ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಸುದ್ದಿಗಳು News

Posted by vidyamaana on 2024-06-30 19:51:42 |

Share: | | | | |


ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.

 Share: | | | | |


ಬೆಳ್ತಂಗಡಿ: ಪೊಲೀಸರ ಮೇಲೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು

Posted by Vidyamaana on 2024-03-10 04:28:51 |

Share: | | | | |


ಬೆಳ್ತಂಗಡಿ: ಪೊಲೀಸರ ಮೇಲೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು

ಬೆಳ್ತಂಗಡಿ: ಪೊಲೀಸರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ತೆಂಕ ಕಾರಂದೂರು ಗ್ರಾಮದ ಪೆರಾಲ್ದಕಟ್ಟೆ ಸಮೀಪ ಸಂಭವಿಸಿದ್ದು ಘಟನೆಯ ಬಗ್ಗೆ ಮೂವರ ವಿರುದ್ಧ ಹಾಗೂ ಇತರ ಅಪರಿಚಿತರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಹೇಶ್, ಸುರೇಶ್, ಅರುಣ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.ವೇಣೂರು ಪೊಲೀಸ್ ಠಾಣೆಯ ಎ.ಎಸ್.ಐ ರಾಮಯ್ಯ ಹೆಗ್ಡೆ ಅವರು ಯುವಕರ ತಂಡ ಶಿವರಾತ್ರಿಯಂದು ರಸ್ತೆಯಲ್ಲಿ ದಾಂಧಲೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ. ತಡ ರಾತ್ರಿ ವೇಳೆ ರಸ್ತೆಯಲ್ಲಿದ್ದ ಯುವಕರನ್ನು ರಸ್ತೆಯಲ್ಲಿ ಸೋಡಾ ಬಾಟ್ಲಿಗಳನ್ನು ಒಡೆದು ಹಾಕಿರುವ ಬಗ್ಗೆ ರಾಮಯ್ಯ ಅವರು ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ತಂಡ ಅವರ ಮೇಲೆ ದಾಳಿ ನಡೆಸಿ, ಅವರನ್ನು ನೆಲಕ್ಕೆ ಹಾಕಿ ತುಳಿದು ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.


ಈ ಬಗ್ಗೆ ರಾಮಯ್ಯ ಅವರು ನೀಡಿರುವ ದೂರಿನಂತೆ ವೇಣೂರು ಪೊಲೀಸರು ಪ್ರಕರಣ‌ ದಾಖಲಿಸಿಕೊಂಡಿದ್ದಾರೆ. ರಾಮಯ್ಯ ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ

Posted by Vidyamaana on 2023-03-24 10:00:18 |

Share: | | | | |


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ

ನವದೆಹಲಿ, ಮಾ 24 : ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ಸಿನ ಪರಮೋಚ್ಚ ನಾಯಕ ರಾಹುಲ್    ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಿಸಲಾಗಿದೆ.2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿ

ಸಂಸದರಾಗಿ ಆಯ್ಕೆಯಾಗಿದ್ದರು.ಕಳೆದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಕೇರಳದಲ್ಲಿ ಪ್ರಧಾನಿಯವರ ಸರ್ ನೇಮ್ ಕುರಿತು ರಾಹುಲ್ ನೀಡಿದ ಹೇಳಿಕೆ ಅವರಿಗೆ ಮುಳುವಾಗಿದೆ. ಈ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಗುಜರಾತ್ ರಾಜ್ಯದ ಸೂರತ್ ನ ಕೋರ್ಟ್ ರಾಹುಲ್ ಅವರನ್ನು ದೋಷಿ ಎಂದು ಪರಿಗಣಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು.. ಆದರೆ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಜಾಮೀನು ಕೂಡ ದೊರೆದಿತ್ತು. ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ಶಿಕ್ಷೆಗೆ ಒಳಗಾದರೆ ಲೋಕ ಸಭೆ ಸದಸ್ಯತ್ವವನ್ನು

ಅನರ್ಹಗೊಳಿಸಬಹುದು ಎಂಬ ನಿಯಮವಿದ್ದು, ಅದರಂತೆ ಅವರನ್ನು ಇದೀಗ ಅನರ್ಹಗೊಳಿಸಲಾಗಿದೆ.

ಪತ್ನಿಯ ಖಾಸಗಿ ವಿಡಿಯೋ ತೋರಿಸಿ ವೇತನ ನೀಡಲು ಪತ್ನಿಗೆ ಪೀಡಿಸಿದ ಪತಿ!

Posted by Vidyamaana on 2023-10-07 18:09:45 |

Share: | | | | |


ಪತ್ನಿಯ ಖಾಸಗಿ ವಿಡಿಯೋ ತೋರಿಸಿ ವೇತನ ನೀಡಲು ಪತ್ನಿಗೆ ಪೀಡಿಸಿದ ಪತಿ!

ಬೆಂಗಳೂರು: ತನ್ನ ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದು ಪತಿ ಮಹಾಶಯನೊಬ್ಬ ಪತ್ನಿಯ ಬಳಿ 10 ಲಕ್ಷ ರೂ. ಮತ್ತು ವೇತನವನ್ನು ತನಗೆ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ. 28 ವರ್ಷದ ಮಹಿಳೆ ಈ ಸಂಬಂಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪತಿ ಸ್ವರೂಪ್ ಎಂಬಾತನ ವಿರುದ್ಧ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಕಳೆದ ವರ್ಷ ನವಂಬರ್ ನಲ್ಲಷ್ಟೇ ಇಬ್ಬರ ಮದುವೆಯಾಗಿತ್ತು.


ಹನಿಮೂನ್ ಗೆಂದು ಥೈಲ್ಯಾಂಡ್ ಹೋಗಿದ್ದಾಗ ಪತ್ನಿಯ ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ. ಬೆಂಗಳೂರಿಗೆ ವಾಪಸ್ ಆದ ಮೇಲೆ ಪತಿ ನಿರುದ್ಯೋಗಿಯಾಗಿರುವ ವಿಚಾರ ಪತ್ನಿಗೆ ತಿಳಿದುಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡಿರಲಿಲ್ಲ. ಬಳಿಕ ಖಾಸಗಿ ವಿಡಿಯೋ ತೋರಿಸಿ ವೇತನ ಮತ್ತು ತವರು ಮನೆಯಿಂದ 10 ಲಕ್ಷ ರೂ. ತಂದು ಕೊಡದೇ ಇದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯು ವಿಶ್ವ ಶಾಂತಿ ನೆಮ್ಮದಿಯನ್ನು ಎಲ್ಲೆಡೆ ಕರುಣಿಸಲಿ: ಶಾಸಕ ಅಶೋಕ್ ರೈಯವರಿಂದ ವಿಶೇಷ ಪ್ರಾರ್ಥನೆ

Posted by Vidyamaana on 2024-01-22 13:34:20 |

Share: | | | | |


ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯು ವಿಶ್ವ ಶಾಂತಿ ನೆಮ್ಮದಿಯನ್ನು ಎಲ್ಲೆಡೆ ಕರುಣಿಸಲಿ: ಶಾಸಕ ಅಶೋಕ್ ರೈಯವರಿಂದ ವಿಶೇಷ ಪ್ರಾರ್ಥನೆ

ಉಪ್ಪಿನಂಗಡಿ : ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕೋಡಿಂಬಾಡಿ ಗ್ರಾಮಸ್ಥರ ಹಾಗೂ ಪುತ್ತೂರಿನ ಸಮಸ್ತ ನಾಗರಿಕರ ಪರವಾಗಿ ತನ್ನ ಸ್ವ ಗ್ರಾಮ ಕೋಡಿಂಬಾಡಿ ಮಠಂತಬೆಟ್ಟು‌ಶ್ರೀ ಮಹಿಷ‌ಮರ್ಧಿನಿ ದೇವಿಗೆ ಪುಷ್ಪ ವನ್ನು ಸಮರ್ಪಿಸುತ್ತಾ ರಾಜ್ಯ ,ದೇಶ ಮತ್ತು ವಿಶ್ವಕ್ಕೆ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಪ್ರಾರ್ತಿಸಿದರು. ಈ ದೇಶದಲ್ಲಿ ಎಲ್ಲಾ ಧರ್ಮಿಯರು ಪರಸ್ಪರ ಸಹೋದರತೆಯಿಂದ ಬಾಳ್ವೆ ನಡೆಸುವ ಮೂಲಕ ದೇಶ ,ಜಗತ್ತಿನಲ್ಲಿ‌ ಶಾಂತಿ ನೆಲಸುವಂತಾಗಲಿ‌ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಾದ ನಿರಂಜನ್ ರೈ ರೈ ಮಠಂತಬೆಟ್ಡು, ಮುರಳೀಧರ್ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ, ನಿಹಾಲ್ ಶೆಟ್ಟಿ ಕಲ್ಲಾರೆ ,ದೇವಸ್ಥಾನದ ವ್ಯವಸ್ಥಾಪಕರಾದ ಸಂತೋಷ್ ರೈ ,ವಾರಿಸೇನ ಜೈನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ :ಬೆಳ್ಳಾರೆಯಿಂದ ಈಶ್ವರಮಂಗಲ ಕಡೆ ತೆರಳುತ್ತಿದ್ದ ಟೆಂಪೋ

Posted by Vidyamaana on 2023-10-22 21:58:27 |

Share: | | | | |


ಪಾಲ್ತಾಡಿ ಬಳಿ  ಮದುವೆ ಟೆಂಪೋ ಪಲ್ಟಿ :ಬೆಳ್ಳಾರೆಯಿಂದ ಈಶ್ವರಮಂಗಲ ಕಡೆ ತೆರಳುತ್ತಿದ್ದ ಟೆಂಪೋ

ಪುತ್ತೂರು: ಬೆಳ್ಳಾರೆಯಿಂದ ಪುತ್ತೂರು ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಮದುವೆಯ ಟೆಂಪೋ ಪಾಲ್ತಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ   ಪಲ್ಟಿಯಾದ ಘಟನೆ ಅ 22 ರಂದು ಆದಿತ್ಯವಾರ ದಂದು  ಸಂಜೆ ನಡೆದಿದೆ.

💥ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ ವಿಡಿಯೋ


ಘಟನೆಯಲ್ಲಿ ಈಶ್ವರಮಂಗಲ ಮೂಲದ ವರನ ಕಡೆಯ ಸಂಬಂಧಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಟೆಂಪೋದಲ್ಲಿ ಹೆಚ್ಚಿನವರು ಮಹಿಳೆಯರಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆ ತರಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಸ್ತೆ ವಿಭಜಕಕ್ಕೆ ಆಂಬುಲೆನ್ಸ್ ಡಿಕ್ಕಿ: ಚಾಲಕ ಸಾವು

Posted by Vidyamaana on 2024-07-02 20:15:00 |

Share: | | | | |


ರಸ್ತೆ ವಿಭಜಕಕ್ಕೆ ಆಂಬುಲೆನ್ಸ್ ಡಿಕ್ಕಿ: ಚಾಲಕ ಸಾವು

ಕುಣಿಗಲ್: ಆಂಬುಲೆನ್ಸ್ ವಾಹನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಬಳಿ ಮಂಗಳವಾರ ಸಂಭವಿಸಿದೆ.ಮೃತನನ್ನು ಮುಳಬಾಗಿಲಿನ ಶ್ರೀಕಾಂತ (26) ಎಂದು ಗುರುತಿಸಲಾಗಿದೆ.



Leave a Comment: