ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Posted by Vidyamaana on 2023-08-06 03:15:23 |

Share: | | | | |


ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ಪಕ್ಷದ ಅಭಿವೃದ್ದಿಯಾಗಬೆಕಾದರೆ ಕಾರ್ಯಕರ್ತರು ಮುಖ್ಯ, ಪಕ್ಷದಲ್ಲಿ ಕಾರ್ಯಕರ್ತರ ನೋವು, ನಲಿವುಗಳಿಗೆ ಸ್ಪಂದನೆ ಮಾಡುವ ಮೂಲಕ ಅವರನ್ನು ಗೌರವಿಸುವ ಕೆಲಸ ಮಾಡಬೇಕು ಮತ್ತು ಕಾರ್ಯಕರ್ತರಿಗೆ ಪಕ್ಷದಲ್ಲಿ ಎಂದೆಂದೂ ಸ್ಥಾನಮಾನ ಇದ್ದೇ ಇದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಆ. ೫ ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕರ್ತರು ಕಳೆದ ಚುನಾವಣೆಯಲ್ಲಿ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಹಗಲಿರುಳು ದುಡಿದ ಪರಿಣಾಮ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇವಲ ನಾಯಕರಿಂದ ಮಾತ್ರ ಏನೂ ಮಾಡಲು ಸಾಧ್ಯವಿಲ್ಲ. ಪುತ್ತೂರಿನಲ್ಲಿ , ರಾಜ್ಯದಲ್ಲಿ ಕಾಂಗ್ರೆಸ್ ಇಂದು ಅಧಿಕಾರಕ್ಕೆ ಬಂದಿದ್ದರೆ ಅದರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಬೆವರು ಇದೆ ಅದನ್ನು ನಾವು ಎಂದೂ ಮರೆಯಬಾರದು. ಪುತ್ತೂರು ಕ್ಷೇತ್ರದಲ್ಲಿ ಯಾವುದೇ ಅನುದಾನ ಅಥವಾ ಅಭಿವೃದ್ದಿ ಕೆಲಸಗಳನ್ನು ಮಾಡುವ ಮುನ್ನ ನಾನು ಬೂತ್ ಮತ್ತು ವಲಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಅಥವಾ ಅವರ ಅನುಮತಿಯಿಂದಲೇ ಅನುದಾನವನ್ನು ಇಡುವ ಕೆಲಸವನ್ನು ಮಾಡುತ್ತಿದ್ದೇನೆ. ಪಕ್ಷದ ವಿವಿಧ ಹುದ್ದೆಗಳು ಸೇರಿದಂತೆ ವಿವಿಧ ಸಮಿತಿಗಳಿಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನವನ್ನು ನೀಡಲಾಗುವುದು ಇದರಲ್ಲಿ ಯವುದೇ ಅನುಮಾನ ಬೇಡ. ಪಕ್ಷಕ್ಕಾಗಿ ಯಾರು ಕೆಲಸ ಮಾಡಿದ್ದಾರೆ ಎಂಬುದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಹಿತ ಎಲ್ಲರಿಗೂ ಗೊತ್ತಿದೆ ಅವರ ಮನಸ್ಸಿಗೆ ನೋವಾಗುವ ಕೆಲಸವನ್ನು ಪಕ್ಷ ಎಂದಿಗೂ ಮಾಡಬಾರದು ಎಂದು ಹೇಳಿದರು.

ಕಾರ್ಯಕರ್ತರೇ ಪಕ್ಷದ ಶಕ್ತಿ: ಎಂ ಬಿ ವಿಶ್ವನಾಥ ರೈ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ಪಕ್ಷದ ಕಾರ್ಯಕರ್ತರೇ ಪಕ್ಷದ ಶಕ್ತಿಯಾಗಿದ್ದಾರೆ. ಪಕ್ಷದ ಅಧಿಕಾರದಲ್ಲಿರಲಿ, ಇಲ್ಲದಿರಲಿ ಕಾರ್ಯಕರ್ತರು ಪಕ್ಷದಲ್ಲೇ ಇದ್ದುಕೊಂಡು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಬಾರಿಯ ಪುತ್ತೂರು ಕಾಂಗ್ರೆಸ್ ಗೆಲವು ಸಾಕ್ಷಿಯಾಗಿದೆ. ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವ ಮೂಲಕ ಶಾಸಕರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿರುವುದು ಅವರಿಗೆ ನೈತಿಕ ಶಕ್ತಿ ತುಂಬಿದಂತಾಗಿದೆ. ಪ್ರತೀ ಬೂತ್ ವಲಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಸರಕಾರ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇದು ಪಕ್ಷಕ್ಕೆ ಹೆಚ್ಚಿನ ಬಲವನ್ನು ತಂದುಕೊಡಲಿದೆ ಎಂದು ಹೇಳಿದರು.


ಕೋಳಿಅಂಕಕ್ಕೆ ಪೊಲೀಸರು ಲಂಚ ಕೇಳುತ್ತಾರೆ

ಸಭೆಯಲ್ಲಿ ಮಾತನಾಡಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಮಾತನಾಡಿ ಕೋಳಿ ಅಂಕ ಮಾಡಬೇಕಾದರೆ ಪೊಲೀಸರು ೩೦ ರಿಂದ ೪೦ ಸಾವಿರ ಲಂಚ ಕೇಳುತ್ತಾರೆ ಇದು ನಿಲ್ಲಬೇಕಾಗಿದೆ. ಕದ್ದ ಅಡಿಕೆಯನ್ನು ಖರೀದಿ ಮಾಡಿದ್ದಾರೆ ಎಂದು ಕೌಡಿಚ್ಚಾರಿನ ಅಂಗಡಿ ಮಾಲಕನಿಂದ ಸಂಪ್ಯ ಪೊಲೀಸರು ೫ ಸಾವಿರ ಲಂಚ ಪಡೆದುಕೊಂಡಿದ್ದಾರೆ, ಸಂಪ್ಯ ಪೊಲೀಸ್ ಪೇದೆಯೊಬ್ಬರು ಈ ಲಂಚವನ್ನು ಪಡೆದುಕೊಂಡಿದ್ದು ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಶಾಸಕರು ಲಂಚ ಪಡೆದಿದ್ದೇ ಆದಲ್ಲಿ ಅಂಥವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.


೨೫ ದಿನಾಂಕದ ನಂತರ ಹೋದರೆ ಅಕ್ಕಿ ಕೊಡುವುದಿಲ್ಲ

ಪ್ರತೀ ತಿಂಗಳ ೨೫ ನೇ ತಾರೀಕಿನ ನಂತರ ರೇಶನ್ ಅಂಗಡಿಗೆ ಹೋದರೆ ಅವರು ಅಕ್ಕಿ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪಾಣಾಜೆಯ ಕಾರ್ಯಕರ್ತರೋರ್ವರು ಶಾಸಕರಲ್ಲಿ ಸೂರು ನೀಡಿದರು. ಪಾಣಜೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಲಾಯಿತು.ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಕಾರ್ಯಕರ್ತರು ಶಾಸಕರ ಜೊತೆ ಸಂವಾದ ನಡೆಸಿದರು. ಕಾಂಗ್ರೆಸ್ ಪಕ್ಷದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

Posted by Vidyamaana on 2024-08-28 13:19:17 |

Share: | | | | |


ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ನವದೆಹಲಿ: ಸಿಸಿಐ ಕಾರ್ಯದರ್ಶಿ ಜಯ್‌ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಯ್‌ ಶಾ ಅವರಿಗೆ ಐಸಿಸಿ ಮಂಡಳಿಯಿಂದ ಭಾರಿ ಬೆಂಬಲ ಸಿಕ್ಕಿದ್ದು,16ರಲ್ಲಿ 15 ಸದಸ್ಯರು ಜಯ್‌ ಶಾ ಪರವಾಗಿದ್ದರು. ಇದರಿಂದಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ ಮೊದಲೇ ಖಚಿತವಾಗಿತ್ತು, ಅದು ಅಧಿಕೃತವಾಗಿದೆ. ನಾಮನಿರ್ದೇಶನ ಪ್ರಕ್ರಿಯೆಯು ಆಗಸ್ಟ್ 27 ರಂದು ಮುಕ್ತಾಯಗೊಂಡಿದ್ದು, ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಗೆ ಜಯ್‌ ಶಾ ಪಾತ್ರವಾಗಿದ್ದಾರೆ.

ಪ್ರಯಾಣಿಕರ ಗಮನಕ್ಕೆ : ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂ ಕುಸಿತ, 10 ರೈಲುಗಳ ಸಂಚಾರ ರದ್ದು

Posted by Vidyamaana on 2024-08-12 09:22:11 |

Share: | | | | |


ಪ್ರಯಾಣಿಕರ ಗಮನಕ್ಕೆ : ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂ ಕುಸಿತ, 10 ರೈಲುಗಳ ಸಂಚಾರ ರದ್ದು

ಬೆಂಗಳೂರು : ಈಗಾಗಲೇ ಸಕಲೇಶಪುರ - ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಎರಡು ರೈಲುಗಳ ವೇಳೆ ಕಡಿತ, ಮತ್ತೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.


ರದ್ದುಗೊಂಡ ರೈಲುಗಳು

ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು ಕಲ್ಲಾಪು ಹೆದ್ದಾರಿಯಲ್ಲಿ ದುರ್ಘಟನೆ

Posted by Vidyamaana on 2023-09-25 16:27:29 |

Share: | | | | |


ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು ಕಲ್ಲಾಪು ಹೆದ್ದಾರಿಯಲ್ಲಿ ದುರ್ಘಟನೆ

ಉಳ್ಳಾಲ : ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರಾ.ಹೆ. 66ರ ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ನಡೆದಿದೆ. 


ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿ ಸುಮ ನಾರಾಯಣ ಗಟ್ಟಿ(51) ಮೃತಪಟ್ಟ ಮಹಿಳೆ. ಸುಮ ಅವರು ನಿನ್ನೆ ಮಧ್ಯಾಹ್ನ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ಕುಟಂಬದ ತರವಾಡು ಮನೆಯಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಯಂಕಾಲ ತಮ್ಮನ‌ ಜತೆ ಸ್ಕೂಟರಿನಲ್ಲಿ ಜಪ್ಪಿನ ಮೊಗರುವಿಗೆ ತೆರಳಿ ಅಸೌಖ್ಯದಿಂದ ಬಳಲುತ್ತಿದ್ದ ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದರು. 


ರಾ.ಹೆ.66 ರ ಕಲ್ಲಾಪು ನಾಗನ ಕಟ್ಟೆಯ ಬಳಿ ಭಾನುವಾರ ರಾತ್ರಿ ಸುಮ ಸ್ಕೂಟರಿನಿಂದ ಕೆಳಗೆ ಎಸೆಯಲ್ಪಟ್ಟು ಮೃತ ಪಟ್ಟಿದ್ದಾರೆ. ಸುಮ ಅವರ ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಮೃತ ಸುಮ ಗಟ್ಟಿ ಅವರು ಮಧೂರಿನ ಗಟ್ಟಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮೃತರುಪತಿ, ಎರಡು ಹೆಣ್ಣು, ಒಂದು ಗಂಡು ಮಗನನ್ನ ಅಗಲಿದ್ದಾರೆ.

ಕಾಂಗ್ರೆಸ್ ವಿಜಯೋತ್ಸವದಲ್ಲಿ ಪುತ್ತಿಲ ಅಭಿಮಾನಿಗಳು

Posted by Vidyamaana on 2023-05-14 15:17:41 |

Share: | | | | |


ಕಾಂಗ್ರೆಸ್ ವಿಜಯೋತ್ಸವದಲ್ಲಿ ಪುತ್ತಿಲ ಅಭಿಮಾನಿಗಳು

ಪುತ್ತೂರು: ಶನಿವಾರ ಸಂಜೆ ಕಾಂಗ್ರೆಸ್ ಗೆಲುವಿನ ಶೋಭಾಯಾತ್ರೆ ನಡೆಯುತ್ತಿತ್ತು. ಅಷ್ಟರಲ್ಲಿ ಎದುರಿನಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಕಾರು ಆಗಮಿಸಿತು. ಹಿಂದುತ್ವ – ಕಾಂಗ್ರೆಸ್ ಕಾರ್ಯಕರ್ತರು ಎದುರು – ಬದುರಾದರೆ ಹೇಗೆ? ಆತಂಕ ಬೇಡ. ಅರುಣ್ ಕುಮಾರ್ ಪುತ್ತಿಲ ಅವರು ಜನನಾಯಕ ಎನ್ನುವುದು ಮತ್ತೊಮ್ಮೆ ಸಾಬೀತಾಗುವ ಪ್ರಸಂಗಕ್ಕೆ ಈ ಘಟನೆ ಸಾಕ್ಷಿಯಾಯಿತು.

ಕಾಂಗ್ರೆಸ್ ಕಾರ್ಯಕರ್ತರು, ಪುತ್ತಿಲ ಅವರಿಗೆ ಕೈ ಬೀಸಿ ತಮ್ಮ ಪ್ರೀತಿ ತೋರಿದರು. ಅರುಣ್ ಕುಮಾರ್ ಪುತ್ತಿಲ ಅವರು ಕೈಮುಗಿದು, ಅವರ ಪ್ರೀತಿಗೆ ತಲೆಬಾಗಿದರು. ಇನ್ನೂ ಕೆಲವರು ಪುತ್ತಿಲ ಅವರಿಗೆ ಕೈ ಕುಲುಕಿ ತಮ್ಮ ಪ್ರೀತಿಯನ್ನು ತೋರಿದರು.

ಸುನೀಲ್ ಜಾರ್ಜ್ ಡಿ ಸೋಜಾರಿಗೆ ಡಾಕ್ಟರೇಟ್ ಪದವಿ

Posted by Vidyamaana on 2024-07-17 14:48:25 |

Share: | | | | |


ಸುನೀಲ್ ಜಾರ್ಜ್ ಡಿ ಸೋಜಾರಿಗೆ  ಡಾಕ್ಟರೇಟ್ ಪದವಿ

ಮಂಗಳೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಮಾಜಿ ಅಸಿಸ್ಟೆಂಟ್ ಫ್ರೊಫೆಸರ್ ಸುನೀಲ್ ಜಾರ್ಜ್ ಡಿಸೋಜಾರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. 

M.Com, MHRM, PGDJMC, M.Phil ಪದವೀಧರರಾದ ಕಾಮರ್ಸ್ ವಿಭಾಗದ ಫ್ರೊಫೆಸರ್ ಆಗಿದ್ದ ಸುನೀಲ್ ಅವರು ಮಂಡಿಸಿದ್ದ ತಿರುಚ್ಚಿನಪಳ್ಳಿ ಭಾರತೀದಾಸನ್ ಯುನಿವರ್ಸಿಟಿ   Effect of Emotional Intelligence on Performance and Organizational Citizenship Behaviours: Personality and Lenonership Style as Moderators of the Colleges in Mangalore Diocese ವಿಷಯಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.



Recent News


Leave a Comment: