ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


KSRTCಯಲ್ಲಿ ಚಾಲಕರಾಗ್ಬೇಕಾ? – ಆ.22ರಂದು ಸಂದರ್ಶನ ಇದೆ

Posted by Vidyamaana on 2023-08-19 04:27:27 |

Share: | | | | |


KSRTCಯಲ್ಲಿ ಚಾಲಕರಾಗ್ಬೇಕಾ? – ಆ.22ರಂದು ಸಂದರ್ಶನ ಇದೆ

ಮಂಗಳೂರು: ರಾಜ್ಯ ಸರಕಾರದ ಸಾರಿಗೆ ನಿಗಮದ ಬಸ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕಗೊಳಿಸುವ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇರ ನೇಮಕ ಪ್ರಕ್ರಿಯೆ ನಡೆಯಲಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


ಆಸಕ್ತ ಅಭ್ಯರ್ಥಿಗಳು ಆಗಸ್ಟ್ ತಿಂಗಳ 22ರ ಮಂಗಳವಾರದಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಇಂದಿರಾಗಾಂಧಿ ಜನ್ಮಶತಾಬ್ದಿ ಭವನದ ಕೆಳ ಅಂತಸ್ಥಿನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ 1ಗಂಟೆಯ ತನಕ ಅವಕಾಶ ಕಲ್ಪಿಸಲಾಗಿದೆ.

ಸಲ್ಲಿಸಬೇಕಾದ ದಾಖಲೆಗಳು:

ಆಧಾರ್ ಕಾರ್ಡ್

ವಾಹನ ಚಾಲನಾ ಪರವಾಣಿಗೆ ಪತ್ರ

ಭಾರೀ ಗಾತ್ರದ ವಾಹನ ಚಾಲನೆ ಅನುಜ್ಞಾ ಪತ್ರ

4 ಪಾಸ್ ಪೋರ್ಟ್ ಫೋಟೊ

7ನೇ ತರಗತಿ ಮೇಲ್ಪಟ್ಟ ತೇರ್ಗಡೆಯಾದ ಅಂಕಪಟ್ಟಿ

ರಾಯನ್ಸ್ ಐಸ್ ಕ್ರೀಮ್ ವೈಟರ್ ಯೋಗೇಶ್ ನೇಣುಬಿಗಿದು ಆತ್ಮಹತ್ಯೆ - ಡೆತ್ ನೋಟ್ ಪತ್ತೆ

Posted by Vidyamaana on 2024-02-14 13:00:31 |

Share: | | | | |


ರಾಯನ್ಸ್ ಐಸ್ ಕ್ರೀಮ್ ವೈಟರ್ ಯೋಗೇಶ್ ನೇಣುಬಿಗಿದು ಆತ್ಮಹತ್ಯೆ - ಡೆತ್ ನೋಟ್ ಪತ್ತೆ

ಉಳ್ಳಾಲ, ಫೆ.14: ತೊಕ್ಕೊಟ್ಟಿನ ಜನಪ್ರಿಯ ರಾಯನ್ಸ್ ಐಸ್ ಕ್ರೀಮ್ ಪಾರ್ಲರಿನ ವೈಟರ್ ಒಬ್ಬರು ಐಸ್ ಕ್ರೀಮ್ ಗೋಡೌನಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. 


ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಮೃತ ಯುವಕ. ಪಿಲಾರು ಪಂಜಂದಾಯ ದೈವದ ಕ್ಷೇತ್ರದ ಬಳಿಯ ಐಸ್ ಕ್ರೀಮ್ ಗೋಡೌನಲ್ಲಿ ಯೋಗೇಶ್ ಇಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಗೋಡೌನ್ ಅಂಗಳದಲ್ಲಿ ಸ್ಥಳೀಯ ಯುವಕರು ಬೆಳಗ್ಗೆ ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದನಂತೆ. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು ಕೃತ್ಯ ಎಸಗಿದ್ದಾನೆ. ಬದುಕೋಕೆ ಇಷ್ಟ ಇಲ್ಲ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿದ್ದಾನೆಂದು ಪೊಲೀಸರಿಂದ ತಿಳಿದುಬಂದಿದೆ. ಕಳೆದ ಏಳು ವರ್ಷದಿಂದ ರಾಯನ್ಸ್ ಕ್ರೀಮ್ ಪಾರ್ಲರಲ್ಲಿ ಕೆಲಸಕ್ಕಿದ್ದ ಅವಿವಾಹಿತ ಯೋಗೇಶ್ ಎಲ್ಲರಿಗೂ ಪರಿಚಿತನಾಗಿದ್ದ. ಪಿಲಾರಿನ ಗೋಡೌನಲ್ಲೇ ಯೋಗೇಶ್ ಸ್ನೇಹಿತನೊಂದಿಗೆ ವಾಸವಿದ್ದ. ನಿನ್ನೆ ರಾತ್ರಿ ಗೋಡೌನಲ್ಲಿ ಯೋಗೇಶ್ ಒಬ್ಬಂಟಿಯಾಗಿದ್ದನಂತೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಬಿಯರ್ ರೇಟ್ ಏರಿಕೆ – ಯಾವ ಬ್ರ್ಯಾಂಡಿಗೆ ಎಷ್ಟು ಹೆಚ್ಚಾಯ್ತು?

Posted by Vidyamaana on 2024-02-02 12:12:35 |

Share: | | | | |


ಬಿಯರ್ ರೇಟ್ ಏರಿಕೆ – ಯಾವ ಬ್ರ್ಯಾಂಡಿಗೆ ಎಷ್ಟು ಹೆಚ್ಚಾಯ್ತು?

ಬೆಂಗಳೂರು: ರಾಜ್ಯ ಬಜೆಟ್​ಗೂ ಮೊದಲೇ ಸರ್ಕಾರ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಬಿಗ್ ಶಾಕ್ ನೀಡಿದ್ದು, ಮತ್ತೆ ಬಿಯರ್​ ಬೆಲೆ ಏರಿಕೆಯಾಗಿದೆ.


ಹೌದು, ಸರ್ಕಾರ ಬಿಯ‌ರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ ಶೇ. 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಗುರುವಾರದಿಂದ (ಫೆ.1) ಪ್ರತಿ ಬಾಟಲ್ ಗೆ 5 ರಿಂದ 12 ರೂ. ವರೆಗೆ ಹೆಚ್ಚಳವಾಗಿದೆ.


ಬ್ರಾಂಡ್‌ಗಳ ಆಧಾರದ ಮೇಲೆ ದರ ಏರಿಕೆಯಾಗಲಿದೆ. ಸಾಮಾನ್ಯ ಬ್ರಾಂಡ್ ಗಳಿಂದ ಪ್ರೀಮಿಯಂ ಬ್ರಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ಗಳ ದರದಲ್ಲಿ ಹೆಚ್ಚಳವಾಗಲಿದೆ.


ಬಿಯರ್ ಪ್ರಿಯರಿಗೆ ಹೊಸ ರೇಟ್


1. KF ಪ್ರಿಮಿಯಂ

ಹಿಂದಿನ ದರ ₹ 175

ಹೊಸ ದರ ₹185


2. ಕೆಎಫ್ ಸ್ಟ್ರಾಂಗ್

ಹಿಂದಿನ ದರ ₹ 180

ಹೊಸ ದರ ₹190


3. ಟ್ಯೂಬರ್ಗ್

ಹಿಂದಿನ ದರ ₹ 180

ಹೊಸ ದರ ₹190


4. ಬಡ್ ವೈಸರ್

ಹಿಂದಿನ ದರ ₹230

ಹೊಸ ದರ ₹240


5. ಕಾರ್ಲ್ಸ್ ಬರ್ಗ್

ಹಿಂದಿನ ದರ ₹230

ಹೊಸ ದರ ₹240


6. UB ಸ್ಟ್ರಾಂಗ್

ಹಿಂದಿನ ದರ ₹140

ಹೊಸ ದರ ₹150


7. KF ಸ್ಟಾರ್ಮ್

ಹಿಂದಿನ ದರ ₹175

ಹೊಸ‌ ದರ ₹195


8. ಹೆನಿಕೇನ್

ಹಿಂದಿನ ದರ ₹225

ಹೊಸ ದರ ₹240


9. ಆಯಮ್‌ಸ್ಟೆಲ್

ಹಿಂದಿನ ದರ ₹225

ಹೊಸ ದರ ₹240


10. ಪವರ್ ಕೂಲ್

ಹಿಂದಿನ ದರ ₹110

ಹೊಸ ದರ ₹130


ಮೇ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಚುನಾವಣೆ ಗೆದ್ದ ನಂತರ ಜುಲೈ 7 ರಂದು ಮಂಡಿಸಿದ ಮೊದಲ ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿತ್ತು. ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದರ ನಂತರ ಇತರ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಬಹುದಾದ ಸಾಧ್ಯತೆಯಿದೆ

ಮಹಾಲಿಂಗೇಶ್ವರನ ಜಾತ್ರೆಗೆ ಹೊರೆಕಾಣಿಕೆ ಸಮರ್ಪಣೆ

Posted by Vidyamaana on 2023-04-08 11:40:02 |

Share: | | | | |


ಮಹಾಲಿಂಗೇಶ್ವರನ ಜಾತ್ರೆಗೆ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 10ರಿಂದ 20ರ ತನಕ ನಡೆಯಲಿರುವ ವೈಭವದ ಜಾತ್ರೋತ್ಸವಕ್ಕೆ ಶನಿವಾರ ಹೊರೆಕಾಣಿಕೆ ಸಮರ್ಪಣೆಯಾಯಿತು.

ಅಪರಾಹ್ನ 3.30ಕ್ಕೆ ಹೊರೆಕಾಣಿಕೆ ಮೆರವಣಿಗೆಗೆ ಪುತ್ತೂರು ಸೀಮೆ ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಹೊರೆಕಾಣಿಕೆ ದರ್ಬೆ ವೃತ್ತ ಹಾಗೂ ಬೊಳುವಾರಿನ ಸುಬ್ರಹ್ಮಣ್ಯ ನಗರದಲ್ಲಿ ಸೇರಿ ಏಕಕಾಲದಲ್ಲಿ ಚಾಲನೆ ನೀಡಲಾಯಿತು. ದರ್ಬೆ ವೃತ್ತದಲ್ಲಿ‌ ಶ್ರಿ ವಜ್ರದೇಹಿ ಮಠದ‌ ಶ್ರೀ ರಾಜಶೇಖರಾನಂದ‌ ಸ್ವಾಮಿಜಿ ತೆಂಗಿನಕಾಯಿ‌ ಒಡೆಯುವ ಮೂಲಕ‌ ಉದ್ಘಾಟಿಸಿದರು.ಬಳಿಕ ಹೊರೆಕಾಣಿಕೆ ಮೆರವಣಿಗೆ ಕೊಂಬು, ಕಹಳೆ, ಬ್ಯಾಂಡ್, ಕಲ್ಲಡ್ಕ ಗೊಂಬೆ ಕುಣಿತ, ಭಜನೆಯೊಂದಿಗೆ ಶ್ರೀ ದೇವಸ್ಥಾನಕ್ಕೆ ಆಗಮಿಸಿತು. ಹಸಿರುವಾಣಿ ಮೆರವಣಿಗೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆಯುತ್ತಿರುವ 15 ಧಾರ್ಮಿಕ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಬಿ.ಕೆ. ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಬಿ.ಕೆ. ವೀಣಾ, ಡಾ. ಸುಧಾ ಎಸ್. ರಾವ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಅರುಣ್ ಕುಮಾರ್ ಪುತ್ತಿಲ, ಜಯಂತ್ ನಡುಬೈಲು, ಸೀತಾರಾಮ ರೈ ಕೆದಂಬಾಡಿಗುತ್ತು, ಡಾ. ಪ್ರಸನ್ನ, ಜಯಕುಮಾರ್ ರೈ, ರಾಜೇಶ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.

ಪತ್ನಿಗೆ ಊಟದಲ್ಲಿ ನಿದ್ದೆಮಾತ್ರೆ ಬೆರೆಸಿ, ಕಿಲಾಡಿ ಗಂಡ ಕೆಲಸದವಳೊಂದಿಗೆ ರಾಸಲೀಲೆ!

Posted by Vidyamaana on 2024-01-08 21:09:48 |

Share: | | | | |


ಪತ್ನಿಗೆ ಊಟದಲ್ಲಿ ನಿದ್ದೆಮಾತ್ರೆ ಬೆರೆಸಿ, ಕಿಲಾಡಿ ಗಂಡ ಕೆಲಸದವಳೊಂದಿಗೆ ರಾಸಲೀಲೆ!

ಬೆಂಗಳೂರು : ನಿತ್ಯ ಪತ್ನಿಗೆ ನಿದ್ರೆ ಮಾತ್ರೆ ಹಾಕಿ ಮಲಗಿಸಿ ಬಳಿಕ ಕೆಲಸದವಳ ಜೊತೆ ಸರಸದಲ್ಲಿ ತೊಡಗುತ್ತಿದ್ದ ಪತಿಯ ವಿರುದ್ದ ಪತ್ನಿ ಕೊಲೆಯತ್ನ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.ಪತಿ ಸುನೀಲ್​, ವಿರುದ್ದ ಚಂದ್ರಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಆರೋಪಿ ಪತಿ ವಿಪರೀತ ಬೆಟ್ಟಿಂಗ್ ಚಟಕ್ಕೆ ಬಿದ್ದು ನಿತ್ಯ ಕುಡಿದು ಬಂದು ಮನಸೋ ಇಚ್ಚೆ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಅಷ್ಟೆ ಅಲ್ಲದೆ ಕೆಲಸದವಳೊಂದಿಗೆ ಸೇರಿ ಊಟದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ ತಿನ್ನಿಸಿ ಮಲಗಿಸುತ್ತಿದ್ದ. ಬಳಿಕ ಕೆಲಸದವಳೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದ ಈ ದೃಶ್ಯಗಳನ್ನು ತಾನೇ ಕಣ್ಣಾರೆ ಕಂಡಿರುವುದಾಗಿ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.ಜ.3 ರಂದು ಪತಿ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ತಿನ್ನಿಸಿದ್ದಾರೆ. ಪ್ರಜ್ಞೆ ಬಂದು ಎದ್ದು ನೋಡಿದಾಗ ಪತಿ ಹಾಗೂ ಮನೆಕೆಲಸದವಳು ಒಂದೇ ಹಾಸಿಗೆಯಲ್ಲಿ ಅಶ್ಲೀಲವಾಗಿದ್ದನ್ನ ಕಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪತಿ ಕೆಲಸದವಳೊಂದಿಗೆ ಸೇರಿ ಅಮಾನಷವಾಗಿ ಹಲ್ಲೆ ಮಾಡಿದ್ದಾರೆ. ಭಯದಿಂದ ಇಲ್ಲಿನ ಚಂದ್ರಾ ಲೇಔಟ್​ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಪತಿಯ ವಿರುದ್ದ ವರದಕ್ಷಿಣೆ ಕಿರುಕುಳ, ಕೊಲೆಯತ್ನ ಹಾಗು ಮನೆ ಕೆಲಸದಾಕೆ ವಿರುದ್ದ ಜೀವಬೆದರಿಕೆ ಅರಿ ಪತ್ನಿ FIR ದಾಖಲಿಸಲಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಎಡ್ವರ್ಡ್ ನೇಮಕ

Posted by Vidyamaana on 2024-03-28 20:08:33 |

Share: | | | | |


ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಎಡ್ವರ್ಡ್ ನೇಮಕ

ಪುತ್ತೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಯುಐ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಎಡ್ವರ್ಡ್ ಪುತ್ತೂರುರವರನ್ನು ಆಯ್ಕೆ ಮಾಡಲಾಗಿದೆ. ಎನ್‌ಎಸ್‌ಯುಐ ಜಿಲ್ಲಾ ಉಸ್ತುವಾರಿಗಳಾದ ಝಕೀರ್ ಹುಸೈನ್ ಮತ್ತು ಭರತ್ ರಾಮ್ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎಡ್ವರ್ಡ್‌ರವರು ಪ್ರಸ್ತುತ ಪುತ್ತೂರಿನ ಸರಕಾರಿ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು NSUI ವಿದ್ಯಾರ್ಥಿ ಸಂಘಟನೆಯಲ್ಲಿ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಮ್ಮಿನಡ್ಕ ನಿವಾಸಿ ಮಿಂಗಲ್ ಡಿಸೋಜ ಮತ್ತು ಗ್ರೇಸಿ ಡಿಸೋಜ ದಂಪತಿಯ ಪುತ್ರ.



Leave a Comment: