ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 26

Posted by Vidyamaana on 2023-09-26 07:15:06 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 26

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 26 ರಂದು



*ಬೆಳಿಗ್ಗೆ 10 ಗಂಟೆಗೆ ಪೆರ್ನೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ್ ರೈ ಯವರ ಹುಟ್ಟುಹಬ್ಬ ಆಚರಣೆ  ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ*


*ಮದ್ಯಾಹ್ನ 3 ಗಂಟೆಗೆ BRC ನೆಲ್ಲಿಕಟ್ಟೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಇಲಾಖೆಯಿಂದ  ವಿವಿಧ ಸವಲತ್ತುಗಳ ವಿತರಣೆ*


*ಸಂಜೆ 6 ಗಂಟೆಗೆ ಬನ್ನೂರ್ ಚರ್ಚ್ ನಲ್ಲಿ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ*


ಸಂಜೆ 7 ಗಂಟೆಗೆ ಈದ್ ಮಿಲಾದ್ ಕಾರ್ಯಕ್ರಮ  ಅಡೆಕ್ಕಲ್ ಹಿರೇಬಂಡಾಡಿ ಕಾರ್ಯಕ್ರಮ ದಲ್ಲಿ  ಭಾಗವಹಿಸಲಿದ್ದಾರೆ

ಬಂಟ್ವಾಳ ಜಮೀಯ್ಯತುಲ್ ಫಲಾಹ್ ರೋಟರಿ ಕ್ಲಬ್ ನಿಂದ ಮೆಹ್ ಫಿಲೇ ಈದ್

Posted by Vidyamaana on 2024-05-15 19:42:42 |

Share: | | | | |


ಬಂಟ್ವಾಳ ಜಮೀಯ್ಯತುಲ್ ಫಲಾಹ್ ರೋಟರಿ ಕ್ಲಬ್ ನಿಂದ ಮೆಹ್ ಫಿಲೇ ಈದ್

ಬಂಟ್ವಾಳ ; ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್ ಫಿಲೇ ಈದ್ ಕಾರ್ಯಕ್ರಮವು ಮೇ 17 ಶುಕ್ರವಾರ ಸಂಜೆ 5.30ಕ್ಕೆ ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ನಲ್ಲಿ ನಡೆಯಲಿದೆ.

   ಎನ್ನಾರೈ ಉದ್ಯಮಿ, ಸಂಘಟಕ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಶಿಕ್ಷಣ ಹರಿಕಾರ, ಸಾಂಸ್ಕೃತಿಕ ಸಂಘಟಕ ಡಾ. ಎಂ. ಮೋಹನ್ ಆಳ್ವ, ಮಂಗಳೂರು ಉದ್ಯಮಿ, ಸೇವಾಕರ್ತೃ ರೋಹನ್ ಮೊಂತೇರೋ ಅವರಿಗೆ ಈದ್ ಅವಾರ್ಡ್ ನೀಡಿ ಗೌರವಿಸಲಾಗುವುದು.

ಸಂಸದರ ಸಾಧನೆಗೆ ಹೊಸ ಗರಿ ಮೂಡಿಸಿದ ಬಳ್ಪ - ಸಂಸದರ ಆದರ್ಶ ಗ್ರಾಮ ಯೋಜನೆ

Posted by Vidyamaana on 2023-11-10 07:41:02 |

Share: | | | | |


ಸಂಸದರ ಸಾಧನೆಗೆ ಹೊಸ ಗರಿ ಮೂಡಿಸಿದ ಬಳ್ಪ - ಸಂಸದರ ಆದರ್ಶ ಗ್ರಾಮ ಯೋಜನೆ

ಮಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭಗೊಂಡಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಚರ್ಚೆಗಳೂ ಸಹ ಗರಿಗೆದರಿದೆ.

ಒಂದು ಮೂಲಗಳ ಪ್ರಕಾರ ಹ್ಯಾಟ್ರಿಕ್ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೇ ಈ ಬಾರಿ ಪಕ್ಷ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿದೆ. ಹಾಲಿ ಸಂಸದರೂ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಗೆಗಿನ ಪರ ವಿರೋಧದ ಚರ್ಚೆಯ ನಡುವೆ ನಳಿನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟಿದ ರಾಜ್ಯದ ಸಂಸದರ ಪೈಕಿ ಮಂಗಳೂರು ಸಂಸದರು ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಸಂಸದರ ಆದರ್ಶ ಗ್ರಾಮದ ಯೋಜನಾ ನಿರ್ದೇಶಕರು ಹೇಳಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಪ ಗ್ರಾಮವನ್ನು ಸಂಸದರು ಆಯ್ಕೆ ಮಾಡಿಕೊಂಡಿದ್ದು ಈ ಗ್ರಾಮದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ನೆಟ್ವರ್ಕ್ ವ್ಯವಸ್ಥೆ ಸೇರಿದಂತೆ 55 ಕೋಟಿ ರೂಪಾಯಿ ಅನುದಾನವನ್ನು ಒಂದು ಗ್ರಾಮಕ್ಕೆ ಒದಗಿಸಿ ಆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದು, ಸತತ ನಾಲ್ಕನೇ ಬಾರಿ ಸಂಸದ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಳಿನ್ ಕುಮಾರ್ ಕಟೀಲ್ ಅವರ ಉಮೇದುವಾರಿಕೆಗೆ ಇನ್ನಷ್ಟು ಬಲ ತುಂಬಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.

ಮೂಡಿಗೆರೆ: ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ… ಪೊಲೀಸರ ನಿಯೋಜನೆ

Posted by Vidyamaana on 2023-08-02 03:26:21 |

Share: | | | | |


ಮೂಡಿಗೆರೆ: ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ… ಪೊಲೀಸರ ನಿಯೋಜನೆ

ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಇರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


ಇತ್ತೀಚಿಗೆ ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ದಾವಣಗೆರೆಯ ಶರತ್ ಸಾವನ್ನಪ್ಪಿದ್ದ ಈ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ ಅಲ್ಲದೆ ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು, ಅಷ್ಟು ಮಾತ್ರವಲ್ಲದೆ ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು ಇದರಿಂದ ಒಮ್ಮೆ ರೋಗಿ ಹೊತ್ತ ಆಂಬುಲೆನ್ಸ್ ಕೂಡ ಪರದಾಟ ನಡೆಸಿತ್ತು, ಬಂಡೆ ಮೇಲಿಂದ ಬಿದ್ದು ಕೈ-ಕಾಲು ಮುರಿದುಕೊಂಡವರು ಇದ್ದಾರೆ, ಜಾರೋ ಬಂಡೆ ಕೆಲವರ ಜೀವಕ್ಕೂ ಸಂಚಾಕಾರ ತಂದಿದೆ.


ಇದೀಗ ಜಲಪಾತಗಳ ಹೈವೆ ಪ್ಯಾಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದ್ದು ಇಡೀ ದಿನ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಲಿದ್ದಾರೆ.

ಜಾತೀಯತೆ, ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು: ದಸರಾ ಆಚರಣೆಯ ವೇಳೆ ಪ್ರಧಾನಿ ಮೋದಿ ಕರೆ

Posted by Vidyamaana on 2023-10-25 15:43:20 |

Share: | | | | |


ಜಾತೀಯತೆ, ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು: ದಸರಾ ಆಚರಣೆಯ ವೇಳೆ ಪ್ರಧಾನಿ ಮೋದಿ ಕರೆ

ನವದೆಹಲಿ : ದೇಶಕ್ಕೆ ಹಾನಿ ಮಾಡುತ್ತಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು. ಸ್ವಹಿತಾಸಕ್ತಿಗಳ ದಹನಕ್ಕೆ ದಸರೆಯು ನಾಂದಿ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ ಹಾಗೂ ಇದೇ ವೇಳೆ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.ಇಲ್ಲಿನ ದ್ವಾರಕಾ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾವಣ ದಹನ ಎಂಬುದು ಕೇವಲ ಪ್ರತಿಕೃತಿಯ ದಹನವಲ್ಲ. ಭಾರತ ಮಾತೆಯನ್ನು ಧರ್ಮ ಮತ್ತು ಪ್ರಾದೇಶಿಕತೆಯ ಹೆಸರಲ್ಲಿ ಭಾಗ ಮಾಡುತ್ತಿರುವುದರ ನಾಶವೂ ಸಹ ಆಗಿದೆ. ದೇಶಕ್ಕೆ ಹಾನಿ ತಂದೊಡ್ಡುತ್ತಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕಿತ್ತುಹಾಕಬೇಕು. ದಸರಾ ಹಬ್ಬ ಎನ್ನುವುದು ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸುವ ದಿನ. ಈ ವೇಳೆ ಸ್ವಹಿತಾಸಕ್ತಿಯ ದಹನವೂ ಆಗಬೇಕು ಎಂದು ವಿಪಕ್ಷಗಳ ಹೆಸರೆತ್ತದೆ ಪರೋಕ್ಷವಾಗಿ ಕುಟುಕಿದರು.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಶತಮಾನಗಳ ಕಾಲ ಕಾದ ಬಳಿಕ ಇದು ನೆರವೇರುತ್ತಿದೆ. ಇನ್ನು ಕೆಲವು ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ಜನರ ತಾಳ್ಮೆಗೆ ಜಯ ತಂದುಕೊಡಲಿದೆ ಎಂದು ಹೇಳಿದರು.


10 ಸಂಕಲ್ಪ ಮಾಡಿ:

ಇನ್ನು ಇದೇ ವೇಳೆ, ನೀರಿನ ಸಂರಕ್ಷಣೆ, ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ, ಸ್ವಚ್ಛತೆ, ವೋಕಲ್‌ ಫಾರ್‌ ಲೋಕಲ್‌: ಭಾರತದಲ್ಲಿ ತಯಾರಿಸಿದ ವಸ್ತುಗಳ ಖರೀದಿ, ಶ್ರೇಷ್ಠ ಕೆಲಸಗಳನ್ನು ಮಾಡುವುದು, ವಿದೇಶ ಪ್ರವಾಸಕ್ಕೂ ಮುನ್ನ ಭಾರತದಲ್ಲಿ ಪ್ರವಾಸ ಕೈಗೊಳ್ಳುವುದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು, ದೈನಂದಿನ ಊಟದಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದು, ಯೋಗ ಮತ್ತು ಆಟಗಳ ಮೂಲಕ ಫಿಟ್‌ನೆಸ್‌ ಜೀವನದ ಭಾಗ ಮಾಡಿಕೊಳ್ಳುವುದು ಮತ್ತು ಬಡ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ನೆರವು ನೀಡುವ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.ಸಮಾರಂಭದಲ್ಲಿ ಮೋದಿ ಅವರಿಗೆ ಶಾಲು ಹೊದೆಸಿ, ದಂಡವನ್ನು ನೀಡಿ ಸಾಂಪ್ರದಾಯಿಕವಾಗಿ ವೇದಿಕೆಗೆ ಸ್ವಾಗತಿಸಲಾಯಿತು. ವೇದಿಕೆಯ ಮೇಲಿದ್ದ ರಾಮ ಪಾತ್ರಧಾರಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಬಳಿಕ ಸೀತಾ ರಾಮಚಂದ್ರನಿಗೆ ಜಯವಾಗಲಿ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಅವರು ದೇಶದ ಜನರಿಗೆ ನವರಾತ್ರಿಯ ಶುಭಾಶಯ ತಿಳಿಸಿದರು.

ನೋ ಬಾಲ್‌ ಕೊಟ್ಟ ಅಂಪೈರ್ ನನ್ನು ಚಾಕುವಿನಿಂದ ಇರಿದ ಆಟಗಾರ

Posted by Vidyamaana on 2023-04-03 08:48:19 |

Share: | | | | |


ನೋ ಬಾಲ್‌ ಕೊಟ್ಟ ಅಂಪೈರ್ ನನ್ನು ಚಾಕುವಿನಿಂದ ಇರಿದ ಆಟಗಾರ

ಭುವನೇಶ್ವರ್: ಕ್ರಿಕೆಟ್‌ ಆಡುವಾಗ ಸಣ್ಣಪುಟ್ಟ ವಿಚಾರಕ್ಕೆ ವಾಗ್ವಾದ ನಡೆಯುವುದು ಸಾಮಾನ್ಯ. ಆದರೆ ಇಲ್ಲೊಂದು ಘಟನೆ ಒಡಿಶಾ ರಾಜ್ಯವನ್ನು ಬೆಚ್ಚಿ ಬೀಳಿಸಿದೆಭಾನುವಾರ (ಏ. 2 ರಂದು) ಒಡಿಶಾದ ಕಟಕ್‌ ನಲ್ಲಿ ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್‌ ಮ್ಯಾವ್‌ ನಡೆಯುತ್ತಿತ್ತು. ಈ ಪಂದ್ಯಕ್ಕೆ 22 ವರ್ಷದ ಲಕ್ಕಿ ರಾವುತ್ ತೀರ್ಪುಗಾರನಾಗಿ ನಿಂತಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ ಎಸೆತವೊಂದಕ್ಕೆ ʼನೋ ಬಾಲ್‌ʼ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ಇದು ನೋ ಬಾಲ್‌ ಅಲ್ಲ ಎಂದು ಸ್ಮೃತಿ ರಂಜನ್ ರೌತ್ ಎಂಬಾತ ಅಂಪೈರ್  ನೊಂದಿಗೆ ವಾದಕ್ಕೆ ಇಳಿದಿದ್ದಾನೆ.ವಾದ ಜಗಳಕ್ಕೆ ತಿರುಗಿ ಚೂರಿಯಿಂದ ತೀರ್ಪುಗಾರನಾಗಿ ನಿಂತಿದ್ದ ಲಕ್ಕಿ ರಾವುತ್ ಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಕಿ ರಾವುತ್‌ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

Recent News


Leave a Comment: