ಮಧುರಾ ಬೀಡಿ ಉದ್ಯಮಿ ಮರೀಲ್ ಅಬ್ದುಲ್ ಖಾದ‌ರ್ ನಿಧನ

ಸುದ್ದಿಗಳು News

Posted by vidyamaana on 2024-06-30 16:40:20 |

Share: | | | | |


ಮಧುರಾ ಬೀಡಿ ಉದ್ಯಮಿ ಮರೀಲ್ ಅಬ್ದುಲ್ ಖಾದ‌ರ್ ನಿಧನ

ಪುತ್ತೂರು: ಮಧುರಾ ಬೀಡಿ ಉದ್ಯಮಿ, ಮರಿಲ್ ನಿವಾಸಿ ಡಿ.ಎ ಅಬ್ದುಲ್ ಖಾದರ್ (81 ವ) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮಧುರಾ ಗ್ರೂಪ್ ನ ಸ್ಥಾಪಕರಾಗಿರುವ ಡಿ ಎ ಅಬ್ದುಲ್ ಖಾದರ್ ಮಧುರಾ

ಎಜ್ಯುಕೇಶನಲ್ ಟ್ರಸ್ಟ್ ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕೂರ್ನಡ್ಕ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ,ಪುತ್ರಿಯರು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ

 Share: | | | | |


ಮದುವೆಯಾಗುವುದಾಗಿ ನಂಬಿಸಿ ಪ್ರೀತಿ, ಸೆಕ್ಸ್‌ - ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನ ವಿರುದ್ಧ ಎಫ್‌ಐಆರ್ ದಾಖಲು

Posted by Vidyamaana on 2023-11-17 19:51:50 |

Share: | | | | |


ಮದುವೆಯಾಗುವುದಾಗಿ ನಂಬಿಸಿ ಪ್ರೀತಿ, ಸೆಕ್ಸ್‌ - ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು : ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನ ವಿರುದ್ಧ ಯುವತಿಯೊಬ್ಬಳು ವಂಚನ ಆರೋಪಿ ಹೊರಿಸಿದ್ದಾಳೆ. ಬಳ್ಳಾರಿ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ವಿರುದ್ಧ ಗಂಭೀರ ಆರೋಪ‌ಕೇಳಿ ಬಂದಿದ್ದು, ಬೆಂಗಳೂರು ಮೂಲದ ಯುವತಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಮೈಸೂರಿನ‌ ಮಹರಾಜ ಕಾಲೆಜಿನಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಒಂದೂವರೆ ವರ್ಷದ ಹಿಂದೆ ಸಂತ್ರಸ್ಥೆಗೆ ಪರಿಚಯವಾಗಿದ್ರಂತೆ.ದೂರುದಾರೆಗೆ ಸ್ನೇಹಿತರ ಮೂಲಕ ಲೆಕ್ಟರರ್ ರಂಗನಾಥ್‌ರ ಪರಿಚಯವಾಗಿದ್ದು ನಂತರ ಪರಿಚತ ಪ್ರೇಮಕ್ಕೆ ತಿರುಗಿದೆ. 42 ವರ್ಷದ ರಂಗನಾಥ್ ಗೆ 24 ವರ್ಷದ ಯುವತಿಗೆ ಜೊತೆ ಲವ್ ಶುರುವಾಗಿದ್ದು ಕಳೆದ ಜನವರಿಯಲ್ಲಿ ಮೈಸೂರಿನ ಹೋಟೇಲ್ ನಲ್ಲಿ ಲೈಂಗಿಕ ಸಂಪರ್ಕ ಬೆಳಸಿದ್ರಂತೆ. ನಂತರ ಕೆಲ ಕಾಲ ಚೆನ್ನಾಗಿ ಇದ್ದಾಗ ಮದ್ವೆ ಆಗುವಂತೆ ದೂರುದಾರೆ ಕೇಳಿದ್ಳಂತೆ. ಈ ವೇಳೆ ರಂಗನಾಥ ಸಂತ್ರಸ್ಥೆಯನ್ನು ಅವೈಡ್ ಮಾಡೋಕೆ ಶುರುಮಾಡಿದ್ದು, ಮದ್ವೆ ಆಗಲ್ಲ ಏನ್ ಮಾಡ್ಕೋತ್ಯೋ ಮಾಡ್ಕೋ ಎಂದು ಧಮ್ಕಿ ಹಾಕಿದ್ರಂತೆ.


ನಂತರ ರಂಗನಾಥ್ ವಿಚಾರವನ್ನು ಎಂಪಿ ದೇವೆಂದ್ರಪ್ಪ ಗಮನಕ್ಕೆ ಯುವತಿ ತಂದಿದ್ದಾಳೆ. ಈ ವೇಳೆ ಯುವತಿ ವಿರುದ್ಧ ಎಂಪಿ ದೇವೇಂದ್ರಪ್ಪ ಗರಂ ಆಗಿದ್ದು, ಬೇರೆ ದಾರಿ ಕಾಣದೇ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ

Posted by Vidyamaana on 2024-03-29 11:32:14 |

Share: | | | | |


ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ

ಬೆಳ್ತಂಗಡಿ, ಮಾ.29: ತುಮಕೂರಿನಲ್ಲಿ ಇತ್ತೀಚೆಗೆ ಬೆಳ್ತಂಗಡಿಯ ಮೂವರನ್ನು ಕೊಲೆಗೈದು ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಕೊಲೆಯಾದವರ ಮೃತದೇಹಗಳು ಇಂದು (ಮಾ.29) ಮುಂಜಾನೆ ಬೆಳ್ತಂಗಡಿಯ ಮನೆಗಳಿಗೆ ತಲುಪಿದೆ.


ನಡ ಗ್ರಾಮದ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್ ಹಮೀದ್, ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ಗ್ರಾಮದ ಸಿದ್ದೀಕ್ ಯಾನೆ ಇಮ್ಮಿಯಾಝ್ ಎಂಬವರ ಮೃತದೇಹಗಳು ಕೊಲೆಗೈದು ಕಾರು ಸಹಿತ ಸುಟ್ಟು ಹಾಕಿದ ಸ್ಥಿತಿಯಲ್ಲಿ ಮಾ.22ರಂದು ತುಮಕೂರಿನ ಕುಚ್ಚಂಗಿ ಕೆರೆ ಎಂಬಲ್ಲಿ ಪತ್ತೆಯಾಗಿದ್ದವು.ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಬಂದಿರುವ ಕಾರಣ ಇದೀಗ ಮೂವರ ಮೃತದೇಹಗಳನ್ನು ಹಸ್ತಾಂತರಿಸಲಾಗಿದ್ದು, ಕೃತ್ಯ ಬೆಳಕಿಗೆ ಬಂದ ಏಳು ದಿನಗಳ ಬಳಿಕ ಅಂದರೆ ಇಂದು ಬೆಳಗ್ಗೆ ಉಜಿರೆಗೆ ತಲುಪಿವೆ.


.

ವಸಂತ ಬಂಗೇರ ಅಂತ್ಯಕ್ರಿಯೆ: ಪುತ್ರಿಯಿಂದ ಅಗ್ನಿಸ್ಪರ್ಶ

Posted by Vidyamaana on 2024-05-10 07:42:12 |

Share: | | | | |


ವಸಂತ ಬಂಗೇರ ಅಂತ್ಯಕ್ರಿಯೆ: ಪುತ್ರಿಯಿಂದ ಅಗ್ನಿಸ್ಪರ್ಶ

ಬೆಳ್ತಂಗಡಿ : ಬುಧವಾರ ನಿಧನರಾಗಿದ್ದ ಇಲ್ಲಿನ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುವೆಟ್ಟು ಗ್ರಾಮದ ಕೇದೆ ಮನೆತನದ ಜಾಗದಲ್ಲಿ ಗುರುವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ವಸಂತ ಬಂಗೇರ ಅವರ ಕಿರಿಯ ಮಗಳು ಬಿನುತಾ ಬಂಗೇರ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇಮಕ

Posted by Vidyamaana on 2023-02-05 03:16:52 |

Share: | | | | |


ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇಮಕ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿಯಾಗಿ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿರುವ ಬೆನ್ನಲೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯಾಗಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.

ಧರ್ಮೇಂದ್ರ ಪ್ರಧಾನ್ ಅವರನ್ನು ಉಸ್ತುವಾರಿಯಾಗಿ ಹಾಗೂ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ಅವರನ್ನು ಸಹ-ಪ್ರಭಾರಿಯಾಗಿ ಬಿಜೆಪಿ ನೇಮಕ ಮಾಡಲಾಗಿದೆ.

ಕೆ.ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇದರಿಂದ ಅವರಿಗೆ ಕರ್ನಾಟಕದ ಬಗ್ಗೆ ಸರಿಯಾಗಿ xತಿಳಿದಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಯುಕೋ ಬ್ಯಾಂಕಿನಲ್ಲಿ 820 ಕೋಟಿ ಅಕ್ರಮ ವರ್ಗಾವಣೆ

Posted by Vidyamaana on 2023-12-06 12:13:46 |

Share: | | | | |


ಯುಕೋ ಬ್ಯಾಂಕಿನಲ್ಲಿ 820 ಕೋಟಿ ಅಕ್ರಮ ವರ್ಗಾವಣೆ

ಮಂಗಳೂರು: ದೇಶದ ಬ್ಯಾಂಕ್ ಗಳಲ್ಲಿ ಒಂದಾದ ಯುಕೊ ಬ್ಯಾಂಕ್ 41 ಸಾವಿರಕ್ಕೂ ಅಧಿಕ ಖಾತೆದಾರರ ಖಾತೆಗೆ ಸುಮಾರು 820 ಕೋಟಿ ರೂಪಾಯಿ ತಾಂತ್ರಿಕ ದೋಷದಿಂದ ಜಮೆಯಾಗಿದೆ ಎಂದು ಬ್ಯಾಂಕ್ ತಿಳಿಸಿದ್ದು, ಈ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿದ್ದು, ಮಂಗಳೂರು ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಿದೆ.

ಈ ಕುರಿತು ಯುಕೊ ಬ್ಯಾಂಕ್, ಸಂಶಯಾಸ್ಪದ ಐಎಂಪಿಎಸ್ ವ್ಯವಹಾರಗಳಿಗೆ ಸಂಬಂಧಿಸಿ ತನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಎಂಜಿನಿಯರ್ ಹಾಗೂ ಇತರ ಕೆಲ ಅಪರಿಚಿತರ ವಿರುದ್ಧ ದೂರು ನೀಡಿದೆ. ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನ. 10 ಹಾಗೂ 13ರ ಮಧ್ಯೆ 820 ಕೋಟಿ ರೂ. ಮೊತ್ತವನ್ನು ಏಳು ಖಾಸಗಿ ಬ್ಯಾಂಕ್‌ಗಳ 14,000 ಖಾತೆದಾರರಿಂದ ಐಎಂಪಿಎಸ್‌ ಆಂತರಿಕ ವಹಿವಾಟುಗಳ ಮೂಲಕ ಯುಕೋ ಬ್ಯಾಂಕ್‌ನ 41,000 ಖಾತೆದಾರರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.


ಹುಡುಕಾಟದ ಸಮಯದಲ್ಲಿ, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗ್ಳು, ಕಂಪ್ಯೂಟರ್‌ ಸಿಸ್ಟಮ್‌ಗಳು, ಇಮೇಲ್‌ ಆಕ್ರೈವ್‌ಗಳು ಮತ್ತು ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್‌ ಪುರಾವೆಗಳನ್ನು ಪಡೆಯಲಾಗಿದೆ


ಅಚಾನಕ್‌ ಆಗಿ ಖಾತೆಗೆ ಹಣ ಬಿದ್ದ ಕೂಡಲೇ ಕೆಲವರು ವಿತ್‌ಡ್ರಾ ಕೂಡ ಮಾಡಿಕೊಂಡಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಸಿಬಿಐ ತಿಳಿಸಿದೆ.

5,8,9ನೇ ತರಗತಿ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Posted by Vidyamaana on 2023-12-26 21:58:49 |

Share: | | | | |


5,8,9ನೇ ತರಗತಿ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023-24ನೇ ಸಾಲಿನ 5,8 ಮತ್ತಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲಾತ್ಮಕ ಮೌಲ್ಯಂಕನ (ಎಸ್‌ಎ-2)ದ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಕಟಿಸಿದೆ. ಮಾ.11ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ.

5ನೇ ತರಗತಿಗೆ: 

ಮಾ.11ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಮಾ.11- ಪ್ರಥಮ ಭಾಷೆ ಕನ್ನಡ, ಮಾ.12 ದ್ವಿತೀಯ ಭಾಷೆ ಇಂಗ್ಲಿಷ್, ಮಾ.13 ಪರಿಷರ ಅಧ್ಯಯನ ಮತ್ತು ಮಾ.14ರಂದು ಗಣಿತ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿವೆ.

8 ಮತ್ತು 9ನೇ ತರಗತಿ:

ಮಾ.11 ಪ್ರಥಮ ಭಾಷೆ ಕನ್ನಡ, ಮಾ.12 ದ್ವಿತೀಯ ಭಾಷೆ ಇಂಗ್ಲಿಷ್, ಮಾ.13 ತೃತೀಯ ಭಾಷೆ ಹಿಂದಿ, ಮಾ.14 ಗಣಿತ, ಮಾ.15 ವಿಜ್ಞಾನ, ಮಾ.16 ಸಮಾಜ ವಿಜ್ಞಾನ ಮತ್ತು ಮಾ.18ರಂದು ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿವೆ. ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ಪ್ರಕಟಣೆ ಹೊರಡಿಸಿದೆ.


ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲಾ ಹಂತದಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಾಲ್ಲೂಕು ಹಂತದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ.



Leave a Comment: