ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಮೂಡಿಗೆರೆ: ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ… ಪೊಲೀಸರ ನಿಯೋಜನೆ

Posted by Vidyamaana on 2023-08-02 03:26:21 |

Share: | | | | |


ಮೂಡಿಗೆರೆ: ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ… ಪೊಲೀಸರ ನಿಯೋಜನೆ

ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಇರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


ಇತ್ತೀಚಿಗೆ ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ದಾವಣಗೆರೆಯ ಶರತ್ ಸಾವನ್ನಪ್ಪಿದ್ದ ಈ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ ಅಲ್ಲದೆ ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು, ಅಷ್ಟು ಮಾತ್ರವಲ್ಲದೆ ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು ಇದರಿಂದ ಒಮ್ಮೆ ರೋಗಿ ಹೊತ್ತ ಆಂಬುಲೆನ್ಸ್ ಕೂಡ ಪರದಾಟ ನಡೆಸಿತ್ತು, ಬಂಡೆ ಮೇಲಿಂದ ಬಿದ್ದು ಕೈ-ಕಾಲು ಮುರಿದುಕೊಂಡವರು ಇದ್ದಾರೆ, ಜಾರೋ ಬಂಡೆ ಕೆಲವರ ಜೀವಕ್ಕೂ ಸಂಚಾಕಾರ ತಂದಿದೆ.


ಇದೀಗ ಜಲಪಾತಗಳ ಹೈವೆ ಪ್ಯಾಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದ್ದು ಇಡೀ ದಿನ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಲಿದ್ದಾರೆ.

10 ನಿಮಿಷ ತಡಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್: ಬಿಟ್ಟು ಹಾರಿದ ವಿಮಾನ

Posted by Vidyamaana on 2023-07-28 02:35:54 |

Share: | | | | |


10 ನಿಮಿಷ ತಡಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್: ಬಿಟ್ಟು ಹಾರಿದ ವಿಮಾನ

ಬೆಂಗಳೂರು : ವಿಮಾನ ನಿಲ್ದಾಮಕ್ಕೆ 10 ನಿಮಿಷ ತಡವಾಗಿ ಆಗಮಿಸಿದ ಕಾರಮಕ್ಕಾಗಿ ಹೈದರಾಬಾದ್ ಪ್ರಯಾಣಿಸಬೇಕಿದ್ದಂತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವರನ್ನು ಬಿಟ್ಟು ಏರ್ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದಂತ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.ಈ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವಂತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಶಿಷ್ಟಾಚಾರ ಉಲ್ಲಂಘಿಸಿದ ಏರ್ ಏಷ್ಯಾ ಮೇಲೆ ಗರಂ ಆಗಿದ್ದು, ಸಂಸ್ಥೆ ಹಾಗೂ ಕೆಐಎ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.


ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಹೈದರಾಬಾದ್ ಗೆ ತೆರಳಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಡುವ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೇ ವಿಮಾನ ನಿಲ್ದಾಣಕ್ಕೆ 10 ನಿಮಿಷ ಅವರು ತಡವಾಗಿ ಆಗಮಿಸಿದ್ದರು.ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ ಹೊತ್ತಿಗೆ ಅವರು ಪ್ರಯಾಣಿಸಬೇಕಿದ್ದಂತ ಏರ್ ಏಷ್ಯಾ ವಿಮಾನವು ಗಗನಕ್ಕಾರಿತ್ತು. ಈ ಘಟನೆಯಿಂದ ಬೇಸರಗೊಂಡ ಅವರು, ರಾಜ್ಯದ ಮೊದಲ ಪ್ರಜೆಯಾದ ತಮಗೆ ಅಗೌರವ ಸೂಚಿಸಲಾಗಿದೆ ಎಂಬುದಾಗಿ ಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.


ಇದಾದ ಬಳಿಕ ಮಧ್ಯಾಹ್ನ 3.30ಕ್ಕೆ ಹೈದರಾಬಾದ್ ಗೆ ಹೊರಟಿಟ್ದ ಬೇರೆ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲರು ಪ್ರಯಾಣ ಬೆಳೆಸಿದರು. ಆದ್ರೇ ತಮ್ಮನ್ನು ಬಿಟ್ಟು ತೆರಳಿದಂತ ನಿಗದಿತ ವಿಮಾನದ ವಿರುದ್ಧ ರಾಜ್ಯಪಾಲರ ಸೂಚನೆ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ FIR ದಾಖಲಿಸಿ, ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

Posted by Vidyamaana on 2023-10-31 07:23:11 |

Share: | | | | |


ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

ಮಂಗಳೂರು: ಉಳ್ಳಾಲದ ಮಾಸ್ತಿಕಟ್ಟೆ – ಆಝಾದ್ ನಗರದ ಹುಡುಗನೊಬ್ಬ ಕಾಣೆಯಾಗಿ ದಿನದ ಬಳಿಕ ಪತ್ತೆಯಾದ ಘಟನೆ ನಡೆದಿದೆ.


ಉಳ್ಳಾಲ ಮಾಸ್ತಿ ಕಟ್ಟೆ ಆಝಾದ್ ನಗರದ ಉಸ್ಮಾನ್ ಫಯಾಝ್ ಎಂಬವರ ಮಗ ಸ್ಥಳೀಯ ಶಾಲೆ ಯೊಂದರಲ್ಲಿ 10 ನೇ ತರಗತಿಯಲ್ಲಿ ಕಲಿಸುತ್ತಿರುವ ಮೊಹಮ್ಮದ್ ಹುಝಯ್ಫ್ ಎಂಬ 16 ವರ್ಷದ ಹುಡುಗ ನಿನ್ನೆ ಸಂಜೆಯಿಂದ (28-10-2023) ಕಾಣೆಯಾಗಿದ್ದನು.ಮನೆಯವರು, ಬಂಧುಗಳು ಆತಂಕಕ್ಕೆ ಈಡಾಗಿದ್ದರು. ಇದೀಗ ಆತ ಗೋವಾದಲ್ಲಿ ಸಿಕ್ಕಿದ ಮಾಹಿತಿಯನ್ನು ಬಾಲಕನ ಕುಟುಂಬ ಹಂಚಿಕೊಂಡಿದೆ.


ಮನೆಯಿಂದ ಹೊರ ಹೋದವನು ವಾಪಸ್ ಬರದೇ ಇರುವ ಕಾರಣ ಹುಡುಗನ ಹೆತ್ತವರು ತುಂಬಾ ಆತಂಕ, ಗಾಬರಿಗೊಂಡಿದ್ದರು. ಒಂದು ದಿನದ ಬಳಿಕ ಹುಡುಗ ಪತ್ತೆಯಾಗಿದ್ದು, ನಾಪತ್ತೆಯ ಕಾರಣ ತಿಳಿದುಬಂದಿಲ್ಲ.

ಬಹರೈನ್ ನಲ್ಲಿ ಅಪಘಾತ: ಭಾರತ ಮೂಲದ ಐವರು ಮೃತ್ಯು

Posted by Vidyamaana on 2023-09-03 15:23:02 |

Share: | | | | |


ಬಹರೈನ್ ನಲ್ಲಿ ಅಪಘಾತ: ಭಾರತ ಮೂಲದ ಐವರು ಮೃತ್ಯು

ಮನಾಮಾ: ಟ್ರಕ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕೇರಳದ ನಿವಾಸಿಗಳು ಹಾಗೂ ತೆಲಂಗಾಣದ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಬಹರೈನ್ ರಾಜಧಾನಿ ಮನಾಮಾದ ಶೇಖ್ ಖಲೀಫಾ ಬಿನ್ ಸಲ್ಮಾನ್ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.


ವಿ.ಪಿ.ಮಹೇಶ್ (33), ಮಲಪ್ಪುರಂನ ನಿವಾಸಿ ಜಗತ್ ವಾಸುದೇವನ್ (26), ತ್ರಿಶೂರ್ ನ ಚಾಲಕುಡಿಯ ಜಾರ್ಜ್ (28), ಕಣ್ಣೂರಿನ ಅಖಿಲ್ ರಘು (28), ತೆಲಂಗಾಣದ ಸುಮನ್ ರಾಜಣ್ಣ (27) ಮೃತರು ಎಂದು ಗುರುತಿಸಲಾಗಿದೆ.


ಸಲ್ಮಾಬಾದ್ ನ ಗಲ್ಫ್ ಏರ್ ಕ್ಲಬ್ ನಲ್ಲಿ ಮುಹರಕ್ ಅಲ್ ಹಿಲಾಲ್ ಆಸ್ಪತ್ರೆ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಪಾಲ್ಗೊಂಡ ನಂತರ ಐವರು ಕಾರಿನಲ್ಲಿ ವಾಪಸಾಗುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.


ಐವರು ಆಸ್ಪತ್ರೆ ಯಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದು‌‌ ಬಂದಿದೆ.

ಬಂಟ್ವಾಳ ಜಮೀಯ್ಯತುಲ್ ಫಲಾಹ್ ರೋಟರಿ ಕ್ಲಬ್ ನಿಂದ ಮೆಹ್ ಫಿಲೇ ಈದ್

Posted by Vidyamaana on 2024-05-15 19:42:42 |

Share: | | | | |


ಬಂಟ್ವಾಳ ಜಮೀಯ್ಯತುಲ್ ಫಲಾಹ್ ರೋಟರಿ ಕ್ಲಬ್ ನಿಂದ ಮೆಹ್ ಫಿಲೇ ಈದ್

ಬಂಟ್ವಾಳ ; ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್ ಫಿಲೇ ಈದ್ ಕಾರ್ಯಕ್ರಮವು ಮೇ 17 ಶುಕ್ರವಾರ ಸಂಜೆ 5.30ಕ್ಕೆ ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ನಲ್ಲಿ ನಡೆಯಲಿದೆ.

   ಎನ್ನಾರೈ ಉದ್ಯಮಿ, ಸಂಘಟಕ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಶಿಕ್ಷಣ ಹರಿಕಾರ, ಸಾಂಸ್ಕೃತಿಕ ಸಂಘಟಕ ಡಾ. ಎಂ. ಮೋಹನ್ ಆಳ್ವ, ಮಂಗಳೂರು ಉದ್ಯಮಿ, ಸೇವಾಕರ್ತೃ ರೋಹನ್ ಮೊಂತೇರೋ ಅವರಿಗೆ ಈದ್ ಅವಾರ್ಡ್ ನೀಡಿ ಗೌರವಿಸಲಾಗುವುದು.

ವಿದ್ಯಾಮಾತಾ ಅಕಾಡೆಮಿಯ ಮತ್ತೊಂದು ಸಾಧನೆ – ಆರು ಮಂದಿ ಅಗ್ನಿವೀರರಾಗಿ ಆಯ್ಕೆ

Posted by Vidyamaana on 2023-09-26 21:16:40 |

Share: | | | | |


ವಿದ್ಯಾಮಾತಾ ಅಕಾಡೆಮಿಯ ಮತ್ತೊಂದು ಸಾಧನೆ – ಆರು ಮಂದಿ ಅಗ್ನಿವೀರರಾಗಿ ಆಯ್ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ , ಇಲ್ಲಿನ ಎಪಿಎಂಸಿ ಹಿಂದೂಸ್ಥಾನ್ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿರುವ ಹೆಸರಾಂತ ವಿದ್ಯಾ ಮಾತಾ ಅಕಾಡೆಮಿ ಮೂಲಕವೇ ಅತ್ಯುತ್ತಮ ತರಬೇತಿ ಪಡೆದುಕೊಂಡು , ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅಗ್ನಿಪಥ್ ಮೂಲಕ 2023ರ ಸಾಲಿನ ನೇಮಕಾತಿಯಲ್ಲಿ ಅಕಾಡೆಮಿಯ ಆರು ಅಭ್ಯರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಪ್ರಥಮವಾಗಿ ಲಿಖಿತ ಪರೀಕ್ಷೆ ಬಳಿಕ, ದೈಹಿಕ ಸದೃಢತೆಯ ಪರೀಕ್ಷೆ ನಂತರ, ವೈದ್ಯಕೀಯ ಪರೀಕ್ಷೆಗಳನ್ನೂ ಎದುರಿಸುವಲ್ಲಿ ಎಲ್ಲಾ ಆಭ್ಯರ್ಥಿಗಳು ಸಮರ್ಥರಾಗಿದ್ದಾರೆ. ಇದೀಗ ಈ ಎಲ್ಲಾ ಅಭ್ಯರ್ಥಿಗಳೂ ಕೂಡ ಆಯ್ಕೆಗೊಂಡು ಭಾರತೀಯ ಸೇನೆಗೆ ಕೆಲ ದಿನಗಳಲ್ಲಿ ಸೇರ್ಪಡೆಯಾಗಲಿದ್ದಾರೆ.

ದ.ಕ ಮತ್ತು ಕೊಡುಗು ಈ ಎರಡು ಜಿಲ್ಲೆಯ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಭವಿಷ್, ಸುಳ್ಯ ತಾಲೂಕಿನ ದೇವಚಳ್ಳ ನಿವಾಸಿಗಳಾದ ಕಾರ್ತಿಕ್ ಸಿ.ಎನ್ ಹಾಗೂ ಅಭಿಷೇಕ್‌ ದೇವಚಳ್ಳ, ಮುರುಳ್ಯ ನಿವಾಸಿ ಸೃಜನ್ ರೈ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ನಿವಾಸಿ ಅಭಿಷೇಕ್ ಎ ಮತ್ತು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮ ನಿವಾಸಿ ದರ್ಶನ್ ಸಿವಿ ಆಯ್ಕೆಯಾಗಿರುವಂತಹ ವಿದ್ಯಾರ್ಥಿಗಳು.

ಇವರೆಲ್ಲಾರನ್ನೂ ಸೆ.28ರಂದು ಸುಳ್ಯದಲ್ಲಿ ಶುಭಾರಂಭಗೊಳ್ಳಲಿರುವ ವಿದ್ಯಾಮಾತಾ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ವೇಳೆ ಅತಿಥಿಗಳ ಮುಖೇನ, ಸನ್ಮಾನಿಸಲಾಗುವುದು ಎಂದು ವಿದ್ಯಾಮಾತಾ ಅಕಾಡೆಮಿಯ ಅಧ್ಯಕ್ಷರಾದ ಭಾಗ್ಯೇಶ್ ರೈ ತಿಳಿಸಿದ್ದಾರೆ.


ಉದ್ಯೋಗ ಆಕಾಂಕ್ಷಿಗಳಾಗಿರುವ ಯುವ ಜನಾಂಗಕ್ಕೆ ಅಗ್ನಿಪಥ್ ಯೋಜನೆ ಉತ್ತಮ ಅವಕಾಶ. ಅಗ್ನಿವೀರರಾಗುವವರಿಗೆ 6 ತಿಂಗಳ ತರಬೇತಿ ಮೂರುವರೆ ವರ್ಷ ಕರ್ತವ್ಯ ನಿಯೋಜನೆಯಿರುತ್ತದೆ.

ಪ್ರಾರಂಭಿಕ ಹಂತದಲ್ಲಿ 21 ಸಾವಿರ ವೇತನವೂ ಇದೆ. 4 ವರುಷದ ಕರ್ತವ್ಯ ಮುಗಿಸಿ, ಹಿಂತಿರುಗುವ ವೇಳೆ ವೇತನ 22 ಲಕ್ಷ ರೂಪಾಯಿ ಸಿಗುತ್ತೆ.

ಬಳಿಕ ವಿವಿಧ ನೇಮಕಾತಿಯಲ್ಲೂ ವಿಶೇಷ ಮೀಸಲಾತಿ, 25% ಅಭ್ಯರ್ಥಿಗಳನ್ನು ಅವರ ಸೇವೆಯನ್ನು ಅವಲಂಬಿಸಿ ಕರ್ತವ್ಯದಲ್ಲಿ ಮುಂದುವರಿಸುವಿಕೆಯೂ ಇದೆ. ಯುವ ಸಮುದಾಯ ದಾರಿ ತಪ್ಪುತ್ತಿರುವ ಈ ಕಾಲಘಟ್ಟದಲ್ಲಿ, ದೇಶ ಸೇವೆ ಮಾಡುವ ಮೂಲಕ ಯುವ ಜನತೆ ಬದುಕನ್ನು ಭದ್ರವಾಗಿಸಲು ಇದಕ್ಕಿಂತ ಉತ್ತಮ ಯೋಜನೆ ಇನ್ನೊಂದಿಲ್ಲ.

ಭಾಗ್ಯೇಶ್ ರೈ

ಅಧ್ಯಕ್ಷರು ವಿದ್ಯಾಮಾತಾ ಅಕಾಡೆಮಿ.

Recent News


Leave a Comment: