ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಸುಳ್ಯ ಸಮಾವೇಶದಲ್ಲಿ ಸಚಿವರ ಮುಂದೆಯೇ ಸೋತ ಅಭ್ಯರ್ಥಿ ಕಿರಿಕ್

Posted by Vidyamaana on 2024-03-10 14:19:35 |

Share: | | | | |


ಸುಳ್ಯ ಸಮಾವೇಶದಲ್ಲಿ ಸಚಿವರ ಮುಂದೆಯೇ ಸೋತ ಅಭ್ಯರ್ಥಿ ಕಿರಿಕ್

ಸುಳ್ಯ : ಕಾರ್ಯಕ್ರಮದ ಕುರಿತು ತನಗೆ ಮಾಹಿತಿ ನೀಡಿಲ್ಲವೆಂದು ವಿಧಾನಸಭಾ ಪರಾಜಿತ ಅಭ್ಯರ್ಥಿ ಕೃಷ್ಣಪ್ಪ ಅವರು ಸಮಾವೇಶದ ಆರಂಭದಲ್ಲಿಯೇ ಕಿರಿಕ್ ಮಾಡಿದ ಪ್ರಸಂಗ ನಡೆಯಿತು.ಸಮಾವೇಶ ಆರಂಭಗೊಂಡು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಸ್ವಾಗತ ಭಾಷಣ ಮಾಡುವ ಸಂದರ್ಭ ಎದುರು ಸಭಾಂಗಣದಲ್ಲಿ ಆಸೀನರಾಗಿದ್ದ ಕೃಷ್ಣಪ್ಪರವರು ಅಲ್ಲಿಂದಲೇ ಗಟ್ಟಿ ಧ್ವನಿಯಲ್ಲಿ ತನ್ನ ಅಸಹನೆ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. ಸ್ವಲ್ಪ ಹೊತ್ತಿನಲ್ಲಿ ಸೀದಾ ವೇದಿಕೆಗೆ ಹೋಗಿ ವಿಧಾನಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿಯವರಲ್ಲಿ ಮತ್ತು ಸಚಿವ ದಿನೇಶ್ ಗುಂಡೂರಾವ್ ರವರಲ್ಲಿ ತಾನು ಡಿಫೀಟೆಡ್ ಕ್ಯಾಂಡಿಡೇಟ್ ಅಲ್ವಾ? ನನಗೆ ಕಾರ್ಯಕ್ರಮದ ಬಗ್ಗೆ ಯಾಕೆ ಯಾವ ಮಾಹಿತಿಯನ್ನೂ ನೀಡಿಲ್ಲ ಎಂದು ಪ್ರಶ್ನಿಸತೊಡಗಿದರು. ಕಾರ್ಯಕ್ರಮ ಒಂದು ಕ್ಷಣ ಸ್ತಬ್ಧವಾಯಿತು. ಒಂದೆರಡು ನಿಮಿಷ ಈ ಹೈಡ್ರಾಮ ಮುಂದುವರಿಯಿತು. ಮಂಜುನಾಥ ಭಂಡಾರಿಯವರು ಅವರನ್ನು ಸಮಾಧಾನಪಡಿಸಿದರು. ಇತರ ಕೆಲವು ನಾಯಕರು ಕೂಡಾ ವೇದಿಕೆಗೆ ತೆರಳಿ ಪಕ್ಕದ ಕೊಠಡಿಗೆ ಅವರನ್ನು ಕರೆದೊಯ್ದರು. ಬಳಿಕ ಕಾರ್ಯಕ್ರಮ ಮುಂದುವರಿಯಿತು. ಸ್ವಲ್ಪ ಹೊತ್ತಿನಲ್ಲಿ ಕೃಷ್ಣಪ್ಪರವರು ಸಮಾವೇಶದ ಎದುರು ಬಂದು ಕುಳಿತರು

ಪ್ಯಾನ್-ಆಧಾರ್ ಲಿಂಕ್ ಗೋಲ್ಮಾಲ್! ಪ್ಯಾನ್ ಕಾರ್ಡ್ ನಿಷ್ಕ್ರಿಯದ ಭಯಭಿತ್ತಿ ಸೈಬರ್ ಕೇಂದ್ರಗಳಿಂದ ಹಗಲುದರೋಡೆ

Posted by Vidyamaana on 2023-03-25 05:57:07 |

Share: | | | | |


ಪ್ಯಾನ್-ಆಧಾರ್ ಲಿಂಕ್ ಗೋಲ್ಮಾಲ್!  ಪ್ಯಾನ್ ಕಾರ್ಡ್ ನಿಷ್ಕ್ರಿಯದ ಭಯಭಿತ್ತಿ ಸೈಬರ್ ಕೇಂದ್ರಗಳಿಂದ ಹಗಲುದರೋಡೆ

ಹೊಸದಿಲ್ಲಿ: ಆಧಾರ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಅನ್ನು ಜೋಡಣೆ ಮಾಡಲು ಮಾ.31 ಕಡೆಯ ದಿನವಾಗಿದೆ. ಗಡುವಿಗೆ ಕೆಲವೇ ದಿನಗಳಷ್ಟೇ ಜೋಡಣೆ ಮಾಡದಿದ್ದರೆ ಏ.1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಈ ಆದೇಶದ ಲಾಭ ಪಡೆಯುತ್ತಿರುವ ಸೈಬರ್ ಸೆಂಟರ್ ಗಳು , ಗ್ರಾಹಕರಿಂದ ಹಗಲು ದರೋಡೆಗಿಳಿದಿವೆ. ಗ್ರಾಹಕರು ಬಂದೊಡನೆ ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪರಿಶೀಲನೆಗೆ ಮುಂದಾಗುತ್ತಾರೆ. ಆಗಿದ್ದರೂ, ಆಗದೇ ಇದ್ದರೂ – ಲಿಂಕ್ ಆಗಿಲ್ಲ ಎಂದು ಗ್ರಾಹಕರಿಂದ 1300 ರೂ. ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ, ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ, ಒಂದು ವೇಳೆ ಲಿಂಕ್ ಮಾಡದೇ ಹೋದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆಗ ಅದನ್ನು ವಿವಿಧ ಉದ್ದೇಶಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ವ್ಯವಹಾರಗಳೂ ಸೇರಿದಂತೆ ವಿವಿಧಡ ಈಗ ಪ್ಯಾನ್ ಬಳಕೆ ಕಡ್ಡಾಯವಾಗಿದೆ.

ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಗಡುವನ್ನು ಈ ಹಿಂದೆ ಹಲವಾರು ಬಾರಿ -ಪ್ಯಾನ್ ಲಿಂಕ್ನ ಸ್ಟೇಟಸ್ ಪರಿಶೀಲಿಸಬಹುದು. ವಿಸ್ತರಿಸಲಾಗಿತ್ತು. ಈಗ ಕೊನೆಯದಾಗಿ ಮಾರ್ಚ್ 31ರ ಗಡುವನ್ನು ಆದಾಯ ತೆರಿಗೆ ಇಲಾಖೆ ನೀಡಿದೆ.

ಲಿಂಕ್ ಆಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?: 

ಆದಾಯ ತಂಗ ಇಲಾಖೆಯ ಪೋರ್ಟಲ್ https://eportal.incometax gov.in/ ಜಾಲತಾಣಕ್ಕೆ ಭೇಟಿ ನೀಡಿ, ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಬಹುದು.

ಅದೇ ರೀತಿ, ಈ ವೆಬ್, ವಿಳಾಸಕ್ಕೂ ತೆರಳಿ https://www.pan.utitsl.com/ ಆಧಾರ್ – ಪ್ಯಾನ್ ಲಿಂಕಿನ ಸ್ಟೇಟಸ್ ಪರಿಶೀಲಿಸಬಹುದು.

ಎಸ್ಎಂಎಸ್ ಮೂಲಕವೂ ಲಿಂಕ್ ಮಾಡಿ!

1.) ಮೊದಲು, UIDPAN ಫಾರ್ಮ್ಯಾಟ್ನಲ್ಲಿ ಸಂದೇಶವನ್ನು ಟೈಪ್ ಮಾಡಿ, ಅಂದರೆ, UIDPAN (ಸ್ಪೇಸ್) 12-ಅಂಕಿಯ ಆಧಾರ್ ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಸಂಖ್ಯೆ (ಸ್ಪೇಸ್) 10-ಅಂಕಿಯ PAN ಸಂಖ್ಯೆ.

2. )ನಿಮ್ಮ ನೋಂದಾಯಿತ ಸಂಖ್ಯೆಯಿಂದ 567678 ಅಥವಾ 56161 ಗೆ ಮಾತ್ರ SMS ಕಳುಹಿಸಿ.

3.) ಬಳಿಕ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಕುರಿತು ನೀವು ದೃಢೀಕರಣ ಸಂದೇಶವನ್ನು ಪಡೆಯುವಿರಿ.

.ಲಿಂಕ್ ಮಾಡಲು ಎಷ್ಟು ಶುಲ್ಕ?

ನೀವು ಇನ್ನೂ ನಿಮ್ಮ ಆಧಾರ್ ಮಾಡದೇ ಇದ್ದಲ್ಲಿ ಈಗ ನೀವು www.inco- metax.gov.in ಜಾಲತಾಣಕ್ಕೆ ಹೋಗಿ, ಅಲ್ಲಿ ಲಿಂಕ್ ಆಧಾರ್ ಎನ್ನುವ ಆಯ್ಕೆ ಯನ್ನು ಕ್ಲಿಕ್ ಮಾಡಿದರೆ, ಮಾಹಿತಿ ತೆರೆದುಕೊಳ್ಳುತ್ತದೆ. 1,000 ರೂ. ಶುಲ್ಕವನ್ನು ಪಡೆಯುವಿರಿ. ಪಾವತಿಸಿ ಲಿಂಕ್ ಮಾಡಬಹುದು.

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

Posted by Vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

Posted by Vidyamaana on 2024-04-04 15:56:20 |

Share: | | | | |


ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗುರುವಾರ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿದರು. ಬಳಿಕ ಬಂಟ್ಸ್ ಹಾಸ್ಟೆಲ್ ನ ಬಿಜೆಪಿ ಚುನಾವಣಾ ಕಚೇರಿಯಿಂದ ಮಂಗಳೂರು ಪುರಭವನವರೆಗೆ ಮೆರವಣಿಯಲ್ಲಿ ಸಾಗಿ ಬಂದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕಾವು : ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಸಮಾವೇಶ : ಹಲವಾರು ಮಂದಿ ಭಾಗಿ

Posted by Vidyamaana on 2023-05-02 04:31:44 |

Share: | | | | |


ಕಾವು : ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಸಮಾವೇಶ : ಹಲವಾರು ಮಂದಿ ಭಾಗಿ

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪರ ಸಮಾವೇಶ ಕಾವು ಪಂಚವಟಿಯಲ್ಲಿ ನಡೆಯಿತುಸಮಾವೇಶದಲ್ಲಿ ಅರುಣ್ ಪುತ್ತಿಲ ರವರ ಪರ ಮತಯಾಚನೆ ಮಾಡಲಾಯಿತು. ವೇದಿಕೆ ಪಕ್ಷೇತರ ಅಭ್ಯರ್ಥಿ ಪುತ್ತಿಲ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.ನೂರಾರು ಮಂದಿ ಕಾರ್ಯಕರ್ತರು, ಮಹಿಳೆಯರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅರಬ್ಬೀ ಸಮುದ್ರದಲ್ಲಿ ಮತ್ತೆ ಚಂಡಮಾರುತ

Posted by Vidyamaana on 2023-10-16 18:03:52 |

Share: | | | | |


ಅರಬ್ಬೀ ಸಮುದ್ರದಲ್ಲಿ ಮತ್ತೆ ಚಂಡಮಾರುತ

ಮಂಗಳೂರು, ಅ.16: ಅರಬ್ಬೀ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಮಾದರಿಯ ವಾತಾವರಣ ಉಂಟಾಗಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.


ಲಕ್ಷದ್ವೀಪ, ನೈರುತ್ಯ ಅರಬ್ಬೀ ಸಮುದ್ರ ಮತ್ತು ಕೇರಳ ಕರಾವಳಿಯ ಮಧ್ಯೆ ಸಮುದ್ರ ಮಟ್ಟದಿಂದ ಮೂರು ಕಿಮೀ ಎತ್ತರದಲ್ಲಿ ಚಂಡಮಾರುತ ಮಾದರಿ ವರ್ತುಲ ಉಂಟಾಗಿದ್ದು, ಇದರಿಂದಾಗಿ ಅರಬ್ಬೀ ಸಮುದ್ರ ಮತ್ತು ಕರ್ನಾಟಕ, ಕೇರಳ ಕರಾವಳಿಯಲ್ಲಿ ಅ.17ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಉತ್ತರ ಭಾಗದತ್ತ ಚಲಿಸಲಿದೆ ಎಂದು ಮಂಗಳೂರಿನ ಬಂದರು ಪ್ರಾಧಿಕಾರ(ಎನ್ಎಂಪಿಎ) ಕೇಂದ್ರ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದೆ.


ಹೀಗಾಗಿ ಎನ್ಎಂಪಿಎ ಬಂದರಿಗೆ ಆಗಮಿಸುವ ಹಡಗು, ಇನ್ನಿತರ ಎಲ್ಲ ರೀತಿಯ ಕಾರ್ಗೋ ಹಡಗುಗಳು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ. ಅಲ್ಲದೆ, ಕರಾವಳಿಯಲ್ಲಿ ಮೀನುಗಾರಿಕೆ ನಡೆಸದಂತೆ ಮುಂಜಾಗ್ರತೆ ವಹಿಸಬೇಕು. ಎನ್ಎಂಪಿಎಂ ಬಂದರಿನಲ್ಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.


ಕೇಂದ್ರ ಹವಾಮಾನ ಇಲಾಖೆಯ ಸೂಚನೆಯಲ್ಲಿ ವಾಯು ಮಾರುತಗಳು ಬಂಗಾಳ ಕೊಲ್ಲಿಯಿಂದ ಅರಬ್ಬೀ ಸಮುದ್ರದತ್ತ ಚಲಿಸುತ್ತಿದ್ದು, ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕದ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ತಿಳಿಸಲಾಗಿದೆ.

Recent News


Leave a Comment: