ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ವಿಪಕ್ಷ ನಾಯಕನಾಗಿ ಬಿಜೆಪಿ ಶಾಸಕ ಆರ್ ಅಶೋಕ್ ಆಯ್ಕೆ

Posted by Vidyamaana on 2023-11-17 20:45:08 |

Share: | | | | |


ವಿಪಕ್ಷ ನಾಯಕನಾಗಿ ಬಿಜೆಪಿ ಶಾಸಕ ಆರ್ ಅಶೋಕ್ ಆಯ್ಕೆ

ಬೆಂಗಳೂರು: ಪದ್ಮನಾಭನಗರ ಬಿಜೆಪಿ ಶಾಸಕ ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಲಾಗಿದೆ. ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಆಗಮಿಸಿದ್ದರು.ಶಾಸಕರ ಅಭಿಪ್ರಾಯಗಳನ್ನು ಆಲಿಸಿದ ವೀಕ್ಷಕರು ವಿರೋಧದ ನಡುವೆಯೂ ವಿಪಕ್ಷ ನಾಯಕನಾಗಿ ಆರ್ ಅಶೋಕ್ ಅವರನ್ನು ನೇಮಿಸಿದ್ದಾರೆ. ಇನ್ನು ಇದೇ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆರ್ ಅಶೋಕ್ ಅವರು, ಪಕ್ಷ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಅದನ್ನು ಸರಿಯಾಗಿ ನಿಭಾಯಿಸುತ್ತೇನೆ.ಸಾಮಾನ್ಯ ಕಾರ್ಯಕರ್ತನಾಗಿ 45 ವರ್ಷಗಳಿಂದ ಕೆಲಸ ಮಾಡಿದ್ದೇನೆ.


ಕಾಂಗ್ರೆಸ್ ನ ದುರಾಳಿತವ್ನನು ಜನರ ಮುಂದಿಡಲು ಪ್ರಯತ್ನಿಸುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳತ್ತೇವೆ ಎಂದು ಹೇಳಿದರು. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಆಯ್ಕೆ ವಿಚಾರವಾಗಿ ಒಳಗೊಳಗೆ ಅಸಮಾಧಾನ ಭುಗಿಲೆದ್ದಿತ್ತು. ವಿಪಕ್ಷ ನಾಯಕ ಸ್ಥಾನ ಕೈತಪ್ಪಲಿದೆ ಎಂಬ ಸೂಚನೆ ಸಿಕ್ಕಿದ್ದರಿಂದ ಬಿಜೆಪಿ ಪಾಳಯದ ಅತೃಪ್ತ ನಾಯಕ, ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ಬಹಿರಂಗವಾಗಿಯೇ ಸಿಡಿದೆದ್ದಿದ್ದರು.

ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ.. ನೀರಿನಲ್ಲಿ ತೇಲುವ ಮಸೀದಿ ಏನೆಲ್ಲಾ ಇರುತ್ತದೆ ಗೊತ್ತಾ?

Posted by Vidyamaana on 2023-09-23 16:20:57 |

Share: | | | | |


ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ.. ನೀರಿನಲ್ಲಿ ತೇಲುವ ಮಸೀದಿ ಏನೆಲ್ಲಾ ಇರುತ್ತದೆ ಗೊತ್ತಾ?

   

ದುಬೈ :ವಿಶ್ವದಲ್ಲಿಯೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನ ಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ.ದುಬೈನಲ್ಲಿ ಸ್ಪಟಿಕದಂತಹ ನೀರು ಇರುವ ಕಾಲುವೆಗಳಲ್ಲಿ 5.5 ಕೋಟಿ ದಿರಹಂ ವೆಚ್ಚ ಮಾಡಿ ಅಂದರೆ ಸುಮಾರು 125 ಕೋಟಿ ರೂ. ವೆಚ್ಚ ಮಾಡಿ, ನೀರಿನ ಮೇಲೆ ತೇಲುವ ಮಸೀದಿ (floating mosque) ನಿರ್ಮಿಸಲಾಗುವುದು. ಇಸ್ಲಾಮಿಕ್ ವ್ಯವಹಾರಗಳು ಮತ್ತು ಚಾರಿಟಬಲ್ ಚಟುವಟಿಕೆಗಳ ಇಲಾಖೆ (ಐಸಿಎಡಿ -Islamic Affairs and Charitable Activities Department in Dubai) ಅಧಿಕಾರಿಗಳು ಮುಂದಿನ ವರ್ಷ ಮಸೀದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ (Religious Tourism Project) ಮಾಡಲಾಗುವುದು ಎಂದು ಹೇಳಿದ್ದಾರೆ.


ವಿಶ್ವದಲ್ಲಿಯೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ದುಬೈಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.


ಮಸೀದಿಯು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಮೂರು ಅಂತಸ್ತಿನ ರಚನೆಯಾಗಿದೆ. ಒಂದೇ ಸಮಯದಲ್ಲಿ 50 ರಿಂದ 75 ಭಕ್ತರು ಪ್ರಾರ್ಥನೆ ಸಲ್ಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮುಸಲ್ಮಾನರು ಪ್ರಾರ್ಥನೆಗಾಗಿ ವಿಶೇಷವಾಗಿ ನಿರ್ಮಿಸಲಾದ ಈ ತೇಲುವ ಮಸೀದಿಗೆ ಭೇಟಿ ನೀಡಬಹುದು(Islamic tourism). ಇದು ಎಮಿರೇಟ್ಸ್​​ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಹೆಚ್ಚುವರಿಯಾಗಿ, ಮಸೀದಿಯು ಶೇಖ್ ಮಕ್ತೌಮ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಕುರಾನ್‌ ಪ್ರದರ್ಶನವನ್ನು ಆಯೋಜಿಸುತ್ತದೆ.ಮಸೀದಿಯು ನೀರಿನ ಮೇಲೆ ಎರಡು ಮಹಡಿಗಳನ್ನು ಹೊಂದಿರುತ್ತದೆ, ಮುಂದಿನ ವರ್ಷದ ವೇಳೆಗೆ ಸಂದರ್ಶಕರಿಗೆ ಇಸ್ಲಾಮಿಕ್ ಉಪನ್ಯಾಸಗಳು, ಕಾರ್ಯಾಗಾರಗಳು ಇತ್ಯಾದಿಗಳಿಗಾಗಿ ಇಲ್ಲಿ ಸಭಾಂಗಣ ನಿರ್ಮಿಸಲಾಗುವುದು. ಗಮನಾರ್ಹ ಸಂಗತಿಯೆಂದರೆ, ಈ ತೇಲುವ ಮಸೀದಿ ಎಲ್ಲಾ ಧರ್ಮದ ಜನರನ್ನು ಆಹ್ವಾನಿಸುತ್ತದೆ. ಸಂದರ್ಶಕರು ಸಾಧಾರಣವಾದ ಸಾಮಾನ್ಯವಾದ ಉಡುಗೆ ತೊಟ್ಟುಬರಬಹುದು. ಆದರೂ ಇಸ್ಲಾಮಿಕ್ ಪದ್ಧತಿಗಳನ್ನು ಗೌರವಿಸಲು ವಿನಂತಿಸಲಾಗಿದೆ.

ಶಾಸಕರ ಇಂದಿನ ಕಾರ್ಯಕ್ರಮ ಜೂ 28

Posted by Vidyamaana on 2023-06-28 01:40:38 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜೂ 28

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜೂ  28 ರಂದು..

ಬೆಳಗ್ಗೆ  9:53 ಅನ್ನಛತ್ರ ಉದ್ಘಾಟನೆ 

ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು 


ಬೆಳ್ಳಗ್ಗೆ 11:30 

ಪರಿಸರ ದಿನಾಚರಣೆ 

ಸ್ಥಳ :ಕೊಂಬೆಟ್ಟು ಸ್ಕೂಲ್ ಪುತ್ತೂರು 

ಮಧ್ಯಾಹ್ನ : 2:00 

ಮಾಣಿಲ ಪೆರುವಾಯಿ ಅಳಿಕೆ ವಲಯ ಮೀಟಿಂಗ್ ಮತ್ತು ಅಭಿನಂದನೆ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆ: ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

Posted by Vidyamaana on 2024-05-14 16:14:49 |

Share: | | | | |


ಲೋಕಸಭಾ ಚುನಾವಣೆ: ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆಗೆ ಸರ್ಜರಿ

Posted by Vidyamaana on 2023-05-30 07:42:43 |

Share: | | | | |


ಪೊಲೀಸ್ ಇಲಾಖೆಗೆ ಸರ್ಜರಿ

ಬೆಂಗಳೂರು: ನೂತನ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಸರ್ಜರಿ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ಮಾಡಿದೆ. ನೂತನ ಕಮಿಷನರ್ ಆಗಿ ಬಿ.ದಯಾನಂದ ಅವರನ್ನು ನೇಮಿಸಲಾಗಿದೆ.ಎಡಿಜಿಪಿ ಮತ್ತು ನಗರ ಟ್ರಾಫಿಕ್ ವಿಶೇಷ ಆಯುಕ್ತರಾಗಿದ್ದ ಡಾ.ಎಂ.ಎ ಸಲೀಂ ಅವರನ್ನು ಬೆಂಗಳೂರು ಅಪರಾಧ ತನಿಖೆ ವಿಭಾಗ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧ ವಿಭಾಗದ ಡಿಜಿಯಾಗಿ ವರ್ಗಾವಣೆ ಮಾಡಿ ನೇಮಿಸಲಾಗಿದೆಬೆಂಗಳೂರು ಅಪರಾಧ ತನಿಖೆ ವಿಭಾಗದ ಎಡಿಜಿಪಿಯಾಗಿದ್ದ ಕೆ.ವಿ ಶರತ್ ಚಂದ್ರ ಅವರನ್ನು ಇಂಟಲಿಜೆನ್ಸ್ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

BREAKING : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ : ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸ್‌ ವಶಕ್ಕೆ

Posted by Vidyamaana on 2024-05-10 22:05:19 |

Share: | | | | |


BREAKING : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ : ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸ್‌ ವಶಕ್ಕೆ

ಚಿತ್ರದುರ್ಗ : ಹೊಳೆನರಸೀಪುರ ಠಾಣೆಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೆಗೌಡನನ್ನು ಚಿತ್ರದುರ್ಗದ ಹಿರಿಯೂರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಮೇ 1 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ವಕೀಲ ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಕುರಿತು ದೂರು ದಾಖಲಿಸಿದ್ದಳು.



Leave a Comment: