ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಕುಕ್ಕುಜಡ್ಕದ ನವೀನ್ ಸಂಕೇಶ ಭೀಕರ ಅಪಘಾತಕ್ಕೆ ಬಲಿ

Posted by Vidyamaana on 2023-05-23 15:30:40 |

Share: | | | | |


ಕುಕ್ಕುಜಡ್ಕದ ನವೀನ್ ಸಂಕೇಶ ಭೀಕರ ಅಪಘಾತಕ್ಕೆ ಬಲಿ

ಪುತ್ತೂರು: ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಅರಂತೋಡು ಗೂನಡ್ಕದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ

ಮೋದಿ ಪದಗ್ರಹಣದ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿತ ಕೇಸ್ : ಪೊಲೀಸ್ ಕಮಿಷನರ್ ಅಗರ್ವಾಲ್ ಹೇಳಿದ್ದೇನು?

Posted by Vidyamaana on 2024-06-11 17:13:19 |

Share: | | | | |


ಮೋದಿ ಪದಗ್ರಹಣದ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿತ ಕೇಸ್ : ಪೊಲೀಸ್ ಕಮಿಷನರ್ ಅಗರ್ವಾಲ್ ಹೇಳಿದ್ದೇನು?

ಮಂಗಳೂರು : ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನದಂದು ಮಂಗಳೂರಿನ ಬೋಳಿಯಾರು ನಲ್ಲಿ ವಿಜಯೋತ್ಸವ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್  ಅನುಪಮ ಅಗರ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಹೇಳಿಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ 20 ಜನರನ್ನು ವಶಕ್ಕೆ ಪಡೆದಿದ್ದವು. ಚಾಕು ಇರಿತ ಪ್ರಕರಣ ಸಂಬಂಧ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ. ಇನ್ನುಳಿದವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಮೂರು ತಂಡಗಳ ಮೂಲಕ ತನಿಖೆ ನಡೆಯುತ್ತಿದೆ ಎಂದರು.

ಬಸ್ ನಿಲ್ದಾಣ ಮುಂಭಾಗ ಬಸ್ ಆಮ್ನಿ ಅಪಘಾತ

Posted by Vidyamaana on 2023-07-27 05:52:10 |

Share: | | | | |


ಬಸ್ ನಿಲ್ದಾಣ ಮುಂಭಾಗ ಬಸ್ ಆಮ್ನಿ ಅಪಘಾತ

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಬಸ್ ಹಾಗೂ ಆಮ್ನಿ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದ್ದು, ಘಟನೆಗೆ ಕೆ.ಎಸ್.ಆರ್.ಟಿ.ಸಿ.ಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.

ಪುತ್ತೂರು ಕೆ.ಎಸ್.ಆರ್.ಟಿ.ಸಿ. ಮುಂಭಾಗ ತೀರಾ ಇಕ್ಕಟ್ಟಿನ ರಸ್ತೆ. ಹಾಗಿದ್ದು, ಕೆ.ಎಸ್.ಆರ್.ಟಿ.ಸಿ. ಮುಂಭಾಗ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ಇನ್ನಷ್ಟು ಸಮಸ್ಯೆಗೆ ಕಾರಣರಾಗಿದ್ದಾರೆ. ಇದರ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ, ಸ್ಪಂದಿಸದೇ ಇರುವುದು ಘಟನೆಗೆ ಕಾರಣ.

ಕೆ.ಎಸ್.ಆರ್.ಟಿ.ಸಿ. ಮುಂಭಾಗ ನಾಲ್ಕು ರಸ್ತೆ ಸಂಧಿಸುವ ಪ್ರಮುಖ ಸ್ಥಳ. ಇದರಲ್ಲಿ ಎರಡು ರಸ್ತೆ ವನ್ ವೇ ಆಗಿರುವುದು ಸಮಾಧಾನದ ಸಂಗತಿ. ಹಾಗೆಂದು ವಾಹನಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಹಳೆ ಪೋಸ್ಟ್ ಕಚೇರಿ ಸಂಪರ್ಕಿಸುವ ರಸ್ತೆ, ಮುಖ್ಯರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ, ನೆಲ್ಲಿಕಟ್ಟೆಯಿಂದ ಬರುವ ರಸ್ತೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಬರುವ ರಸ್ತೆ. ಈ ನಾಲ್ಕು ರಸ್ತೆಗಳ ವಾಹನಗಳು ಬಂದು ಸೇರುವ ಜಂಕ್ಷನ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ.

ಇಷ್ಟು ಒತ್ತಡವಿದ್ದರೂ, ಕೆ.ಎಸ್.ಆರ್.ಟಿ.ಸಿ.ಗೆ ಬರುವ ಖಾಸಗಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲ. ಇದ್ದ ಸ್ಥಳವನ್ನು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ಬಂದ್ ಮಾಡಿದ್ದಾರೆ. ಹಾಗೆಂದು ಬಸ್ ಟರ್ಮಿನಲ್ ಒಳಗಡೆಗೆ ಖಾಸಗಿ ವಾಹನಗಳ ಪ್ರವೇಶ ನಿಷಿದ್ಧ. ಹಾಗಾದರೆ ಸಾರ್ವಜನಿಕರು ಬಂದಿಳಿಯಲು ವಾಹನ ನಿಲ್ಲಿಸುವುದು ಎಲ್ಲಿ? ಬಸ್ ಟರ್ಮಿನಲಿನ ಮುಂಭಾಗದ ರಸ್ತೆಯಲ್ಲೇ ನಿಲ್ಲಿಸಬೇಕಷ್ಟೇ. ಹೆಚ್ಚಲ್ಲ, ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಲು ರಸ್ತೆಯಲ್ಲೇ ನಿಲ್ಲಿಸುವುದು ಇಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ.

ಹೀಗಿರುವಾಗ ಮುಂಭಾಗದ ಅಗಲ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳು ಓಡಾಡುವುದಾದರೂ ಹೇಗೆ? ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕೇಳಿಯೂ ಕೇಳದಂತೆ, ನೋಡಿಯೂ ನೋಡದಂತೆ ಇರುವುದಾದರೂ ಯಾಕೆ? ಕೆ.ಎಸ್.ಆರ್.ಟಿ.ಸಿ.ಯ ತಪ್ಪು ನಿರ್ಧಾರಕ್ಕೆ ಗುರುವಾರ ಬೆಳಿಗ್ಗೆ ಅಪಘಾತ ನಡೆದಿದ್ದು, ಅಮಾಯಕರು ಕಷ್ಟ ಅನುಭವಿಸುವಂತಾಯಿತು.

ಬ್ಯಾರಿಕೇಡ್ ಹಾಕಿದ್ದಾದರೂ ಯಾಕೆ?

ಕೆ.ಎಸ್.ಆರ್.ಟಿ.ಸಿ. ಮುಂಭಾಗ ಬ್ಯಾರಿಕೇಡ್ ಹಾಕಲು ಒಂದು ಕಾರಣವಿತ್ತು. ಅಂದು ಅವಳಿ ವೀರರಾದ ಕೋಟಿ – ಚೆನ್ನಯರ ಹೆಸರನ್ನು ಟಸ್ ಟರ್ಮಿನಲಿಗೆ ನಾಮಕಾರಣ ಮಾಡುವ ದಿನ. ಸಚಿವರು, ಶಾಸಕರು ಆಗಮಿಸಬೇಕಾಗಿತ್ತು. ಹಾಗೇ ಬರುವಾಗ ನಿಲ್ದಾಣದ ಮುಂಭಾಗ ಒತ್ತಡ ನಿರ್ಮಾಣವಾಯಿತು. ಈ ಒಂದೇ ಕಾರಣಕ್ಕೆ, ಬಸ್ ಟರ್ಮಿನಲ್ ಮುಂಭಾಗ ಬ್ಯಾರಿಕೇಡ್ ಹಾಕಲಾಯಿತು. ಅದನ್ನು ಒಂದು ದಿನಕ್ಕೆ ಸೀಮಿತ ಮಾಡಬಹುದಿತ್ತು. ಆದರೆ ಹಾಗೇ ಮಾಡಲಿಲ್ಲ. ಅದನ್ನೇ ಶಾಶ್ವತವಾಗಿಸುವ ಯೋಜನೆ ಅಧಿಕಾರಿಗಳದ್ದು.

ಕಾನೂನನ್ನು ಬಡವರ ಮೇಲೆ ಹೇರುವ ಅಧಿಕಾರಿಗಳು, ತಮ್ಮ ವ್ಯಾಪ್ತಿಗೆ ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳುವುದು ಮಾತ್ರ ವಿಪರ್ಯಾಸ. ವಾಣಿಜ್ಯ ಸಂಕೀರ್ಣದ ಮುಂಭಾಗದ ಪಾರ್ಕಿಂಗ್ ಜಾಗವನ್ನು ಮುಚ್ಚುವಂತೆಯೇ ಇಲ್ಲ. ಅಥವಾ ತನ್ನ ಗ್ರಾಹಕರಿಗೆ ಮಾತ್ರ ಎಂದು ಬೋರ್ಡ್ ಹಾಕುವಂತೆ ಇಲ್ಲ ಎಂದು ಇತ್ತೀಚೆಗೆ ನ್ಯಾಯಾಲಯ ಸೂಚನೆ ನೀಡಿರುವುದೂ ಕೂಡ ಇಲ್ಲಿ ಉಲ್ಲೇಖನೀಯ.

ಪೊಲೀಸ್ ಇಲಾಖೆಗೆ ಸರ್ಜರಿ

Posted by Vidyamaana on 2023-05-30 07:42:43 |

Share: | | | | |


ಪೊಲೀಸ್ ಇಲಾಖೆಗೆ ಸರ್ಜರಿ

ಬೆಂಗಳೂರು: ನೂತನ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಸರ್ಜರಿ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ಮಾಡಿದೆ. ನೂತನ ಕಮಿಷನರ್ ಆಗಿ ಬಿ.ದಯಾನಂದ ಅವರನ್ನು ನೇಮಿಸಲಾಗಿದೆ.ಎಡಿಜಿಪಿ ಮತ್ತು ನಗರ ಟ್ರಾಫಿಕ್ ವಿಶೇಷ ಆಯುಕ್ತರಾಗಿದ್ದ ಡಾ.ಎಂ.ಎ ಸಲೀಂ ಅವರನ್ನು ಬೆಂಗಳೂರು ಅಪರಾಧ ತನಿಖೆ ವಿಭಾಗ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧ ವಿಭಾಗದ ಡಿಜಿಯಾಗಿ ವರ್ಗಾವಣೆ ಮಾಡಿ ನೇಮಿಸಲಾಗಿದೆಬೆಂಗಳೂರು ಅಪರಾಧ ತನಿಖೆ ವಿಭಾಗದ ಎಡಿಜಿಪಿಯಾಗಿದ್ದ ಕೆ.ವಿ ಶರತ್ ಚಂದ್ರ ಅವರನ್ನು ಇಂಟಲಿಜೆನ್ಸ್ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ಟಿಕೆಟ್ ಕೈತಪ್ಪಿದ್ದಕ್ಕೆ ಎಂಡಿಎಂಕೆ ಸಂಸದ ಆತ್ಮಹತ್ಯೆಗೆ ಯತ್ನ ಪ್ರಕರಣ ; ಹೃದಯಘಾತದಿಂದ ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-03-28 13:50:10 |

Share: | | | | |


ಟಿಕೆಟ್ ಕೈತಪ್ಪಿದ್ದಕ್ಕೆ ಎಂಡಿಎಂಕೆ ಸಂಸದ ಆತ್ಮಹತ್ಯೆಗೆ ಯತ್ನ ಪ್ರಕರಣ ; ಹೃದಯಘಾತದಿಂದ ಆಸ್ಪತ್ರೆಯಲ್ಲಿ ನಿಧನ

ತಮಿಳುನಾಡು, ಮಾ 29: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಸಂಸದ ಗಣೇಶಮೂರ್ತಿ ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಗಣೇಶ್ ಮೂರ್ತಿ ಅವರು ಎಂಡಿಎಂಕೆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಈರೋಡೆ ಕ್ಷೇತ್ರದಲ್ಲಿ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿದ್ದರು.2024ರ ಚುನಾವಣೆಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು ಆದರೆ ಪಕ್ಷ ಯಾವುದೇ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿದೆ ಇದರಿಂದ ಗಣೇಶ್ ಅವರು ಟಿಕೆಟ್ ವಂಚಿತರಾಗಿದ್ದರು ಇದರಿಂದ ಹತಾಶೆಗೊಳಗಾದ ಅವರು ಮಾರ್ಚ್ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು ಗಂಭೀರ ಸ್ಥಿತಿಯಲ್ಲಿದ್ದ ಅವರು ಇಂದು ಮುಂಜಾನೆ ಹಠಾತ್ ಹೃದಯಾಘಾತಗೊಂಡು ನಿಧನಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕ ದುರ್ಮರಣ

Posted by Vidyamaana on 2024-04-12 17:01:10 |

Share: | | | | |


ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕ ದುರ್ಮರಣ

ಕುಂದಾಪುರ, ಎ.12: ಖಾಸಗಿ ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕನೊಬ್ಬ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಎಂಬಲ್ಲಿ ನಡೆದಿದೆ. ಹೂಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ಬಾಲಕ. 


ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಅರೀಝ್ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಕುಟುಂಬದ ಜೊತೆಗೆ ಹೆಂಗವಳ್ಳಿಯ ಖಾಸಗಿ ರೆಸಾರ್ಟ್ ಗೆ ತೆರಳಿದ್ದ.

New Categories
Recent News
Popular News


Leave a Comment: