ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ರೈಲಿನಲ್ಲಿ ಪ್ರಯಾಣಿಕನಿಗೆ ಥಳಿಸಿದ ಟಿಕೆಟ್ ತಪಾಸಕನ ಅಮಾನತು

Posted by Vidyamaana on 2024-01-20 16:10:24 |

Share: | | | | |


ರೈಲಿನಲ್ಲಿ ಪ್ರಯಾಣಿಕನಿಗೆ ಥಳಿಸಿದ ಟಿಕೆಟ್ ತಪಾಸಕನ ಅಮಾನತು

ಲಕ್ನೋ: ಬರೌನಿ-ಲಕ್ನೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ವ್ಯಕ್ತಿಯೊಬ್ಬನಿಗೆ ಭಾರತೀಯ ರೈಲ್ವೇಯ ಉಪ ಮುಖ್ಯ ಟಿಕೆಟ್ ತಪಾಸಕರೊಬ್ಬರು ಥಳಿಸುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ.ಈ ಘಟನೆಯು ಗುರುವಾರ ಉತ್ತರಪ್ರದೇಶದ ಗೊಂಡ ಮತ್ತು ಬಾರಾಬಂಕಿ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ.ಟಿಕೆಟ್ ತಪಾಸಕನನ್ನು ಅಮಾನತುಗೊಳಿಸಿರುವುದನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಖಚಿತ ಪಡಿಸಿದ್ದಾರೆ. ಇಂಥ ದುರ್ವರ್ತನೆಗಳನ್ನು ನಾವು ಸಹಿಸುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಸಂದೇಶವೊಂದರಲ್ಲಿ ವೈಷ್ಣವ್ ಹೇಳಿದ್ದಾರೆ.


ಅಮಾನತಾಗಿರುವ ಟಿಕೆಟ್ ತಪಾಸಕನನ್ನು ಲಕ್ನೋ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪ್ರಕಾಶ್ ಎಂಬುದಾಗಿ ಗುರುತಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.


ಟಿಕೆಟ್ ತಪಾಸಕನು ಪ್ರಯಾಣಿಕನಿಗೆ ಹೊಡೆಯುವುದನ್ನು ಇತರ ಪ್ರಯಾಣಿಕರು ಆಕ್ಷೇಪಿಸುವುದನ್ನು 30 ಸೆಕೆಂಡ್ ಗಳ ವೀಡಿಯೊ ತೋರಿಸುತ್ತದೆ

ಪ್ರೀತಿಸಿದವನೊಂದಿಗೆ ಮದುವೆಯಾದ ಪುತ್ರಿ! ಮನೆಮುಂದೆ ಮಗಳ ಶ್ರದ್ದಾಂಜಲಿ ಪ್ಲೆಕ್ಸ್ ಹಾಕಿದ ತಂದೆ

Posted by Vidyamaana on 2024-04-08 20:29:36 |

Share: | | | | |


ಪ್ರೀತಿಸಿದವನೊಂದಿಗೆ ಮದುವೆಯಾದ ಪುತ್ರಿ! ಮನೆಮುಂದೆ ಮಗಳ ಶ್ರದ್ದಾಂಜಲಿ ಪ್ಲೆಕ್ಸ್ ಹಾಕಿದ ತಂದೆ

ಕರೀಂನಗರ: ತಂದೆ ತಾಯಿಗೆ (Parents) ಮಕ್ಕಳ ಮೇಲೆ ಹಲವು ನಿರೀಕ್ಷೆಗಳಿರುತ್ತವೆ. ಅವರಿಗೆ ಒಳ್ಳೆಯ ವಿದ್ಯಾಭ್ಯಾಸ (Education) ಕೊಡಿಸಬೇಕು, ವಿದ್ಯಾವಂತರನ್ನಾಗಿ ಮಾಡಿ ಒಳ್ಳೆ ಕೆಲಸ ಸಿಗುವಂತೆ ಮಾಡಬೇಕೆನ್ನುವ ಕನಸಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿ ಪ್ರೀತಿಯನ್ನೇ (Love) ಕಡೆಗಣಿಸಿ ತಾವೂ ಪ್ರೀತಿಸಿದ ಹುಡುಗಿ, ಹುಡುಗರ ಜೊತೆ ಹೋಗಿ ಮದುವೆಯಾಗುತ್ತಿದ್ದಾರೆ.ಆದರೆ ಇದರಿಂದ ಪೋಷಕರು ಅನುಭವಿಸುವ ಮಾನಸಿಕ ಯಾತನೆ ಹೇಳತೀರದು. ಇಂತಹದ್ದೇ ಘಟನೆ ತೆಲಂಗಾಣದ (Telangana) ಸಿರಿಸಿಲ್ಲದಲ್ಲಿ ನಡೆದಿದೆ.


ಪ್ರೀತಿಸಿದ ಯುವಕ ಜೊತೆ ಪರಾರಿಯಾದ ಯುವತಿ


ರಾಜಣ್ಣ ಸಿರಿಸಿಲ್ಲ ನಿವಾಸಿ ಮುರಳಿ ಎಂಬಾತನ ಮಗಳು ಬಿ.ಟೆಕ್ ಓದುತ್ತಿದ್ದಳು. ಮುರಳಿ ತನ್ನ ಮಗಳನ್ನ ಕಷ್ಟಪಟ್ಟು ಸುತ್ತಿದ್ದರು. ಆದರೆ ಮನೆಯವರಿಗೆ ದ್ರೋಹ ಮಾಡಿ ಆಕೆ ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಿ ದೂರ ಹೋಗಿದ್ದಾಳೆ. ಈ ಮನನೊಂದ ಪೋಷಕರು ತನ್ನ ಮಗಳು ಸತ್ತಿದ್ದಾಳೆಂದು ಶ್ರದ್ದಾಂಜಲಿ ಫ್ಲೆಕ್ಸಿ ಮಾಡಿ ಮನೆಯ ಮುಂಭಾಗದ ಗೋಡೆಯ ಮೇಲೆ ಹಾಕಿದ್ದಾರೆ.

Mangaluru ಪಬ್‌ನಲ್ಲಿ ಮಹಿಳೆಗೆ ಕಿರುಕುಳ: ಪುತ್ತೂರಿನ ನಾಲ್ವರ ಬಂಧನ

Posted by Vidyamaana on 2024-08-06 07:29:11 |

Share: | | | | |


Mangaluru ಪಬ್‌ನಲ್ಲಿ ಮಹಿಳೆಗೆ ಕಿರುಕುಳ: ಪುತ್ತೂರಿನ ನಾಲ್ವರ ಬಂಧನ

ಮಂಗಳೂರು : ಪಾಂಡೇಶ್ವರದ ಪಬ್‌ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರು ನಿವಾಸಿಗಳಾದ ಮಹೇಶ್‌ (28), ವಿನಯ್‌ (30), ನಿತೇಶ್‌ (32) ಮತ್ತು ಪ್ರಿತೇಶ್‌ (33) ಅವರನ್ನು ಪೊಲೀಸರು ಬಂಧಿಸಿದ್ದಾರೆ.ಶನಿವಾರ ಮಹಿಳೆಯೊಬ್ಬರು ಗೆಳತಿ ಜತೆ ಪಬ್‌ಗ ಹೋಗಿದ್ದರು.

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ: ಮತ್ತೂಬ್ಬ ಸೆರೆ

Posted by Vidyamaana on 2023-12-13 11:19:06 |

Share: | | | | |


ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ: ಮತ್ತೂಬ್ಬ ಸೆರೆ

ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೂಬ್ಬ ಆರೋಪಿಯನ್ನು ಬಂ ಧಿಸಿದ್ದು, ಬಂಧಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ.


ಹೊಸ ವಂಟಮೂರಿ ಗ್ರಾಮದ ಯುವತಿಯ ಸಂಬಂಧಿ ಶಿವಪ್ಪ ವಣ್ಣೂರಿ ಎಂಬಾತನನ್ನು ಪೊಲೀಸರು ಬಂಧಿ ಸಿದ್ದಾರೆ. ಯುವತಿಯ ತಂದೆ, ತಾಯಿ, ದೊಡ್ಡಪ್ಪ, ದೊಡ್ಡಪ್ಪನ ಮಗ, ಅಜ್ಜಿ, ತಾಯಿ ಕಡೆಯವರು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿ ಸಿ 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.


ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು, ಪ್ರೀತಿಸಿ ಊರು ಬಿಟ್ಟು ಹೋಗಿರುವ ಯುವಕ-ಯುವತಿಯ ಶೋಧ ಕಾರ್ಯ ನಡೆಸಿದ್ದಾರೆ. ಮೊಬೈಲ್‌ ಲೊಕೇಶನ್‌ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಘಟನಾ ಸ್ಥಳಕ್ಕೆ ತಂದು ಸ್ಥಳ ಮಹಜರು ನಡೆಸಿದರು. ಗ್ರಾಮದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ಸೇರಿ ಕಾಕತಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಬಂಧಿತ ಆರೋಪಿಗಳಿಗೆ ಸೇರಿರುವ ಎರಡೂ ಮನೆಗಳಿಗೆ ಬೀಗ ಹಾಕಲಾಗಿದೆ. ಇಡೀ ಓಣಿಯಲ್ಲಿ ನೀರವ ಮೌನ ಆವರಿಸಿದೆ.

ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಮುತ್ತಯ್ಯ ಮುರಳೀಧರನ್ 1,400 ಕೋಟಿ ರೂ.ಹೂಡಿಕೆ: ಎಂ ಬಿ ಪಾಟೀಲ

Posted by Vidyamaana on 2024-06-19 13:51:41 |

Share: | | | | |


ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಮುತ್ತಯ್ಯ ಮುರಳೀಧರನ್ 1,400 ಕೋಟಿ ರೂ.ಹೂಡಿಕೆ: ಎಂ ಬಿ ಪಾಟೀಲ

ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಮಂಗಳವಾರ ತಮ್ಮನ್ನು ಇಲ್ಲಿ ಭೇಟಿಯಾದ ಮುತ್ತಯ್ಯ ಅವರೊಂದಿಗೆ ಸಚಿವರು ಈ ಸಂಬಂಧ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಸಚಿವರು, ಬದನಕುಪ್ಪೆಯಲ್ಲಿ ಮುರಳೀಧರನ್ ಅವರು ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದು, ಶುರುವಿನಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಅದು ಈಗ ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ಅವರು

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿ ಸಭೆ ; ಅಧ್ಯಕ್ಷರಾಗಿ ಸಿದ್ದೀಕ್ ಪುತ್ತೂರು ಹಾಗೂ ಕಾರ್ಯದರ್ಶಿಯಾಗಿ ಉಸ್ಮಾನ್ ಎ.ಕೆ ಆಯ್ಕೆ

Posted by Vidyamaana on 2024-08-31 06:34:24 |

Share: | | | | |


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿ ಸಭೆ ; ಅಧ್ಯಕ್ಷರಾಗಿ ಸಿದ್ದೀಕ್ ಪುತ್ತೂರು ಹಾಗೂ ಕಾರ್ಯದರ್ಶಿಯಾಗಿ ಉಸ್ಮಾನ್ ಎ.ಕೆ ಆಯ್ಕೆ

ಪುತ್ತೂರು ಆ 29: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಪ್ರತಿನಿಧಿಗಳ ಸಭೆ ಹಾಗೂ ಆಂತರಿಕ ಚುನಾವಣೆಯು ಟ್ರಿನಿಟಿ ಹಾಲ್ ಪಡೀಲ್, ಪುತ್ತೂರಿನಲ್ಲಿ ನಡೆಯಿತು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್‌ರವರು ಧ್ವಜಾರೋಹಣಗೈದು ಪ್ರತಿನಿಧಿ ಸಭೆಗೆ ಚಾಲನೆ ನೀಡಿದರು.

   ಚುನಾವಣಾಧಿಕಾರಿಯಾಗಿ ಆಗಮಿಸಿದ ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ರವರು ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು. ಎಸ್ಡಿಪಿಐ ಪುತ್ತೂರು ಕಾರ್ಯದರ್ಶಿಗಳಾದ ಉಸ್ಮಾನ್ ಎ.ಕೆ ಹಾಗೂ ರಿಯಾಝ್ ಬಳಕ್ಕರವರು ತ್ರೈವಾರ್ಷಿಕ ವರದಿ ವಾಚಿಸಿದರು. ಮುಂದಿನ ಪಕ್ಷದ ಬೆಳವಣಿಗೆಗಳ ಬಗ್ಗೆ, ಪ್ರಸ್ತುತವಾಗಿ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. 

      

Recent News


Leave a Comment: