ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


BREAKING: ಈಶ್ವರ ದೇವರ ಹೆಸರಿನಲ್ಲಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ.!

Posted by Vidyamaana on 2024-06-09 19:33:00 |

Share: | | | | |


BREAKING: ಈಶ್ವರ ದೇವರ  ಹೆಸರಿನಲ್ಲಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ.!

ನವದೆಹಲಿ: ಹೆಸರಿನಲ್ಲಿ ಮೂರನೇ ಬಾರಿ ಪ್ರಮಾಣವಚನವನ್ನು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಬಿಜೆಪಿ ನೆಟ್ವರ್ಕ್ ಇಲ್ಲದ ಸಿಮ್ ನಂತೆ

Posted by Vidyamaana on 2023-04-24 09:33:31 |

Share: | | | | |


ಬಿಜೆಪಿ ನೆಟ್ವರ್ಕ್ ಇಲ್ಲದ ಸಿಮ್ ನಂತೆ

ಪುತ್ತೂರು: 94 ಸಿ ಹಕ್ಕುಪತ್ರ ಪಡೆಯಲು ಮಹಿಳೆಯೋರ್ವರು ತನ್ನೆರಡು ದನವನ್ನು ಮಾರಿದ್ದರು. ಇಷ್ಟು ಹಣ ಸಾಲದೆ, ಇನ್ನೂ 2 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಹಣ ಇಲ್ಲ ಎಂದಾಗ ಬಡ್ಡಿಗೆ ಹಣ ತೆಗೆದುಕೋ, ಹಕ್ಕುಪತ್ರ ಸಿಕ್ಕಿದ ಬಳಿಕ ಜಾಗವನ್ನು ಅಡ ಇಡುವಂತೆ ಸಲಹೆ ನೀಡಿದ್ದರಂತೆ. ಕೊನೆಗೆ ಮಹಿಳೆಗೆ ದನವೂ ಇಲ್ಲ, ಹಣವೂ ಇಲ್ಲ, ಜಾಗವೂ ಇಲ್ಲದಂತಹ ಪರಿಸ್ಥಿತಿ. ಆ ಮಹಿಳೆ ಶಾಪ ಹಾಕಿಕೊಂಡು ತೆರಳಿದರು. ಈ ಶಾಪವೇ ಇಂದಿನ ಪುತ್ತೂರು ಬಿಜೆಪಿಯ ಪರಿಸ್ಥಿತಿಗೆ ಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.

ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

Posted by Vidyamaana on 2024-03-05 09:03:13 |

Share: | | | | |


ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

ನವದೆಹಲಿ (ಮಾರ್ಚ್ 05): ಮೂರನೇ ಬಾರಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP N

non

da) ಅವರು ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುತರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಅವರು ಹಿಮಾಚಲ ಪ್ರದೇಶ ರಾಜ್ಯಸಭಾ ಸದಸ್ಯತ್ವ(Himachal pr

non

esh Rajya Sabha MP) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ನಡ್ಡಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.


ಹಿಮಾಚಲ ಪ್ರದೇಶದಿಂದ ರಾಜ್ಯಸಭೆ ಸಂಸದರಾಗಿ ಆಯ್ಕೆಯಾಗಿರುವ ಜೆಪಿ ನಡ್ಡಾ ಅವಧಿ ಏಪ್ರಿಲ್ ತಿಂಗಳಿಗೆ ಅಂತ್ಯವಾಗಲಿದೆ. ಇದಕ್ಕೂ ಮೊದಲೇ ಜೆಪಿ ನಡ್ಡಾ ಅವರು ಗುಜರಾತ್‌ನಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಸಕ್ತ ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ ನೀಡಿದ್ದಾರೆ.ಇನ್ನು ಜೆಪಿ ನಡ್ಡಾ ಅವರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವಧಿಯನ್ನು ವಿಸ್ತರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಡ್ಡಾ ಅವರ ಅಧಿಕಾರವಧಿಯಲ್ಲಿ 2024ರ ಜೂನ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಅಮಿತ್‌ ಶಾ ಈ ಘೋಷಣೆ ಮಾಡಿದ್ದರು. ಈ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯನ್ನು ನಡ್ಡಾ ನೇತೃತ್ವದಲ್ಲೇ ಎದುರಿಸಲಿದೆ. ನಡ್ಡಾ ಅವರು 2019ರಲ್ಲಿ ಅಮಿತ್‌ ಶಾ ಅವರ ಬಳಿಕ ಮಧ್ಯಂತರ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ 2020ರಿಂದ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆ.14 : ವಿದ್ಯಾರಶ್ಮಿಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮೃತಿ 2023

Posted by Vidyamaana on 2023-08-08 03:44:30 |

Share: | | | | |


ಆ.14 : ವಿದ್ಯಾರಶ್ಮಿಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ  ಶೀಂಟೂರು ಸ್ಮೃತಿ 2023

ಪುತ್ತೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ : ಶೀಂಟೂರು ಸ್ಮೃತಿ-2023" ಆ.14 ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು.


ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಸೇನಾನಿ, ಶಿಕ್ಷಕರೂ ಆಗಿದ್ದ ದಿ.ಶೀಂಟೂರು ಆದರ್ಶ ಕೃಷಿಕರೂ ಆಗಿದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಅವರು ಕಂಡಿದ್ದ ಕನಸ್ಸಾಗಿತ್ತು.ಈ ನಿಟ್ಟಿನಲ್ಲಿ ಅವರ ಸ್ಮೃತಿಯನ್ನು ಪ್ರತೀ ವರ್ಷ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ವಿಕ್ರಂ ದತ್ತಾ ಅವರನ್ನು ಮುಂಬಯಿ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಸನ್ಮಾನಿಸುವರು.ಮಂಗಳೂರು ಕಾಲೇಜ್ ಆಫ್ ಫಿಷರೀಸ್ ನ ನಿವೃತ್ತ ಡೈರೆಕ್ಟರ್ ಆಫ್ ಇನ್ ಸ್ಟ್ರಕ್ಷನ್ ಪ್ರೊ.ಡಾ.ಡಿ.ಎಸ್.ಶೇಷಪ್ಪ ಶೀಂಟೂರು ಸ್ಮರಣೆ ಮಾಡುವರು. ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗುಜರಾತ್ ಗ್ರೀನ್ ಹೀರೋ ಆಪ್ ಇಂಡಿಯಾದ ಸಹಸಂಸ್ಥಾಪಕ ಡಾ.ಆರ್.ಕೆ.ನಾಯರ್, ದುಬೈ ಉದ್ಯಮಿ ಅಶ್ರಫ್ ಶಾ ಮಾಂತೂರು ದುಬೈ ಪಾಲ್ಗೊಳ್ಳಲಿದ್ದಾರೆ. ಸವಣೂರು ಎಸ್ಎನ್ ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟ್ ವಿಶ್ವಸ್ಥ ಎನ್.ಸುಂದರ ರೈ ಸವಣೂರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಗೌರವ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.ಶೀಂಟೂರು ಸ್ಮೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರಶ್ಮಿ ವಿದ್ಯಾಲಯದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾನ್ವಿತ 10 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಶೀಂಟೂರು ಶಿಷ್ಯ ವೇತನ ವಿತರಿಸಲಾಗುವುದು ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಸವಣೂರು ಎಸ್ ಎನ್ ಆರ್ ರೂರಲ್ ಎಜ್ಯುಕೇಶನ್ ಟ್ರಸ್‌ಟ್ ಟ್ರಸ್ಟಿ ಎನ್.ಸುಂದರ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಸವಣೂರು ಪ್ರಥಮದರ್ಜೆ ಕಾಲೇಜು ಉಪಪ್ರಾಂಶುಪಾಲ ಎಂ.ಶೇಷಗಿರಿ ಉಪಸ್ಥಿತರಿದ್ದರು.

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ: ಫಲಿಸಿತು ಶತಕೋಟಿ ಭಾರತೀಯರ ಪ್ರಾರ್ಥನೆ ಸಿಹಿ ಹಂಚಿ ಸಂಭ್ರಮ

Posted by Vidyamaana on 2023-11-28 21:10:08 |

Share: | | | | |


ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ: ಫಲಿಸಿತು ಶತಕೋಟಿ ಭಾರತೀಯರ ಪ್ರಾರ್ಥನೆ ಸಿಹಿ ಹಂಚಿ ಸಂಭ್ರಮ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್​ಯಾರ್​ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೊಸ ಬದುಕಿಗಾಗಿ ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದ ಎಲ್ಲ 41 ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಇಂದು ಹೊರಕರೆತರಲಾಗಿದೆ.17 ದಿನಗಳ ನಿರಂತರ ಶ್ರಮ ಮತ್ತು ಅಸಂಖ್ಯಾತ ಜನಗಳ ಪ್ರಾರ್ಥನೆಗೆ ಫಲ ಸಿಕ್ಕಿದ್ದು, ಬಹುದೊಡ್ಡ ರಕ್ಷಣಾ ಕಾರ್ಯಾಚರಣೆ ದೊಡ್ಡ ಯಶಸ್ಸು ಸಾಧಿಸಿದೆ. ನಿಜಕ್ಕೂ ಇದೊಂದು ಬಿಗ್​ ಅಂಡ್​ ಸ್ವೀಟ್​ ನ್ಯೂಸ್​ ಎಂದೇ ಹೇಳಬಹುದಾಗಿದೆ.ಸುಮಾರು 50 ಮೀಟರ್​ಗೂ ಅಧಿಕ ದೂರದಲ್ಲಿ ಸುರಂಗದ ಒಳಗಡೆ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್​ ಮೂಲಕ ಗಾಲಿ ಸ್ಟ್ರೆಚರ್​ ಸಹಾಯದಿಂದ ರಕ್ಷಣಾ ತಂಡಗಳು ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದರ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್​ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರತೀ ಹಂತದಲ್ಲೂ ನಾಲ್ಕು ನಾಲ್ಕು ಕಾರ್ಮಿಕರನ್ನು ಹೊರಗೆ ಕರೆತರಲಾಯಿತು. ಕಾರ್ಮಿಕರ ರಕ್ಷಣೆಗೆ ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಇಂದು ಫಲಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಸುತ್ತಲೂ ಜೈಕಾರಗಳು ಮೊಳಗಿದವು ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಸಿಹಿ ಹಂಚಿ ಸಂಭ್ರಮಿಸಿದರು.ಸುರಂಗ ಮಾರ್ಗ ನಿರ್ಮಾಣದ ಉದ್ದೇಶವೇನು?

ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.

ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ಮೃತರ ಮನೆಗೆ ಎಸ್‌ಡಿಪಿಐ ಮುಖಂಡರ ಭೇಟಿ

Posted by Vidyamaana on 2024-03-24 22:11:54 |

Share: | | | | |


ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ಮೃತರ ಮನೆಗೆ ಎಸ್‌ಡಿಪಿಐ ಮುಖಂಡರ ಭೇಟಿ

ಬೆಳ್ತಂಗಡಿ (ಮಾ-24): ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತ ಪಟ್ಟ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಸಾಹುಲ್ ಹಮೀದ್, ಮದ್ದಡ್ಕ ನಿವಾಸಿ ಇಸಾಕ್, ಶಿರ್ಲಾಲ್ ನಿವಾಸಿ ಇಮ್ತಿಯಾಝ್ ಅವರ ಮನೆಗೆ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು.


   ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಯಾಝ್ ಫರಂಗಿಪೇಟೆ ಈ ಪ್ರಕರಣದಲ್ಲಿ ಯಾವುದೇ ಕಾರಣವಿಲ್ಲದೆ ಸಾಮೂಹಿಕ ಹತ್ಯೆ ಮಾಡುವ ಮೂಲಕ ದರೋಡೆ ಮತ್ತು ಡಕಾಯಿತಿ ನಡೆಸುವುದು ಅಪರಾಧಿಗಳ ಏಕೈಕ ಉದ್ದೇಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇಂತಹ ಕ್ರೂರ ಕ್ರತ್ಯ ನಡೆಯುವಾಗ ದ.ಕ ಜಿಲ್ಲೆಯ ರಾಜಕಾರಣಿಗಳು ಹಾಗು ಪ್ರಮುಖ ರಾಜಕೀಯ ಪಕ್ಷಗಳ ನೇತಾರರು  ಘಟನಾ ಸ್ಥಳಕ್ಕೆ ಬೇಟಿಯಾಗದೆ ,ಕಣ್ಣಿದ್ದು ಕುರುಡರ ವರ್ತನೆ ನಟಿಸಿ ಮೌನ  ಪಾಲಿಸಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆ  ನಡೆಯುವಾಗ ಮಾನ್ಯ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹಾಗು ಇತರ ಅಧಿಕಾರಿಗಳು ಯಾವುದೇ ಖಂಡನೆ  ಅಥವಾ ಸೂಕ್ತವಾದ ತನಿಖೆ ನಡೆಸುವ ಭರವಸೆಯನ್ನು ನೀಡದೆ ಇರುವುದು ಅತ್ಯಂತ ಬೇಸರದ ಸಂಗತಿ ಎಂದು ತಿಳಿಸಿದರು.


   ಈ ಸಂದರ್ಭದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸದಾತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿಗಾಳದ ಅಕ್ಬರ್ ಬೆಳ್ತಂಗಡಿ, ಜಮಾಲ್ ಜೋಕಟ್ಟೆ, ಸುಹೈಲ್ ಖಾನ್, ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ಮುನೀಶ್ ಆಲಿ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ನವಾಝ್ ಕಟ್ಟೆ ಲ್, ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Recent News


Leave a Comment: