ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜೂ 10

Posted by Vidyamaana on 2023-06-10 01:58:17 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜೂ 10

ಪುತ್ತೂರು: ನೂತನ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ರೈ ಅವರಿಗೆ ಪುತ್ತೂರು ಸುದಾನ ಶಾಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. 

ಬೆಳಿಗ್ಗೆ 10 ಗಂಟೆಗೆ ವಿಟ್ಲ ವಿಠಲ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಉಪ್ಪಿನಂಗಡಿ ಎಚ್.ಎಂ. ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ  ಮೂರು ಗಂಟೆಗೆ ಪುತ್ತೂರು ಸುದಾನ ಶಾಲೆಯಲ್ಲಿ ಶಾಸಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ಗಂಟೆಗೆ ಅಕ್ಷಯ ಕಾಲೇಜಿನ‌ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಕೇರಳದ ಹನಿಟ್ರ್ಯಾಪ್ ಗ್ಯಾಂಗ್ ಮಂಗಳೂರಿನಲ್ಲಿ ಅರೆಸ್ಟ್

Posted by Vidyamaana on 2024-02-02 14:36:15 |

Share: | | | | |


ಕೇರಳದ ಹನಿಟ್ರ್ಯಾಪ್ ಗ್ಯಾಂಗ್ ಮಂಗಳೂರಿನಲ್ಲಿ ಅರೆಸ್ಟ್

ಕಾಸರಗೋಡು, ಫೆ.2 ಕಾಸರಗೋಡಿನ ವ್ಯಕ್ತಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ದು ಹನಿಟ್ರ್ಯಾಪ್ ಮಾಡಿರುವ ಪ್ರಕರಣದ ಬೆನ್ನತ್ತಿದ ಮೇಲ್ಪರಂಬ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾಂಗಾಡ್‌ ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 5 ಲಕ್ಷ ರೂ. ಲಪಟಾಯಿಸಿದ ಬಗ್ಗೆ ಕಾಸರಗೋಡು ಜಿಲ್ಲೆಯ ಮೇಲ್ಪರಂಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

ಕೋಜಿಕ್ಕೋಡ್ ಮೂಲದ ಎಂ.ಪಿ‌.ರುಬೀನಾ(29), ಆಕೆಯ ಪತಿ ಪ್ರಕರಣದ ಸೂತ್ರಧಾರ ಫೈಝಲ್‌ (37), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್‌. ಸಿದ್ದಿಕ್‌ (48), ಮಾಂಗಾಡ್‌ನ‌ ದಿಲ್ಶಾದ್‌ (40), ಮುಟ್ಟತ್ತೋಡಿಯ ನಫೀಸತ್‌ ಮಿಸ್ರಿಯ (40), ಮಾಂಗಾಡ್‌ನ‌ ಅಬ್ದುಲ್ಲ ಕುಂಞಿ (32), ಪಡನ್ನಕ್ಕಾಡ್‌ನ‌ ರಫೀಕ್‌ ಮಹಮ್ಮದ್ (42) ಬಂಧಿತ ಆರೋಪಿಗಳು. 

ಜನವರಿ 23 ರಂದು ರುಬಿನಾ ಎಂಬಾಕೆ ಮೊಬೈಲ್ ಮೂಲಕ 59 ವರ್ಷದ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದಳು. ಶೈಕ್ಷಣಿಕ ಉದ್ದೇಶಕ್ಕಾಗಿ ಲ್ಯಾಪ್ ಟಾಪ್ ಖರೀದಿಸಿದ್ದು ಅದು ಹಾಳಾಗಿದೆ. ನಿಮ್ಮ ಸಮಾಜ ಸೇವೆ ಬಗ್ಗೆ ತಿಳಿದುಕೊಂಡಿದ್ದೇನೆ. ಅದಕ್ಕಾಗಿ ಸಹಾಯ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಳು. ಅದರಂತೆ ಯುವತಿಯೊಂದಿಗೆ ಕಾಸರಗೋಡಿಗೆ ಆಗಮಿಸಿದ ಅವರು ಲ್ಯಾಪ್ ಟಾಪ್ ರಿಪೇರಿ ಸಾಧ್ಯವಿಲ್ಲ. ಹೊಸ ಲ್ಯಾಪ್ ಟಾಪ್ ಖರೀದಿಸಿ ಕೊಡುವುದಾಗಿ ಹೇಳಿದ್ದರು. 

ಲ್ಯಾಪ್‌ಟಾಪ್ ಖರೀದಿಸುವ ನೆಪದಲ್ಲಿ ಆರೋಪಿ ಯುವತಿ ರುಬಿನಾ ಮಂಗಳೂರಿಗೆ ಬಂದಿದ್ದಳು. ಈ ವೇಳೆ, ಆ ವ್ಯಕ್ತಿಯೊಂದಿಗೆ ಸಲುಗೆಯಲ್ಲಿದ್ದ ವಸತಿ ಗೃಹವೊಂದಕ್ಕೆ ತೆರಳಿದ್ದರು. ಅಷ್ಟರಲ್ಲಿ ರುಬಿನಾ ಪತಿ ಸೇರಿದಂತೆ ಐದಾರು ಮಂದಿಯ ತಂಡ ಎಂಟ್ರಿಯಾಗಿದ್ದು ಬಲವಂತದಿಂದ ನಗ್ನ ಫೋಟೊ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಗಳು ಆ ವ್ಯಕ್ತಿಯನ್ನು ಕಾಸರಗೋಡಿಗೆ ಕರೆದೊಯ್ದು ಕೂಡಿಹಾಕಿ ಬೆದರಿಸಿ ₹5 ಲಕ್ಷ ಸುಲಿಗೆ ಮಾಡಿದ್ದಾರೆ. ಆನಂತರವೂ, ಆರೋಪಿಗಳು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದರು. 

ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಮೇಲ್ಪರಂಬ ಠಾಣಾ ಎಸ್‌ ಐ ಸುರೇಶ್ ಮತ್ತು ಅರುಣ್ ಮೋಹನ್ ಹನಿಟ್ರಾಪ್ ತಂಡದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ

Posted by Vidyamaana on 2024-08-17 05:34:39 |

Share: | | | | |


ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ

ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿ ಪುತ್ತೂರು ವತಿಯಿಂದ ಆ.16ರಂದು ಪುತ್ತೂರಿನ ಸುಭದ್ರ ಕಲಾಮಂದಿರದಲ್ಲಿ ವರಮಹಾಲಕ್ಷ್ಮೀ ವೃತಪೂಜೆ ನಡೆಯಿತು.ಆ.16ರಂದು ಬೆಳಿಗ್ಗೆ 8 ಗಂಟೆಗೆ ಭಜನೆ, ಬೆಳಿಗ್ಗೆ 10 ಗಂಟೆಗೆ ಮಹಾಲಕ್ಷ್ಮೀ ವ್ರತ ಪೂಜೆ ಪ್ರಾರಂಭವಾಯಿತು. ಬಳಿಕ ಮಧ್ಯಾಹ್ನ 10ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ನೆಲ್ಯಾಡಿ : ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ಮಧ್ಯೆ ಭೀಕರ ಅಪಘಾತ

Posted by Vidyamaana on 2024-04-03 20:41:13 |

Share: | | | | |


ನೆಲ್ಯಾಡಿ : ಮದುವೆಗೆ ತೆರಳುತ್ತಿದ್ದ  ಖಾಸಗಿ ಬಸ್ ಹಾಗೂ ಕಂಟೈನರ್ ಮಧ್ಯೆ ಭೀಕರ ಅಪಘಾತ

ನೆಲ್ಯಾಡಿ : ಖಾಸಗಿ ಬಸ್ ಹಾಗೂ ಕಂಟೈನ‌ರ್ ವಾಹನದ ನಡುವೆ ಅಪಘಾತ ಸಂಭವಿಸಿ ಹಲವರು ಗಂಭೀರ ಗಾಯಗೊಂಡ ಘಟನೆ ಏ.3 ರಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ನಡೆದಿದೆ.

ಯಾರ ಪರವಾಗಿ ಹೆಚ್ಚು ಘೋಷಣೆ ಬೀಳುತ್ತೋ ಅವರಿಗೆ ಕಪ್ ಇಲ್ಲ

Posted by Vidyamaana on 2023-05-22 04:03:48 |

Share: | | | | |


ಯಾರ ಪರವಾಗಿ ಹೆಚ್ಚು ಘೋಷಣೆ ಬೀಳುತ್ತೋ ಅವರಿಗೆ ಕಪ್ ಇಲ್ಲ

ಬೆಂಗಳೂರು: ಸದ್ಯಕ್ಕೆ ಕರಾವಳಿ ಮತ್ತು ಕರ್ನಾಟಕ ಭಾಗದಲ್ಲಿ ‘ಟ್ರೋಲ್’ ಅಂದ್ರೆ ನಳಿನ್ – ನಳಿನ್ ಅಂದ್ರೆ ‘ಟ್ರೋಲ್’ ಅನ್ನೋ ಪರಿಸ್ಥಿತಿ ಉಂಟಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದಯನೀಯ ಸೋಲಿನ ಬಳಿಕವಂತೂ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಚುನಾವಣಾ ಪ್ರಚಾರ ಸಂದರ್ಭದ ಭಾಷಣಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಒಂದು ಸಭೆಯಲ್ಲಿ ನಳಿನ್ ಹೇಳಿದ್ದ ‘ನಾನು ರಾಜ್ಯಾಧ್ಯಕ್ಷ..’ ಹೇಳಿಕೆಯಂತೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಮಾ. 24 : ವಿಟ್ಲದಲ್ಲಿ ಸೌಹಾರ್ದ ಬೃಹತ್ ಇಫ್ತಾರ್ ಕೂಟ

Posted by Vidyamaana on 2024-03-24 10:56:55 |

Share: | | | | |


ಮಾ. 24 : ವಿಟ್ಲದಲ್ಲಿ ಸೌಹಾರ್ದ ಬೃಹತ್ ಇಫ್ತಾರ್ ಕೂಟ

ವಿಟ್ಲ: ವಿ.ಫೌಂಡೇಶನ್ ವಿಟ್ಲ ವತಿಯಿಂದ ಮಾ. 24ರ ಭಾನುವಾರ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಲಿದೆ. ಸುಮಾರು ಒಂದು ಸಾವಿರದಷ್ಟು ಮಂದಿಗೆ ಇಫ್ತಾರ್ ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸರ್ವಧರ್ಮಿಯರಿಗೆ ಇಫ್ತಾರ್ ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ವಿ ಫೌಂಡೇಶನ್ ನ ಸಂಘಟಕರು ತಿಳಿಸಿದ್ದಾರೆ.

Recent News


Leave a Comment: