ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸುದ್ದಿಗಳು News

Posted by vidyamaana on 2024-07-25 16:43:22 |

Share: | | | | |


ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

 ಮುಂಬೈ: ಇಂಜಿನಿಯರ್ ಒಬ್ಬರು ತಮ್ಮ ಕಾರನ್ನು ಅಟಲ್ ಸೇತುವಿನಲ್ಲಿ ನಿಲ್ಲಿಸಿ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಈ ದೃಶ್ಯ ಅಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೇತುವೆಯಿಂದ ಕೆಳಗೆ ಹಾರಿದವರನ್ನು ಡೊಂಬಿವಿಲಿಯ ಪಲ್ಲವ ನಗರದ ನಿವಾಸಿ ಕರ್ತುರಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಮಧ್ಯಾಹ್ನ 12.35ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಆಟಲ್ ಸೇತು ಬ್ರಿಡ್ಜ್ ಮೇಲೆ ಬಂದಿದ್ದು, ಸೇತುವೆ ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಟೋಲ್ ಕಂಟ್ರೋಲ್‌ ರೂಮ್‌ನವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನವಶೇವ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಕೂಡಲೇ ಎಂಟಿಹೆಚ್‌ಎಲ್‌ನಿಂದ ರಕ್ಷಣಾ ತಂಡ ಹಾಗೂ ಕರಾವಳಿ ಭದ್ರತಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ತೊಂದರೆಯಿಂದಲೇ ಶ್ರೀನಿವಾಸ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇವಲ ತನ್ನ ಪರ್ಸ್ ಮಾತ್ರ ಬಿಟ್ಟು ಶ್ರೀನಿವಾಸ್ ಸಮುದ್ರಕ್ಕೆ ಹಾರಿದ್ದಾರೆ. ಈ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಐಡಿ ಕಾರ್ಡ್ ಇತ್ತು. ಡೆತ್‌ನೋಟ್ ಆಗಲಿ, ಫೋನ್ ಆಗಲಿ ಕಾರಿನಲ್ಲಿ ಪತ್ತೆಯಾಗಿಲ್ಲ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮನ್ ಬಾಗ್ವಾನ್ ಹೇಳಿದ್ದಾರೆ.

ಬಿಟೆಕ್ ಮಾಡಿದ್ದ ಶ್ರೀನಿವಾಸ್ ಮುಂಬೈನ ಲೋಧಾದಲ್ಲಿ 2023ರಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಅರಬ್ ರಾಷ್ಟ್ರ ಕುವೈತ್‌ನಲ್ಲಿ ಕೆಲಸ ಮಾಡಿದ್ದರು. 2023ರಲ್ಲಿ ಮುಂಬೈಗೆ ವಾಪಸಾದ ಅವರು ಲೋಧಾ ಗ್ರೂಪ್‌ಗೆ ಕೆಲಸಕ್ಕೆ ಸೇರಿದ್ದರು. ಇದಾದ ನಂತರ ಇವರು ತಮ್ಮ ಪಾಲುದಾರರ ಜೊತೆಗೂಡಿ ಇಲೆಕ್ಟ್ರಿಕ್ ಕಂಟ್ರಾಕ್ಟ್ ಕೆಲಸ ಶುರು ಮಾಡಿದ್ದರು. ಶ್ರೀನಿವಾಸ್ ಪತ್ನಿಯಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ಶ್ರೀನಿವಾಸ್ ಈ ಹಿಂದೆಯೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಮಯಕ್ಕೆ ಸರಿಯಾಗಿ ಯಾರೋ ಪಾರು ಮಾಡಿದ್ದರಿಂದ ಅವರ ಜೀವ ಉಳಿದಿತ್ತು ಎಂದು ಪತ್ನಿ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ್ ಕಡೆಯದಾಗಿ ಸಂಬಂಧಿಕರೊಬ್ಬರ ಜೊತೆ ಮಾತನಾಡಿದ್ದು, ಈ ವೇಳೆ ಅವರು ಸಹಜವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದುವರೆಗೂ ನೀರಿಗೆ ಹಾರಿದ ಶ್ರೀನಿವಾಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಮೊದಲ ಪ್ರಕರಣ ಅಲ್ಲ ಈ ಹಿಂದೆ ಮಹಿಳಾ ವೈದ್ಯರೊಬ್ಬರು ಅಟಲ್ ಸೇತುವಿನಿಂದ ಕೆಳಗೆ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

 Share: | | | | |


ಶೋಭಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ BSY ಹೇಳಿಕೆಗೆ CT ರವಿ ತಿರುಗೇಟು

Posted by Vidyamaana on 2024-02-27 04:40:39 |

Share: | | | | |


ಶೋಭಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ BSY ಹೇಳಿಕೆಗೆ CT ರವಿ ತಿರುಗೇಟು

ಬೆಂಗಳೂರು : ಲೋಕಸಭೆ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿಯ ಮಾಜಿ ಸಚಿವ ಸಿ ಟಿ ರವಿ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು ನಿನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶೋಭಾ ಅಭಿರುದ್ಧ ವ್ಯವಸ್ಥಿತವಾದಂತ ಪಿತೂರಿ ಹಾಗೂ ಗಡ್ಯಂತರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದರು.ಈ ಒಂದು ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇದೀಗ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು ಬಾಸ್ ಇಸ್ ಆಲ್ವೇಸ್ ರೈಟ್ ಎಂದು ಹೇಳುವ ಮೂಲಕ ತಿರುಗೇಟನ್ನು ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು ಹೀಗಾಗಿ ಬಾಸ್ ಇಸ್ ಆಲ್ವೇಸ್ ರೈಟ್ ಎಂದು ಸಿಟಿ ರವಿ ಕುಟಕಿದ್ದಾರೆ.


ನಾನು ಟಿಕೆಟ್ ಕೇಳಿಲ್ಲ ಅಂತ ಹತ್ತಾರು ಬಾರಿ ಹೇಳಿದ್ದೇನೆ.ನನಗೆ ಗೊತ್ತಿರುವುದು ಪಕ್ಷನಿಷ್ಠೆ ಪರಿಶ್ರಮ ಮಾತ್ರ. ನಮ್ಮ ಗುರಿ ಒಂದೇ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕೆಂಬುವುದು. ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿ ವರ್ತನೆ ಮಾಡುವವರಿಗೆ ಅದು ಅನ್ವಯವಾಗುತ್ತದೆ.ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿದರು.

ನೇತ್ರಾವತಿ ಸೇತುವೆಯ ಆವರಣ ಗೋಡೆಗೆ ಬೈಕ್ ಡಿಕ್ಕಿ ಸವಾರ ಸುರೇಶ್ ಸ್ಥಳದಲ್ಲೇ ಮೃತ್ಯು

Posted by Vidyamaana on 2024-01-24 11:05:40 |

Share: | | | | |


ನೇತ್ರಾವತಿ ಸೇತುವೆಯ ಆವರಣ ಗೋಡೆಗೆ ಬೈಕ್ ಡಿಕ್ಕಿ ಸವಾರ ಸುರೇಶ್ ಸ್ಥಳದಲ್ಲೇ ಮೃತ್ಯು

ಮಂಗಳೂರು : ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತ ಜ 23 ರಂದು ತಡರಾತ್ರಿ ಸಂಭವಿಸಿದ್ದು ಸೇತುವೆ ಆವರಣ ಗೋಡೆಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. 


ಮೂಲತಃ ಬಾಗಲಕೋಟೆ ಜಿಲ್ಲೆ ನಿವಾಸಿ ಕಳೆದ ಹಲವಾರು ವರ್ಷಗಳಿಂದ ಉಳ್ಳಾಲ ತಾಲೂಕಿನ ಕಲ್ಲಾಪು, ಪಟ್ಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಸುರೇಶ್ (32) ಅಪಘಾತಕ್ಕೆ ಬಲಿಯಾದ ಯುವಕ. ಸುರೇಶ್ ನುರಿತ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿದ್ದು   ಸ್ವಂತ ಮೆಕ್ಯಾನಿಕ್ ಅಂಗಡಿ ತೆರೆದು ಕೆಲಸ ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿರುವ ಸುರೇಶ್  ತಂದೆ, ತಾಯಿ, ಸಹೋದರಿ ಜತೆ ಕಲ್ಲಾಪಿನಲ್ಲಿ ನೆಲೆಸಿದ್ದರು.


 ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

ಲೋಕಸಭಾ ಚುನಾವಣೆ : ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಕಾಂಗ್ರೆಸ್ ವ್ಯಾಪ್ತಿಯ ಚುನಾವಣಾ ಉಸ್ತುವಾರಿಗಳಾಗಿ ರಂಜಿತ್ ಬಂಗೇರ, ಮಹಮ್ಮದ್ ರಿಯಾಜ್, ರೋಶನ್ ರೈ ನೇಮಕ

Posted by Vidyamaana on 2024-04-11 04:38:26 |

Share: | | | | |


ಲೋಕಸಭಾ ಚುನಾವಣೆ : ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಕಾಂಗ್ರೆಸ್ ವ್ಯಾಪ್ತಿಯ ಚುನಾವಣಾ ಉಸ್ತುವಾರಿಗಳಾಗಿ ರಂಜಿತ್ ಬಂಗೇರ, ಮಹಮ್ಮದ್ ರಿಯಾಜ್, ರೋಶನ್ ರೈ ನೇಮಕ

ಪುತ್ತೂರು :ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ನಗರ ಕಾಂಗ್ರೆಸ್ ವ್ಯಾಪ್ತಿಯ ಲೋಕಸಭಾ ಚುನಾವಣೆ ಉಸ್ತುವಾರಿಗಳಾಗಿ ರಂಜಿತ್ ಬಂಗೇರ ಕೆ., ಮಹಮ್ಮದ್ ರಿಯಾಜ್, ರೋಶನ್ ರೈ ಅವರನ್ನು ನೇಮಕ ಮಾಡಲಾಗಿದೆ.

ಅರಣ್ಯ ಇಲಾಖೆಯಿಂದ 500 ಎಕರೆ ಭೂಮಿ ಮಂಜೂರು: ಡಿ.ಕೆ.ಶಿವಕುಮಾರ್

Posted by Vidyamaana on 2024-06-14 07:48:22 |

Share: | | | | |


ಅರಣ್ಯ ಇಲಾಖೆಯಿಂದ 500 ಎಕರೆ ಭೂಮಿ ಮಂಜೂರು: ಡಿ.ಕೆ.ಶಿವಕುಮಾರ್

ಬೆಂಗಳೂರು : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಗತಿಗೆ ನಿರ್ಣಾಯಕವಾದ 500 ಎಕರೆ ಭೂಮಿಯನ್ನು ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಪ್ರಕಟಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ನವದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರೊಂದಿಗೆ ಸಭೆ ನಡೆಸಿದರು.

ಅರಂತೋಡು : ತಡರಾತ್ರಿ ಭೀಕರ ಕಾರು ಅಪಘಾತ - ಓರ್ವನಿಗೆ ಗಂಭೀರ ಗಾಯ

Posted by Vidyamaana on 2024-06-23 11:03:07 |

Share: | | | | |


ಅರಂತೋಡು : ತಡರಾತ್ರಿ ಭೀಕರ ಕಾರು ಅಪಘಾತ - ಓರ್ವನಿಗೆ ಗಂಭೀರ ಗಾಯ

ಅರಂತೋಡು: ಭೀಕರ ಕಾರು ಅಪಘಾತ ಸಂಭವಿಸಿ, ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಸಂಪಾಜೆಯ ಬಳಿ ಕಳೆದ ತಡರಾತ್ರಿ ನಡೆದಿದೆ ಎಂದು ಮಾಹಿತಿ ಲಭಿಸಿದೆ.

ಮಂಡ್ಯ ಮೂಲದ ನಾಲ್ವರು ಫೋಟೋ ಗ್ರಾಫರ್ಸ್ ಹೊನ್ನಾವರಕ್ಕೆ ಹೋಗಿ ತಮ್ಮ ಕೆಲಸ ಮುಗಿಸಿ ವಾಪಸ್‌ ಮಂಡ್ಯಕ್ಕೆ ಹೊರಟಿದ್ದರು.

ಆರ್​ಸಿಬಿ ಮಣಿಸಿದ ರಾಜಸ್ಥಾನ್​ ರಾಯಲ್ಸ್ 2ನೇ ಕ್ವಾಲಿಫೈಯರ್​​ಗೆ ಲಗ್ಗೆ;ಆರ್‌ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ- ಮುಂದಿನ ಸಲ ಕಪ್​ ನಮ್ದೇ!

Posted by Vidyamaana on 2024-05-23 04:21:26 |

Share: | | | | |


ಆರ್​ಸಿಬಿ ಮಣಿಸಿದ ರಾಜಸ್ಥಾನ್​ ರಾಯಲ್ಸ್ 2ನೇ ಕ್ವಾಲಿಫೈಯರ್​​ಗೆ ಲಗ್ಗೆ;ಆರ್‌ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ- ಮುಂದಿನ ಸಲ ಕಪ್​ ನಮ್ದೇ!

ಬೆಂಗಳೂರು: ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಆರ್​ಸಿಬಿಯ (RCB) ಭರವಸೆಗಳು ಮೇ 22 ರ ಬುಧವಾರ ಕೊನೆಗೊಂಡವು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ವಿರುದ್ಧ ಸೋತ ನಂತರ ಐಪಿಎಲ್ 2024 ರ (IPL 2024) ಎಲಿಮಿನೇಟರ್​ ಹಂತದಲ್ಲಿಯೇ ರೆಡ್​ಆರ್ಮಿ ಹೊರಕ್ಕೆ ಬಿತ್ತು.

ಡು ಪ್ಲೆಸಿಸ್ ನೇತೃತ್ವದ ತಂಡವು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ತನ್ನ ಆವೇಗ ಉಳಿಸಿಕೊಳ್ಳಲಿಲ್ಲ. ಆರು ಪಂದ್ಯಗಳ ಗೆಲುವಿನ ನಂಬಲಾಗದ ಓಟವನ್ನು ಮುಂದುವರಿಸಲಿಲ್ಲ. ಮತ್ತದೇ ಹಳೆ ರಾಗವೆಂಬಂತೆ ಸೋಲಿನ ಸುಳಿಗೆ ಸಿಲುಕಿ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗುವ ಆರ್​​ಸಿಬಿ ಚಾಳಿ ಇಲ್ಲಿಯೂ ಮುಂದುವರಿಯಿತು. ಆರ್​ಆರ್​ ತಂಡದ ಹಿಂದೆ ಈ ಹಿಂದೆ ನಾಕೌಟ್​ ಹಂತದಲ್ಲಿ ಸೋತಂತೆ ಇಂದೂ ಸೋತಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಇಬ್ಬನಿ ಪರಿಣಾಮ ಸೇರಿದಂತೆ ರನ್​ ಚೇಸ್ ಮಾಡುವ ತಂಡಕ್ಕೆ ಅನುಕೂಲವಾಗಿದ್ದ ಪರಿಸ್ಥಿತಿಯಲ್ಲಿ ಕಡಿಮೆ ಸ್ಕೋರ್ ಆಗಿತ್ತು. ಹೀಗಾಗಿ ಸೋಲು ಸಹಜವಾಗಿಯೇ ಬಂದಿದೆ. ಇದೇ 17 ಆವೃತ್ತಿಗಳು ಮುಗಿದರೂ ಆರ್​ಸಿಬಿಯ ಕಪ್​ ಬರ ನೀಗಲಿಲ್ಲ. ಕಪ್​ಗಾಗಿ ಕಾಯುವ ದಿನಗಳು ಮತ್ತಷ್ಟು ಮುಂದೂಡಿಕೆಯಾದವು.

Recent News


Leave a Comment: