ಜ 27 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮ

ಸುದ್ದಿಗಳು News

Posted by vidyamaana on 2024-07-26 08:10:52 |

Share: | | | | |


ಜ 27 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮ

ಪುತ್ತೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಪುತ್ತೂರು ತಾಲೂಕು ವತಿಯಿಂದ ವಿವೇಕಾನಂದ ಕಾಲೇಜು(ಸ್ವಾಯತ್ತ) ಪುತ್ತೂರು ಹಾಗೂ ಪತ್ರಿಕೋದ್ಯಮ ವಿಭಾಗ ಇದರ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ, ಉಪನ್ಯಾಸ - ಸನ್ಮಾನ ಕಾರ್ಯಕ್ರಮವು ಜ 27 ಶನಿವಾರ ಅಪರಾಹ್ನ ಗಂಟೆ 2:00ರಿಂದ ಪುತ್ತೂರು ನೆಹರೂ ನಗರ ವಿವೇಕಾನಂದ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ನಡೆಸಲಿದ್ದಾರೆ. ರಾಮದಾಸ್‌ ಶೆಟ್ಟಿ ವಿಟ್ಲ ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ.) ಪುತ್ತೂರು ತಾಲೂಕು ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಡಾ. ಆಶಾಲತಾ. ಪಿ. ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಗೋವಿಂದದಾಸ ಕಾಲೇಜು ಸುರತ್ಕಲ್ ಇವರು ಉಪನ್ಯಾಸ ನೀಡಲಿದ್ದಾರೆ

ವೇದಿಕೆಯಲ್ಲಿ ಪ್ರೊ.ವಿ.ಬಿ.ಅರ್ತಿಕಜೆ ಗೌರವ ಸಲಹೆಗಾರರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ಮತ್ತು ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರು ಇವರನ್ನು ಡಾ ಯು.ಪಿ. ಶಿವಾನಂದ ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆ ಪುತ್ತೂರು ಇವರು ಸನ್ಮಾನಿಸಲಿದ್ದಾರೆ.

Additional Image

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜುಬಿನ್ ಮೊಹಪಾತ್ರ ಸಹಾಯಕ ಆಯುಕ್ತರು, ಪುತ್ತೂರು ಉಪವಿಭಾಗ, ತಾರನಾಥ ಗಟ್ಟಿ ಕಾಪಿಕಾಡು ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ ಕ,ಮುರಳೀಕೃಷ್ಣ ಕೆ.ಎನ್ ಸಂಚಾಲಕರು, ವಿವೇಕಾನಂದ ಮಹಾವಿದ್ಯಾಲಯ ನೆಹರೂನಗರ ಪುತ್ತೂರು. ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಮುಖ್ಯಸ್ಥರು, ಕಹಳೆ ನ್ಯೂಸ್ ಚಾನೆಲ್ ಪುತ್ತೂರು ಇವರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 Share: | | | | |


BIG NEWS : ಬಿಜೆಪಿಗರ ಹಗರಣಗಳನ್ನು ಶೀಘ್ರವೇ ಬಯಲು ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

Posted by Vidyamaana on 2024-08-04 09:35:19 |

Share: | | | | |


BIG NEWS : ಬಿಜೆಪಿಗರ ಹಗರಣಗಳನ್ನು ಶೀಘ್ರವೇ ಬಯಲು ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಕಾರವಾರ : ಶೀಘ್ರವೇ ಬಿಜೆಪಿಗರ ಹಗರಣಗಳನ್ನು ಹೊರತಂದು ಮಾಡಿ, ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ - ಜೆಡಿಎಸ್‌ ನಾಯಕರಿಗೆ ಇಲ್ಲ.ಅವರದೇ ಹಗರಣಗಳ ರಾಶಿ ಬಿದ್ದಿದೆ, ಅವೆಲ್ಲವನ್ನೂ ಆದಷ್ಟು ಶೀಘ್ರದಲ್ಲಿ ಹೊರತಂದು ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದರು.

ಅಲ್ಫಿಯಾ ಜೊತೆ ಅಖಿಲ್ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು.

Posted by Vidyamaana on 2023-06-21 07:59:35 |

Share: | | | | |


ಅಲ್ಫಿಯಾ ಜೊತೆ ಅಖಿಲ್ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು.

ತಿರುವನಂತಪುರಂ: ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆ ಆಗಲು ಹೋದ ವೇಳೆ ಪೊಲೀಸರು ಮಂಟಪದಿಂದ ಯುವತಿಯನ್ನು ಎಳೆದೊಯ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಜೂ.17 ರಂದು ಆಲ್ಫಿಯಾ (18) ಅಖಿಲ್ (21) ನನ್ನು ತಿರುವನಂತಪುರಂನಲ್ಲಿರುವ ಕೋವಲಂ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ನಡೆದು ತಾಳಿ ಕಟ್ಟುವ ವೇಳೆಯೇ ಪೊಲೀಸರು ದೇವಸ್ಥಾನಕ್ಕೆ ಬಂದು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.ಮುಸ್ಲಿಂ ಯುವತಿ ಆಗಿರುವ ಆಲ್ಫಿಯಾ ಹಿಂದೂ ಯುವಕ ಅಖಿಲ್‌ ನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾಳೆ. ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಎರಡೂ ಕಡೆಯಿಂದ ಸಂಬಂಧಕ್ಕೆ ವಿರೋಧವಿದೆ.


ಜೂ.16 ರಂದು ಆಲ್ಫಿಯಾ ವಿವಾಹವಾಗುವ ನಿಟ್ಟಿನಲ್ಲಿ ತಿರುವನಂತಪುರಂಕ್ಕೆ ತೆರಳಿದ್ದಾರೆ. ಮರುದಿನ ಆಲ್ಫಿಯಾ ಮನೆಯವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ದೇವಸ್ಥಾನದಲ್ಲಿ ಇನ್ನೇನು ಅಖಿಲ್‌ – ಆಲ್ಫಿಯಾ ವಿವಾಹ ನಡೆಯಬೇಕು ಅಷ್ಟರಲ್ಲೇ ಪೊಲೀಸರು ಬಂದಿದ್ದಾರೆ. ಪ್ರಕರಣವನ್ನು ಮುಕ್ತಾಯಗೊಳಿಸಲು ಆಲ್ಫಿಯಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿದ್ದು,  ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದಿದ್ದಕ್ಕೆ ಆಲ್ಫಿಯಾಳನ್ನು ಪೊಲೀಸರು ಎಳೆದೊಯ್ದು ವಾಹನದಲ್ಲಿ ಕೂರಿಸಿದ್ದಾರೆ.ನಾನು ಸ್ವಇಚ್ಛೆಯಿಂದ ಅಖಿಲ್‌ ನೊಂದಿಗೆ ಮದುವೆಯಾಗಲು ಮನೆಯಿಂದ ಬಂದಿರುವುದಾಗಿ ಪೊಲೀಸರ ಬಳಿ ಜೂ.16 ರಂದು ಹೇಳಿದ್ದೆ. ನನಗೆ 18 ವರ್ಷ ಆಗಿಲ್ಲ ಎಂದಿದ್ದಾರೆ. ನನ್ನ ಮನೆಯವರು ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ ಎಂದು ಯುವತಿ ಅಲ್ಫಿಯಾ ಹೇಳಿದ್ದಾಳೆ.

ಅಬುದಾಬಿ : 33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

Posted by Vidyamaana on 2024-02-11 08:46:14 |

Share: | | | | |


ಅಬುದಾಬಿ : 33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

ಅಬುಧಾಬಿ: ಯುಎಇ ಯಲ್ಲಿ ನೆಲೆಸಿರುವ ಕೇರಳದ ರಾಜೀವ್‌ ಅರಿಕ್ಕಾಟ್‌ ಅವರಿಗೆ ಅಬುದಾಬಿ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ.(15 ಮಿಲಿಯನ್‌ ದಿರ್ಹಾಮ್‌) ಬಂಪರ್‌ ಬಹುಮಾನ ಬಂದಿದೆ. ಅವರು ತಮ್ಮ ಮಕ್ಕಳ ಜನ್ಮದಿನಕ್ಕೆ ಹೋಲುವ ನಂಬರಿನ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದು ಅವರಿಗೆ ಅದೃಷ್ಟವಾಗಿ ಮೊದಲ ಬಹುಮಾನ ಗಳಿಸುವಂತೆ ಮಾಡಿದೆ. ಅಬುಧಾಬಿಯ ಅರ್ಕಿಟೆಕ್ಚರ್‌ ಸಂಸ್ಥೆ ಅಲ್‌ ಐನ್‌ನಲ್ಲಿ ರಾಜೀವ್‌ ಕೆಲಸ ಮಾಡುತ್ತಿದ್ದಾರೆ. “ನಾನು 3 ವರ್ಷಗಳಿಂದ ಬಿಗ್‌ ಟಿಕೆಟ್‌ ಲಾಟರಿಗಳನ್ನು ಖರೀದಿಸುತ್ತಿದ್ದೇನೆ. ಮೊತ್ತವನ್ನು 19 ಜನರೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ನಗರಸಭೆ ಕಟ್ಟಡದಲ್ಲಿದ್ದ ಪುಡಾ ಕಚೇರಿ ಶಿಫ್ಟ್

Posted by Vidyamaana on 2023-07-22 02:33:54 |

Share: | | | | |


ನಗರಸಭೆ ಕಟ್ಟಡದಲ್ಲಿದ್ದ ಪುಡಾ ಕಚೇರಿ ಶಿಫ್ಟ್

ಪುತ್ತೂರು: ನಗರಸಭೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ (PUDA) ಕಚೇರಿ ಶಿಫ್ಟ್ ಆಗಿದೆ. ಹಿಂದಿನ‌ ಸಹಾಯಕ ಆಯುಕ್ತರ ಕಚೇರಿಯಿದ್ದ ಜಾಗದಿಂದ ಕುಂಬಾರರ ಗುಡಿ ಕೈಗಾರಿಕೆಯ ಕಟ್ಟಡಕ್ಕೆ ಪುಡಾ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಕಚೇರಿ ಸ್ಥಳಾಂತರವಾಗಲು ಕಾರಣ ಏನು ಗೊತ್ತೇ?

ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರಿಗೆ ನೂತನ ಕಚೇರಿಯ ತಲಾಶ್ ವಿಚಾರ ಸುದ್ದಿಯಾಗಿತ್ತು. ಇದೀಗ ನೂತನ ಕಚೇರಿ ದೊರಕಿದೆ. ಅದರ ಕಾಮಗಾರಿಯೂ ನಡೆಯುತ್ತಿದೆ. ಪ್ರಶಸ್ತವಾದ, ಸಾಕಷ್ಟು ಸ್ಥಳಾವಕಾಶ ಹೊಂದಿರುವ ಈ ಕಟ್ಟಡ ಶಾಸಕರ ಕಚೇರಿಗೆ ಸೂಕ್ತ ಜಾಗ. ಈ ಹಿನ್ನೆಲೆಯಲ್ಲಿ ಇಲ್ಲಿದ್ದ ಪುಡಾ ಕಚೇರಿಯನ್ನು ಮುಂಭಾಗದಲ್ಲೇ ಇರುವ ಕುಂಬಾರರ ಗುಡಿ ಕೈಗಾರಿಕಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಕುಂಬಾರರ ಗುಡಿ ಕೈಗಾರಿಕಾ ಕಟ್ಟಡದ ಏರಡನೇ ಮಹಡಿಯಲ್ಲಿ ಪುಡಾ ಕಚೇರಿ ಸದ್ಯ ಕಾರ್ಯನಿರ್ವಹಿಸುತ್ತಿದೆ. ತಿಂಗಳುಗಳ ಹಿಂದೆಯೇ ಪುಡಾ ಕಚೇರಿ ಶಿಫ್ಟ್ ಆಗಿದ್ದು, ಹಿಂದಿನ ಕಚೇರಿ‌ ಮುಂಭಾಗ ಶಿಫ್ಟ್ ಆದ ಬಗ್ಗೆ ಬೋರ್ಡ್ ಹಾಕಲಾಗಿದೆ.

ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಲಕ್ಷ್ಮೀಪತಿ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ

Posted by Vidyamaana on 2023-09-12 20:31:24 |

Share: | | | | |


ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಲಕ್ಷ್ಮೀಪತಿ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ

ಬೆಂಗಳೂರು: ಗಿಫ್ಟ್‌ ವೋಚರ್‌ ವೆಬ್‌ಸೈಟ್‌ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಲಪಟಾಯಿಸಿದ್ದ (cyber crime) ಹ್ಯಾಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಹಕರಿಗೆ ಕೊಡುವ ಆನ್‌ಲೈನ್‌ ಗಿಫ್ಟ್‌ ವೋಚರ್‌ಗಳನ್ನು ಹ್ಯಾಕ್‌ ಮಾಡಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದ ಯುವಕ ಸೆರೆಯಾಗಿದ್ದು, ಆತನಿಂದ 11 ಲಕ್ಷ ನಗದು, ಚಿನ್ನ, ಬೆಳ್ಳಿ ಗಟ್ಟಿ, ಏಳು ಬೈಕ್‌ ಸೇರಿ 4.16 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


ಸೀಮಾಂಧ್ರದ ಚಿತ್ತೂರು ಮೂಲದ ಲಕ್ಷ್ಮೀಪತಿ ಬಂಧಿತ ಆರೋಪಿ. ಒಂಗೋಲು ಐಐಐಟಿ (IIIT Ongole) ಸಂಸ್ಥೆಯ ಬಿ.ಟೆಕ್ ಪದವೀಧರನಾಗಿರುವ ಈತ ತನ್ನ ನೈಪುಣ್ಯವನ್ನು ವಂಚನೆಗೆ ಬಳಸಿದ್ದಾನೆ. ಗ್ರಾಹಕರಿಗೆ ಕೊಡುವ ವೋಚರ್‌ಗಳು ಹ್ಯಾಕ್ ಆಗಿರುವ ಬಗ್ಗೆ ರಿವಾರ್ಡ್‌ 360 ಸಂಸ್ಥೆಯಿಂದ ಆಗ್ನೇಯ ಸೈಬರ್ ಸೆನ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.


ತನಿಖೆ ವೇಳೆ ಆಂಧ್ರ ಮೂಲದ ವ್ಯಕ್ತಿ ಕೃತ್ಯ ಎಸಗಿರುವುದು ತಿಳಿದುಬಂದಿತ್ತು. ಹೀಗಾಗಿ ಆರೋಪಿ ಲಕ್ಷ್ಮೀಪತಿಯನ್ನು ಪೊಲೀಸರು ಬಂಧಿಸಿ, ಆತನಿಂದ 3.40 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನ, 21.80 ಲಕ್ಷ ರೂ. ಮೌಲ್ಯದ 27.250 ಕೆ.ಜಿ ಬೆಳ್ಳಿ, 11 ಲಕ್ಷ ರೂ., ಪ್ಲಿಫ್ ಕಾರ್ಟ್ ವ್ಯಾಲೆಟ್‌ನ 26 ಲಕ್ಷ ರೂ., ಅಮೆಜಾನ್ ವ್ಯಾಲೆಟ್‌ನ 3.50 ಲಕ್ಷ ರೂ., 7 ದ್ವಿಚಕ್ರ ವಾಹನ ಸೇರಿ ಒಟ್ಟು 4.16 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆಗ್ನೇಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು : ಪ್ರಜ್ವಲ್‌ ರೈ ಪಾತಾಜೆ ಗಡಿಪಾರಿಗೆ ಎಸಿ ಶಿಫಾರಸ್ಸು

Posted by Vidyamaana on 2024-04-07 07:54:48 |

Share: | | | | |


ಪುತ್ತೂರು : ಪ್ರಜ್ವಲ್‌ ರೈ ಪಾತಾಜೆ ಗಡಿಪಾರಿಗೆ ಎಸಿ ಶಿಫಾರಸ್ಸು

ಪುತ್ತೂರು : ಎ.ಆರ್ ವಾರಿಯರ್ಸ್ ಮುಖ್ಯಸ್ಥ ಪ್ರಜ್ವಲ್ ರೈ ಪಾತಾಜೆ ಅವರ ಗಡಿಪಾರಿಗೆ ಆದೇಶ ಹೊರಡಿಸಿ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗದ ದಂಡಾಧಿಕಾರಿ ಏ.2ರಂದು ಆದೇಶಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 55ರಂತೆ ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಅವರನ್ನು ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗಿದೆ.

Recent News


Leave a Comment: