಿಯೋ ಇಲ್ಲಿದೆ ನೋಡಿ

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು


ಪುತ್ತೂರು: ನಗರ ಸಭಾ ಸದಸ್ಯ ಶಿವರಾಮ ಸಪಲ್ಯ ನೇಣು ಬಿಗಿದು ಆತ್ಮಹತ್ಯೆ..!!!

Posted by Vidyamaana on 2023-03-16 09:37:38 |

Share: | | | | |


ಪುತ್ತೂರು: ನಗರ ಸಭಾ ಸದಸ್ಯ ಶಿವರಾಮ ಸಪಲ್ಯ ನೇಣು ಬಿಗಿದು ಆತ್ಮಹತ್ಯೆ..!!!

ಪುತ್ತೂರು; ನಗರಸಭಾ ಸದಸ್ಯ ಶಿವರಾಮ ಸಪಲ್ಯ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ನಡೆದಿದೆ. ನಗರಸಭೆಯ ಒಂದನೇ ವಾರ್ಡ್ ಸದಸ್ಯರಾಗಿದ್ದ ಅವರು ಸಾಲ್ಮರ ಸಮೀಪದ ಉರಮಾಲಿನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.ಅವರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಪತಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಪತ್ನಿಯು ಹತ್ತಿರದ ಮನೆಯವರ  ಬಳಿ ತೆರಳುವಂತೆ ತಿಳಿಸಿದ್ದು, ಈ ವೇಳೆ ಅವರು ಮನೆ ಬಳಿ ತೆರಳಿ ನೋಡಿದಾಗ ಶಿವರಾಮ್ ರವರು ನೇಣು ಬಿಗಿದುಕೊಂಡಿದ್ದರು ಎಂದು ವರದಿಯಾಗಿದೆ. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ

ಎಸ್ಪಿಯಾಗಿ ಪದೋನ್ನತಿ ಹೊಂದಿದ ಬೆಳ್ಳಾರೆಯ ಜಗನ್ನಾಥ್ ರೈ ಬಜನಿ

Posted by Vidyamaana on 2023-11-30 16:21:41 |

Share: | | | | |


ಎಸ್ಪಿಯಾಗಿ ಪದೋನ್ನತಿ ಹೊಂದಿದ ಬೆಳ್ಳಾರೆಯ  ಜಗನ್ನಾಥ್ ರೈ ಬಜನಿ

ಬೆಂಗಳೂರು : ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ. 

ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಸಿ , ನಂತರ ಪಿಯುಸಿ ಹಾಗೂ ಡಿಗ್ರಿ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. 

1996 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇರ್ಪಡೆಗೊಂಡ ಜಗನ್ನಾಥ್ ರೈ ಯವರು, ನಂತರ ಇನ್ಸ್ ಪೆಕ್ಟರ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತದನಂತ ಡಿವೈಎಸ್ಪಿ ಯಾಗಿ  ಸಿಸಿಬಿ ಎಸಿಪಿಯಾಗಿ ಇದೀಗ ಎಸ್ಪಿಯಾಗಿದ್ದಾರೆ. 

ಬೆಂಗಳೂರಿನ ಗುಪ್ತಚಾರ ವಿಭಾಗದ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದಾರೆ.  

ಜಗನ್ನಾಥ ರೈಯವರು ಬೆಳ್ಳಾರೆ ಬಜನಿಗುತ್ತು ರಾಮಯ್ಯ ರೈ ಹಾಗೂ ಕುಸುಮಾವತಿ ದಂಪತಿಯ ಪುತ್ರ

ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾ ಕಾರ್ಯಕ್ರಮ

Posted by Vidyamaana on 2023-10-18 17:05:29 |

Share: | | | | |


ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾ ಕಾರ್ಯಕ್ರಮ

ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ೨ ರಿಂದ ೩ ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದು ಇದಕ್ಕಾಗಿ ಹಲವು ಯೋಜನೆಗಳನ್ನು ಇಲ್ಲಿ ಜ್ಯಾರಿ ಮಾಡುವ ಆಲೋಚನೆಯಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.


ಬಹುಗ್ರಾಮ ಕುಡಿಯುವ ನೀರಿನ ಯೋಜನಯಡಿ ಕೆದಿಲ ಗ್ರಾಮದಲ್ಲಿ ೩ ಕೋಟಿ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಯೋಜನೆಯಡಿ ಸುಮಾರು ೫೦೦ ಮಿಕ್ಕಿ ಮಂದಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ,ಕೊಯಿಲ ಜಾನುವಾರು ಕೇಂದ್ರಕ್ಕೆ ಪುನಶ್ಚೇತನ ದೊರೆಯಲಿದ್ದು ಅಲ್ಲಿ ಸುಮಾರು ೭೦೦ ಮಂದಿಗೆ ಉದ್ಯೋಗ ಮತ್ತು ಕೆಎಂಎಫ್ ನ್ನು ಪುತ್ತೂರಿಗೆ ಸ್ಥಳಾಂತರ ಮಾಡುವುದರಿಂದ ಸುಮಾರು ೧೦೦೦ ಮಂದಿಗೆ ಉದ್ಯೋಗ ಲಭಿಸಲಿದೆ. ಸ್ಥಳೀಯರನ್ನೇ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.


 


ಪುತ್ತೂರಿಗೆ ಹಣ ಬಂದು ಬೀಳಬೇಕು


ಪುತ್ತೂರು ಅಭಿವೃದ್ದಿಯಾಗಬೇಕಾದರೆ ಒಂದಷ್ಟು ಹಣ ಇಲ್ಲಿ ಬೀಳಬೇಕು, ಉದ್ಯಮಗಳು ಆರಂಭವಾದರೆ ಮಾತ್ರ ಇಲ್ಲಿ ಎಲ್ಲರಿಗೂ ವ್ಯಾಪಾರ , ವ್ಯವಹಾರವಾಗುತ್ತದೆ ಇಲ್ಲದೇ ಹೋದರೆ ಕೇವಲ ಅಡಿಕೆ ಮಾರಿದ ಹಣ ಮಾತ್ರ ಇಲ್ಲಿ ಚಲಾವಣೆಯಲ್ಲಿರುತ್ತದೆ ಎಂದು ಹೇಳಿದ ಶಾಸಕರು ಪುತ್ತೂರಿನ ಯುವಕ, ಯುವತಿಯರಿಗೆ ಉದ್ಯೋಗ ಲಭಿಸಿದರೆ ಅವರ ಕುಟುಂಬಕ್ಕೂ ಆಧಾರವಾಗುತ್ತದೆ ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಯಾವುದೇ ಉದ್ಯಮ ಆರಂಭವಾಗುವುದಾದರೂ ಅದಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದರು.ಪುತ್ತೂರಿನ ಜನತೆ ನೆಮ್ಮದಿಯಿಂದ ಇರಬೇಕೆಂಬುದೇ ನನ್ನ ಆಶಯವಾಗಿದೆ ಎಂದು ಶಾಸಕರು ಹೇಳಿದರು.


 


ಶಾಸಕರಿಗೆ ಇಷ್ಟು ಗಟ್ಸ್ ಇದೆ ಎಂದು ಗೊತ್ತೇ ಇರಲಿಲ್ಲ: ಹೇಮನಾಥ ಶೆಟ್ಟಿ


ಚುನಾವಣೆ ಸಂದರ್ಬದಲ್ಲಿ ಅಶೋಕ್ ರೈ ಬಗ್ಗೆ ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು, ಶ್ರೀಮಂತ ವ್ಯಕ್ತಿ ಅದು ಹೇಗೆ ಬಡವರ ಕೆಲಸ ಮಾಡುತ್ತಾರೆ, ಬಡವರು ಇವರ ಬಳಿ ಹೇಗೆ ಹೋಗಬಹುದು ಅವರ ಸ್ಟೈಲೇ ಬೇರೆ ಇರಬಹುದು ಎಂದೆಲ್ಲಾ ಹೇಳಿದ್ದರು. ಆದರೆ ಶಾಸಕರಾದ ಬಳಿಕ ಕಟ್ಟಕಡೇಯ ಬಡ ವ್ಯಕ್ತಿ ಕೂಡಾ ಅವರ ಛೇಂಬರಿನಲ್ಲಿ ಕುಳಿತು ಸಮಸ್ಯೆ ಹೇಳುತ್ತಿದ್ದು, ಬಡವರ ಕೆಲಸ ಮಾಡುತ್ತಿದ್ದು ಅಶೋಕ್ ರೈಯವರಿಗೆ ಇಷ್ಟೊಂದು ಗಟ್ಸ್ ಇದೆ ಎಂದು ಶಾಸಕರಾದ ಬಳಿಕವೇ ಗೊತ್ತಾಗಿದ್ದು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಕುಡಿಯುವ ನೀರಿನ ಸಂಪರ್ಕಕ್ಕೆ ದಾಖಲೆ ಕೊಡಿ ಎಂದು ಕೇಳುವ ಪಂಚಾಯತ್ ಅಧಿಕಾರಿಗಳ ಬೆಂಡೆತ್ತಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


ಕೆದಿಲ ಕಾಂಗ್ರೆಸ್ ಭದ್ರಕೋಟೆ: ಡಾ. ರಾಜಾರಾಂ


ಕೆದಿಲ ಗ್ರಾಮದ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ, ಕಳೇದ ಚುನಾವಣೆಯಲ್ಲಿ ೧೦೦೦ ಮತಗಳ ಲೀಡನ್ನು ತಂದುಕೊಟ್ಟಿದೆ, ಜಾತ್ಯಾತೀತ ಮನೋಭಾವದ ಕೆದಿಲ ಗ್ರಾಮಸ್ಥರನ್ನು ಅಭಿನಂದಿಸುವುದಾಗಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು. ಕೆದಿಲ ಗ್ರಾಮಕ್ಕೆ ಅನುದಾನದಲ್ಲಿ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕರು ಹೇಳಿದ್ದಾರೆ. ಈಗಾಗಲೇ ಹಲವು ಕಾಮಗಾರಿಗಗಳ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ, ಹಿಂದೆಂದೂ ಕಣದ ರೀತಿಯಲ್ಲಿ ಈ ಗ್ರಾಮ ಅಭಿವೃದ್ದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕೆದಿಲ ಗ್ರಾಮಕ್ಕೆ ಶಾಸಕರು ವಿಶೇಷ ಒತ್ತುಕೊಡಬೇಕು: ಫಾರೂಕ್ ಬಾಯಬ್ಬೆ


ಕೆದಿಲದಲ್ಲಿ ಜಾತ್ಯಾತೀತ ಮನಸ್ಸುಗಳು ಒಂದಾಗಿದೆ, ಈ ಕಾರಣಕ್ಕೆ ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಬೆಂಬಲ ದೊರಕಿದೆ. ನೂತನ ಶಾಸಕರು ಕೆದಿಲ ಗ್ರಾಮಕ್ಕೆ ವಿಶೇಷ ಒತ್ತು ನೀಡಿ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಆಗ್ರಹಿಸಿದರು. ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಶಾಸಕರ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದ್ದು ಈಗಾಗಲೇ ಹಲವು ಕಾಮಗಾರಿಗಳ ಬಗ್ಗೆ ಶಾಸಕರಲ್ಲಿ ಮಾತನಾಡಿದ್ದೇವೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂಬುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಕೆದಿಲ ಗ್ರಾಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಕೆದಿಲ ವಲಯ ತಾಪಂ ಮಾಜಿ ಸದಸ್ಯ ಆದಂಕುಂಞಿ ಹಾಜಿ, ಬ್ಲಾಕ್ ಉಪಾಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ವಲಯ ಅಧ್ಯಕ್ಷರಾದ ಪ್ರವೀಣ್ ಚಂದ್ರ ಶೆಟ್ಟಿ, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ಗ್ರಾಪಂ ಸದಸ್ಯರುಗಳಾದ ಬೀಪಾತುಮ್ಮ, ಸುಲೈಮಾನ್, ಹಬೀಬ್ ಮುಹ್ಸಿನ್, ಉನೈಸ್ ಗಡಿಯಾರ್, ಅಝೀಝ್ ಸತ್ತಿಕ್ಕಲ್, ಕೆದಿಲ ಸೊಸೈಟಿ ನಿರ್ದೆಶಕ ಜಿ ಮಹಮ್ಮದ್, ಪಾಟ್ರಕೋಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.


ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಸ್ವಾಗತಿಸಿದರು. ಬೂತ್ ಅಧ್ಯಕ್ಷ ರಝಾಕ್ ವಂದಿಸಿದರು. ಶರೀಫ್ ಕೆ ಎಸ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.



Leave a Comment: