ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಧನೇಶ್ ಶೆಟ್ಟಿ ಆಯ್ಕೆ

Posted by Vidyamaana on 2023-11-24 12:25:24 |

Share: | | | | |


ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ  ಧನೇಶ್ ಶೆಟ್ಟಿ  ಆಯ್ಕೆ

ಮಂಗಳೂರು: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಧನೇಶ್ ಶೆಟ್ಟಿ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಧನೇಶ್ ಶೆಟ್ಟಿ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರರಾಗಿದ್ದಾರೆ. ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಇವರು ವಿವಾಹಿತರಾಗಿದ್ದು ಪತ್ನಿಯೊಂದಿಗೆ ಇಂಡೋನೇಷಿಯದ ಆರೋಗ್ಯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇದೀಗ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆ. 19ರಂದು ಕೊಣಾಜೆ ಪಿಎ ಕಾಲೇಜಿನಲ್ಲಿ ಗ್ಯಾಜ್ಯುವೇಷನ್ ಡೇ

Posted by Vidyamaana on 2023-08-18 15:27:26 |

Share: | | | | |


ಆ. 19ರಂದು ಕೊಣಾಜೆ ಪಿಎ ಕಾಲೇಜಿನಲ್ಲಿ ಗ್ಯಾಜ್ಯುವೇಷನ್ ಡೇ

ಮಂಗಳೂರು: ಕೊಣಾಜೆ ಪಿಎ ಕಾಲೇಜ್ ಆಫ್ ಇಂಜಿನಿಯರಿಂಗ್’ನಲ್ಲಿ ಆ. 19ರಂದು ಬೆಳಿಗ್ಗೆ 9.30ಕ್ಕೆ ಪೇಸ್ ಅಡಿಟೋರಿಯಂನಲ್ಲಿ 2019-2023ರ ಬ್ಯಾಚ್ ಸ್ಟೂಡೆಂಟ್’ಗಳ ಗ್ರಾಜ್ಯುವೇಷನ್ ಡೇ ನಡೆಯಲಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿರುವರು. ಸುರತ್ಕಲ್ ಎನ್.ಐ.ಟಿ.ಕೆ. ಇದರ ಸಿ.ಎಸ್.ಇ. ವಿಭಾಗದ ಡಾ. ಮೋಹಿತ್ ಪಿ. ತಹಿಲಿಯಾನಿ ಗೌರವ ಅತಿಥಿಯಾಗಿರುವರು. ಸಂಸ್ಥೆಯ ಟ್ರಸ್ಟಿಗಳಾದ ಅಬ್ದುಲ್ ಲತೀಫ್, ಮೊಹಮ್ಮದ್ ಶಾಫಿ, ಮುಹಮ್ಮದ್ ಅಮೀನ್ ಇಬ್ರಾಹಿಂ, ಮುಹಮ್ಮದ್ ಸಲ್ಮಾನ್ ಇಬ್ರಾಹಿಂ, ಜುಬೈರ್ ಇಬ್ರಾಹಿಂ, ಬಿಲಾಲ್ ಇಬ್ರಾಹಿಂ, ಆದಿಲ್ ಇಬ್ರಾಹಿಂ, ಸಂಸ್ಥೆಯ ನಿರ್ದೇಶಕ ಅಹ್ಮದ್ ಕುಟ್ಟಿ, ಬೆಂಗಳೂರು ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಡೀನ್ ಡಾ. ಅಬ್ದುಲ್ ಶರೀಫ್ ಉಪಸ್ಥಿತರಿರುವರು.

ಮಧ್ಯಾಹ್ನ 2 ಗಂಟೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಬ್ದುಲ್ಲ ಇಬ್ರಾಹಿಂ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ (ಈವ್ಯಾಲ್ಯುವೇಷನ್) ರಿಜಿಸ್ಟ್ರಾರ್ ಡಾ. ರಾಜು ಕೃಷ್ಣ ಚಲನ್ನವರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಂಟಿಯನ್ನು ಪ್ರೀತಿಸಲು ಹೋಗಿ ಯುವಕನ ಬಿತ್ತು ಹೆಣ..

Posted by Vidyamaana on 2023-11-05 21:52:52 |

Share: | | | | |


ಆಂಟಿಯನ್ನು ಪ್ರೀತಿಸಲು ಹೋಗಿ ಯುವಕನ ಬಿತ್ತು ಹೆಣ..

ಬೆಂಗಳೂರು : ಆನೇಕಲ್ ಮುಗಳೂರು ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಪ್ರಕರಣಕ್ಕೆ ಹಿಂದೆ ಬಿದ್ದ ಖಾಕಿ ಪಡೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆಂಟಿಯ ಪ್ರೀತಿಸಲು ಹೋಗಿ ಯುವಕ ಹೆಣವಾಗಿ ಹೋಗಿದ್ದಾನೆ..ಈ ಕೇಸ್​ನಲ್ಲಿ ಮೃತನ ಪ್ರೇಯಸಿಯೇ ಆತನನ್ನು ಕೊಂದಿರುವ ಮಾಹಿತಿ ಲಭ್ಯವಾಗಿದೆ.ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುಗಳೂರು ಹೊಳೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಸಿಕ್ಕಿದ್ದು, ಈ ಪ್ರಕರಣ ಆಸುಪಾಸಿನ ಜನರನ್ನು ಆತಂಕಕ್ಕೀಡು ಮಾಡಿತ್ತು. ಆದರೀಗ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದು, ಮೃತ ಯುವಕನನ್ನು ಕೋಲಾರ ಮಾಲೂರು ತಾಲೂಕಿನ ಅಯ್ಯಪ್ಪನಗರದ 28 ವರ್ಷದ ಚೇತನ್ ಎಂದು ಗುರುತಿಸಲಾಗಿದೆ. ಮಾಲೂರು ಸೊನ್ನಾಪುರ ಗ್ರಾಮದ ಸತೀಶ್(30), ಶಶಿ(29), ಶೋಭಾ(28) ಕೊಲೆ ಆರೋಪಿಗಳಾಗಿದ್ದಾರೆ.


ಕಳೆದ ತಿಂಗಳು 26ನೇ ತಾರೀಖು ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ವೇಳೆ ಸಮೀಪದ ಮುಗಳೂರು ಬ್ರಿಡ್ಜ್ ತಡೆಗೋಡೆ ಮೇಲೆ ರಕ್ತದ ಕಲೆಗಳಿರುವುದು ಪತ್ತೆಯಾಗಿತ್ತು. ಆದ್ರೆ ಅಂದು ಮೃತನ ಗುರುತು ಪತ್ತೆಯಾಗಿರಲಿಲ್ಲ. ಸರ್ಜಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಇದಾದ ಬಳಿಕವೇ ಯುವಕನ ಮರ್ಡರ್ ಕಹಾನಿ ಬಯಲಿಗೆ ಬಂದಿದೆ.ಮೃತ ಚೇತನ್ ಗಂಡ ಬಿಟ್ಟಿದ್ದ ಮಹಿಳೆ ಜೊತೆ ಸಹಜೀವನ ಆರಂಭಿಸಿದ್ದು, ಕಳೆದ ಎಂಟು ತಿಂಗಳಿಂದ ಇಬ್ಬರೂ ಒಟ್ಟಿಗಿದ್ದರೆನ್ನಲಾಗಿದೆ. ಈ ನಡುವೆ ಚೇತನ್ ಮೂಲಕ ಸತೀಶ್ ಪರಿಚಯವಾಗಿದ್ದು, ಸಿರಿವಂತ ಸತೀಶ್ ಮೇಲೆ ಶೋಭಾ ಕಣ್ಣು ಬಿದ್ದಿದೆ. ಕೆಲವೇ ದಿನಗಳಲ್ಲಿ ಶೋಭಾಗಾಗಿ ಆತ ಲಕ್ಷ ಲಕ್ಷ ಖರ್ಚು ಮಾಡಿದ್ದ. 25 ಲಕ್ಷ ಖರ್ಚು ಮಾಡಿದ್ದ ಆತ ಶೋಭಗಾಗಿ ಬ್ಯೂಟಿ ಪಾರ್ಲರ್ ಆರಂಭ ಮಾಡಿದ್ದ. ಆದರೆ ಇಬ್ಬರ ನಡುವಿನ ಈ ಆಪ್ತತೆಗೆ ಚೇತನ್ ಅಡ್ಡಿಯಾಗಿದ್ದ.


ತಮ್ಮ ಈ ಸಂಬಂಧಕ್ಕೆ ಅಡ್ಡಿಯಾದ ಚೇತನ್​ ಆಟ ಮುಗಿಸಲು ಶೋಭಾ ಪ್ಲಾನ್ ಮಾಡಿದ್ದಾಳೆ. ನಂತರ ಒಂದು ದಿನ ಎಣ್ಣೆ ಪಾರ್ಟಿ ನಡೆದಿದೆ. ಹೊಸಕೋಟೆ ಐಶ್ವರ್ಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಚೇತನ್‍ನನ್ನು ಮಚ್ಚಿನಿಂದ ಹೊಡೆದು ಮುಗಳೂರು ಹೊಳೆಗೆ ಎಸೆದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.ಈ ಹಿಂದೆ ಅತ್ತಿಬೆಲೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿ  ಶೋಭಾ, ಈ ಬಾರಿ ತನ್ನ ಮಾಸ್ಟರ್ ಪ್ಲಾನ್ ನಿಂದಾಗಿ ಇಬ್ಬರ ಭವಿಷ್ಯ ಹಾಳು ಮಾಡಿದ್ದಾಳೆ. ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಗ್ರಾಮಾಂತರ ಮಂಡಲ ಮಾಧ್ಯಮ ಪ್ರಕೋಷ್ಠ ಸಂಚಾಲಕರಾಗಿ ಮಹೇಶ್ ರೈ ಕೇರಿ, ಸುಶಾಂತ್ ಚಂದಳಿಕೆ

Posted by Vidyamaana on 2024-09-07 10:07:22 |

Share: | | | | |


ಬಿಜೆಪಿ ಗ್ರಾಮಾಂತರ ಮಂಡಲ ಮಾಧ್ಯಮ ಪ್ರಕೋಷ್ಠ ಸಂಚಾಲಕರಾಗಿ ಮಹೇಶ್ ರೈ ಕೇರಿ, ಸುಶಾಂತ್ ಚಂದಳಿಕೆ

ಪುತ್ತೂರು:ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಮಾಧ್ಯಮ ಪ್ರಕೋಷ್ಟದ ಸಂಚಾಲಕರಾಗಿ ಒಳಮೊಗ್ರು ಗ್ರಾ.ಪಂ.ಸದಸ್ಯ ಮಹೇಶ್ ರೈ ಕೇರಿ ಹಾಗೂ

ಕಡಬ : ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ

Posted by Vidyamaana on 2023-06-22 08:27:57 |

Share: | | | | |


ಕಡಬ : ಖಾತೆ ಬದಲಾವಣೆಗೆ  ಲಂಚಕ್ಕೆ ಬೇಡಿಕೆ

ಕಡಬ : ಕಳೆದ ಆರು ವರ್ಷಗಳಿಂದ ಖಾತೆ ಬದಲಾವಣೆಗೆ ಅರ್ಜಿದಾರನ್ನು ಸತಾಯಿಸುತ್ತಿದ್ದ ಪಿಡಿಓ ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯಯಕ್ತ ಬಲೆಗೆ ಬಿದ್ದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಎಂಬಾತ ಅರ್ಜಿದಾರರಿಂದ ಖಾತೆ ಬದಲಾವಣೆಗೆ 20 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ನೊಂದು ನೇರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 


ಜೂನ್ 22 ರಂದು(ಇಂದು) ಲಂಚದ 20 ಸಾವಿರ ರೂಪಾಯಿ ಹಣ ಅರ್ಜಿದಾರರಿಂದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಸೈಮನ್ , ಡಿವೈಎಸ್ಪಿ ಚೆಲುವರಾಜ್ , ಡಿವೈಎಸ್ಪಿ ಕಲಾವತಿ , ಇನ್ಸ್‌ಪೆಕ್ಟರ್ ಅಮಾನುಲ್ಲಾ ,ಇನ್ಸ್‌ಪೆಕ್ಟರ್ ವಿನಯಕ ಬಿಲ್ಲವ, ನೇತೃತ್ವದ ಸಿಬ್ಬಂದಿಗಳು ಕಾರ್ಯಾಚರಣೆ ಭಾಗವಹಿಸಿದ್ದರು.

ನಾನು ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ತಿರುಗಾಡ್ತಿದ್ದ ಗುಜರಾತಿ ಅಂದರ್

Posted by Vidyamaana on 2023-08-30 10:06:59 |

Share: | | | | |


ನಾನು ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ತಿರುಗಾಡ್ತಿದ್ದ ಗುಜರಾತಿ ಅಂದರ್

ಸೂರತ್(ಗುಜರಾತ್):‌ ಇಸ್ರೋದ ವಿಜ್ಞಾನಿ ಎಂದು ಸುಳ್ಳು ಹೇಳಿ ಗುರುತಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸೂರತ್‌ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚಂದ್ರಯಾನ-3ರ ಲ್ಯಾಂಡರ್‌ ಮಾಡ್ಯೂಲ್‌ ಅನ್ನು ವಿನ್ಯಾಸಗೊಳಿಸಿರುವುದಾಗಿ ಸೂರತ್‌ ನ ಮಾಧ್ಯಮಗಳಿಗೆ ಈತ ಸಂದರ್ಶನ ನೀಡಿರುವುದಾಗಿ ವರದಿ ತಿಳಿಸಿದೆ.ಆರೋಪಿ ಮಿಥುಲ್‌ ತ್ರಿವೇದಿ (30ವರ್ಷ) ಎಂಬಾತ ಗುಜರಾತ್‌ ನ ಸೂರತ್‌ ನಗರದಲ್ಲಿ ತನ್ನ ಟ್ಯೂಷನ್‌ ತರಗತಿಗಳಿಗೆ ಹಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಯ ಸೋಗು ಹಾಕಿದ್ದು, ಈತನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆಗಸ್ಟ್‌ 23ರಂದು ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡ್‌ ಆದ ನಂತರ ತ್ರಿವೇದಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದ. ಬಳಿಕ ತ್ರಿವೇದಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ವಿವರಿಸಿದೆ.ತಾನು ಇಸ್ರೋದ ಏನ್ಸಿಯಂಟ್‌ ಸೈನ್ಸ್‌ ಆಪ್ಲಿಕೇಶನ್‌ ಡಿಪಾರ್ಟ್‌ ಮೆಂಟ್‌ ನ ಅಸಿಸ್ಟೆಂಟ್‌ ಚೆಯರ್‌ ಮೆನ್‌ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲ 2022ರ ಫೆಬ್ರವರಿ 26ರಂದು ತಾನು ನೇಮಕಗೊಂಡಿರುವುದಾಗಿ ನಕಲಿ ಅಪಾಯಿಂಟ್‌ ಮೆಂಟ್‌ ಲೆಟರ್‌ ಅನ್ನು ತೋರಿಸುತ್ತಿದ್ದ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನಿಖೆಯಲ್ಲಿ ತ್ರಿವೇದಿಗೂ ಇಸ್ರೋ ಸಂಸ್ಥೆಗೂ ಯಾವ ಸಂಬಂಧವೂ ಇಲ್ಲ ಎಂಬುದು ತಿಳಿದು ಬಂದಿದೆ. ಈತ ಜನರ ಹಾದಿ ತಪ್ಪಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿ ಎಂದು ಸೋಗು ಹಾಕಿ ಇಸ್ರೋ ಸಂಸ್ಥೆಯ ಘನತೆಗೆ ಧಕ್ಕೆ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ

Recent News


Leave a Comment: