ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಶಾರ್ಜಾಕ್ಕೆ 154 ಪ್ರಯಾಣಿಕರನ್ನು ಹೊತ್ತ ವಿಮಾನ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ

Posted by Vidyamaana on 2023-07-31 08:10:48 |

Share: | | | | |


ಶಾರ್ಜಾಕ್ಕೆ 154 ಪ್ರಯಾಣಿಕರನ್ನು ಹೊತ್ತ ವಿಮಾನ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ

ತಿರುವನಂತಪುರಂ: 154 ಪ್ರಯಾಣಿಕರನ್ನು ಹೊತ್ತು ತಿರುಚ್ಚಿಯಿಂದ – ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.


ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 613 ತಮಿಳುನಾಡಿನ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಬೆಳಿಗ್ಗೆ 10:45 ಕ್ಕೆ ಹೊರಟಿತು. ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು 12.03ಕ್ಕೆ ವಿಮಾನವನ್ನು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.


ತುರ್ತು ಭೂಸ್ಪರ್ಶದಿಂದ ವಿಮಾನ ನಿಲ್ದಾಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಸದ್ಯ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಪ್ರಾಧಿಕಾರ ಹೇಳಿಕೆ ನೀಡಿದೆ.

ಬಿಜೆಪಿ ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಸಮಿತಿ ಪದಾಧಿಕಾರಿಗಳ ನೇಮಕ : ಕಾರ್ಯದರ್ಶಿಯಾಗಿ ಪುತ್ತೂರಿನ ಯಶಸ್ವಿನಿ ಶಾಸ್ತ್ರಿ

Posted by Vidyamaana on 2024-02-28 12:22:37 |

Share: | | | | |


ಬಿಜೆಪಿ ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಸಮಿತಿ ಪದಾಧಿಕಾರಿಗಳ ನೇಮಕ : ಕಾರ್ಯದರ್ಶಿಯಾಗಿ ಪುತ್ತೂರಿನ ಯಶಸ್ವಿನಿ ಶಾಸ್ತ್ರಿ

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಮಹಿಳಾ ಮೋರ್ಚಾ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.


ಅಧ್ಯಕ್ಷರಾಗಿ ಡಾ. ಮಂಜುಳಾ ಎ ರಾವ್, ಕಾರ್ಯದರ್ಶಿಯಾಗಿ ಪುತ್ತೂರಿನ ಯಶಸ್ವಿನಿ ಶಾಸ್ತ್ರಿ ಹಾಗೂ ಇತರ ವಿಭಾಗಗಳಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.


ಜಿಲ್ಲಾ ಮಹಿಳಾ ಮೋರ್ಚಾ ಸಮಿತಿ ವಿವರ..:

ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ: ವಿಷ ಕುಡಿದು KSRTC ನೌಕರ ಅಭಿಷೇಕ್ ಆತ್ಮಹತ್ಯೆಗೆ ಯತ್ನ

Posted by Vidyamaana on 2023-08-30 02:16:35 |

Share: | | | | |


ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ: ವಿಷ ಕುಡಿದು KSRTC ನೌಕರ ಅಭಿಷೇಕ್ ಆತ್ಮಹತ್ಯೆಗೆ ಯತ್ನ

ಕೊಡಗು: ವಿಷ ಕುಡಿದು KSRTC ನೌಕರ ಅಭಿಷೇಕ್ ಎಂಬಾತ​ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಕೆಎಸ್​ಆರ್​ಟಿಸಿ ಡಿಪೋದಲ್ಲಿ‌ ನಡೆದಿದೆ.


ಅಸ್ವಸ್ಥಗೊಂಡ ನೌಕರ ಅಭಿಷೇಕ್​​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡಿಪೋ ವ್ಯವಸ್ಥಾಪಕಿ ಗೀತಾ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ಮಡಿಕೇರಿ ಟೌನ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.​

ಕಾವು ಹೇಮನಾಥ್ ಶೆಟ್ಟಿ ಮನೆಗೆ ಅಶೋಕ್ ರೈ ಭೇಟಿ

Posted by Vidyamaana on 2023-04-17 19:21:28 |

Share: | | | | |


ಕಾವು ಹೇಮನಾಥ್ ಶೆಟ್ಟಿ ಮನೆಗೆ ಅಶೋಕ್ ರೈ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಕೆಪಿಸಿಸಿ ಸಂಯೋಜಕ, ಪುತ್ತೂರಿನ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಕಾವು ಹೇಮನಾಥ್ ಶೆಟ್ಟಿಯವರ ಮನೆಗೆ ಭೇಟಿನೀಡಿದರು.ಎ 17 ರಂದು  ರಾತ್ರಿ ಹೇಮನಾಥ್ ಶೆಟ್ಟಿಯವರ ಕಾವು ನಿವಾಸಕ್ಕೆ ಭೇಟಿ ನೀಡಿದ ಅಶೋಕ್ ರೈಯವರು, ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷ  ಜಯಶಾಲಿಯಗಳು ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಜಯರಾಮ ರೈ, ಅನಿತಾ ಹೇಮನಾಥ್ ಶೆಟ್ಟಿ, ಹನೀಫ್ ಬಗ್ಗುಮೂಲೆ, ಲ್ಯಾನ್ಸಿ ಮಸ್ಕರೇನಸ್, ಕೆಸಿ ಅಶೋಕ್ ಶೆಟ್ಟಿ, ರಹಿಮಾನ್ ಸಂಪ್ಯ, ದಿವ್ಯನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ: ಹೈಕೋರ್ಟ್ ಆದೇಶ

Posted by Vidyamaana on 2023-08-04 02:03:39 |

Share: | | | | |


ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ: ಹೈಕೋರ್ಟ್ ಆದೇಶ

ಬೆಂಗಳೂರು: ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಲಲಿತಾ ಕುಮಾರಿ ಕೇಸ್​ನ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಮಾರ್ಗಸೂಚಿ, ಸುತ್ತೋಲೆ ಹೊರಡಿಸಲು ಡಿಜಿ ಮತ್ತು ಐಜಿಪಿಗೆ ಸೂಚನೆ ನೀಡಲಾಗಿದೆ.


ಲಲಿತಾ ಕುಮಾರಿ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸುವ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ತೀರ್ಪಿನ 120ನೇ ಪ್ಯಾರಾವನ್ನು ಕನ್ನಡ, ಆಂಗ್ಲ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್ಐಆರ್ ದಾಖಲಿಸಲು ವಿಳಂಬ ಮಾಡದಂತೆ ತಾಕೀತು ಮಾಡಲಾಗಿದೆ.


ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ಅಗತ್ಯವಿಲ್ಲ. ಅದೇ ರೀತಿಯಾಗಿ ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಬಹುದು. 7 ದಿನದೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು. ಗಂಭೀರ ಅಪರಾಧ ಕಂಡುಬಂದಾಗ ಎಫ್ಐಆರ್ ದಾಖಲಿಸಬೇಕು. ಪೊಲೀಸ್​ ಠಾಣೆಯ ಡೈರಿಯಲ್ಲಿ ತನಿಖೆಯ ಮಾಹಿತಿ ಉಲ್ಲೇಖಿಸಬೇಕು ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ

ಪಕ್ಷಕ್ಕಿಂತ ದೊಡ್ಡ ಮಿತ್ರನಿಲ್ಲ- ಪಕ್ಷ ಬಿಟ್ಟು ಹೋದವರು ಮಿತ್ರನೂ ಅಲ್ಲ- ಪಾಲುದಾರನೂ ಅಲ್ಲ

Posted by Vidyamaana on 2023-05-02 10:12:45 |

Share: | | | | |


ಪಕ್ಷಕ್ಕಿಂತ ದೊಡ್ಡ ಮಿತ್ರನಿಲ್ಲ- ಪಕ್ಷ ಬಿಟ್ಟು ಹೋದವರು ಮಿತ್ರನೂ ಅಲ್ಲ- ಪಾಲುದಾರನೂ ಅಲ್ಲ

ಪುತ್ತೂರು: ಪಕ್ಷಕ್ಕೆ ತನಗೆ ಎಲ್ಲಾ ಹುದ್ದೆಗಳನ್ನು ನೀಡಿದೆ. ಪಕ್ಷಕ್ಕೆ ತಾನು ಬದ್ಧನಾಗಿರದೇ ಇದ್ದರೆ, ತಾನು ಪ್ರಾಣಿಯಂತೆ. ಆದ್ದರಿಂದ ಪಕ್ಷದಿಂದ ಹೊರಹೋದವರು ತನ್ನ ಮಿತ್ರನೂ ಅಲ್ಲ, ಪಾಲದಾರನೂ ಅಲ್ಲ ಎಂದು ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಪುತ್ತೂರಿನ ಬಿಜೆಪಿ‌‌ ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭ, ನಿಮ್ಮ ಆಪ್ತಮಿತ್ರ ಅಶೋಕ್ ರೈ ಅವರು ಕಾಂಗ್ರೆಸಿಗೆ ಸೇರಿದ್ದಾರೆ ಎಂದಾಗ, ತಾನು ಆಪ್ತಮಿತ್ರನಲ್ಲ. ಆಪ್ತಮಿತ್ರ ವಿಷ್ಣುವರ್ಧನ್ ಎಂದಾಗ ಎಲ್ಲರೂ ನಗೆಗಡಲಲ್ಲಿ ತೆಲಿದರು.

ನಾನು ಈಗ್ಲೂ ಹೇಳ್ತೇನೆ, ಬಿಜೆಪಿಯಲ್ಲಿ ಇರುವವರಿಗೆ ನಾನು ಆಪ್ತ ಮಿತ್ರ, ಪಕ್ಷದವರಿಗೆ ನಾನು ಪಾಲುದಾರ. ಪಕ್ಷ ಬಿಟ್ಟು ಹೋದವರಿಗೆ ನಾನು ಆಪ್ತ ಮಿತ್ರನೂ ಅಲ್ಲ, ಪಾಲುದಾರನೂ ಅಲ್ಲ. ಅಶೋಕ್ ರೈಗೆ ನಾನು ಸಹಕಾರ ಮಾಡಿದ್ದೇನೆ ಎನ್ನುವುದನ್ನು ರುಜುವಾತು ಪಡಿಸಿದರೆ, ನೀವು ಹೇಳಿದಂತೆ ನಾನು ಕೇಳ್ತೆನೆ ಎಂದು ಡಿ.ವಿ ಸದಾನಂದ ಗೌಡ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಅಭ್ಯರ್ಥಿ ಆಶಾ ತಿಮ್ಮಪ್ಪ, ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ‌.ಜಿ. ಜಗನ್ನಿವಾಸ್ ರಾವ್, ಗೋಪಾಲಕೃಷ್ಣ ಹೇರಳೆ ಮೊದಲಾದವರು ಉಪಸ್ಥಿತರಿದ್ದರು.



Leave a Comment: