ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 26

Posted by Vidyamaana on 2023-08-26 01:55:01 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 26

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 26 ರಂದು

ಬೆಳಿಗ್ಗೆ ಡಿಸಿಸಿ ಸಭೆ

ಸಂಜೆ 4 ಗಂಟೆಗೆ ಬಿರುಮಲೆ ಬೆಟ್ಟದಲ್ಲಿ‌ ಮ್ಯಾರಥಾನ್ ಚಾಲನೆ

ಹಾವು ಕಡಿದಾಗ ಬಾಯಲ್ಲಿ ಕಚ್ಚಿ ವಿಷ ಹೀರದಿರಿ | ಎಚ್ಚರೆಚ್ಚರ, ಕೆಯ್ಯೂರು ಘಟನೆಯ ಅನುಕರಣೆ ಬೇಡ | ವೈದ್ಯರ ಎಚ್ಚರಿಕೆ ಮಾತು ಇಲ್ಲಿದೆ ಓದಿ

Posted by Vidyamaana on 2023-03-22 17:49:05 |

Share: | | | | |


ಹಾವು ಕಡಿದಾಗ ಬಾಯಲ್ಲಿ ಕಚ್ಚಿ ವಿಷ ಹೀರದಿರಿ | ಎಚ್ಚರೆಚ್ಚರ, ಕೆಯ್ಯೂರು ಘಟನೆಯ ಅನುಕರಣೆ ಬೇಡ | ವೈದ್ಯರ ಎಚ್ಚರಿಕೆ ಮಾತು ಇಲ್ಲಿದೆ ಓದಿ

ಪುತ್ತೂರು: ಹಾವು ಕಡಿದಾಕ್ಷಣ ಏನು ಮಾಡಬೇಕು? ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದ್ದರಿಂದ ನೇರವಾಗಿ ಆಸ್ಪತ್ರೆಗೋ, ಉರಗ ತಜ್ಞರಲ್ಲಿಗೋ ಕರೆದೊಯ್ಯುತ್ತಾರೆ. ಇವೆರಡನ್ನು ಬಿಟ್ಟು, ಸ್ವತಃ ಪ್ರಥಮ ಚಿಕಿತ್ಸೆ ನೀಡುವ ಸಾಹಸಕ್ಕೂ ಕೆಲವರು ಮುಂದಾಗುತ್ತಾರೆ.

ದಯವಿಟ್ಟು ಗಮನಿಸಿ! ಇಂತಹ ತಪ್ಪೊಂದನ್ನು ಅಪ್ಪಿತಪ್ಪಿಯೂ ಮಾಡಬೇಡಿ.

ಹಿಂದಿನ ಕಾಲದಲ್ಲಿ ನಾಟಿ ವೈದ್ಯರು ಹಾವು ಕಡಿತಕ್ಕೆ ಚಿಕಿತ್ಸೆ ನೀಡುತ್ತಿದ್ದರು. ತೀರಾ ವಿಕೋಪಕ್ಕೆ ಹೋದ ಸಂದರ್ಭಗಳಲ್ಲೂ, ರೋಗಿಗಳು ಹುಷಾರಾಗಿದ್ದ ನಿದರ್ಶನಗಳನ್ನು ನಾವು ಕೇಳಿದ್ದೇವೆ. ಆದರೆ, ಅವರು ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದರು ಎನ್ನುವುದು ನಮಗೆ ತಿಳಿದಿದೆಯೇ? ಖಂಡಿತಾ ಇಲ್ಲ.

ಉರಗ ತಜ್ಞರು ಅಥವಾ ನಾಟಿ ವೈದ್ಯರು, ಹಾವು ಕಡಿತಕ್ಕೆ ಚಿಕಿತ್ಸೆ ನೀಡುವಾಗ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳುತ್ತಿದ್ದರು. ಇಂದು ವೈದ್ಯರ ಬಳಿಗೆ ಹೋದರೂ, ಅವರು ಮುಂಜಾಗ್ರತಾ ಕ್ರಮ ಕೈಗೊಂಡೇ ಚಿಕಿತ್ಸೆ ನೀಡುತ್ತಾರೆ. ರೋಗಿಯನ್ನು ದಾಖಲು ಮಾಡಿಸಿಕೊಂಡು, ಸಂಬಂಧಿಸಿದ ಇಂಜೆಕ್ಷನ್ ನೀಡುತ್ತಾರೆ. ಸೂಕ್ತ ಚಿಕಿತ್ಸೆ ನೀಡಿ, ರೋಗಿಯನ್ನು ವಿಷದಿಂದ ಮುಕ್ತರನ್ನಾಗಿ ಮಾಡುತ್ತಾರೆ.

ಬಾಯಲ್ಲಿ ವಿಷ ಹೀರಿದರೆ ಏನಾಗುತ್ತೆ?

  ಕೆಯ್ಯೂರು ಘಟನೆಯ ಅನುಕರಣೆ ಬೇಡ,ಹಾವಿನ ವಿಷ ನಮ್ಮ ರಕ್ತಕ್ಕೆ ಸೇರಿದರೆ ಸಾವು ಗ್ಯಾರೆಂಟಿ. ಹಾವು ಕಚ್ಚಿದಾಗ, ಬಾಯಲ್ಲಿ ಕಚ್ಚಿ ಆ ಭಾಗದಿಂದ ರಕ್ತ ಹೀರಿ ತೆಗೆಯಲೇಬಾರದು. ಒಂದು ವೇಳೆ ತೆಗೆದರೆ, ಬಾಯಲ್ಲಿ ಹುಣ್ಣು ಅಥವಾ ಸಣ್ಣ ಗಾಯ ಅಥವಾ ಹಲ್ಲಿನ ವಸಡಿನಲ್ಲಿ ಗಾಯಗಳಿದ್ದರೆ, ವಿಷ ನೇರವಾಗಿ ರಕ್ತಕ್ಕೆ ಸೇರಿಕೊಳ್ಳುತ್ತದೆ. ಅದರಲ್ಲೂ ತಲೆಗೇರುವುದೇ ಹೆಚ್ಚು. ಇದರಿಂದ ಹಾವು ಕಚ್ಚಿದ ವ್ಯಕ್ತಿಗಿಂತಲೂ, ವಿಷವನ್ನು ಹೀರಿದ ವ್ಯಕ್ತಿಯೇ ಬೇಗ ಮೃತಪಡುವ ಸಾಧ್ಯತೆ ಅಧಿಕ ಎನ್ನುತ್ತಾರೆ ಪುತ್ತೂರು ಡಾಕ್ಟರ್ಸ್ ಫಾರಂ  ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರು.

ಬಾಲಕಿಗೆ ಪ್ರಶಂಸೆ:

ತಾಯ ಪ್ರಾಣ ಉಳಿಸಲು ಕೆಯ್ಯೂರಿನ ವಿದ್ಯಾರ್ಥಿನಿಗೆ ಅನ್ಯ ದಾರಿ ಕಾಣಲಿಲ್ಲ.  ನಾನು ಕೆಲವು ಸಿನಿಮಾಗಳಲ್ಲಿ ಈ ರೀತಿಯ ಚಿತ್ರಣ ನೋಡಿದ್ದೆ ಅದರಂತೆ ಹಾವು ಕಚ್ಚಿದ ಜಾಗಕ್ಕೆ ಬಾಯಿ ಇಟ್ಟು ರಕ್ತವನ್ನು ಹೀರಿ  ತೆಗೆದಿದ್ದೇನೆ. ಆಕೆಯ ಧೈರ್ಯಕ್ಕೆ ಶಹಬ್ಬಾಶ್ ಹೇಳಲೇಬೇಕು. ಹಾಗೆಂದು, ಇದನ್ನೇ ಇತರರು ಅನುಕರಿಸುವುದು ತಪ್ಪು.

ಕೆಯ್ಯೂರಿನ ಶ್ರಮ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ, ಇದನ್ನು ಇತರರು ಅನುಸರಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆಯದಿರಿ.

ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

Posted by Vidyamaana on 2024-06-15 20:33:11 |

Share: | | | | |


ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

ತ್ರಿಶೂರ್: ಕೇಂದ್ರ ಸಚಿವ ಮತ್ತು ಕೇರಳದ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ (Suresh Gopi) ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು (Indira Gandhi) ಭಾರತ ಮಾತೆ ಎಂದು ಕರೆದಿದ್ದಾರೆ. ಇದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದು ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ಬಣ್ಣಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸುರೇಶ್ ಗೋಪಿ ಅವರು ಮಾಜಿ ಮುಖ್ಯಮಂತ್ರಿಗಳಾದ ಕರುಣಾಕರನ್ ಮತ್ತು ಇ.ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆದಿದ್ದಾರೆ. ತಮ್ಮ ಕ್ಷೇತ್ರವಾದ ತ್ರಿಶೂರ್‌ನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಂಗೆ ಭೇಟಿ ನೀಡಿದ ನಂತರ ಮಾತನಾಡಿದ ಬಿಜೆಪಿ ನಾಯಕ ಸುರೇಶ್ ಗೋಪಿ ಈ ಹೇಳಿಕೆ ನೀಡಿದ್ದಾರೆ.

ಬೆಳ್ತಂಗಡಿ : ಚಾರ್ಮಾಡಿ ಯುವಕರಿಂದ ಸರಕಾರಿ ಬಸ್ ನಿಲ್ಲಿಸಿ ಹಲ್ಲೆ ಪ್ರಕರಣ

Posted by Vidyamaana on 2023-06-19 01:55:50 |

Share: | | | | |


ಬೆಳ್ತಂಗಡಿ : ಚಾರ್ಮಾಡಿ ಯುವಕರಿಂದ ಸರಕಾರಿ ಬಸ್ ನಿಲ್ಲಿಸಿ ಹಲ್ಲೆ ಪ್ರಕರಣ

ಬೆಳ್ತಂಗಡಿ: ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಮುಂದೆ ಹೋಗಿ ಎಂದು ಕಂಡೆಕ್ಟರ್ ಮುಂದೆ ತಳ್ಳಿದ ಎಂಬ ಕಾರಣಕ್ಕಾಗಿ ಬಸ್ ನಿಲ್ಲಿಸಿ ದಾಂಧಲೆ ಮಾಡಿದ ಘಟನೆ ಜೂ 17 ರಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂನ್ 18 ರಂದು ಕಂಡಕ್ಟರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.


ಮಂಗಳೂರಿನಿಂದ ಮೂಡಿಗೆರೆಗೆ ಸಂಚಾರಿಸುವ ಸರ್ಕಾರಿ ಬಸ್ಸಿಗೆ ಉಜಿರೆಯಲ್ಲಿ ವಿದ್ಯಾರ್ಥಿಗಳು ಹತ್ತಿದ್ದು ಈ ವೇಳೆ ನಿರ್ವಾಹಕ ಬಸ್ ಒಳಗೆ ಮುಂದೆ ಹೋಗಲು ಕೈ ಹಿಡಿದು ಮುಂದೆ ಕಳುಹಿಸುವ ಸಂದರ್ಭ ಬಸ್ ಕಂಡಕ್ಟರ್ ಹಾಗೂ ಕೆಲವು ವಿದ್ಯಾರ್ಥಿಗಳ ನಡುವೆ ಮಾತಿನ ನಡೆದಿದೆ.ಅದಲ್ಲದೇ ಈ ವಿಚಾರವನ್ನು ವಿದ್ಯಾರ್ಥಿಗಳು ಚಾರ್ಮಾಡಿಯ ಯುವಕರಿಗೆ ತಿಳಿಸಿ ಬಸ್ ಅಡ್ಡ ಹಾಕುವಂತೆ ಸೂಚಿಸಿದ್ದಾರೆ.ಈ ವಿಚಾರವನ್ನು ಬಸ್ಸಿನಲ್ಲಿದ್ದವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ತಕ್ಷಣ ಧರ್ಮಸ್ಥಳ ಠಾಣಾ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬಸ್ ನಿಲ್ಲಿಸುವಂತೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.ಅದರೆ ಚೆಕ್ ಪೋಸ್ಟ್ ನಲ್ಲಿ ಬಸ್ ತಡೆದು ಹೆಚ್ಚಿನ ಗಲಾಟೆ ಅಗದಂತೆ ನೋಡಿಕೊಂಡಿದ್ದರು.ಈ ವೇಳೆ ಅಲ್ಲಿಗೆ ಆಗಮಿಸಿದ ಯುವಕರ ತಂಡ ಕಂಡೆಕ್ಟರ್ ನಲ್ಲಿ ಗಲಾಟೆ ಮಾಡಿದೆ. ಈ ವೇಳೆ ಕಂಡೆಕ್ಟರ್ ಪರವಾಗಿ ಮಾತನಾಡಿದ ಬಸ್ ಪ್ರಯಾಣಿಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು. ಅದಲ್ಲದೇ ವಿಡಿಯೋ ಮಾಡುತಿದ್ದ ವ್ಯಕ್ತಿಯೊಬ್ಬರಿಗೆ ಹಲ್ಲೆಗೈದಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದ ಡಿಪೋ ಗೆ ಸೇರಿದ ಸರಕಾರಿ ಬಸ್ ಕಂಡಕ್ಟರ್ ಶಿವಕುಮಾರ್.ಕೆ.ಎಮ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ದುರ್ವತ್ರನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಬಂಧ ಪ್ರಕರಣ ದಾಖಲಾಯಿಸಿದ್ದು.ಅದರಂತೆ ಅಪರಿಚಿತರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ 143.147.353.341.504.506 149 i ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು

ಪ್ರಕರಣದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳಾದ  ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಅವರ ಮಗ ಮಹಮ್ಮದ್ ಶಬೀರ್(21) ,ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಅವರ ಮಗ ಮಹಮ್ಮದ್ ಮಹಾರೂಫ್(22), ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪಾಂಡಿಕಟ್ಟೆ ನಿವಾಸಿ ಮೊಹಮ್ಮದ್ ಅವರ ಮಗ ಮಹಮ್ಮದ್ ಮುಬಶೀರ್ (23) ಎಂಬವರನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಜೂನ್ 18 ರಂದು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಪ್ರಕರಣದಲ್ಲಿ ಉಳಿದ ಆರೋಪಿಗಳಿಗಾಗಿ ಧರ್ಮಸ್ಥಳ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಿಯಾ ಕಾರು ; ಚಿಕ್ಕಮಗಳೂರು ಬಟ್ಟೆ ಅಂಗಡಿ ವ್ಯಾಪಾರಿ ದಿನೇಶ್ ಮೃತ್ಯು

Posted by Vidyamaana on 2024-05-23 19:28:47 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಿಯಾ ಕಾರು ; ಚಿಕ್ಕಮಗಳೂರು ಬಟ್ಟೆ ಅಂಗಡಿ ವ್ಯಾಪಾರಿ ದಿನೇಶ್ ಮೃತ್ಯು

ಚಿಕ್ಕಮಗಳೂರು, ಮೇ 23: ಚಾಲಕನ ನಿಯಂತ್ರಣ ತಪ್ಪಿ ಕಿಯಾ ಕಾರು ಕೆರೆಗೆ ಬಿದ್ದ ಘಟನೆ ಅಂಬಳೆ ಕೆರೆಯಲ್ಲಿ ನಡೆದಿದೆ. ದಿನೇಶ್ (33) ಕಾರ್ನೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್ನಲ್ಲಿದ್ದ ಮತ್ತೊರ್ವ ಸಂತೋಷ್ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಅಂಬಳೆ ಗ್ರಾಮಕ್ಕೆ ಇಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗಿನ ಜಾವ ಅವರಿದ್ದ ಕಾರು ಏಕಾಏಕಿ ಕೆರೆಗೆ ಬಿದ್ದಿದೆ. ಪರಿಣಾಮ ದಿನೇಶ್ ಅಲ್ಲೇ ಸಾವನ್ನಪ್ಪಿದ್ದಾರೆ.

ಅರಬ್‌ ಎಮಿರಾಟಿ ಉಡುಗೆಯನ್ನು ತೊಟ್ಟು ದುಬಾರಿ ಕಾರು ಖರೀದಿ ರೀಲ್ಸ್; ವ್ಯಕ್ತಿ ವಶಕ್ಕೆ

Posted by Vidyamaana on 2023-07-11 11:51:45 |

Share: | | | | |


ಅರಬ್‌ ಎಮಿರಾಟಿ ಉಡುಗೆಯನ್ನು ತೊಟ್ಟು ದುಬಾರಿ ಕಾರು ಖರೀದಿ ರೀಲ್ಸ್; ವ್ಯಕ್ತಿ ವಶಕ್ಕೆ

ಯುಎಇ: ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಗಳು ಬಹುಬೇಗವಾಗಿ ವೈರಲ್‌ ಆಗುತ್ತದೆ. ಏನೇ ಹಾಕಿದರೂ ಅದು ಯಾವ ಸಂದರ್ಭದಲ್ಲಿ ವೈರಲ್‌ ಆಗುತ್ತದೆ ಎನ್ನುವುದನ್ನು ಹೇಳಲಾಗದು. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋಗಳನ್ನು ಹಾಕುವ ಮುನ್ನ ಎಚ್ಚರವಹಿಸಬೇಕು. ವೈರಲ್‌ ಆದ ಬಳಿಕ ಅದರ ವಿರುದ್ಧ ಕೇಳಿಬರುವ ಆಕ್ರೋಶವನ್ನು ಸ್ವೀಕರಿಸಲು ಕೂಡ ನಾವು ಸಿದ್ದರಿರಬೇಕು.ಇತ್ತೀಚೆಗೆ ಅರಬ್‌ ಎಮಿರಾಟಿ ಉಡುಗೆಯನ್ನು ತೊಟ್ಟು ವ್ಯಕ್ತಿಯೊಬ್ಬ ಕಾರು ಶೋರೂಮ್ ವೊಂದಕ್ಕೆ ಹೋಗುತ್ತಾನೆ. ಆತನ ಹಿಂದೆ ಹಣದ ಕಂತೆಯನ್ನು ಹಿಡಿದುಕೊಳ್ಳಲು ವ್ಯಕ್ತಿಗಳಿರುತ್ತಾರೆ. ಕಾರಿನ ಶಾಪ್‌ ನೊಳಗೆ ಬಂದ ಕೂಡಲೇ ಅಲ್ಲಿರುವ ಸಿಬ್ಬಂದಿ ಕಾಫಿ ಕುಡಿಯೆಂದು ನೋಟಿನ ಕಂತೆಯನ್ನು ಎಸೆಯುತ್ತಾನೆ. ಆ ಬಳಿಕ ಅಲ್ಲಿರುವ ಸಿಬ್ಬಂದಿ ಬಳಿ ಶಾಪ್‌ ನಲ್ಲಿರುವ ಅತ್ಯಂತ ದುಬಾರಿ ಕಾರನ್ನು ತೋರಿಸು ಎನ್ನುತ್ತಾನೆ. ರೋಲ್ಸ್ ರಾಯ್ಸ್ ಸೇರಿದಂತೆ ಇತರ ಎರಡು ಮೂರು ದುಬಾರಿ ಕಾರುಗಳನ್ನು ಖರೀದಿಸುತ್ತಾನೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ ರೀಲ್ಸ್‌ ನಲ್ಲಿ ಅಪ್ಲೋಡ್‌ ಮಾಡಲಾಗಿದೆ.ವಿಡಿಯೋ ನೋಡಿ ಇವನು ಅರಬ್‌ ದೇಶದ ಶ್ರೀಮಂತ ವ್ಯಕ್ತಿ ಆಗಿರಬಹುದು ಎಂದು ಜನ ಊಹಿಸಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಮಿಲಿಯನ್‌ ಗಟ್ಟಲೇ ವೀವ್ಸ್‌ ಆಗಿದೆ.ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇದರ ಸತ್ಯಾಸತ್ಯತೆ ಗೊತ್ತಾಗಿದೆ. ಇದೊಂದು ಸ್ಫೂಫ್‌ ವಿಡಿಯೋ ಎಂದು ಗೊತ್ತಾಗಿದ್ದು, ಪ್ರಚಾರಕ್ಕಾಗಿ ಇದನ್ನು ಮಾಡಲಾಗಿದೆ. ಎಮಿರಾಟಿ ನಾಗರಿಕರಿಗೆ ಅಲ್ಲಿನ ಸಂಪ್ರದಾಯಿಕ ಉಡುಗೆಯನ್ನು ತೊಟ್ಟು ಅವಮಾನ ಮಾಡಲಾಗಿದೆ ಎನ್ನುವ ಟೀಕೆಗಳು ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದ ವ್ಯಕ್ತಿಯನ್ನು  ಫೆಡರಲ್ ಪ್ರಾಸಿಕ್ಯೂಷನ್ ಆದೇಶದ ಮೇರೆಗೆ ವಶಕ್ಕೆ‌ ಪಡೆಯಲಾಗಿದ್ದು, ಎಮಿರಾಟಿ ಸಮಾಜವನ್ನು “ಅವಮಾನಿಸುವ” ವಿಷಯವನ್ನು ಪ್ರಕಟಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಕಾರಿನ ಶೋರೂಮ್ ಮಾಲಕನ್ನು ಈ ಬಗ್ಗೆ ವಿಚಾರಣೆಗೆ ಹಾಜರಾಗಲು ಹೇಳಲಾಗಿದ ಎಂದು “ಡಬ್ಲ್ಯೂಎಎಂ” ವರದಿ ತಿಳಿಸಿದೆ.


ಯುಎಇಯಲ್ಲಿ ವದಂತಿಗಳನ್ನು ಹರಡುವುದು ಮತ್ತು ಸುಳ್ಳು ಮಾಹಿತಿಯನ್ನು ಪ್ರಕಟಿಸುವ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.

Recent News


Leave a Comment: