ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಮಾದ್ಯಮಗಳನ್ನು ನಾಯಿಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ಹೈಕಮಾಂಡ್ ಗೆ KUWJ ದೂರು

Posted by Vidyamaana on 2024-03-12 20:36:12 |

Share: | | | | |


ಮಾದ್ಯಮಗಳನ್ನು ನಾಯಿಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ಹೈಕಮಾಂಡ್ ಗೆ  KUWJ ದೂರು

ಬೆಂಗಳೂರು : ಆನೆ ನಡೆದದ್ದೇ ದಾರಿ. ಮಾಧ್ಯಮದವರು ಏನು ಬರೆದುಕೊಂಡು ಅದು ನಡೆದು ಹೋಗುತ್ತೆ. ನಾಯಿ ಬೊಗಳುತ್ತೆ ಎಂಬುದಾಗಿ ಮಾದ್ಯಮದವರನ್ನು ನಾಯಿಗೆ ಹೋಲಿಕೆ ಮಾಡಿದಂತ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬಿಜೆಪಿ ಹೈಕಮಾಂಡ್ ಗೆ ದೂರು ನೀಡಿದೆ.ಈ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರದ ಮೂಲಕ ಟ್ವಿಟ್ ಮಾಡಿ ದೂರು ನೀಡಿರುವಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ಅದರಲ್ಲಿ ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನ್ನಾಡುತ್ತಾ ಆನೆ ಹೋಗಿದ್ದೇ ದಾರಿ ಎಂಬಂತೆ ನಾವು ಇರಬೇಕು. ಮಾಧ್ಯಮಗಳು ಏನು ಬೇಕಾದರೂ ಬರೆದುಕೊಳ್ಳಲಿ. ಆನೆಗಳು ಹೋಗುವಾಗ ನಾಯಿಗಳು ಬೊಗಳುವುದು ಸಹಜ ಎಂದು ಮಾಧ್ಯಮದವರನ್ನು ಹೀಯಾಳಿಸಿರುವುದು ಖಂಡನೀಯ. ಕೂಡಲೇ ಅವರು ಬೇಷರತ್ತಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಕೆಯುಡಬ್ಲ್ಯು ಜೆ ಆಗ್ರಹಿಸಿದೆ.


ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವದ ಸ್ಥಾನವಿದೆ. ತಮಗೆ ಬೇಕಾದಾಗ ಮಾಧ್ಯಮವನ್ನು ಹೊಗಳುವುದು ಬೇಡವೆನಿಸಿದಾಗ ತೆಗಳುವುದು ಕೆಲ ರಾಜಕಾರಣಿಗಳಿಗೆ ಪರಿಪಾಠವಾಗಿದೆ. ಅನಂತ ಕುಮಾರ ಹೆಗಡೆ ಅವರು ಜವಾಬ್ದಾರಿಯುತ ಸಂಸದರಾಗಿದ್ದು, ಆಗಿಂದ್ದಾಗೆ ಮನಸೋ ಇಚ್ಛೆ ಮಾತನಾಡುತ್ತಿರುವುದಲ್ಲದೆ ಮಾಧ್ಯಮವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಮತ್ತು ನಾಲಿಗೆ ಹಿಡಿತವಿಲ್ಲದ ಇಂತವರನ್ನು ಸಾರ್ವಜನಿಕ ಚುನಾವಣೆಗಳಿಂದ ದೂರ ಇಡಬೇಕು ಎಂದು ಕೆಯುಡಬ್ಲ್ಯು ಜೆ ಒತ್ತಾಯಿಸಿದೆ.

ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

Posted by Vidyamaana on 2024-01-23 16:53:36 |

Share: | | | | |


ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

ಹೈದರಾಬಾದ್, ಜನವರಿ 23: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಆದರೆ ಮಹಿಳೆಯರು ಈ ಸೌಲಭ್ಯವನ್ನು ಅತಿಯಾಗಿ ಬಳಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಉಚಿತ ಪ್ರಯಾಣದ ವೇಳೆ ಹಲವು ಬಾರಿ ಬಸ್ಸುಗಳಲ್ಲಿ ಪರಸ್ಪರ ಥಳಿಸಿಕೊಂಡಿರುವ ನಿದರ್ಶನಗಳೂ ಇವೆ. ಹೀಗೆ ಸುದ್ದಿಯಾಗಿದ್ದ TSRTC ಉಚಿತ ಬಸ್ ಪ್ರಯಾಣ ಇದೀಗ ಮಹಿಳೆಯರಿಬ್ಬರು ಮಾಡಿರುವ ಕೆಲಸದಿಂದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.


ವಿಡಿಯೋ ನೋಡಲು ಕ್ಲಿಕ್ ಮಾಡಿ 

ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸುಮ್ಮನೆ ಕುಳಿತುಕೊಳ್ಳುವುದು ಏಕೆಂದು ತಮ್ಮ ಕೈಲಾದ ಕೆಲಸವನ್ನು ಸಾಂಗೋಪಾಂಗವಾಗಿ ಮಾಡಿದ್ದಾರೆ. ಘಟನೆಯ ವಿಡಿಯೋ ತೆಗೆದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಘಟನೆ ಯಾವ ಡಿಪೋದಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.


ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಹೇ ರೇವಂತ್ ರೆಡ್ಡಿ, ಹೇ ಉತ್ತಮ್ ಕುಮಾರ್ ರೆಡ್ಡಿ, ಯೇ ಕ್ಯಾ ಹುವಾ! ಮನೆಯಲ್ಲಿ ಕುಳಿತು ಒಬ್ಬರೇ ಬೀಡಿ ಕಟ್ಟಿದರೆ ಬೇಜಾರಾಗುತ್ತದೆ ಎಂದು ಬಸ್ ಗಳಲ್ಲೂ ಹೀಗೆ ಕಾಯಕದಲ್ಲಿ ನಿರತರಾಗಿದ್ದಾರೆ ನೋಡಿ ಆನಂದಿಸಿ ಎಂದಿದ್ದಾರೆ.ವಿಡಿಯೋ ಹಾಕಿದವರ ವಿರುದ್ಧ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಹಾಯ್ ಬಿಚ್ಚಗಾಡು! ಅವರಿಗೆ ಸೀಟು ಸಿಕ್ಕರೆ ಉಚಿತ ಬಸ್ ಯೋಜನೆ ಯಶಸ್ವಿಯಾಗಿದೆ ಎಂದರ್ಥ. ಅವರು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ಅವರು ಏನನ್ನಾದರೂ ಮಾಡಿಕೊಳ್ಳಲಿ, ನಿನಗೇನು?ಇಷ್ಟು ಚೀಪಾಗಿ ಅವರ ಅನುಮತಿಯಿಲ್ಲದೆ ಆ ಮಹಿಳೆಯರ ವೀಡಿಯೊಗಳನ್ನು ತೆಗೆಯುವುದು ಅಪರಾಧವಲ್ಲವೆ ಎಂದೂ ಪ್ರಶ್ನಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.


ಸದ್ಯಕ್ಕೆ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉಚಿತ ಬಸ್‌ಗಳಲ್ಲಿ ಸಾಕಷ್ಟು ಅಹಿತಕರ ಘಟನೆಗಳು ಮತ್ತು ಆಘಾತಕಾರಿ ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ಬೆಳವಣಿಗೆಗಳು ಸೃಷ್ಟಿಯಾಗುತ್ತವೋ ಎಂದು ಜನ ಮಾತನಾಡುತ್ತಿದ್ದಾರೆ.

7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

Posted by Vidyamaana on 2023-08-20 10:29:32 |

Share: | | | | |


7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

ಲಂಡನ್‌: ಬ್ರಿಟನ್ನಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ​ಒಬ್ಬಳು ಅಕ್ರಮ ಸಂಬಂಧ, ವಿಕೃತ ಸಂತೋಷಕ್ಕಾಗಿ ಏಳು ನವಜಾತ ಶಿಶುಗಳನ್ನು ಕೊಂದು, ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ ನರ್ಸ್​​ಗೆ ಕೋರ್ಟ್​​​ ಶಿಕ್ಷೆ ಪ್ರಕಟಿಸಿದೆ.ಬ್ರಿಟನ್‌ನ ಆಸ್ಪತ್ರೆಯೊಂದರ ನವಜಾತ ಶಿಶು ಘಟಕದಲ್ಲಿ ಒಂದು ವರ್ಷದ ಅವಧಿಯಲ್ಲಿ ಏಳು ಮಕ್ಕಳನ್ನು ಕೊಂದಿದ್ದಲ್ಲದೆ, ಇನ್ನೂ ಆರು ಮಕ್ಕಳ ಕೊಲೆಗೆ ಪ್ರಯತ್ನ ನಡೆಸಿದ್ದ ಪ್ರಕರಣದಲ್ಲಿ ನರ್ಸ್ ಒಬ್ಬಳನ್ನು ತಪ್ಪಿತಸ್ಥೆ ಎಂದು ಕೋರ್ಟ್ ಪ್ರಕಟಿಸಿದೆ.ನಡೆದಿದ್ದೇನು?: 2015 ಹಾಗೂ 2016ರ ನಡುವೆ ಇಂಗ್ಲೆಂಡ್‌ನ ಕೌಂಟೆಸ್‌ ಚೆಸ್ಟರ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸರಣಿ ಸಾವು ಸಂಭವಿಸಿತ್ತು. ಈ ಸಂಬಂಧ 2018ರಲ್ಲಿ ಲೂಸಿ ವಿರುದ್ಧ ದೂರು ದಾಖಲಾಗಿತ್ತು.


ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿರುವ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿದಾಗ ಅಲ್ಲಿನ ಮಕ್ಕಳ ವೈದ್ಯರಲ್ಲಿ ಒಬ್ಬರಾದ ಭಾರತೀಯ ಮೂಲದ ಡಾ.ರವಿ ಜಯರಾಮ್‌ ಎಂಬುವರು ಲೂಸಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸ್‌ ತನಿಖೆಯಲ್ಲೂ ಆಕೆಯ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿಯು ಡಾ.ರವಿ ಅವರ ಹೇಳಿಕೆಯನ್ನು ಆಕ್ಷೇಪಿಸಿ, ಕಿಲ್ಲರ್‌ ನರ್ಸ್‌ ಬಳಿಯೇ ಕ್ಷಮೆ ಕೇಳುವಂತೆ ಅವರಿಗೆ ಸೂಚಿಸಿತ್ತು.ಆದರೆ ನವಜಾತ ಶಿಶುಗಳ ಸಾವಿನ ಪ್ರರಣದ ಬೆನ್ನು ಹತ್ತಿದ್ದ ಪೊಲೀಸರ ಬಲೆಗೆ ಬಿದ್ದವಳೆ ಬ್ರಿಟನ್‌ನ ಚೆಸ್ಟರ್ ಹಾಸ್ಪಿಟಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಲೂಸಿ ಲೆಟ್ಬಿ ಎಂಬಾಕೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ನರ್ಸ್‌ ಮನೆಯಲ್ಲಿ ಆಕೆ ಬರೆದಿಟ್ಟಿದ್ದ ನೋಟ್‌ಗಳು ಪತ್ತೆಯಾಗಿದ್ದವು. ಈ ಮೂಲವನ್ನಿಟ್ಟುಕೊಂಡು ತನಿಖೆ ಕೈಗೊಂಡರು.


ಅಕ್ಟೋಬರ್‌ನಿಂದಲೂ ಉತ್ತರ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ನಡೆಸಿ ಕೋರ್ಟ್​​ ಲೂಶಿಯಾ ದೋಷಿ ಎಂದು ತೀರ್ಪು ನೀಡಿದೆ. ಆದರೆ ತನಿಖೆಯಲ್ಲಿ ಹಾಗೂ ಕೋರ್ಚ್‌ನಲ್ಲಿ ಆಕೆ ತಾನು ಯಾರನ್ನೂ ಕೊಂದಿಲ್ಲ ಎಂದೇ ವಾದಿಸಿದ್ದಳು. ಹೀಗಾಗಿ ಸರಣಿ ಶಿಶುಗಳ ಹತ್ಯೆಯ ಕಾರಣ ಇನ್ನೂ ನಿಗೂಢವಾಗಿದೆ. ಆದರೆ ಮೃತ ಶಿಶುಗಳ ಪೋಷಕರು ಹಾಗೂ ವಕೀಲರು ಆಕೆಯ ಕ್ರೂರ ಕೃತ್ಯದ ಕುರಿತಾಗಿ ಕೆಲವು ಕೆಲವು ಮಾಹಿತಿಯನ್ನು ನೀಡಿದ್ದಾರೆಮಕ್ಕಳನ್ನು ಕ್ರೂರವಾಗಿ ಕೊಲ್ಲುತ್ತಿದ್ದಳು:

ನವಜಾತ ಶಿಶುಗಳ ರಕ್ತನಾಳಕ್ಕೆ ಖಾಲಿ ಇಂಜೆಕ್ಷನ್‌ ಚುಚ್ಚಿ ಅಥವಾ ಇನ್ಸುಲಿನ್‌ ಓವರ್‌ಡೋಸ್‌ ನೀಡಿ ಅಥವಾ ಹೊಟ್ಟೆಗೆ ನ್ಯಾಸೋಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಹಾಲು ಅಥವಾ ಗಾಳಿಯನ್ನು ತುಂಬಿ ಲೂಸಿ ಕ್ರೂರವಾಗಿ ಕೊಲ್ಲುತ್ತಿದ್ದಳು. ತಾನು ನರ್ಸ್‌ ಆಗಿದ್ದ ಆಸ್ಪತ್ರೆಯಲ್ಲಿ ಲೂಸಿ ಐದು ಗಂಡು ಶಿಶು, ಎರಡು ಹೆಣ್ಣು ಶಿಶುಗಳನ್ನು ಕೊಂದಿದ್ದಾಳೆ. ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ್ದಾಳೆ.


ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?: ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿವಾಹಿತ ವೈದ್ಯರೊಂದಿಗೆ ಲೂಸಿ ಅಕ್ರಮ ಸಂಬಂಧ ಹೊಂದಿದ್ದಳು, ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆಸುತ್ತಿದ್ದರಂತೆ. ಶಿಶುವಿಗೆ ಆರೋಗ್ಯ ಸಮಸ್ಯೆಯಾದಾಗ ಆ ವೈದ್ಯರನ್ನು ಆಕೆಯನ್ನು ಕರೆಯಬೇಕಿತ್ತು. ಆಗ ವೈದ್ಯನ ಗಮನ ಸೆಳೆಯುವುದಕ್ಕಾಗಿ ಶಿಶುಗಳನ್ನು ಕೊಲ್ಲುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ನರ್ಸ್ ವಿವಾಹಿತ ವೈದ್ಯನನ್ನ ನೋಡುವ ಸಲುವಾಗಿ ಈ ರೀತಿ ಕೃತ್ಯ ಎಸಗಿದ್ದಾಳೆ ಎಂದು ಆರೋಪ ಮಾಡಲಾಗಿದೆಶಿಶು ಸಾವನ್ನಪ್ಪಿದ ಬಳಿಕ ವಾರ್ಡ್‌ನಲ್ಲಿ ಪೋಷಕರು ಅಳುವುದನ್ನು ನೋಡಿ ಲೂಸಿ ವಿಕೃತ ಸಂತೋಷ ಅನುಭವಿಸುತ್ತಿದ್ದಳು. ಶಿಶುಗಳಿಗೆ ಇಂಜೆಕ್ಷನ್‌ ಚುಚ್ಚಿದ ಬೇರೆ ನರ್ಸ್‌ಗಳನ್ನು ಕರೆದುಕೊಂಡು ಬಂದು ಈ ಮಗು ಸಾಯುತ್ತದೆ ಎಂದು ಹೇಳುವ ಮೂಲಕ ತನಗೆ ಎಲ್ಲವೂ ಮೊದಲೇ ತಿಳಿಯುತ್ತದೆ ಎಂದು ಆಕೆಗೆ ಬಿಂಬಿಸುತ್ತಿದ್ದಳು.

750 ರೂ. ಸಾಲ ತೀರಿಸಲಾಗದೆ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ ಶ್ರೀನಿವಾಸ್!!!

Posted by Vidyamaana on 2023-08-28 10:12:14 |

Share: | | | | |


750 ರೂ. ಸಾಲ ತೀರಿಸಲಾಗದೆ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ ಶ್ರೀನಿವಾಸ್!!!

ಚಿಕ್ಕಮಗಳೂರು:ಇತ್ತೀಚಿಗೆ ಕೊಪ್ಪ ತಾಲೂಕಿನ ಖಾಸಗಿ ಶಾಲಾ ವಿದ್ಯಾರ್ಥಿ ಶ್ರೀನಿವಾಸ್ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ 9ನೇ ತರಗತಿ ವಿದ್ಯಾರ್ಥಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ವೇಳೆ ಕೇವಲ 750 ರೂಪಾಯಿ ಸಾಲ ಹಿಂದಿರುಗಿಸಲು ಸಾಧ್ಯವಾಗದಿದ್ದುದಕ್ಕೆ ಕಠಿಣ ನಿರ್ಧಾರ ತಳೆದಿದ್ದಾನೆ ಎಂದು ಹೇಳಿದ್ದಾರೆ.


ಕಡೂರು ತಾಲೂಕಿನ ಹಿರೇ ಬಳ್ಳಕೆರೆ ಗ್ರಾಮದ ಶ್ರೀನಿವಾಸ್ ಕೊಪ್ಪ ತಾಲೂಕಿನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.ಆತ್ಮಹತ್ಯೆಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆ ಗೂ ಮುಂಚೆ ಬರೆದಿಟ್ಟಿದ್ದ ಡೆತ್ ನೋಟ್ ಪರಿಶೀಲಿಸಿದಾಗ, ವಿದ್ಯಾರ್ಥಿ ಸ್ನೇಹಿತರಿಂದ ಪಡೆದಿದ್ದ 750 ರೂ. ಸಾಲವನ್ನು ನೀಡಲು ಸಾಧ್ಯವಾಗದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಶರಣಾಗುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಶ್ರೀನಿವಾಸ್ ಮಾಜಿ ಯೋಧನ ಮಗನಾಗಿದ್ದು, ಮಗನನ್ನು ಕಳೆದು ಕೊಂಡ ತಂದೆ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ

ಪುತ್ತೂರು ನಗರ ಸಭೆ ಬೈ ಎಲೆಕ್ಷನ್ ಮುಕ್ತಾಯ - ಎರಡು ವಾರ್ಡ್ ಗಳಲ್ಲಿ ಎಷ್ಟು ವೋಟಿಂಗ್ ಆಯ್ತು

Posted by Vidyamaana on 2023-12-27 18:23:46 |

Share: | | | | |


ಪುತ್ತೂರು ನಗರ ಸಭೆ ಬೈ ಎಲೆಕ್ಷನ್ ಮುಕ್ತಾಯ - ಎರಡು ವಾರ್ಡ್ ಗಳಲ್ಲಿ ಎಷ್ಟು ವೋಟಿಂಗ್ ಆಯ್ತು

ಪುತ್ತೂರು : ನಗರ ಸಭೆಯ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆದ ಚುನಾವಣೆಯು ಮುಕ್ತಾಯಗೊಂಡಿದ್ದು, ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡ ಮತದಾನ ಸಂಜೆ 5 ಗಂಟೆಯ ತನಕ ನಡೆಯಿತು.


ವಾರ್ಡ್1ರಲ್ಲಿ ಒಟ್ಟು 1304 ಮತದಾರರಲ್ಲಿ 449 ಪುರುಷರು ಹಾಗೂ 509 ಮಹಿಯರು ಸೇರಿದಂತೆ ಒಟ್ಟು 958 ಮತ ಚಲಾವಣೆಯಾಗಿದೆ. ಶೇ.73.45 ಮತ ಚಲಾವಣೆಯಾಗಿದೆ.ವಾರ್ಡ್ 11 ರಲ್ಲಿ ಒಟ್ಟು 1724 ಮತದಾರರಲ್ಲಿ 525 ಪುರುಷರು, 528 ಮಹಿಳೆಯರು ಸೇರಿದಂತೆ 1053 ಮಂದಿ ಮತ ಚಲಾಯಿಸಿದ್ದು ಶೇ.61.07 ಮತದಾನವಾಗಿದೆ.

ಲೋಕಸಭೆ ಚುನಾವಣೆ : ರಾಜ್ಯದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ಮಾರ್ಗಸೂಚಿ ಪ್ರಕಟ

Posted by Vidyamaana on 2024-04-21 19:57:57 |

Share: | | | | |


ಲೋಕಸಭೆ ಚುನಾವಣೆ : ರಾಜ್ಯದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಲೋಕಸಭಾ ಚುನಾವಣೆ-2024 ರ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಪಟ್ಟಂತೆ ಚುನಾವಣಾ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಆಯುಕ್ತರ ಮಾರ್ಗದರ್ಶನದ ಕಿರು ಹೊತ್ತಿಗೆಯ ಪ್ರತಿಯನ್ನು ವಿತರಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದೆ.

Recent News


Leave a Comment: