ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


Breaking News: ಬಿಸಿಲಲ್ಲಿ ನಿಂತಿದ್ದ ಎಲೆಕ್ನಿಕ್ ಬಸ್ ಬೆಂಕಿಗಾಹುತಿ!

Posted by Vidyamaana on 2024-04-05 22:48:26 |

Share: | | | | |


Breaking News: ಬಿಸಿಲಲ್ಲಿ ನಿಂತಿದ್ದ ಎಲೆಕ್ನಿಕ್ ಬಸ್ ಬೆಂಕಿಗಾಹುತಿ!

ಬೆಂಗಳೂರು :- ದಿನೇದಿನೆ ತಾಪಮಾನ ಹೆಚ್ಚಳದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ , , ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟದಂತಹ ಅವಘಡಗಳು ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಬಿಸಿಲಿಗೆ ನಿಂತ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಬಿಡದಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋದಲ್ಲಿ ನಡೆದಿದೆ.

ಶಾಲೆಗೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಡಿ.ಕೆ ಶಿವಕುಮಾರ್

Posted by Vidyamaana on 2023-12-01 12:44:28 |

Share: | | | | |


ಶಾಲೆಗೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಡಿ.ಕೆ ಶಿವಕುಮಾರ್

ಬೆಂಗಳೂರು: ತಮ್ಮ ನಿವಾಸದ ಎದುರು ರಸ್ತೆಯಿಂದಾಚೆಯಿರುವ ಬೇಬಿ ಸಿಟ್ಟಿಂಗ್ ಗೆ ಬಾಂಬ್ ಬೆದರಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ನೀವ್ ಬೇಬಿ ಸಿಟ್ಟಿಂಗ್ಗೆ ಇ-ಮೇಲ್ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದಾರೆ.


ಬಳಿಕ ಪ್ರತಿಕ್ರಿಯಿಸಿ, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ, ಟಿವಿಯಲ್ಲಿ ವಿಷಯ ತಿಳಿದು ಗಾಬರಿ ಆದೆ. ಇದೊಂದು ಹುಸಿ ಕರೆ ಅಂತ ಮೇಲ್ನೋಟಕ್ಕೆ ಗೊತ್ತಾಗ್ತಿದೆ. 8-10 ಬಾರಿ ಹೀಗೆ ಹುಸಿ ಕರೆ ಮಾಡ್ತಾರೆ ಯಾವಗಲಾದರೂ ನಿಜವಾಗಿಯೂ ಬಾಂಬ್ ಇಡಬಹುದು ಯಾವುದನ್ನೂ ಕಡೆಗಣಿಸೋಕೆ ಆಗಲ್ಲ ಎಂದು ಹೇಳಿದ್ದಾರೆ.

ಹರ್ಷ ಶೋರೂಮ್ ಗೋದಾಮಿಗೆ ಅಗ್ನಿ ದುರಂತ- ಕೋಟ್ಯಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

Posted by Vidyamaana on 2024-04-02 05:48:30 |

Share: | | | | |


ಹರ್ಷ ಶೋರೂಮ್ ಗೋದಾಮಿಗೆ ಅಗ್ನಿ ದುರಂತ- ಕೋಟ್ಯಾಂತರ   ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಪುತ್ತೂರು: ಪುತ್ತೂರು ದರ್ಬೆ ಸಂತೃಪ್ತಿ ಹೋಟೆಲ್ ಹಿಂಬದಿ ಹರ್ಷ ಶೋರೂಮ್  ಗೋದಾಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೋಟ್ಯಾಂತರ  ಮೌಲ್ಯದ ಸೊತ್ತುಗಳು ಹಾನಿಗೊಂಡಿವೆ.

ಸೌಜನ್ಯ ಪ್ರಕರಣ:ತಿಮರೋಡಿ ನೇತೃತ್ವದಲ್ಲಿಂದು ಪ್ರತಿಭಟನೆ ಹಿನ್ನಲೆ

Posted by Vidyamaana on 2023-09-03 01:23:01 |

Share: | | | | |


ಸೌಜನ್ಯ ಪ್ರಕರಣ:ತಿಮರೋಡಿ ನೇತೃತ್ವದಲ್ಲಿಂದು ಪ್ರತಿಭಟನೆ ಹಿನ್ನಲೆ

ಬೆಳ್ತಂಗಡಿ :ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ದಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೆಳ್ತಂಗಡಿಯ ತಾಲೂಕು ಆಡಳಿತ ಸೌಧದ ಎದುರು ಸೆ.3ರಂದು ಬೆಳಗ್ಗಿನಿಂದ ಮಧ್ಯಾಹ್ನ ತನಕ ನಡೆಯುವ ಬೃಹತ್‌ ಪ್ರತಿಭಟನೆಯಲ್ಲಿ ಅತ್ಯಧಿಕ ಜನಸ೦ದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೇಟೆಯಲ್ಲಿ ಸೆ.3ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಅಪರ ಜಿಲ್ಲಾಧಿಕಾರಿ


ಆದೇಶ ಹೊರಡಿಸಿದ್ದಾರೆ. ಉದ್ದೇಶಿತ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಕೋರಿ ಬೆಳ್ತ೦ಗಡಿ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ -13 ಮಾರ್ಗದಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಿ ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಡಾ|ಜಿ.ಸಂತೋಷ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.ಸೆ.3ರಂದು ನಡೆಯುವ ಪ್ರತಿಭಟನಾ ಸಭೆಗೆ ಬೆಳ್ತಂಗಡಿ ಪೇಟೆಯಲ್ಲಿ ಅತ್ಯಧಿಕ ಜನಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಸಮಯದಲ್ಲಿ ಬೆಳ್ತಂಗಡಿ ಪೇಟೆಯನ್ನು ಹಾದು ಹೋಗುವ ಕಡೂರು-ಬಂಟ್ವಾಳ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಬೆಳಿಗ್ಗೆ ಗಂಟೆ 9ರಿಂದ ಸಂಜೆ 5 ಗಂಟೆವರೆಗೆ ಕೊಳ್ಳೂರು ಕ್ರಾಸ್ ರಸ್ತೆ ಮೂಲಕ ಅದ್ರುಪರಾಲ್ ಮುಖಾಂತರ ಪರಪ್ಪು ಗೇರುಕಟ್ಟೆಯಾಗಿ ಮಂಗಳೂರು ಕಡೆಗೆ ಸಂಚರಿಸಲು, ಮಂಗಳೂರುನಿಂದ ಉಜಿರೆ ಕಡೆಗೆ ಬರುವ ಎಲ್ಲಾ ವಾಹನಗಳನ್ನು ಗುರುವಾಯನಕೆರೆಯಲ್ಲಿ, ಉಪ್ಪಿನಂಗಡಿ ರಸ್ತೆ ಮೂಲಕ ಪರಪ್ಪು ಕ್ರಾಸ್‌ನಲ್ಲಿ ಅದ್ರುಪೆರಾಲ್ ಮುಖಾಂತರ ಸಂಚರಿಸಲು ಮತ್ತು ಉಳಿದ ಸಣ್ಣ ವಾಹನಗಳನ್ನು ಚರ್ಚ್ ಕ್ರಾಸ್‌ನಿಂದ ಕನ್ನಾಜೆ ಪಡ್ಲಾಡಿ ಲಾಯಿಲ ಮಾರ್ಗವಾಗಿ ಉಜಿರೆ ಕಡೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.


ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ದಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಸೆ.3ರಂದು ಬೆಳಿಗ್ಗೆ 9ರಿಂದ ಸಂಜೆ 3ರ ತನಕ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಸಭೆಯನ್ನು ಬೆಳ್ತ೦ಗಡಿ ತಾಲೂಕು ಆಡಳಿತ ಸೌಧದ ಎದುರು ನಡೆಸಲು ಉದ್ದೇಶಿಸಿರುತ್ತಾರೆ.ಸದ್ರಿ ಸಭೆಗೆ ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್, ಗಿರೀಶ್ ಮಟ್ಟಣ್ಣವರ, ಸಾಮಾಜಿಕ ಹೋರಾಟಗಾರರು, ಶ್ರೀಮತಿ ಪ್ರಸನ್ನ ರವಿ, ಸಾಮಾಜಿಕ ಹೋರಾಟಗಾರ್ತಿ, ಶ್ರೀಮತಿ ಗೀತಾ, ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ಹಾಗೂ ಒಡನಾಡಿ ಸಂಸ್ಥೆಯ ಮುಖ್ಯಸ್ಥರು, ರಾಜ್ಯ ಒಕ್ಕಲಿಗ ಸಂಘದ ಮುಖ್ಯಸ್ಥರು ಮುಂತಾದವರು ಭಾಗವಹಿಸಲಿದ್ದು, ಅತ್ಯಧಿಕ ಜನಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಕೋರಿ ಬೆಳ್ತಂಗಡಿ ತಹಸಿಲ್ದಾರ್ ಜಿಲ್ಲಾಧಿಕಾರಿಯವರಿಗೆ - ಪ್ರಸ್ತಾವನೆ ಸಲ್ಲಿಸಿದ್ದರು.

ಶಾಪಿಂಗ್ ವೇಳೆ ಮಾಲ್ ನಲ್ಲಿ ಕುಸಿದು ಬಿದ್ದ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಪತ್ನಿ!

Posted by Vidyamaana on 2024-09-01 09:05:23 |

Share: | | | | |


ಶಾಪಿಂಗ್ ವೇಳೆ ಮಾಲ್ ನಲ್ಲಿ ಕುಸಿದು ಬಿದ್ದ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಪತ್ನಿ!

ಬೆಂಗಳೂರು : ನಗರದಲ್ಲಿ ಶಾಪಿಂಗ್ ಗೆ ತೆರಳಿದ್ದಂತ ವೇಳೆಯಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ಮಾಜಿ ಕೇಂದ್ರ ಸಚಿವ ಸದಾನಂದಗೌಡ ಅವರ ಪತ್ನಿ ಡಾಟಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪೊಲೀಸರಿಂದ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್​ ರೂಂ: ವಿಜಯೇಂದ್ರ

Posted by Vidyamaana on 2023-11-26 22:14:31 |

Share: | | | | |


ಪೊಲೀಸರಿಂದ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್​ ರೂಂ: ವಿಜಯೇಂದ್ರ

ಬೆಂಗಳೂರು: ಪೊಲೀಸರ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ದೂರು ಸ್ವೀಕರಿಸಲು ಮತ್ತು ಅವರಿಗೆ ಕಾನೂನು ನೆರವು ನೀಡಲು ವಿರೋಧ ಪಕ್ಷ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್​ ರೂಂಗಳನ್ನು ತೆರೆಯಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.


ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಜಯೇಂದ್ರ, ಈ ಧೋರಣೆಯ ವಿರುದ್ಧ ಮಾತನಾಡಿದರೆ ಪೊಲೀಸ್ ಮೂಲಕ ಕಿರುಕುಳ ನೀಡಲಾಗುತ್ತೆ ಎಂದಿದ್ದಾರೆ. ಅಂತಹ ಕಾರ್ಯಕರ್ತರಿಗೆ ಬಿಜೆಪಿ ಕಾನೂನು ನೆರವು ನೀಡುತ್ತದೆ ಎಂದು X ಮೂಲಕ ಶಿಕಾರಿಪುರ ಶಾಸಕರೂ ಆದ ವಿಜಯೇಂದ್ರ ತಿಳಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸೋಷಿಯಲ್ ಮೀಡಿಯಾ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಕಾರ್ಯಕರ್ತರು ಹಿಂದೆ ಸರಿಯುವ ಅಗತ್ಯವಿಲ್ಲ. ನಿಮ್ಮ ನೆರವಿಗೆ ನಾವಿದ್ದೇವೆ ಎಂದೂ ವಿಜಯೇಂದ್ರ ಹೇಳಿದ್ದಾರೆ.


ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಪೊಲೀಸರಿಗೆ ಅಧಿಕಾರ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿರುವ ನಮ್ಮ ಕಾರ್ಯಕರ್ತರ ಬಂಧುಗಳಿಗೆ ಯಾವುದೇ ತೊಂದರೆ, ಬೆದರಿಕೆ, ಕಿರುಕುಳ ಎದುರಾದರೆ ತಕ್ಷಣವೇ ಪಕ್ಷ ನೆರವಿಗೆ ಬರುತ್ತದೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ.

Recent News


Leave a Comment: