ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಸಾವು

Posted by Vidyamaana on 2024-04-22 08:58:47 |

Share: | | | | |


ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಸಾವು

ಕಾರವಾರ: ಮಕ್ಕಳು ಸೇರಿ ಒಂದೇ ಕುಟುಂಬದ ಆರು ಪ್ರವಾಸಿಗರು‌‌ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ನಡೆದಿದೆ.

40 ವರ್ಷದ ನಝೀರ್ ಅಹ್ಮದ್, 38 ವರ್ಷದ ರೇಷಾ ಉನ್ನಿಸಾ, 15 ವರ್ಷದ ಇಫ್ರಾ‌ ಅಹ್ಮದ್, 12 ವರ್ಷದ ಅಬೀದ್ ಅಹ್ಮದ್, 10 ವರ್ಷದ ಅಲ್ಛೀಯಾ ಅಹ್ಮದ್ ಮತ್ತು 6 ವರ್ಷದ ಮೋಹಿನ್ ಮೃತರು. ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳು.

ಮಂಗಳೂರು: ಏರ್‌ಪೋರ್ಟ್ ರೋಡಲ್ಲಿ ತಡರಾತ್ರಿ ಬೈಕ್ ಸ್ಕಿಡ್,ಇಬ್ಬರು ಯುವಕರ ಸಾವು..!

Posted by Vidyamaana on 2024-09-07 08:10:40 |

Share: | | | | |


ಮಂಗಳೂರು: ಏರ್‌ಪೋರ್ಟ್ ರೋಡಲ್ಲಿ ತಡರಾತ್ರಿ ಬೈಕ್ ಸ್ಕಿಡ್,ಇಬ್ಬರು ಯುವಕರ ಸಾವು..!

ಮಂಗಳೂರು : ಮಂಗಳೂರು ನಗರದ ಯೆಯ್ಯಾಡಿ ಏರ್ಪೋರ್ಟ್ ರೋಡಲ್ಲಿ ತಡ ರಾತ್ರಿ ಬೈಕೊಂದು ಸ್ಕಿಡ್ ಆಗಿ ಇಬ್ಬರು ಸವಾರರೂ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಈ ಅವಘಡ ಸಂಭವಿಸಿದ್ದು ಕೋಡಿಕಲ್ ನಿವಾಸಿ ಕಾಶೀನಾಥ್(17) ಮತ್ತು ಉಪ್ಪಿನಂಗಡಿಯ ಚೇತನ್(24) ಮೃತ ದುರ್ದೈವಿಗಳಾಗಿದ್ದಾರೆ.

ಪ್ರಿಯಕರ ನೆರವಿನಿಂದ ಕತಾರ್ ಗೆ ಹಾರಿದ ಚೈತ್ರಾ

Posted by Vidyamaana on 2024-03-02 17:44:12 |

Share: | | | | |


ಪ್ರಿಯಕರ ನೆರವಿನಿಂದ ಕತಾರ್ ಗೆ ಹಾರಿದ ಚೈತ್ರಾ

ಉಳ್ಳಾಲ, ಮಾ.2: ಉಳ್ಳಾಲದ ಮಾಡೂರಿನ ಪಿಜಿ ಯಿಂದ ನಾಪತ್ತೆಯಾಗಿದ್ದ ಪಿ.ಎಚ್.ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಗಲ್ಫ್ ರಾಷ್ಟ್ರದ ಕತಾರ್ ತೆರಳಿದ್ದಾಳೆ ಎನ್ನಲಾಗುತ್ತಿದ್ದು, ಆಕೆಯ ಪ್ರಿಯಕರ ಶಾರೂಕ್ ನನ್ನ ಉಳ್ಳಾಲ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ. 


ಪುತ್ತೂರಿನ ಮುಕ್ವೆ ನಿವಾಸಿ ಚೈತ್ರಾ  ತನ್ನ ಪ್ರಿಯಕರ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಶಾರೂಕ್ ಶೇಖ್ ನೆರವಿನಲ್ಲಿ ವಿದೇಶಕ್ಕೆ ವಿಸಿಟಿಂಗ್ ವೀಸಾದಲ್ಲಿ ತೆರಳಿದ್ದಾಳೆ ಎಂಬ ಮಾಹಿತಿ ಲಭಿಸಿದೆ. ದೇರಳಕಟ್ಟೆಯ ಖಾಸಗಿ ವಿ.ವಿಯಲ್ಲಿ ಪಿ.ಎಚ್.ಎಡಿ ವ್ಯಾಸಂಗ ಮಾಡುತ್ತಿದ್ದ ಚೈತ್ರಾ ಹೆಬ್ಬಾರ್ ಕಳೆದ ಫೆ.17 ರಂದು ತಾನು ನೆಲೆಸಿದ್ದ ಕೋಟೆಕಾರು ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರ್ ಸಮೇತ ನಾಪತ್ತೆಯಾಗಿದ್ದಳು. ಫೆ.18 ಕ್ಕೆ ಶಾರೂಕ್ ಶೇಖ್ ಕೂಡಾ ನಾಪತ್ತೆಯಾಗಿದ್ದ. ಚೈತ್ರಾಳ ಸ್ಕೂಟರ್ ಸುರತ್ಕಲ್ ನಲ್ಲಿ ಪತ್ತೆಯಾಗಿದ್ದು ಅಲ್ಲಿಂದ ಬೆಂಗಳೂರಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾನಾಯಕ್ ಮತ್ತು ಉಳ್ಳಾಲ ಪಿಎಸ್ ಐ ಶೀತಲ್ ಅಲಗೂರ ನೇತೃತ್ವದ ತಂಡ ಚೈತ್ರಾ ಹೆಬ್ಬಾರ್ ಬೆನ್ನು ಬಿದ್ದಿದ್ದು, ಚೈತ್ರಾ ಬೆಂಗಳೂರಿಂದ ಗೋವಾ- ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿರುವುದಾಗಿ ತಿಳಿದುಬಂದಿದೆ. ಚೈತ್ರಾ ಹೆಬ್ಬಾರ್ 40,000 ರೂಪಾಯಿಗಳನ್ನ ತನ್ನ ಖಾತೆಯಿಂದ ವಿತ್ ಡ್ರಾ ಮಾಡಿ ಹಿಮಾಚಲ ಪ್ರದೇಶದಿಂದ ದೆಹಲಿ ವಿಮಾನ ನಿಲ್ದಾಣದಕ್ಕೆ ತೆರಳಿ ಕತಾರ್ ದೇಶಕ್ಕೆ ಹಾರಿದ್ದಾಳೆ. 


ಚೈತ್ರಾಳ ಪ್ರಿಯಕರ ಶಾರೂಕನ್ನ ಪೊಲೀಸರು ಕಳೆದ ಗುರುವಾರ ಹಿಮಾಚಲ ಪ್ರದೇಶದಲ್ಲಿ ಪತ್ತೆ ಹಚ್ಚಿ ಉಳ್ಳಾಲ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶಾರೂಕ್ ತಾನು ಚೈತ್ರಾ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಶಾರೂಕನ್ನ ವಿಚಾರಣೆ ನಡೆಸಿದ ಪೊಲೀಸರು ಪ್ರಾಯ ಪ್ರಬುದ್ಧರು ಎನ್ನುವ ಕಾರಣಕ್ಕೆ ಆತನನ್ನ ಬಿಟ್ಟು ಕಳಿಸಿದ್ದಾರೆ.


 ಚೈತ್ರಾ ವಿದೇಶಕ್ಕೆ ಹಾರಲು ಆಕೆಯ ಪ್ರಿಯಕರ ಶಾರೂಕ್ ಶೇಖ್ ಸಹಕರಿಸಿರುವ  ಶಂಕೆ ವ್ಯಕ್ತವಾಗಿದೆ. ಚೈತ್ರಾ ಕತಾರ್ ದೇಶದ ಇಂಡಿಯನ್ ಎಂಬೇಸಿಯಿಂದ ಚೈತ್ರಾ ಉಳ್ಳಾಲ ಪೊಲೀಸರಿಗೆ ಇ-ಮೇಲ್ ಮತ್ತು ವಾಟ್ಸಪ್ ಸಂದೇಶ ಕಳಿಸಿದ್ದು ನಾನು ಪ್ರಬುದ್ಧಳಾಗಿದ್ದೇನೆ. ನನ್ನ ಇಷ್ಟದಲ್ಲಿ ನಾನು ಬಂದಿದ್ದೇನೆ. ನನಗೆ ಪ್ರೀತಿ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾಳೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.

ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

Posted by Vidyamaana on 2024-03-20 10:07:44 |

Share: | | | | |


ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೊಸ ಅಧಿಸೂಚನೆ ಹೊರಡಿಸಿದೆ. ಚುನಾವಣಾ ಆಯೋಗವು ಈಗ ಮಾಧ್ಯಮ ಸಿಬ್ಬಂದಿಗೆ ಅಂಚೆ ಮತಪತ್ರದ ಸೌಲಭ್ಯವನ್ನ ಒದಗಿಸಿದೆ. ಅಂದ್ರೆ, ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಅಧಿಕೃತ ಮಾಧ್ಯಮ ಸಿಬ್ಬಂದಿ ಅವರು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಸಾಧ್ಯವಾಗುತ್ತದೆ.ಆದಾಗ್ಯೂ, ಚುನಾವಣಾ ಆಯುಕ್ತರು ಮಾಧ್ಯಮ ಪ್ರಸಾರ ಪಾಸ್ ನೀಡುವ ಮಾಧ್ಯಮ ಸಿಬ್ಬಂದಿಗೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. 


ವಾಸ್ತವವಾಗಿ, ಚುನಾವಣಾ ಆಯೋಗವು ಯಾವುದೇ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತದಾರರನ್ನು ಭಾಗವಹಿಸಲು ಪ್ರಯತ್ನಿಸುತ್ತದೆ. ಆದರೆ ಚುನಾವಣೆಗಳಲ್ಲಿ, ಸಾವಿರಾರು ಮತ್ತು ಲಕ್ಷಾಂತರ ನೌಕರರು ಮತ್ತು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದಾರೆ. ಇದಲ್ಲದೆ, ಗಡಿಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ತಮ್ಮ ಕರ್ತವ್ಯವನ್ನ ಬಿಟ್ಟು ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಿಬ್ಬಂದಿ ಮತ್ತು ಸೈನಿಕರಿಗೆ, ಚುನಾವಣಾ ಆಯೋಗವು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡುತ್ತದೆ.

ಕೇವಲ ಬಲ್ಬ್‌ಗಳನ್ನು ಬದಲಿಸೋ ಕೆಲಸಕ್ಕೆ ಸಿಗಲಿದೆ 1 ಕೋಟಿ ರೂ.ವರೆಗೆ ಸಂಬಳ! ಎಲ್ಲಿ ಗೊತ್ತಾ?

Posted by Vidyamaana on 2023-06-12 15:48:37 |

Share: | | | | |


ಕೇವಲ ಬಲ್ಬ್‌ಗಳನ್ನು ಬದಲಿಸೋ ಕೆಲಸಕ್ಕೆ ಸಿಗಲಿದೆ 1 ಕೋಟಿ ರೂ.ವರೆಗೆ ಸಂಬಳ! ಎಲ್ಲಿ ಗೊತ್ತಾ?

    ನೆಮ್ಮದಿಯ ಜೀವನ ನಡೆಸಲು ಉದ್ಯೋಗ ಅತ್ಯಗತ್ಯ. ಯಾವುದೇ ಕೆಲಸ ಆದ್ರೂ ಹಣ ಗಳಿಸಬಹುದು. ಕೆಲವರು ಕಷ್ಟಪಟ್ಟರೆ ಲಕ್ಷಗಟ್ಟಲೆ ತಲುಪಬಹುದು. ಆದರೆ, ಕೇವಲ ಬಲ್ಬ್‌ಗಳನ್ನು ಬದಲಾಯಿಸುವುದರಿಂದ ನೀವು ಕೋಟಿಗಳನ್ನು ಗಳಿಸಬಹುದೇ?ಎಂದು ನೀವೆಂದಾದರೂ ಯೋಚಿಸಿದ್ದೀರಾ?.

ಹೌದು, ಗೋಪುರದ ಸಿಗ್ನಲ್ ಟವರ್‌ಗಳ ಮೇಲೆ ಬಲ್ಬ್‌ಗಳನ್ನು ಬದಲಾಯಿಸುವ ಕೆಲಸಕ್ಕೆ ಕೋಟ್ಯಂತರ ರೂಪಾಯಿ ಸಂಬಳ ಪಡೆಯಬಹುದು.ಇವು ಸಾಮಾನ್ಯ ಗೋಪುರಗಳಲ್ಲ ಇಷ್ಟೊಂದ ಸಂಬಳ ಪಡೆಯಬೇಕು ಅಂದ್ರೆ, ನೂರಾರು ಮೀಟರ್ ಎತ್ತರದ ಸಿಗ್ನಲ್ ಟವರ್‌ಗಳ ಮೇಲೆ ಕೆಲಸ ಮಾಡಬೇಕು. ಮೇಲಕ್ಕೆ ಹೋಗುವಾಗ ತೆಳ್ಳಗಿನ ಕಂಬಿಗಳ ಮೇಲೆ ಕಣ್ಣು ತಿರುಗಿಸದೆ ಧೈರ್ಯವಾಗಿ ನಡೆಯಬೇಕು. ಇವು ಹೊರಗೆ ಕಾಣುವ ಗೋಪುರಗಳಂತಲ್ಲ. ಮೇಲಕ್ಕೆ ಹೋಗುವ ಮಾಪಕಗಳು ತೆಳುವಾಗಿರುತ್ತವೆ. ಅಂತಿಮವಾಗಿ ತೆಳುವಾದ ರಾಡ್ ಮಾತ್ರ ಇರುತ್ತದೆ. ಈ ಟವರ್‌ಗಳನ್ನು ಹತ್ತುವುದು ಮತ್ತು ಬಲ್ಬ್‌ಗಳನ್ನು ಬದಲಾಯಿಸುವುದು ಭಯಾನಕ ಕೆಲಸ. ಒಂದು ಹಗ್ಗ ಮಾತ್ರ ಇಲ್ಲಿ ರಕ್ಷಣೆಯಾಗಿರುತ್ತದೆ. ಪ್ರತಿಯೊಬ್ಬರೂ ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ವಿಶೇಷ ತರಬೇತಿಯ ಅಗತ್ಯವಿದೆ. ದೈಹಿಕವಾಗಿ ಸದೃಢವಾಗಿರಬೇಕು. ಅಂತಹ ಟವರ್‌ಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಬೇಡಿಕೆಯಿದೆ.ಕೋಟಿಗಟ್ಟಲೆ ಸಂಬಳ ಉದ್ಯೋಗಿಯ ಸಂಬಳವು ಗೋಪುರದ ಎತ್ತರ, ಅನುಭವ ಮತ್ತು ಕೌಶಲ್ಯವನ್ನು ಅವಲಂಬಿಸಿರುತ್ತದೆ. ಒಂದು ಗೋಪುರದ ಮೇಲೆ ಮತ್ತು ಕೆಳಗೆ ಹೋಗಲು ಕನಿಷ್ಠ ಆರು ಗಂಟೆಗಳು ತೆಗೆದುಕೊಳ್ಳುತ್ತದೆ. 1500 ಮೀಟರ್ ಟವರ್ ಏರಬಲ್ಲವರಿಗೆ 1 ಕೋಟಿ ರೂ. ಸಂಬಳ ನೀಡಲಾಗುವುದು. ಹೊಸ ಉದ್ಯೋಗಿಗಳಿಗೆ ಪ್ರತಿ ಗಂಟೆಗೆ ಸರಾಸರಿ $17 ಪಾವತಿಸಲಾಗುತ್ತದೆ. ಆದರೆ.. ಈ ದೀಪಗಳನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಮೆರಿಕದ ಡಕೋಟಾ ನಗರದ ಟ್ವಿಟರ್ ಖಾತೆಯಲ್ಲಿ ಬೆಳಕಿಗೆ ಬಂದಿದೆ.

ಕಾಣಿಯೂರಿನ ಎಲುವೆಯಲ್ಲಿ ರಿಕ್ಷಾ ಚಾಲಕ ನೇಣಿಕೆ ಶರಣು

Posted by Vidyamaana on 2023-12-28 14:29:54 |

Share: | | | | |


ಕಾಣಿಯೂರಿನ ಎಲುವೆಯಲ್ಲಿ ರಿಕ್ಷಾ ಚಾಲಕ ನೇಣಿಕೆ ಶರಣು

ಕಾಣಿಯೂರು: ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಣಿಯೂರಿನ ಬೆದ್ರಾಜೆ ನಿವಾಸಿ ವಸಂತ (42) ಎಂಬವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent News


Leave a Comment: