ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ; ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಸುದ್ದಿಗಳು News

Posted by vidyamaana on 2024-06-30 21:58:04 |

Share: | | | | |


ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ;  ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.

ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.

ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ

ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.

ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

 Share: | | | | |


ಹೃದಯಾಘಾತದಿಂದ ಆಟೋ ಚಾಲಕ ಅಶ್ರಫ್ ನಿಧನ

Posted by Vidyamaana on 2024-05-04 14:40:31 |

Share: | | | | |


ಹೃದಯಾಘಾತದಿಂದ ಆಟೋ ಚಾಲಕ  ಅಶ್ರಫ್ ನಿಧನ

ವಿಟ್ಲ: ಇಲ್ಲಿನ ಉರಿಮಜಲು ನಿವಾಸಿ, ಆಟೋ ಚಾಲಕ ಅಶ್ರಫ್ (38 ವ.) ಮೇ 3ರಂದು ಹೃದಯಾಘಾತದಿಂದ ನಿಧನರಾದರು.

ಹಲವು ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು, ಶುಕ್ರವಾರ ಮಧ್ಯಾಹ್ನ ನಮಾಜ್ ಮುಗಿಸಿ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಾಗಿಲು ಹಾಕಿ ಮಲಗಿದ್ದರು.

ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ ಸರ್ಕಾರ.

Posted by Vidyamaana on 2023-02-21 10:48:59 |

Share: | | | | |


ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ  ಸರ್ಕಾರ.

ಬೆಂಗಳೂರು: ಉನ್ನತ ಸ್ಥಾನದಲ್ಲಿದ್ದು ಪರಸ್ಪರ ಕಿತ್ತಾಟ ನಡೆಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರನ್ನು ಸರ್ಕಾರ ಇದೀಗ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಮುಜರಾಯಿ ಇಲಾಖೆ ಆಯುಕ್ತರಾಗಿದ್ದ ಸಿಂಧೂರಿ ಹಾಗೂ ಕರಕುಶಲ ನಿಗಮದ ಎಂಡಿ ರೂಪಾ ಹಾಗೂ ರೂಪ ಪತಿ ಐಎಎಸ್​ ಅಧಿಕಾರಿ ಮನೀಶ್‌ ಮುದ್ಗಲ್‌ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.

ರೂಪ ಹಾಗೂ ಸಿಂಧೂರಿಗೆ ಸ್ಥಳವನ್ನು ತೋರಿಸದೆ ವರ್ಗಾಯಿಸಿರುವುದು ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಮುದ್ಗಲ್‌ ಅವರನ್ನು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.

ದಿ.ರಾಜೀವ್ ಗಾಂಧಿ 32 ನೇ ಪುಣ್ಯ ತಿಥಿ ಸೋನಿಯಾ,ರಾಹುಲ್,ಖರ್ಗೆ ಸೇರಿ ಗಣ್ಯರಿಂದ ಪುಷ್ಪನಮನ

Posted by Vidyamaana on 2023-05-21 05:19:54 |

Share: | | | | |


ದಿ.ರಾಜೀವ್ ಗಾಂಧಿ 32 ನೇ ಪುಣ್ಯ ತಿಥಿ ಸೋನಿಯಾ,ರಾಹುಲ್,ಖರ್ಗೆ ಸೇರಿ ಗಣ್ಯರಿಂದ ಪುಷ್ಪನಮನ

ನವದೆಹಲಿ: ಇಂದು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಅಂಗವಾಗಿ ದೆಹಲಿಯ ವೀರಭೂಮಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರದ್ಧಾಂಜಲಿ ಸಲ್ಲಿಸಿದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪುಷ್ಪನಮನ ಸಲ್ಲಿಸಿದರು.ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಮ್ಮ ತಂದೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಆಗಸ್ಟ್ 20, 1944 ರಂದು ಜನಿಸಿದ ರಾಜೀವ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಸಂಸದೀಯ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಭಾರತ ರತ್ನ ಪುರಸ್ಕೃತರಾದ ರಾಜೀವ್ ಗಾಂಧಿ ಅವರು 1984 ರಿಂದ 1989 ರವರೆಗೆ ಭಾರತದ ಆರನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1984 ರಲ್ಲಿ ಅವರ ತಾಯಿ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಅವರು ಅಧಿಕಾರ ವಹಿಸಿಕೊಂಡರು.

ಬೃಹತ್ ಮರ ರಸ್ತೆಗೆ: ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರಕ್ಕೆ ಮುಕ್ತ

Posted by Vidyamaana on 2023-07-24 16:48:04 |

Share: | | | | |


ಬೃಹತ್ ಮರ ರಸ್ತೆಗೆ: ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರಕ್ಕೆ ಮುಕ್ತ

ಮಡಿಕೇರಿ: ಮಡಿಕೇರಿ -ಮಂಗಳೂರು ಹೆದ್ದಾರಿ ಮದೆ ಸಮೀಪದ ಕರತೋಜಿ ಬಳಿ ಹೆಚ್ಚಿನ ಮಳೆಯಿಂದಾಗಿ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಸಾರಿಗೆ ಸಂಚಾರದಲ್ಲಿ‌ ವ್ಯತ್ಯಯ ಉಂಟಾಗಿತ್ತು.

ಈ ಸಂಬಂಧ ಉಪ ವಿಭಾಗಾಧಿಕಾರಿ ಡಾ.ಯತೀಶ್‌ ಉಲ್ಲಾಳ್, ತಹಶೀಲ್ದಾರರಾದ ಕಿರಣ್ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು, ಅರಣ್ಯ ಇಲಾಖೆಯ ಸಿಬಂದಿಯವರು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸುಗಮ ಸಾರಿಗೆ ಸಂಚಾರ ಕಲ್ಪಿಸಲಾಯಿತು.

ವಾರ್ತಾಭಾರತಿಯ ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಗೆ ಆಯ್ಕೆ

Posted by Vidyamaana on 2024-01-31 13:19:17 |

Share: | | | | |


ವಾರ್ತಾಭಾರತಿಯ ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು  ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಗೆ ಆಯ್ಕೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ವಾರ್ತಾಭಾರತಿಯ ವರದಿಗಾರ ಪುತ್ತೂರು ಬನ್ನೂರು ನಿವಾಸಿ  ಇಬ್ರಾಹೀಂ ಖಲೀಲ್ ಬನ್ನೂರು ರವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


 ಅತ್ಯುತ್ತಮ ಕ್ರೀಡಾ ವರದಿಗಾಗಿ ಇಬ್ರಾಹೀಂ ಖಲೀಲ್‌ ಬನ್ನೂರು ಅವರಿಗೆ ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿಯನ್ನು ಘೋಷಿಸಲಾಗಿದೆ.


ಇಬ್ರಾಹೀಂ ಖಲೀಲ್ ಅವರ ವರದಿ :


ಹ್ಯಾಟ್ರಿಕ್ ವಿಶ್ವಕಪ್ ಗೆದ್ದರೂ ಅಂಧ ಕ್ರಿಕೆಟಿಗರಿಗೆ ಬೆಳಕಾಗದ ಸರಕಾರ!


ದಾವಣಗೆರೆಯಲ್ಲಿ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಎಂ.ಸಂಜೀವ ಶೆಟ್ಟಿ ಸಿಲ್ಟ್, ರೆಡಿಮೇಡ್ಸ್ ನೂತನ ಶಾಖೆ MSS ALL EXCLUSIVE ಮಾ.24ರಂದು ಶುಭಾರಂಭ

Posted by Vidyamaana on 2023-03-23 16:02:19 |

Share: | | | | |


ಎಂ.ಸಂಜೀವ ಶೆಟ್ಟಿ ಸಿಲ್ಟ್, ರೆಡಿಮೇಡ್ಸ್ ನೂತನ ಶಾಖೆ MSS ALL EXCLUSIVE ಮಾ.24ರಂದು ಶುಭಾರಂಭ

ಪತ್ತೂರು: ಸುಮಾರು 79 ವರ್ಷಗಳ ವಸ್ತ್ರ ಪರಂಪರೆಯನ್ನು ಹೊಂದಿರುವ, ಎಲ್ಲಾ ಪೀಳಿಗೆಯ ಗ್ರಾಹಕರ ಮನಗೆದ್ದ, ಮದುವೆ ಜವಳಿಗೆಂದೇ ಪ್ರಸಿದ್ದಿ ಪಡೆದ ಎಂ.ಸಂಜೀವ ಶೆಟ್ಟಿ ಮಳಿಗೆಯ ನೂತನ ಶಾಖೆ MSS ALL EXCLUSIVE ಮಾ.24ರಂದು ಬೆಳಿಗ್ಗೆ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಎಂ. ಸಂಜೀವ ಶೆಟ್ಟಿ ಹಳೆಯ ಜವಳಿ ಮಳಿಗೆಯ ಎದುರುಗಡೆ ಶುಭಾರಂಭಗೊಳ್ಳಲಿದೆ.

1944ರಲ್ಲಿ ಪುತ್ತೂರಿನಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಎಂ.ಸಂಜೀವ ಶೆಟ್ಟಿ ವಸ್ತ್ರವ್ಯಾಪಾರ ಮಳಿಗೆ ಪ್ರಾರಂಭಿಸಿದೆ.

2017ರಲ್ಲಿ ಜಿಲ್ಲೆಯಲ್ಲೇ ಬಹುದೊಡ್ಡ 3 ಅಂತಸ್ತಿನವಸ್ತ್ರವ್ಯಾಪಾರ ಮಳಿಗೆ ಪ್ರಾರಂಭಿಸಿದೆ.ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಎಂ.ಸಂಜೀವ ಶೆಟ್ಟಿ ಶಾಖಾ ಶೋ ರೂಮ್ ಹೊಂದಿದೆ. ಗ್ರಾಹಕರ ಇನ್ನೂ ಹೆಚ್ಚಿನ ವೈವಿಧ್ಯಮಯ ಆಯ್ಕೆಗಾಗಿ ಇದೀಗ ವಿನೂತನ ವ್ಯವಹಾರಕ್ಕೆ ಕೈ ಹಾಕಿರುವ ಎಂ.ಸಂಜೀವ ಶೆಟ್ಟಿ ಸಂಸ್ಥೆಯವರು, ತಮ್ಮ ಮೊದಲಿನ ಶೋರೂಂ ನಲ್ಲಿ MSS ALL EXCLUSIVE ನ್ನು ಪ್ರಾರಂಭಿಸಿದ್ದಾರೆ.

ಗ್ರಾಹಕರಿಗೆ ಎಲ್ಲಾ ಬ್ರಾಂಡೆಡ್ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆನ್ನುವ ನಿಲುವಿನಿಂದ ಹಳೆಯ ಶೋರೂಂನ್ನೇ ಈ ಶೋರೂಂ ಆಗಿ ಬದಲಿಸಲಾಗಿದೆ.

ವೈಶಿಷ್ಟ್ಯತೆಗಳು: ಸಂಸ್ಥೆಯ ನೆಲಅಂತಸ್ತಿನಲ್ಲಿ ಕಾಸ್ಟೆಟಿಕ್ಸ್, ಪ್ಯಾಡ್ ಬ್ಯಾಗ್, ನ್ಯೂಬಾರ್ನ್ ಡೈಸನ್ಸ್, ಹಾಗೂ ಟಾಯ್ಸ್ ಲಭ್ಯವಿದೆ. ಪ್ರಥಮ ಮಹಡಿಯಲ್ಲಿ ಲೇಡಿಸ್ ಎಕ್ನಿಕ್ ವೇರ್, ಮನ್ಸ್ ಫಾರ್ಮಲ್, ಕ್ಯಾಸುವಲ್ ವೇರ್, ಎರಡನೇ ಮಹಡಿಯಲ್ಲಿ ಮನ ಎಕ್ನಿಕ್ ವೇರ್, ಟ್ರಾವಲ್ ಬ್ಯಾಗ್ ಮತ್ತು ಗೃಹಾಲಂಕಾರಿಕಾ ವಸ್ತುಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Leave a Comment: