ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಭಕ್ತಕೋಡಿ ಹರೀಶ ರವರ ಪತ್ನಿ ದೀಪಿಕಾ ನಾಪತ್ತೆ

Posted by Vidyamaana on 2024-06-15 15:55:40 |

Share: | | | | |


ಭಕ್ತಕೋಡಿ ಹರೀಶ ರವರ ಪತ್ನಿ ದೀಪಿಕಾ ನಾಪತ್ತೆ

ಪುತ್ತೂರು : ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಲ್ಲಗುಡ್ಡೆ, ಭಕ್ತಕೋಡಿಯ ಹರೀಶ (28) ರವರ ಪತ್ನಿಯಾದ ದೀಪಿಕಾ(23) ನಾಪತ್ತೆಯಾದವರು.

ಪತಿ ಹರೀಶ್‌ರವರು ನೀಡಿದ ದೂರಿನಲ್ಲಿ ತನ್ನ ಪತ್ನಿ ತಾನು ಕಟ್ಟಿದ ತಾಳಿಯನ್ನು ಮನೆಯಲ್ಲಿ ಬಿಚ್ಚಿಟ್ಟು ಜೂ. 13ರಂದು ಬೆಳಿಗ್ಗೆ 05 ಗಂಟೆಗೆ ಮನೆಯಿಂದ ಹೋದವಳು ನಾಪತ್ತೆಯಾಗಿರುತ್ತಾಳೆ.. ಮನೆಯ ಸುತ್ತಮುತ್ತ ಪರಿಸರದಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡಿಕಾಡಿದರೂ ಇಲ್ಲಿವರೆಗೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಸುದ್ದಿಗೋಷ್ಠಿ ಮುಂದೂಡಿಕೆ

Posted by Vidyamaana on 2024-03-19 11:48:44 |

Share: | | | | |


ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಸುದ್ದಿಗೋಷ್ಠಿ ಮುಂದೂಡಿಕೆ

ಬೆಂಗಳೂರು: ಇಂದು ನಿಗದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸುದ್ದಿಗೋಷ್ಠಿ ಮುಂದೂಡಲ್ಪಟ್ಟಿದೆ.

ಬೆಂಗಳೂರಿನಲ್ಲಿ ಇಂದು ಸದಾನಂದ ಗೌಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

Posted by Vidyamaana on 2024-02-03 22:26:23 |

Share: | | | | |


ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

ಕಾಞಂಗಾಡ್ : ಸ್ನಾನ ಮಾಡಲು ತೆರಳಿದ್ದ ಮಹಿಳೆ ಸ್ನಾನಗೃಹದಲ್ಲೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳದ ಕಾಞಂಗಾಡ್ ನಲ್ಲಿ ಸಂಭವಿಸಿದೆ.ಇಲ್ಲಿನ ಬಾವಾ ನಗರದ ನಿವಾಸಿ ಮಜೀದ್ ಮತ್ತು ಶಕೀಲಾ ದಂಪತಿಯ ಪುತ್ರಿ ಶುಹೈರಾ (36) ಮೃತ ದುರ್ದೈವಿಯಾಗಿದ್ದಾರೆ .ಸೇನಾ ಅಧಿಕಾರಿ ಕೋಝಿಕ್ಕೋಡ್ ಶರೀದ್ ಅವರ ಪತ್ನಿಯಾಗಿರುವ ಶುಹೈರಾ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾತ್ ರೂಂ ಗೆ ಸ್ನಾನಕ್ಕೆಂದು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.ಕೂಡಲೇ ಸ್ತಳಿಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಶುಹೈರಾ ಆದಾಗಲೇ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದ್ದು. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಮಂಗಳೂರಿನಲ್ಲಿ ಭವಾನಿ ಬಸ್ ಮಾಲಕ ಪ್ರಜ್ವಲ್ ಆತ್ಮಹತ್ಯೆ

Posted by Vidyamaana on 2024-02-28 16:48:11 |

Share: | | | | |


ಮಂಗಳೂರಿನಲ್ಲಿ ಭವಾನಿ ಬಸ್ ಮಾಲಕ ಪ್ರಜ್ವಲ್ ಆತ್ಮಹತ್ಯೆ

ಮಂಗಳೂರು, ಫೆ.28: ಮಂಗಳೂರಿನಲ್ಲಿ ಖಾಸಗಿ ಬಸ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ ನಗರದ ಬಜಾಲ್‌ ನಿವಾಸಿ ಪ್ರಜ್ವಲ್‌ ಡಿ. (35) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇವರು ಭವಾನಿ ಬಸ್‌ನ ಮಾಲಕರಾಗಿದ್ದ ದಿ. ದೇವೇಂದ್ರ ಅವರ ಎರಡನೇ ಪುತ್ರ. ಮಂಗಳವಾರ ಬೆಳಗ್ಗೆ ಜೆ.ಎಂ. ರೋಡ್‌ನ‌ಲ್ಲಿರುವ ಸ್ವಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ತನ್ನ ಸಹೋದರನ ಜೊತೆ ಸೇರಿ ಪ್ರಜ್ವಲ್‌ ಬಸ್ಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಬ್ಯಾಂಕ್ ಸಾಲ ಹೊಂದಿದ್ದ ಇವರಿಗೆ ಬ್ಯಾಂಕ್‌ನವರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಇದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.

ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

Posted by Vidyamaana on 2024-03-14 15:14:13 |

Share: | | | | |


ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

ಉಡುಪಿ, ಮಾ.14: ತನ್ನದೇ ಬಸ್ಸಿನಡಿಗೆ ಬಿದ್ದು ಬಸ್ ಮಾಲಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತರು. 

ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಬಸ್‌ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್‌ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ಮಾಲಕ ದಯಾನಂದ ಶೆಟ್ಟಿ ಬಸ್ಸನ್ನು ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್‌ ಒಂದರಲ್ಲಿ ರಿಪೇರಿಗೆ ನೀಡಿದ್ದರು. 


ಬಸ್‌ ರಿಪೇರಿಗೆ ನೀಡಿ ಕೆಲವು ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ನಿನ್ನೆ ( ಮಾರ್ಚ್ 13 ) ಬಸ್‌ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದು ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ ಅವರನ್ನು ನೋಡದೆ ಬಸ್ಸನ್ನು ಏಕಾಏಕಿ ಚಲಾಯಿಸಿದ್ದು ದಯಾನಂದ ಶೆಟ್ಟಿ ಬಸ್ಸಿನ ಚಕ್ರದಡಿಗೆ ಸಿಲುಕಿದ್ದಾರೆ. ಗ್ಯಾರೇಜ್​ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದ್ದರಿಂದ ಬಸ್ ಮುಂದಕ್ಕೆ ಚಲಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಕೂಡಲೇ ಸ್ಥಳದಲ್ಲಿದ್ದವರು ದಯಾನಂದ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್

Posted by Vidyamaana on 2024-06-29 11:21:28 |

Share: | | | | |


ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್

ವಾಷಿಂಗ್ಟನ್: ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬಚ್‌ ವಿಲ್ಮೋರ್ ಅವರು ಇನ್ನು ಕೆಲ ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.ಜೂನ್ 5ರಂದು ಸುನಿತಾ ಮತ್ತು ವಿಲ್ಮೋರ್‌ ಅವರಿದ್ದ ಸ್ಟಾರ್‌ಲೈನರ್‌ ನೌಕೆಯನ್ನು ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ ಸ್ಪೇಸ್‌ ಫೋರ್ಸ್‌ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.

ಜೂನ್ 6ರ ಮಧ್ಯಾಹ್ನ 1.34ಕ್ಕೆ ಗಗನನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್‌ (ಕೂಡಿಕೊಳ್ಳುವ ಪ್ರಕ್ರಿಯೆ) ಮಾಡಲಾಗಿತ್ತು. 

ತಾಂತ್ರಿಕ ದೋಷಕ್ಕೆ ಕಾರಣಗಳೇನು ಎಂಬ ಬಗ್ಗೆ ಪರೀಕ್ಷೆಗಳು ನಡೆಯುತ್ತಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ನಾಸಾ ತಿಳಿಸಿದೆ. ಆದರೆ, ಗಗನಯಾತ್ರಿಗಳು ಯಾವಾಗ ಭೂಮಿಗೆ ಹಿಂದಿರುಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.



Leave a Comment: