ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಭಟ್ಕಳ | ಕಾರು-ಲಾರಿ ಮುಖಾಮುಖಿ ಢಿಕ್ಕಿ: ಉಡುಪಿ ಮೂಲದ ಮಹಿಳೆ ಮೃತ್ಯು; ಇಬ್ಬರಿಗೆ ಗಾಯ

Posted by Vidyamaana on 2023-10-17 20:18:24 |

Share: | | | | |


ಭಟ್ಕಳ | ಕಾರು-ಲಾರಿ ಮುಖಾಮುಖಿ ಢಿಕ್ಕಿ: ಉಡುಪಿ ಮೂಲದ ಮಹಿಳೆ ಮೃತ್ಯು; ಇಬ್ಬರಿಗೆ ಗಾಯ

ಭಟ್ಕಳ, ಅ 17: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮೂಡ್ ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.ಮೃತರನ್ನು ಉಡುಪಿ ಜಿಲ್ಲೆಯ ಬೇಳೂರು ಗ್ರಾಮದ ರೀಟಾ ಕ್ಸೇವಿಯರ್ ಡಿಸೋಜ(51) ಎಂದು ಗುರುತಿಸಲಾಗಿದೆ.ರೀಟಾರ ಪತಿ ಕ್ಸೇವಿಯರ್ ರಾಜ್ ಡಿಸೋಜ ಮತ್ತು ಪುತ್ರಿ ಇನ್ರಿಕಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.


ಕ್ಸೇವಿಯರ್ ರಾಜ್ ಕುಟುಂಬವು ಕಾರಿನಲ್ಲಿ ಉಡುಪಿ ಕಡೆಯಿಂದ ಗೋವಾ ಕಡೆಗೆ ತೆರಳುತ್ತಿತ್ತು. ಇವರ ಕಾರು ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ತಲುಪಿದಾಗ ಮುರ್ಡೇಶ್ವರ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿಯಾಗಿದೆ ಎಂದು ಹೇಳಲಾಗಿದೆ.


ಗಂಭೀರ ಗಾಯಗೊಂಡಿದ್ದ ರೀಟಾ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಶೋಕ್ ಕುಮಾರ್ ರೈ ಗೆ ಸಿಕ್ತು ಭರ್ಜರಿ ಗೆಲುವಿನ ರುಚಿ

Posted by Vidyamaana on 2023-05-13 08:01:56 |

Share: | | | | |


ಅಶೋಕ್ ಕುಮಾರ್ ರೈ ಗೆ  ಸಿಕ್ತು ಭರ್ಜರಿ ಗೆಲುವಿನ ರುಚಿ

ಪುತ್ತೂರು: ರಾಜ್ಯದ ಗಮನ ಸೆಳೆದಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಶೋಕ್ ಕುಮಾರ್ ರೈ 3351ಮತಗಳಿಂದ  ಜಯಭೇರಿ ಭಾರಿಸಿದ್ದಾರೆ.


ಜನಮತಗಣನೆಯಲ್ಲಿ ಮುನ್ನಡೆ ಸಾಧಿಸಿರುವ ಅಶೋಕ್ ಕುಮಾರ್ ರೈ ಅವರು, ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆ, ಪುತ್ತೂರಿನಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ.

ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವಿನ ಪೈಪೋಟಿಯ ಲಾಭವನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿದೆ. ಬಿಜೆಪಿಯ ಮತಗಳು ವಿಭಜನೆಗೊಂಡಿದ್ದು ಹಾಗೂ ಕಾಂಗ್ರೆಸ್ ಒಗ್ಗಟ್ಟಿನಿಂದ ಮುನ್ನುಗ್ಗಿದ್ದರಿಂದ ಗೆಲುವಿನ ಪತಾಕೆ ಹಾರಿಸಲು ಸಾಧ್ಯವಾಯಿತು. ಅಶೋಕ್ ಕುಮಾರ್ ರೈ ಅವರ ಮುಂದಾಳುತ್ವ ಕಾಂಗ್ರೆಸಿಗೆ ವರದಾನವಾಗಿದೆ.

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ

Posted by Vidyamaana on 2024-03-07 12:39:49 |

Share: | | | | |


ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ

ಬೆಳ್ತಂಗಡಿ :ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ಸುದ್ದಿ ಉದಯ ಪತ್ರಿಕೆಯ ಆಡಳಿತ ನಿರ್ದೇಶಕ ತುಕಾರಾಮ್ ಬಿ. ಐದು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಆನಂದ ಶೆಟ್ಟಿ, ಗೋಪಾಲ್ ರಾವ್, ಮಮತಾ ಶೆಟ್ಟಿ, ವೀಣಾ ವಿನೋದ್ ಕುಮಾರ್, ಕೃಷ್ಣಪ್ಪ ಗುಡಿಗಾರ್, ಸಚಿನ್ ಕುಮಾರ್ ನೊಜೋಡಿ, ಸಂತೋಷ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ, ಪ್ರಸಾದ್ ಬಿ ಆಯ್ಕೆಯಾಗಿದ್ದಾರೆ.

ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ; ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಸುಮನ್ ದಾಸ್ ಅರೆಸ್ಟ್

Posted by Vidyamaana on 2024-04-12 07:36:36 |

Share: | | | | |


ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ; ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಸುಮನ್ ದಾಸ್ ಅರೆಸ್ಟ್

ಬೆಂಗಳೂರು, ಏ.11: ಕಳೆದ ಪೆಬ್ರವರಿ 22 ರಂದು ತರಬನಹಳ್ಳಿ ಬಳಿಯ ರಸ್ತೆ ಬದಿಯೊಂದರ ಬಳಿ ಉತ್ತರಕಾಂಡ ಮೂಲದ ರಾಜು ರಾವತ್ (49) ಎಂಬುವವರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ​ಸ್ಥಳಕ್ಕೆ ಭೇಟಿ ನೀಡಿದ್ದ ಚಿಕ್ಕಜಾಲ ಪೊಲೀಸರು (Chikkajala Police)ಪರಿಶೀಲನೆ ನಡೆಸಿದ್ದರು. ಈ ವೇಳೆ ಮೃತ ರಾಜು ರಾವತ್ ತಲೆಗೆ ಪೆಟ್ಟಾಗಿ ಗಾಯಗಳಾಗಿದ್ದು, ಅನುಮಾನಾಸ್ಪದವಾಗಿ ಬಿದ್ದಿದ್ದ ಶವವನ್ನ ನೋಡಿದ್ದ ಜನ, ಕುಡಿದು ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿರಬಹುದು ಅಂದುಕೊಂಡಿದ್ದರು. ಇನ್ನು ಪೊಲೀಸರು ಸಹ ಇದೇ ಗುಮಾನಿ ಮೇಲೆ ಮೃತ ರಾಜು ರಾವತ್​ನ ಮೃತದೇಹವನ್ನ ಶವಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಯುಡಿಆರ್ ಕೇಸ್ ದಾಖಲು ಮಾಡಿಕೊಂಡಿದ್ದರು. ಜೊತೆಗೆ ಪೋಸ್ಟ್ ಮಾರ್ಟಮ್ ವರದಿಗೆ ಕಾಯುತ್ತಿದ್ದ ಚಿಕ್ಕಜಾಲ ಪೊಲೀಸರು ರಿಪೋರ್ಟ್ ಬರುತ್ತಿದ್ದಂತೆ ಶಾಕ್ ಆಗಿದ್ದರು. ರಾಜು ರಾವತ್ ಮೇಲೆ ಬಲವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದು ತಿಳಿದಿತ್ತು. ವರದಿ ಬಳಿಕ ಕೊಲೆ ಕೇಸ್ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಇದೀಗತನಿಖೆ ನಡೆಸಿ ಎಸ್ಕೇಪ್ ಅಗಿದ್ದ ಆರೋಪಿಯನ್ನ ಬಂಧಿಸಿದ್ದಾರೆ.

ಹಣಕ್ಕಾಗಿ ಜೊತೆಯಲ್ಲಿದ್ದು ಸ್ನೇಹಿತನಿಗೆ ಕೊಳ್ಳಿಯಿಟ್ಟ ಭೂಪ

ಹತ್ತೂರ ಒಡೆಯನ ಸಮಕ್ಷಮದಲ್ಲಿ ಸಂಪನ್ನಗೊಳ್ಳಲಿದೆ ಭಕ್ತಿ ಭಾವದ ಶ್ರೀನಿವಾಸ ಕಲ್ಯಾಣೋತ್ಸವ

Posted by Vidyamaana on 2023-12-21 06:27:24 |

Share: | | | | |


ಹತ್ತೂರ ಒಡೆಯನ ಸಮಕ್ಷಮದಲ್ಲಿ ಸಂಪನ್ನಗೊಳ್ಳಲಿದೆ ಭಕ್ತಿ ಭಾವದ ಶ್ರೀನಿವಾಸ ಕಲ್ಯಾಣೋತ್ಸವ

ಪುತ್ತೂರು : ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಮಾರು ಗದ್ದೆಯಲ್ಲಿ ಡಿ.24 ಮತ್ತು 25 ರಂದು ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮ ನಡೆಯುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮತ್ತು ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನಕುಮಾರ್ ಮಾರ್ತ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ  ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವುದು. ಡಿ.24ರಂದು ಬೆಳಿಗ್ಗೆ 6.30ರಿಂದ ಭಜನಾ ಕಾರ್ಯಕ್ರಮ. ಸಂಜೆ 4ಗಂಟೆಗೆ ನಗರದ ಬೊಳುವಾರಿನಲ್ಲಿ ಶ್ರೀದೇವಿ,ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ಭಕ್ತಿಪೂರ್ವಕ ಸ್ವಾಗತಿಸಿ, ಬಳಿಕ ಅಲ್ಲಿಂದ ಮಹಾಲಿಂಗೇಶ್ವರ ದೇವಳದ ಗದ್ದೆ ತನಕ ಪುಷ್ಪವೃಷ್ಠಿ, ವಿದ್ವಾಂಸರ ವೇದಪಠಣ,ಶಂಕನಾದ, ಚೆಂಡೆವಾದ್ಯಗಳ ಪೋಷದೊಂದಿಗೆ ಶ್ರೀ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಸಂಜೆ 5.30ಕ್ಕೆ ದ.ಕ.ಮತ್ತು ಉಡುಪಿ ಜಿಲ್ಲೆಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸನಾತನ ಸಮಾಗಮ ಕಾರ್ಯಕ್ರಮ ನೆಡೆಯಲಿದೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ,ಆನೆಗುಂಡಿ ಮಹಾಸಂಸ್ಥಾನಂ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಮಂಗಳೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಅರೆಮಾದೇನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕನ್ಯಾನ ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಕನ್ಯಾಡಿ ಮಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ವಿಟ್ಲ ಯೋಗೀಶ್ವರ ಮಠದ ರಾಜಗುರು ಯೋಗಿ ಶ್ರದ್ಧಾನಾಥ ಜೀ, ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಕೃಷ್ಣ ಗುರೂಜಿ ಭಾಗವಹಿಸುವರು.  ಬಳಿಕ ರಾಜ್ಯದ ಪ್ರತಿಷ್ಠಿತ ತಂಡಗಳಿಂದ ಸಾಂಸ್ಕೃತಿ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯುವುದು ಎಂದು ಅವರು ತಿಳಿಸಿದರು.


ಡಿ.25ರಂದು ಬೆಳಿಗ್ಗೆ 6ಗಂಟೆಗೆ ಸುಪ್ರಭಾತ ಪೂಜೆ ಆರಂಭಗೊಳ್ಳುವುದು.ಅಪರಾಹ್ನ ಗಂಟೆ 2ರಿಂದ ಭಜನೋತ್ಸವ ನಡೆಯಲಿದೆ.ಸಂಜೆ 6ಗಂಟೆಗೆ ವೈಭವದ ಕಲ್ಯಾಣೋತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸುಮಾರು 50 ಸಾವಿರ ಮಂದಿಗೆ ಲಡ್ಡು ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.


ಹೊರೆಕಾಣಿಕೆ ಸಮರ್ಪಣೆ

ಡಿ.23ರಂದು ಗ್ರಾಮ ಮಟ್ಟಗಳಲ್ಲಿ ಹೊರೆಕಾಣಿಕೆ ಸಂಗ್ರಹಿಸಿ, ಸಂಜೆ 5 ಗಂಟೆಗೆ ನಗರದ ದರ್ಬೆ ಯಿಂದ ಮಹಾಲಿಂಗೇಶ್ವರ ದೇವಳ ಗದ್ದೆ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನಕುಮಾರ್ ಮಾರ್ತ ಅವರು ಕಾರ್ಯಕ್ರಮಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ನೀಡಿ ಅನ್ನದಾನಕ್ಕೆ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡಿಕೊಂಡರು.


ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು, ಸ್ವಯಂ ಸೇವಕ ಸಮಿತಿಯ ಸಂಚಾಲಕ ಅನಿಲ್ ತೆಂಕಿಲ, ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಸಂಚಾಲಕ ನವೀನ್ ರೈ ಪಂಜಳ, ಕಾರ್ಯದರ್ಶಿ ಪ್ರಜ್ವಲ್ ಘಾಟೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ

Posted by Vidyamaana on 2024-04-12 14:41:18 |

Share: | | | | |


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ

ಮೈಸೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.



Leave a Comment: